For Quick Alerts
ALLOW NOTIFICATIONS  
For Daily Alerts

ಈ ಲಕ್ಷಣಗಳು ಕಂಡು ಬಂದರೆ ಥೈರಾಯ್ಡ್ ಇರಬಹುದು

|

ಥೈರಾಯ್ಡ್ ನಲ್ಲಿ ಹಾರ್ಮೋನ್ ಪ್ರಮುಖ ಮಾತ್ರವಹಿಸುತ್ತದೆ. ನಮ್ಮ ದೇಹದಲ್ಲಿ ಥೈರಾಯ್ಡ್ ಹಾರ್ಮೋನ್ ಗಳಿದ್ದು ಇದು ದೇಹವು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ. ಥೈರಾಯ್ಡ್ ಹಾರ್ಮೋನ್ ಹೆಚ್ಚಾದರೆ ಅನೇಕ ತೊಂದರೆಗಳು ಉಂಟಾಗುವುದು. ಆದ್ದರಿಂದ ಥೈರಾಯ್ಡ್ ಅನ್ನು ಮೊದಲನೇ ಹಂತದಲ್ಲಿಯೇ ಗುರುತಿಸಿ ಅದಕ್ಕೆ ಚಿಕಿತ್ಸೆಯನ್ನು ಪಡೆದರೆ ಒಳ್ಳೆಯದು.

ಇಲ್ಲಿ ನಾವು ಥೈರಾಯ್ಡ್ ನ ಕೆಲವು ಲಕ್ಷಣಗಳ ಬಗ್ಗೆ ಹೇಳುದ್ದೇವೆ. ಈ ಲಕ್ಷಣಗಳು ಕಾಣಿಸಿದರೆ ಥೈರಾಯ್ಡ್ ಪರೀಕ್ಷೆ ಮಾಡಿಸಿಕೊಳ್ಳುವುದು ಒಳ್ಳೆಯದು:

 ದೇಹದ ತೂಕ ಹೆಚ್ಚಾಗವುದು

ದೇಹದ ತೂಕ ಹೆಚ್ಚಾಗವುದು

ಇದ್ದಕ್ಕಿದ್ದಂತೆ ದೇಹದ ತೂಕ ಹೆಚ್ಚಾದರೆ ಅದು ಥೈರಾಯ್ಡ್ ನಿಂದ ಇರಬಹುದು. ಥೈರಾಯ್ಡ್ ಹಾರ್ಮೋನ್ ಹೆಚ್ಚಾದರೆ ಹೊಟ್ಟೆಯ ಗಾತ್ರ ಕೂಡ ಹೆಚ್ಚಾಗುವುದು.

ತಲೆ ಸುತ್ತು

ತಲೆ ಸುತ್ತು

ಥೈರಾಯ್ಡ್ ಗ್ರಂಥಿ ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ ಸುಸ್ತು, ತಲೆ ಸುತ್ತು ಕಂಡು ಬರುವುದು.

ಅನಿನಿಯಮಿತ ಮುಟ್ಟು

ಅನಿನಿಯಮಿತ ಮುಟ್ಟು

ಮಹಿಳೆಯರಿಗೆ ಥೈರಾಯ್ಡ್ ಬಂದರೆ ಅನಿನಿಯಮಿತ ಮುಟ್ಟಿನ ಸಮಸ್ಯೆ ಉಂಟಾಗುವುದು. ಅಧಿಕ ರಕ್ತ ಸ್ರಾವ, ಮುಟ್ಟು ವಿಳಂಬವಾಗಿ ಆಗುವುದು ಅಥವಾ ಬೇಗನೆ ಆಗುವುದು ಈ ರೀತಿಯ ಸಮಸ್ಯೆಗಳು ಕಂಡು ಬರುತ್ತದೆ.

ಗಂಟಲು ಊದಿಕೊಳ್ಳುವುದು

ಗಂಟಲು ಊದಿಕೊಳ್ಳುವುದು

ಗಂಟಲಿನ ಭಾಗವನ್ನು ಗಮನಿಸಿದರೆ ಊದಿಕೊಂಡಂತೆ ಕಾಣುವುದು. ಇದನ್ನು ಗಳಗಂಡ ರೋಗ ಅಂತಲೂ ಕರಿಯುತ್ತಾರೆ.

