For Quick Alerts
ALLOW NOTIFICATIONS  
For Daily Alerts

ಸಾಬೂದಾನದ ಕಥೆ ಗೊತ್ತಿದೆಯೇ ನಿಮಗೆ?

By Super
|

ಹಸಿಯಾಗಿರುವಾಗ ಅಚ್ಚ ಬಿಳಿಯಾಗಿದ್ದು, ಬೇಯಿಸಿದಾಗ ಬಹುತೇಕ ಮಬ್ಬಾಗಿ, ಅರೆಪಾದರ್ಶಕ ಮಣಿಗಳಂತೆ ಕಾಣುವ ಆ ಸಣ್ಣ ಸಣ್ಣ ಮುತ್ತುಗಳಂತಹ, ಸೇವನೆಗೆಂದು ಉಪಯೋಗಿಸುವ ಆ ವಸ್ತುವು ನನ್ನನ್ನು ಯಾವಾಗಲೂ ಅತಿಯಾಗಿ ಆಕರ್ಷಿಸುತ್ತದೆ. ಅದಾವುದೆಂದು ನೀವು ಊಹಿಸಬಲ್ಲಿರಾ ? ಹೌದು, ನಿಮ್ಮ ಊಹೆಯು ಸರಿಯಾಗಿಯೇ ಇದೆ. ಈ ಸಣ್ಣ ಸಣ್ಣ ಕಣಗಳಂತಿರುವ ತಿನಿಸನ್ನೇ ಆಂಗ್ಲ ಭಾಷೆಯಲ್ಲಿ Sago ಎಂದೂ ಮತ್ತು ಹಿಂದಿ ಭಾಷೆಯಲ್ಲಿ ಸಾಬುದಾನ ಎಂದೂ ಕರೆಯುತ್ತಾರೆ. ಕನ್ನಡದಲ್ಲಿ ಇದು ಸಾಬಕ್ಕಿ ಎಂದು ಕರೆಯಲ್ಪಡುವುದು ನಮಗೆಲ್ಲಾ ತಿಳಿದೇ ಇದೆ.

ಸಾಬುದಾನವು, ಹೆಚ್ಚು ಕಡಿಮೆ ಭಾರತದಾದ್ಯಂತ, ವ್ರತಗಳಂತಹ ಆಚರಣೆಗಳ ಸಂದರ್ಭದಲ್ಲಿ ಸೇವಿಸುವ ಆಹಾರ ಪದಾರ್ಥಗಳ ಒಂದು ಅವಿಭಾಜ್ಯ ಅಂಗವೇ ಆಗಿದೆ. ಈ ಸಾಬುದಾನವನ್ನು ಖಾರ ಅಥವಾ ಉಪ್ಪಿನ ರುಚಿಯುಳ್ಳ ತಿನಿಸನ್ನಾಗಿಯೂ ಅಥವಾ ಸಿಹಿ ತಿಂಡಿಯನ್ನಾಗಿಯೂ ಕೂಡ ಪರಿವರ್ತಿಸಬಹುದಾಗಿದ್ದು, ಇದರ ತಿನಿಸುಗಳು ಎಲ್ಲ ವಯೋಮಾನದವರಿಗೂ ಕೂಡ ಪ್ರಿಯವಾಗಿರುತ್ತವೆ.

The Story of sabudana

ಏನಿದು ಸಾಬೂದಾನ ?
ಸಾಬೂದಾನವು ಒಂದು ಸಂಸ್ಕರಿತ ಸಾಸ್ಯಾಹಾರವಾಗಿದ್ದು, ಈ ಕಾರಣಕ್ಕಾಗಿ ಇದನ್ನು ವ್ರತಗಳ ಆಚರಣೆಯ ಸಂದರ್ಭದಲ್ಲಿ ಬಳಸುತ್ತಾರೆ. Sabo ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಸಾಬೂದಾನವನ್ನು tapioca tuber ನಿಂದ ಪಡೆಯಲಾದ ಪಿಷ್ಟ ಅಥವಾ ಗಂಜಿಯಿಂದ ತಯಾರಿಸುತ್ತಾರೆ. ಸಾಬೂದಾನವು ಸಾಗೂದಾನ, javvarishi ಮತ್ತು chowwary, ಹೀಗೆ ನಾನಾ ಹೆಸರುಗಳಿಂದ ಕರೆಯಲ್ಪಡುತ್ತದೆ.

