For Quick Alerts
ALLOW NOTIFICATIONS  
For Daily Alerts

ಇವು ಬ್ರೈನ್ ಟ್ಯೂಮರ್ ನ ಲಕ್ಷಣಗಳು !

By Super
|

ಬ್ರೈನ್ ಟ್ಯೂಮರ್ (ಮಿದುಳಿನಲ್ಲಿ ಗಡ್ಡೆ) ಜೀವಕ್ಕೆ ಅಪಾಯ ತರುವಂತಹ ಕಾಯಿಲೆ. ಪ್ರಾರಂಭದ ಹಂತದಲ್ಲಿ ಗುರುತಿಸಿ ಸೂಕ್ತ ಚಿಕಿತ್ಸೆ ನೀಡಿದರೆ ಗುಣಪಡಿಸಬಹುದು. ಮೆದುಳಿಗೆ ಅಪಾರ ಪ್ರಮಾಣದಲ್ಲಿ ಒತ್ತಡ ಬಿದ್ದಾಗ ಅಥವಾ ಮೆದಳಿನ ಕ್ರಿಯೆಗಳಲ್ಲಿ ತೊಂದರೆಗಳುಂಟಾದಾಗ ಬ್ರೈನ್ ಟ್ಯೂಮರ್ ಲಕ್ಷಣಗಳು ಕಂಡುಬರುತ್ತವೆ. ಈ ಲಕ್ಷಣಗಳು ಒಮ್ಮೆಲೇ ಅರಿವಿಗೆ ಬರದೇ ದೇಹದಲ್ಲಿನ ನೋವು ಕಾಣಿಸಿಕೊಳ್ಳುವುದು ಹೀಗೆ ಮೊದಲಾದ ಲಕ್ಷಣಗಳ ನಂತರ ನಿಧಾನವಾಗಿ ಅರಿವಿಗೆ ಬರುತ್ತದೆ.

ಬ್ರೈನ್ ಟ್ಯೂಮರ್ ನ ಕೆಲವು ಆರಂಭಿಕ ಲಕ್ಷಣಗಳನ್ನು ಇಲ್ಲಿ ಹೇಳಲಾಗಿದೆ.

1. ತಲೆನೋವು

1. ತಲೆನೋವು

ಒತ್ತಡದಿಂದ ಉಂಟಾಗುವ ತಲೆನೋವು ಮಂದ ಮತ್ತು ಸ್ಥಿರವಾಗಿರುತ್ತವೆ. ಕೆಲವೊಮ್ಮೆ ಇದು ಅತಿರೇಕಕ್ಕೂ ಹೋಗಬಹುದು. ಶೀತ, ಕಫ ಉಂಟಾದಾಗ ಅತಿಯಾದ ದೈಹಿಕ ಕೆಲಸಗಳನ್ನು ಮಾಡಿದಾಗ ತಲೆ ಎತ್ತಲಾಗದಷ್ಟು ತಲೆನೋವು ಉಂಟಾಗುತ್ತದೆ. ಇದರಿಂದಾಗಿ ಮೆದುಳಿನ ಮೇಲೆ ಒತ್ತಡವು ಅಧಿಕವಾಗುತ್ತದೆ. ರಾತ್ರಿ ಮಲಗಿದಾಗ ಭಯಂಕರವಾದ ತಲೆನೋವು ನಿಮ್ಮನ್ನು ಕಾಡಬಹುದು.

2. ವಾಕರಿಕೆ

2. ವಾಕರಿಕೆ

ಅತಿಯಾದ ಒತ್ತಡದಿಂದಾಗಿ ನಿಮಗೆ ವಾಕರಿಕೆಯ ಅನುಭವವಾಗಬಹುದು. ತಲೆಸುತ್ತಿದಂತಾಗಿ ಇಡೀ ದಿನ ಅನಾರೋಗ್ಯವುಂಟಾಗಬಹುದು. ನೀವಿರುವ ಸ್ಥಿತಿಯನ್ನು ಬದಲಾಯಿಸಿದರೆ ಅಂದರೆ ಕುಳಿತಿದ್ದು ಒಂದೇ ಸಮನೆ ನಿಂತರೆ ತಲೆತಿರುಗಿದಂತಾಗಬಹುದು.

