For Quick Alerts
ALLOW NOTIFICATIONS  
For Daily Alerts

ಬೇಸಿಗೆ ಕಾಯಿಲೆಗಳ ವಿರುದ್ಧ ಹೋರಾಡುವ ಹಣ್ಣುಗಳಿವು!

|

ಬಿಸಿಲಿನ ಧಗೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬಿಸಿಲಿನಲ್ಲಿ 5 ನಿಮಿಷ ನಡೆದರೆ ಸಾಕು ಮೈಯಿಂದ ಬೆವರು ಸುರಿಯಲಾರಂಭಿಸುತ್ತದೆ. ಹೊರಗಡೆ ಉಷ್ಣತೆ ಹೆಚ್ಚಾದರೆ ಅನೇಕ ಆರೋಗ್ಯಕರ ಸಮಸ್ಯೆಗಳು ಕಂಡು ಬರಬಹುದು. ಆದ್ದರಿಂದ ಈ ಸಮಯದಲ್ಲಿ ಆರೋಗ್ಯದ ಬಗ್ಗೆ ಹೆಚ್ಚು ಜಾಗೃತೆಯಿಂದ ಇರಬೇಕಾಗುತ್ತದೆ.

ದೇಹವನ್ನು ತಂಪಾಗಿಡುವ ಆಹಾರ ವಸ್ತುಗಳನ್ನು ತಿನ್ನಬೇಕು. ಅಲ್ಲದೆ ಈ ಸಮಯದಲ್ಲಿ ದೊರೆಯುವಂತಹ ಹಣ್ಣುಗಳನ್ನು(ಸೀಸನ್ ಫುಡ್ಸ್) ತಿನ್ನಬೇಕು. ಸೀಸನ್ ಫುಡ್ಸ್ ವಾತಾವರಣಕ್ಕೆ ತಕ್ಕಂತೆ ನಮ್ಮ ಶರೀರವನ್ನು ಸರಿ ಹೊಂದಿಸುತ್ತದೆ. ಚಳಿಗಾಲದಲ್ಲಿ ಮೈ ಬೆಚ್ಚಗಿಡುವ ಹಣ್ಣುಗಳನ್ನು ತಿನ್ನಬೇಕು. ಈಗ ಮೈಯನ್ನು ತಂಪಾಗಿಡುವ, ದೇಹದಲ್ಲಿ ಬಿಸಿಲಿನಲ್ಲಿ ಕಂಡು ಬರುವ ರೋಗಗಳ ವಿರುದ್ಧ ಹೋರಾಡುವ ಸಾಮರ್ಥ್ಯವಿರುವ ಹಣ್ಣುಗಳನ್ನು ತಿನ್ನಬೇಕು.

ಇಲ್ಲಿ ನಾವು ಬೇಸಿಗೆಯಲ್ಲಿ ನಮ್ಮ ಆರೋಗ್ಯ ರಕ್ಷಣೆ ಮಾಡಬಹುದಾದ 23 ಹಣ್ಣುಗಳ ಪಟ್ಟಿ ನೀಡಿದ್ದೇವೆ ನೋಡಿ:

ಕಲ್ಲಂಗಡಿ

ಕಲ್ಲಂಗಡಿ

ಕಲ್ಲಂಗಡಿ ಹಣ್ಣು ನಿಮ್ಮ ದೇಹದಲ್ಲಿ ನೀರಿನಂಶ ಕಡಿಮೆಯಾಗದಂತೆ ನೋಡಿಕೊಳ್ಳುತ್ತದೆ. ಇದರಲ್ಲಿರುವ ಲೈಕೋಪೆನೆ ಅಂಶ ತ್ವಚೆ ಸೂರ್ಯನ ಕಿರಣಗಳಿಂದ ರಕ್ಷಣೆ ಮಾಡುತ್ತದೆ.