ಸಾಬೂದಾನವು ಶರ್ಕರಪಿಷ್ಟಗಳನ್ನು ಅತೀ ಹೆಚ್ಚಿನ ಪ್ರಮಾಣದಲ್ಲಿ ಹೊಂದಿದ್ದು, ಕಡಿಮೆ ಕೊಬ್ಬನ್ನು ಹೊಂದಿದೆ. ಇದರ ಅರ್ಥವೇನೆಂದರೆ, ತಮ್ಮ ದೇಹದ ತೂಕದ ಬಗ್ಗೆ ನಿಗಾ ಇರುವವರು ಇದನ್ನು ಉಪಯೋಗಿಸಬಹುದು. ಮಾತ್ರವಲ್ಲದೇ, ಇದು ಪ್ರಪ್ರಥಮ ಆಹಾರ ವಸ್ತುಗಳಲ್ಲಿ ಒಂದಾಗಿದೆ. ಹಾಲನ್ನು ಹೊರತು ಪಡಿಸಿ, ಹೆಚ್ಚಿನ ಭಾರತೀಯರು ಶಿಶುಗಳಿಗೆ ಇದನ್ನೇ ಅಹಾರದ ರೂಪದಲ್ಲಿ ನೀಡುತ್ತಾರೆ, ಮಾತ್ರವಲ್ಲದೇ ಇದನ್ನು ಹಬ್ಬದ ದಿನಗಳಲ್ಲಿಯೂ ಬಳಸುತ್ತಾರೆ. ಸಾಬೂದಾನವು ಯಾವುದೇ ಕೃತಕ ಸಿಹಿಕಾರಕವನ್ನೋ ಅಥವಾ ರಾಸಾಯನಿಕವನ್ನೋ ಒಳಗೊಂಡಿಲ್ಲವಾದ್ದರಿಂದ ಹಾಗೂ ಇದು ಸಂಪೂರ್ಣವಾಗಿ ಪಿಷ್ಟವನ್ನೇ ಹೊಂದಿರುವುದರಿಂದ, ಇತರ ಲಭ್ಯವಿರುವ ಆಹಾರಪದಾರ್ಥಗಳ ಬದಲಿಗೆ ಇದನ್ನೇ ಆರಿಸಿಕೊಳ್ಳಲಾಗುತ್ತದೆ. ಇದು ಸುಲಭವಾಗಿ ಜೀರ್ಣ ಹೊಂದಿ ಶಕ್ತಿಯನ್ನು ಬಹು ಬೇಗನೇ ಕೊಡುವುದರಿಂದ ಅನಾರೋಗ್ಯವುಳ್ಳವರಿಗೆ ಇದನ್ನೇ ಆರೋಗ್ಯಕರ ತಿನಿಸಿನ ರೂಪದಲ್ಲಿ ನೀಡಲಾಗುತ್ತದೆ. ಸಾಬೂದಾನವು ನಮ್ಮ ಶರೀರದ ಬೇರೆ ಬೇರೆ ಕಾರ್ಯಾಂಗ ವ್ಯೂಹಗಳ ಮೇಲೆ ತಂಪಾದ ಪರಿಣಾಮವನ್ನುಂಟು ಮಾಡುತ್ತದೆ ಎಂಬ ವಿಷಯವು ಜನಜನಿತವಾಗಿದ್ದು, ಈ ಕಾರಣದಿಂದಲೇ, ಸಾಬೂದಾನಾದ ತಿಳಿಯಾದ ನೀರನ್ನು (gruel), ಅತೀ ಹೆಚ್ಚು ಪಿತ್ತವುಳ್ಳವರಿಗೆ ನೀಡಲಾಗುತ್ತದೆ.

ಸಾಬೂದಾನಾದ ಅಡುಗೆ ತಯಾರಿಕೆ ಹೇಗೆ ?

ನಮಗೀಗಾಗಲೇ ತಿಳಿದಿರುವಂತೆ, ಸಾಬೂದಾನಾವು ಶರ್ಕರಪಿಷ್ಟವಾಗಿದೆ ಹಾಗೂ ಇದನ್ನು ಬೇಯಿಸುವುದು, ಅದರಲ್ಲೂ ವಿಶೇಷವಾಗಿ ನೀರಿನೊದಿಗೆ ಬೇಯಿಸುವುದು ಅಷ್ಟು ಸುಲಭವಲ್ಲ. ಅದ್ದರಿಂದ, ಇದನ್ನು ಬೇಯಿಸುವುದಕ್ಕೆ ಮೊದಲು, ಅದನ್ನು ಚೆನ್ನಾಗಿ ನೀರಿನಲ್ಲಿ ನೆನೆಸಿರಿ. ನನ್ನ ಮಾತಿನ ಅರ್ಥವೇನೆಂದರೆ, ಅದನ್ನು ನೀರಿನಲ್ಲಿ ಚೆನ್ನಾಗಿ ತೊಳೆಯಿರಿ, ಒಣಗಿಸಿರಿ, ಮತ್ತು ತದನಂತರ ಅದನ್ನು ಒಂದು ಅಗಲವಾದ ಬಟ್ಟಲಿನಲ್ಲಿ ಅಥವಾ ಪಾತ್ರೆಯಲ್ಲಿ ಹಾಕಿರಿ. ನಂತರ ಪಾತ್ರೆಯಲ್ಲಿರುವ ಸಾಬೂದಾನವು ಮುಳುಗುವಷ್ಟು ಮಾತ್ರವೇ ನೀರನ್ನು ಸೇರಿಸಿರಿ. ಇದಾದ ಬಳಿಕ, ಪಾತ್ರೆಯನ್ನು ಮುಚ್ಚಿಟ್ಟು ಸಾಬೂದಾನವನ್ನು 4 ರಿಂದ 6 ಘಂಟೆಗಳ ಕಾಲ ನೆನೆಯಲು ಬಿಡಿರಿ. ನಂತರ ನೀವು ಮುಚ್ಚಳವನ್ನು ತೆಗೆದು ನೋಡಿದಾಗ, ಮೃದುವಾದ, ಪಾತ್ರೆಯಲ್ಲಿ ತುಂಬಿ ಬಂದಿರುವ ಮುತ್ತುಗಳಂತಹ ಸಾಬೂದಾನವನ್ನು ಕಾಣುವಿರಿ.

