For Quick Alerts
ALLOW NOTIFICATIONS  
For Daily Alerts

ಗರ್ಭಕಂಠದ ಕ್ಯಾನ್ಸರ್ ನ ಲಕ್ಷಣಗಳು

By Super
|

ಗರ್ಭಕಂಠ ಎಂದರೆ ಗರ್ಭಾಶಯದ ಕೆಳಗಿನ ದ್ವಾರವಾಗಿದ್ದು ಇದು ಯೋನಿಯನ್ನು ಸಂಪರ್ಕಿಸುತ್ತದೆ. ಅಮೇರಿಕಾದಲ್ಲಿ ಪ್ರತಿವರ್ಷ ಸುಮಾರು 12,000 ಹೆಚ್ಚಿನ ಮಹಿಳೆಯರು ಗರ್ಭಕಂಠದ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಇವುಗಳಲ್ಲಿ ಹೆಚ್ಚಿನ ಸಂದರ್ಭಗಳಲ್ಲಿ ಸಾಂಕ್ರಾಮಿಕವಾದ ಪ್ಯಾಪಿಲೋಮ ವೈರಸ್ ಸಂಪರ್ಕಕ್ಕೆ ಬಂದು ಈ ರೋಗ ಹರಡಿರುತ್ತದೆ. ಇದನ್ನು ಮೊದಲ ಹಂತದಲ್ಲಿಯೇ ಗುರುತಿಸಿದರೆ ಸಂಪೂರ್ಣವಾಗಿ ಗುಣಮುಖರನ್ನಾಗಿ ಮಾಡಬಹುದು.

ಗರ್ಭಕಂಠದ ಕ್ಯಾನ್ಸರ್ ನ ಲಕ್ಷಣಗಳು

1.ಅಸಾಮಾನ್ಯ ರಕ್ತಸ್ರಾವ

1.ಅಸಾಮಾನ್ಯ ರಕ್ತಸ್ರಾವ

ಗರ್ಭಕಂಠದ ಕ್ಯಾನ್ಸರ್ ಇರುವ ಮಹಿಳೆಯರಲ್ಲಿ ಯೋನಿಯಲ್ಲಿ ಅನಿಯಮಿತವಾದ ರಕ್ತಸ್ರಾವ ಒಂದು ಸಾಮಾನ್ಯವಾದ ಲಕ್ಷಣವಾಗಿದೆ. ಇದು ಬೇರೆ ಬೇರೆ ಸಂದರ್ಭಗಳಲ್ಲಿ ಬೇರೆ ಬೇರೆ ರೀತಿ ಇರುತ್ತದೆ,

2.ಬಿಳಿಪೊರೆಯ ಅನಿಯಮಿತ ಸ್ರಾವ

2.ಬಿಳಿಪೊರೆಯ ಅನಿಯಮಿತ ಸ್ರಾವ

ಬಿಳಿಪೊರೆಯ ಸ್ರಾವ ಇನ್ನೊಂದು ಲಕ್ಷಣವಾಗಿದ್ದು ಇದು ಕೂಡ ಮಹಿಳೆಯಿಂದ ಮಹಿಳೆಗೆ ವ್ಯತ್ಯಾಸವಾಗಿರುತ್ತದೆ ಹಾಗೂ ಇದು ವಾಸನೆಯಿಂದ ಕೂಡಿರಬಹುದು ಅಥವಾ ಲೋಳೆಯಾಗಿರಬಹುದು.ಪ್ರತಿ ಬಾರಿ ನೀವು ನಿಮ್ಮ ಮಹಿಳಾ ವೈದ್ಯರ ಬಳಿ ಹೋದಾಗ ಹೀಗಾಗುತ್ತಿದ್ದಲ್ಲಿ ವಿವರಿಸಿ.

3.ಅಸ್ಥಿಕುಹರದ ನೋವು

3.ಅಸ್ಥಿಕುಹರದ ನೋವು

ಸಾಮಾನ್ಯವಾಗಿ ಋತುಸ್ರಾವದ ಸಮಯದಲ್ಲಿ ಅಸ್ಥಿಕುಹರದ ನೋವು ಕಾಣಿಸದೇ ಇರಬಹುದು. ಇಂತಹ ನೋವಿನ ತೀವ್ರತೆ ಬದಲಾಗುತ್ತಾ ಇರಾಬಹುದು ಮತ್ತು ಕೆಲವು ಸಮಯಗಳಲ್ಲಿ ಹೆಚ್ಚಿನ ನೋವು ಕಾಣಿಸಿಕೊಳ್ಳಬಹುದು.

4. ಮೂತ್ರ ವಿಸರ್ಜನೆ ಸಮಯದಲ್ಲಿ ನೋವು

4. ಮೂತ್ರ ವಿಸರ್ಜನೆ ಸಮಯದಲ್ಲಿ ನೋವು

ಮೂತ್ರಕೋಶದಲ್ಲಿ ನೋವು ಅಥವಾ ಮೂತ್ರವಿಸರ್ಜನೆಯ ಸಮಯದಲ್ಲಿ ನೋವು ಗರ್ಭಕಂಠದ ಕ್ಯಾನ್ಸರ್ ನ ಮುಂದುವರಿದ ಭಾಗವಾಗಿರುತ್ತದೆ. ಗರ್ಭಕಂಠದ ಕ್ಯಾನ್ಸರ್ ಮೂತ್ರಕೋಶದ ತನಕ ವಿಸ್ತರಿಸಿದಾಗ ಈ ಲಕ್ಷಣ ಕಾಣಿಸಿಕೊಳ್ಳುತ್ತದೆ.