 ದ್ರಾಕ್ಷಿ

ದ್ರಾಕ್ಷಿ

ಬಾಯಾರಿಕೆಯನ್ನು ನೀಗಿಸುವಲ್ಲಿ ದ್ರಾಕ್ಷಿ ಕೂಡ ಸಹಕಾರಿ. ಇದು ರಕ್ತವನ್ನು ಶುದ್ಧೀಕರಿಸಿ, ಕ್ಯಾನ್ಸರ್, ಹೃದಯ ಸಂಬಂಧಿ ರೋಗಗಳ ವಿರುದ್ಧ ಹೋರಾಡುತ್ತದೆ. ದ್ರಾಕ್ಷಿ ಬೀಜ ಕ್ಯಾನ್ಸರ್ ತಡೆಗಟ್ಟುವ ಉತ್ತಮ ಮದ್ದಾಗಿದೆ. ಜೀರ್ಣಕ್ರಿಯೆ ಸರಿಯಾಗಿ ನಡೆಯುವಂತೆ ಮಾಡುತ್ತದೆ, ನರಗಳಿಗೂ ಒಳ್ಳೆಯದು.

ಮಾವಿನ ಹಣ್ಣು

ಮಾವಿನ ಹಣ್ಣು

ಹಣ್ಣುಗಳ ರಾಜ ಎಂದು ಕರೆಯಲ್ಪಡುವ ಮಾವಿನ ಹಣ್ಣಿನಲ್ಲಿ ಕಬ್ಬಿಣದಂಶ ಹಾಗೂ ಸೆಲೆನಿಯಮ್(selenium) ಅಧಿಕವಿದೆ.

ಪೈನಾಪಲ್

ಪೈನಾಪಲ್

ಇದರಲ್ಲಿ ಬ್ರೊಮೆಲಿಯಾನ್ (bromelian) ಎಂಬ ಎಂಜೈಮ್ಸ್ ಇದ್ದು ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು ಹಾಗೂ ಉರಿಯೂತ ಸಮಸ್ಯೆ ಉಂಟಾಗದಂತೆ ಆರೋಗ್ಯ ಕಾಪಾಡುತ್ತದೆ.

ನಿಂಬೆ ಹಣ್ಣು

ನಿಂಬೆ ಹಣ್ಣು

ಬಾಯಾರಿಕೆಯಾದಾಗ ನಿಂಬೆ ಪಾನೀಯಾ ಕುಡಿದರೆ ಬಾಯಾರಿಕೆ ಕಡಿಮೆಯಾಗುವುದು, ದೇಹಕ್ಕೂ ಚೈತನ್ಯ ತುಂಬುತ್ತದೆ, ದೇಹವನ್ನೂ ತಂಪಾಗಿಡುತ್ತದೆ.

ನೆಲ್ಲಿಕಾಯಿ

ನೆಲ್ಲಿಕಾಯಿ

ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ, ಕಬ್ಬಿಣದಂಶ, ರಂಜಕದ ಅಂಶ ಹಾಗೂ ಕಬ್ಬಿಣದಂಶವಿದೆ. ಬೇಸಿಗೆಯಲ್ಲಿ ದಿನದಲ್ಲಿ ಒಂದಾದರೂ ನೆಲ್ಲಿಕಾಯಿ ತಿನ್ನುವುದು ಒಳ್ಳೆಯದು. ನೆಲ್ಲಿಕಾಯಿ ಜ್ಯೂಸ್ ಕೂಡ ಕುಡಿಯಬಹುದು.