ಸಾಬೂದಾನವನ್ನು ಖರೀದಿಸುವ ಬಗೆ ಹೇಗೆ ?
ಸಾಬೂದಾನಾವನ್ನು ಖರೀದಿಸುವಾಗ, ಬಿಳುಪಾದ ಮತ್ತು ಸಮಾನ ಗಾತ್ರದ ಮುತ್ತುಗಳುಳ್ಳ ಸಾಬೂದಾನವನ್ನು ಖರೀದಿಸಿರಿ. ಈ ಮುತ್ತುಗಳು ಪೂರ್ಣಪ್ರಮಾಣದಲ್ಲಿದ್ದು, ಅವು ನಜ್ಜುಗುಜ್ಜಾಗಿರಬಾರದು ಅಥವಾ ತುಂಡರಿಸಲ್ಪಟ್ಟಿರಬಾರದು ಅಥವಾ ಒಡೆದಿರಬಾರದು. ಒಂದು ವೇಳೆ ಈ ಮುತ್ತುಗಳು ನಿಯಮಿತ, ಸಮಾನ ಗಾತ್ರದವುಗಳಾಗಿದ್ದರೆ, ಇವುಗಳನ್ನುಪಯೋಗಿಸಿ, ಕಿಚಡಿಯನ್ನು ಮಾಡಬಹುದು. ಸಾಮಾನ್ಯಕ್ಕಿಂತ ತುಸು ದೊಡ್ಡ ಗಾತ್ರದ, ನೈಲಾನ್ ನಂತಹ ಮಣಿಗಳನ್ನು ವಡೆಗಳ ತಯಾರಿಯಲ್ಲಿ ಬಳಸಬಹುದು ಹಾಗೂ ಚಿಕ್ಕ ಗಾತ್ರದ ಮಣಿಗಳನ್ನು ಖೀರು ಅಥವಾ ಪಾಯಸಗಳನ್ನು ಮಾಡಲು ಉಪಯೋಗಿಸಬಹುದು.

ಸಾಬೂದಾನಾದ ಪೌಷ್ಟಿಕ ಲಾಭಗಳು
ಸುಮಾರು 100 ಗ್ರಾಂ ಗಳಷ್ಟು ಸಾಬೂದಾನವು 351 ಕಿ.ಕ್ಯಾಲರಿ, 87 ಗ್ರಾಂ ಗಳಷ್ಟು ಶರ್ಕರಪಿಷ್ಟ, 0.2 ಗ್ರಾಂ ಗಳಷ್ಟು ಕೊಬ್ಬು ಮತ್ತು 0.2 ಗಳಷ್ಟು ಪ್ರೋಟೀನ್ ಗಳನ್ನು ಹೊಂದಿದೆ. ಆದಾಗ್ಯೂ, ಇದು ಖನಿಜಗಳು, ಅನ್ನಾಂಗಗಳು, ಕ್ಯಾಲ್ಸಿಯಂ, ಕಬ್ಬಿಣ, ಮತ್ತು ನಾರಿನ ಅಂಶಗಳನ್ನು ಕಡಿಮೆ ಪ್ರಮಾಣದಲ್ಲಿ ಪೂರೈಸುತ್ತದೆ. ಈ ಸತ್ವಗಳ ಕೊರತೆಯನ್ನು ಇತರ ಘಟಕಗಳಾದ ಹಾಲು, ತರಕಾರಿಗಳು, ಮತ್ತು ಕಡಲೇಕಾಯಿಯಂತಹ ವಸ್ತುಗಳನ್ನು ಸೇರಿಸುವುದರ ಮೂಲಕ ತುಂಬಿಕೊಳ್ಳಬಹುದು.

English summary

The Story of sabudana

Sabudana is a vegetarian processed food, which is why it is used during vrats. Commonly also known as sago, sabudana is made from the starch extracted from tapioca tuber. Here is the story about sagu.
X
Desktop Bottom Promotion