5. ನೋವು

5. ನೋವು

ಮುಟ್ಟಿನ ನಡುವೆ, ಲೈಂಗಿಕ ಸಂಪರ್ಕದ ಬಳಿಕ ಹಾಗೂ ಅಸ್ಥಿಕುಹರದ ಪರೀಕ್ಷೆಯ ಬಳಿಕ ನೋವು ಕಾಣಿಸಿಕೊಳ್ಳುವುದು ಗರ್ಭಕಂಠದ ಕ್ಯಾನ್ಸರ್ ನ ಲಕ್ಷಣಗಳಾಗಿರಬಹುದು. ಈ ಎಲ್ಲಾ ಸಂದರ್ಭಗಳಲ್ಲಿ ಗರ್ಭಕಂಠದಲ್ಲಿ ಚಲನೆ ಇರುವ ಕಾರಣ ಹೀಗಾಗುತ್ತದೆ. ಸಾಮಾನ್ಯವಾಗಿ ಸ್ವಲ್ಪ ರಕ್ತಸ್ರಾವ ಇದ್ದಲ್ಲಿ ಗರ್ಭಕಂಠದ ಕ್ಯಾನ್ಸರ್ ಇದ್ದಲ್ಲಿ ಇದು ಜಾಸ್ತಿಯಾಗಿರುತ್ತದೆ. ಲೈಂಗಿಕ ಸಂಪರ್ಕದ ಬಳಿಕ ಇದು ಸ್ಪಷ್ಟವಾಗಿ ತಿಳಿಯುತ್ತದೆ.

ಶಸ್ತ್ರಚಿಕಿತ್ಸೆ.

ಶಸ್ತ್ರಚಿಕಿತ್ಸೆ.

ಎರಡನೆ ಹಂತದ ತನಕ ಕ್ಯಾನ್ಸರ್ ಗಳಿಗೆ ಸಾಮಾನ್ಯವಾಗಿ ಶಸ್ತ್ರಚಿಕಿತ್ಸೆಯನ್ನು ಮಾಡಿ ಕ್ಯಾನ್ಸರ್ ಪೀಡಿತ ಜಾಗವನ್ನು ತೆಗೆಯಲಾಗುತ್ತದೆ. ಇದರ ಅರ್ಥ ನಿಮ್ಮ ಗರ್ಭಕೋಶವನ್ನು ತೆಗೆಯಲಾಗುತ್ತದೆ. ಇದರ ಜೊತೆಗೆ ಸುತ್ತಲ ಜಾಗವನ್ನೂ ತೆಗೆಯಲಾಗುತ್ತದೆ. ಅಂಡಾಶಯ, ಫಾಲೋಪಿಯನ್ ನಾಳ, ದುಗ್ಧರಸ ಗ್ರಂಥಿಗಳು ಕೂಡ ತೆಗೆಯಬೇಕಾಗಿ ಬರಬಹುದು.

ಚಿಕಿತ್ಸೆ: ರೇಡಿಯೇಶನ್

ಚಿಕಿತ್ಸೆ: ರೇಡಿಯೇಶನ್

ಶಸ್ತ್ರಚಿಕಿತ್ಸೆಯ ಬಳಿಕವೂ ಕ್ಯಾನ್ಸರ್ ಕಣಗಳು ಉಳಿದಲ್ಲಿ ಅವನ್ನು ರೇಡಿಯೇಷನ್ ಮೂಲಕ ತೆಗೆಯಬಹುದು. ಇದನ್ನು ಕ್ಯಾನ್ಸರ್ ಇದ್ದಲ್ಲಿಯ ತನಕ ತೆಗೆದುಕೊಂಡು ಹೋಗಿ ಅಲ್ಲಿ ರೇಡಿಯೇಷನ್ ನೀಡಲಾಗುತ್ತದೆ. ಇದನ್ನು ಕಿಮೋಥೆರಪಿಯ ಜೊತೆಗೆ ನೀಡುತ್ತಾರೆ.

ಕಿಮೋಥೆರಪಿ

ಕಿಮೋಥೆರಪಿ

ದೇಹದ ವಿವಿಧ ಭಾಗಗಳಿಗೆ ಕ್ಯಾನ್ಸರ್ ಕಣಗಳು ತಲುಪಿದ್ದರೆ ಕೀಮೋಥೆರಪಿ ಅತ್ಯುತ್ತಮವಾದ ಚಿಕಿತ್ಸೆಯಾಗಿದೆ. ಕೀಮೋಥೆರಪಿ ಎಂದರೆ ಕ್ಯಾನ್ಸರ್ ಕಣಗಳ ಬಳಿ ವಿಷಯುಕ್ತ ಔಷಧವನ್ನು ನೀಡುವುದು. ಇದರಿಂದ ಬೇರೆ ದುಷ್ಪಪರಿಣಾಮಗಳಾಗುವ ಸಾಧ್ಯತೆಗಳಿವೆ. ಇವುಗಳೆಂದರೆ ಸುಸ್ತು, ತಲೆಕೂದಲು ಉದುರುವಿಕೆ, ಹಸಿವು ಆಗದಿರುವಿಕೆ, ವಾಂತಿ ಇತ್ಯಾದಿ.

English summary

Symptoms of Cervical Cancer and Treatment

Cervical Cancer symptoms are often misinterpreted as PMS or Ovulationpains. The biggest difficulty in Cervical cancer is that it hardly shows any symptoms, not until it reaches a advanced stage, though it differs from woman to woman.
X
Desktop Bottom Promotion