ಖಿನ್ನತೆ

ಖಿನ್ನತೆ

ಥೈರಾಯ್ಡ್ ಹಾರ್ಮೋನ್ ಗಳು ನಿಮ್ಮ ಮೂಡ್ ನ ಮೇಲೂ ಕೂಡ ಪರಿಣಾಮ ಬೀರುತ್ತದೆ. ನಿಮ್ಮಲ್ಲಿ ಖಿನ್ನತೆ, ಉದ್ವೇಗವನ್ನು ಉಂಟು ಮಾಡುತ್ತದೆ.

 ಗರ್ಭಧಾರಣೆಗೆ ಆಗದಿರುವುದು

ಗರ್ಭಧಾರಣೆಗೆ ಆಗದಿರುವುದು

ಥೈರಾಯ್ಡ್ ಹಾರ್ಮೋನ್ ಅಧಿಕವಾದರೆ ಗರ್ಭಧಾರಣೆ ಆಗುವ ಸಾಧ್ಯತೆ ಕಡಿಮೆ. ಆದ್ದರಿಂದ ಗರ್ಭಧಾರಣೆಗೆ ಪ್ರಯತ್ನಿಸಿ ಆಗದಿದ್ದಲ್ಲಿ ಥೈರಾಯ್ಡ್ ಪರೀಕ್ಷೆ ಮಾಡಿಸಿ.

ಅಧಿಕ ಕೊಲೆಸ್ಟ್ರಾಲ್

ಅಧಿಕ ಕೊಲೆಸ್ಟ್ರಾಲ್

ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗಿ ವ್ಯಾಯಾಮ, ಡಯಟ್ ಮಾಡಿಯೂ ಕಮ್ಮಿಯಾಗದಿದ್ದರೆ ಥೈರಾಯ್ಡ್ ಪರೀಕ್ಷೆ ಮಾಡಿಸುವುದು ಒಳ್ಳೆಯದು.

 ಮಲಬದ್ಧತೆ

ಮಲಬದ್ಧತೆ

ಥೈರಾಯ್ಡ್ ಇರುವವರಿಗೆ ಕಂಡು ಬರುವ ಮತ್ತೊಂದು ಸಮಸ್ಯೆಯೆಂದರೆ ಮಲಬದ್ಧತೆ. ಆದ್ದರಿಂದ ಆಗಾಗ ಮಲಬದ್ಧತೆ ಉಂಟಾಗುತ್ತಿದ್ದರೆ ನಿರ್ಲಕ್ಷ್ಯತೆ ಬೇಡ.

ಸಂಧಿ ನೋವು

ಸಂಧಿ ನೋವು

ಸಂಧಿ ನೋವು ಕ್ಯಾಲ್ಸಿಯಂ ಕಮ್ಮಿಯಾದರೆ ಮಾತ್ರವಲ್ಲ, ದೇಹದಲ್ಲಿ ಥೈರಾಯ್ಡ್ ಹಾರ್ಮೋನ್ ನ ಉತ್ಪತ್ತಿ ಅಧಿಕವಾದರೂ ಬರುತ್ತದೆ.

 ಕೂದಲು ಉದುರುವುದು

ಕೂದಲು ಉದುರುವುದು

ತುಂಬಾ ಕೂದಲು ಉದುರುವುದು ಕೂಡ ಥೈರಾಯ್ಡ್ ನ ಲಕ್ಷಣವಾಗಿದೆ.

ಸ್ನಾಯುಗಳಲ್ಲಿ ಸೆಳೆತ

ಸ್ನಾಯುಗಳಲ್ಲಿ ಸೆಳೆತ

ಥೈರಾಯ್ಡ್ ಹಾರ್ಮೋನ್ ಅಧಿಕವಾದರೆ ಸ್ನಾಯುಗಳು ದುರ್ಬಲವಾಗಿ ಸ್ನಾಯು ಸೆಳೆತ ಉಂಟಾಗುವುದು.

English summary

Symptoms To Know Your Thyroid Is High | Tips For Health | ಈ ಲಕ್ಷಣಗಳು ಕಂಡು ಬಂದರೆ ಥೈರಾಯ್ಡ್ ಇರಬಹುದು | ಆರೋಗ್ಯಕ್ಕಾಗಿ ಕೆಲ ಸಲಹೆ

When thyroid levels are high, you are faced with several other health problems. Thus, it is important to know the symptoms of thyroid to detect it early and treat it immediately.
X
Desktop Bottom Promotion