3. ಮೂರ್ಛೆ ಬೀಳುವುದು (ಫಿಟ್ಸ್) :

3. ಮೂರ್ಛೆ ಬೀಳುವುದು (ಫಿಟ್ಸ್) :

ಸಾಮಾನ್ಯವಾಗಿ ಬ್ರೈನ್ ಟ್ಯೂಮರ್ ನ ಸಾಮಾನ ಲಕ್ಷಣ ಇದಾಗಿದೆ. ಕೆಲವರ ದೇಹದಲ್ಲಿ ಕಾಲುಗಳು ಸ್ನಾಯುಗಳ ಸೆಳೆತ ಉಂಟಾಗಬಹುದು. ಇನ್ನೂ ಕೆಲವರಲ್ಲಿ ಈಡಿ ದೇಹವೇ ಸೆಳೆತಕ್ಕೆ ಒಳಗಾಗಬಹುದು. ಅಲ್ಲದೇ ಮೂರ್ಛೆ ತಪ್ಪಿ ಬೀಳಲೂ ಬಹುದು. ಹೀಗಾದಾಗ ಮೊದಲು ವೈದ್ಯಕೀಯ ಚಿಕಿತ್ಸೆ ಪಡೆಯಬೇಕು. ಇಲ್ಲವಾದಲ್ಲಿ ಇದು ಬ್ರೈನ್ ಟ್ಯೂಮರ್ ಹೆಚ್ಚಳಕ್ಕೆ ನೇರವಾದ ಕಾರಣವಾಗಬಹುದು.

4. ಜಡತ್ವ

4. ಜಡತ್ವ

ಈ ರೋಗದ ಇನ್ನೊಂದು ಲಕ್ಷಣ ಅರೆನಿದ್ರಾವಸ್ಥೆಯಾಗಿದೆ. ಇದು ಮೆದುಳಿಗೆ ಉಂಟಾಗುವ ಅಧಿಕ ಒತ್ತಡದಿಂದ ಸಂಭವಿಸಬಹುದು. ಇದರಿಂದಾಗಿ ಹಗಲಿನಲ್ಲಿ ಹೆಚ್ಚು ನಿದ್ದೆ ಮಾಡಬೇಕಾಗಬಹುದು.

5. ವ್ಯಕ್ತಿತ್ವ ಮತ್ತು ಬುದ್ಧಿಶಕ್ತಿಯ ಬದಲಾವಣೆಗಳು

5. ವ್ಯಕ್ತಿತ್ವ ಮತ್ತು ಬುದ್ಧಿಶಕ್ತಿಯ ಬದಲಾವಣೆಗಳು

ಸಾಮಾನ್ಯವಾಗಿ ಭೌತಿಕ ಹಾಗೂ ಮಾನಸಿಕ ದೌರ್ಬಲ್ಯತೆ ಹೆಚ್ಚಿ ದೇಹದಲ್ಲೂ ಸಾಕಷ್ಟು ಬದಲಾವಣೆಗಳಾಗಬಹುದು.

6. ಮಾತಾಡುವ ಸಾಮರ್ಥ್ಯ ಕುಂಠಿತವಾಗುವುದು

6. ಮಾತಾಡುವ ಸಾಮರ್ಥ್ಯ ಕುಂಠಿತವಾಗುವುದು

ಬರೆಯುವಾಗ, ಒದುವಾಗ ಅಥವಾ ಲೆಕ್ಕಾಚಾರಗಳನ್ನು ಮಾಡುವಾಗ ಆ ಸನ್ನಿವೇಶವನ್ನು ಸರಿಪಡಿಸಲು ಸಹಾಯವಾಗುತ್ತದೆ. ಜೊತೆಗೆ ನಿಮ್ಮ ದೇಹದಲ್ಲಿ ಸಾಕಷ್ಟು ನಿತ್ರಾಣದ ಸ್ಥಿತಿ ಉಂಟಾಗುತ್ತದೆ.

7. ಮಾನಸಿಕ ಗೊಂದಲ

7. ಮಾನಸಿಕ ಗೊಂದಲ

ಮೂರ್ಛೆ ರೋಗ ವಿಚಿತ್ರ ಸಂವೇಧನೆಗಳಿಗೆ ಕಾರಣವಾಗಬಹುದು. ಭಯ ಅಥವಾ ತೀವ್ರ ನಿಕಟತೆ, ವಿಚಿತ್ರ ವಾಸನೆ, ಬಳಲಿಕೆ ಮಾತಿನ ತೊಂದರೆಗಳು ಉಂಟಾಗುತ್ತವೆ.

8. ದೃಷ್ಟಿ ದೋಷ

8. ದೃಷ್ಟಿ ದೋಷ

ಒಂದು ಕಣ್ಣಿನ ದೃಷ್ಟಿ ನಷ್ಟ ಉಂಟಾಗುತ್ತದೆ. ಆದರೆ ಇದು ಮೊದಲು ಅರಿವಿಗೆ ಬರದೇ ವೈದ್ಯಕೀಯ ಚಟುವಟಿಕೆಯನ್ನು ನಡೆಸಿದಾಗಷ್ಟೇ ತಿಳಿಯುತ್ತದೆ.

9. ಅಸ್ಥಿರತೆ

9. ಅಸ್ಥಿರತೆ

ಹೊಂದಾಣಿಕೆಯ ಕೊರತೆ, ತೊದಲುತ್ತ ಮಾತನಾಡುವುದು; ಅಸ್ಥಿರತೆ; ಕಣ್ಣುಗಳ ಅನೈಚ್ಛಿಕ ಚಲನೆ, ವಾಂತಿ ಮತ್ತು ಕತ್ತು ಬಿಗಿತ.

10. ಅಸಮನ್ವಿತ ನಡಿಗೆ

10. ಅಸಮನ್ವಿತ ನಡಿಗೆ

ಅಸ್ಥಿರತೆ ಮತ್ತು ಅಸಮನ್ವಿತ ನಡಿಗೆ, ಮುಖದಲ್ಲಿನ ದೌರ್ಬಲ್ಯ, ಒಂದು ಬದಿಯ ನಗು ಅಥವಾ ಇಳಿಬೀಳುವಿಕೆ, ಇಬ್ಬಗೆಯ ದೃಷ್ಟಿ, ಮಾತನಾಡುವಾಗ ಎಂಜಲು ನುಂಗುವುದು, ಕುಳಿತಿದ್ದು ಎದ್ದ ನಂತರ ವಾಂತಿ ಅಥವಾ ತಲೆನೋವು ಮೊದಲಾದ ಲಕ್ಷಣಗಳು ನಿಧಾನವಾಗಿ ಗೋಚರಿಸಬಹುದು.

11. ಸುಸ್ತು

11. ಸುಸ್ತು

ತಲೆನೋವು, ಅನಾರೋಗ್ಯ ಮತ್ತು ದೃಷ್ಟಿ ಮತ್ತು ಚಲನೆಯ ಸಮಸ್ಯೆಗಳು.

12. ದೇಹದಲ್ಲಿ ಬದಲಾವಣೆ

12. ದೇಹದಲ್ಲಿ ಬದಲಾವಣೆ

ಪಿಟ್ಯುಟರಿ ಗ್ರಂಥಿ ವಿವಿಧ ಹಾರ್ಮೋನ್ ಗಳ ಉತ್ವಾದೆನೆಗೆ ಕಾರಣವಾಗಿದೆ. ಆದ್ದರಿಂದ ದೇಹದಲ್ಲಿ ಸಾಕಷ್ಟು ಬದಲಾವಣೆಗಳಾಗಿ ಟ್ಯೂಮರ್ ಇರುವವರಲ್ಲಿ ಬಂಜೆತನ, ಅನಿಯಮಿತ ಋತುಚಕ್ರ, ಅಧಿಕ ತೂಕ, ಅಧಿಕ ರಕ್ತದೊತ್ತಡ, ಮಧುಮೇಹ, ಮೊದಲಾದ ಖಾಯಿಲೆಗಳು ಕಾಣಿಸಿಕೊಳ್ಳುತ್ತವೆ.

13. ದೇಹದ ಭಾಗದಲ್ಲಿ ದೌರ್ಬಲ್ಯ

13. ದೇಹದ ಭಾಗದಲ್ಲಿ ದೌರ್ಬಲ್ಯ

ಮುಖದ ಭಾಗದಲ್ಲಿ, ಅಥವಾ ದೇಹದ ಯಾವುದೇ ಭಾಗದಲ್ಲಿ ದೌರ್ಬಲ್ಯ ಉಂಟಾಗುವುದೂ ಕೂಡ ಟ್ಯೂಮರ್ ನ ಮತ್ತೊಂದು ಲಕ್ಷಣ.

14. ಬ್ರೈನ್ ಟ್ಯೂಮರ್

14. ಬ್ರೈನ್ ಟ್ಯೂಮರ್

ಕೆಲವೊಮ್ಮೆ ಬ್ರೈನ್ ಟ್ಯೂಮರ್ ವ್ಯಕ್ತಿತ್ವ ಅಥವಾ ನಡವಳಿಕೆಯಲ್ಲಿ ಬದಲಾವಣೆಗಳನ್ನು ಉಂಟುಮಾಡಬಹುದು. ಇದು ಸಾಮಾನ್ಯವಾಗಿ ಬ್ರೈನ್ ಟ್ಯೂಮರ್, ಬ್ರೈನ್ ಸೆರೆಬ್ರಲ್ ಹೆಮಿಸ್ಫೇರ್ಸ್ ಇರುವಾಗ ಸಾಮಾನ್ಯವಾಗಿ ಸಂಭವಿಸುತ್ತದೆ. ಈ ಆದ್ದರಿಂದ ಇದರ ಬಗ್ಗೆ ಸಂಪೂರ್ಣವಾಗಿ ತಿಳಿಯಲು ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.

English summary

Symptoms To Identify Brain Tumours | Tips For Health |ಬ್ರೈನ್ ಟ್ಯೂಮರ್ ನ ಲಕ್ಷಣಗಳು | ಆರೋಗ್ಯಕ್ಕಾಗಿ ಕೆಲ ಸಲಹೆಗಳು

A brain tumour may cause symptoms because the space it takes up in the skull puts pressure on the brain, or because it is disturbing the function of the part of the brain it's growing in.
X
Desktop Bottom Promotion