 ಸ್ಟ್ರಾಬೆರಿ

ಸ್ಟ್ರಾಬೆರಿ

ಮಾರ್ಕೆಟ್ ನಲ್ಲಿ, ತಳ್ಳುವ ಗಾಡಿಯಲ್ಲಿ, ಫುಡ್ ಬಜಾರ್ ಗಳಲ್ಲಿ ಎಲ್ಲಿಂದರಲ್ಲಿ ಸ್ಟ್ರಾಬೆರಿಯೇ ಕಾಣುತ್ತಿದೆ. ಅಲ್ಲದೆ ಈ ಸಮಯದಲ್ಲಿ ಉಳಿದ ಸಮಯದಲ್ಲಿ ಇರುವುದಕ್ಕಿಂತ ಇದರ ಬೆಲೆ ಕೂಡ ಕಡಿಮೆಯಾಗಿದೆ. ಈ ಸ್ಟ್ರಾಬೆರಿ ಬೇಸಿಗೆಯಲ್ಲಿ ಸಾಮಾನ್ಯವಾಗಿ ಕಂಡು ಬರುವ UTI ಅಂದರೆ ಮೂತ್ರವಿಸರ್ಜನೆ ಸಮಸ್ಯೆ ಬರದಂತೆ ತಡೆಯುವಲ್ಲಿ ಸಹಕಾರಿಯಾಗಿದೆ.

ಲಿಚಿ

ಲಿಚಿ

ಲಿಚಿ ಹಣ್ಣಿನಲ್ಲಿ ಪ್ರೊಟೀನ್, ಸಿಟ್ರಿಕ್ ಆಸಿಡ್, ಪೆಕ್ಟಿನ್, ರಂಜಕ ಮತ್ತು ಕಬ್ಬಿಣದಂಶವಿದೆ. ಲಿಚಿಯನ್ನು ಹಾಗೇ ತಿನ್ನಬಹುದು ಅಥವಾ ಟೀ, ಲಿಚಿ ಜ್ಯೂಸ್ ಮಾಡಿ ಕುಡಿಯಬಹುದು.

 ಪ್ಲಮ್

ಪ್ಲಮ್

ಇದು ಸ್ವಲ್ಪ ದುಬಾರಿಯಾದ ಹಣ್ಣಾದರೂ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ವಿಟಮಿನ್ ಸಿ ಇದ್ದು ಜೀರ್ಣಕ್ರಿಯೆಗೆ ತುಂಬಾ ಸಹಕಾರಿ. ಇದು ದೇಹದಲ್ಲಿ ರೋಗ ನಿರೋಧಕ ಸಾಮರ್ಥ್ಯ ಹೆಚ್ಚಿಸುತ್ತದೆ.

 ಎಳನೀರು

ಎಳನೀರು

ಎಳನೀರನ್ನು ಬೇಸಿಗೆಯಲ್ಲಿ ಕಮ್ಮಿಯೆಂದರೂ 3-4 ಕುಡಿಯುವುದು ಒಳ್ಳೆಯದು. ಇದು ದೇಹದಲ್ಲಿ ನೀರಿನಂಶ ಇರುವಂತೆ ನೋಡಿಕೊಳ್ಳುವುದಲ್ಲದೆ, ದೇಹದ ಉಷ್ಣಾಂಶ ಹೆಚ್ಚಾಗದಂತೆ ನೋಡಿಕೊಳ್ಳುತ್ತದೆ.

ಸೀಬೆಕಾಯಿ

ಸೀಬೆಕಾಯಿ

ಸೀಬೆಕಾಯಿ ತಿಂದರೆ ಶೀತ ಉಂಟಾಗುತ್ತದೆ ಎಂದು ಕೆಲವರು ಹೇಳುವುದನ್ನು ಕೇಳಿದ್ದೇನೆ. ಆದರೆ ಸೀಬೆಕಾಯಿ ಶೀತ, ಬೇಧಿ ಈ ರೀತಿಯ ಸಮಸ್ಯೆಗಳ ವಿರುದ್ಧ ಹೋರಾಡುತ್ತದೆ.

ಹಲಸಿನ ಹಣ್ಣು

ಹಲಸಿನ ಹಣ್ಣು

ಇದನ್ನು ತಿಂದರೆ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಅಂದರೆ ಆಶ್ಚರ್ಯವಾಗುವುದು ಸಹಜ. ಹಲಸಿನ ಹಣ್ಣಿನಲ್ಲಿ ವಿಟಮಿನ್ ಸಿ ಮತ್ತು ಉತ್ತಮ ಪೋಷಕಾಂಶಗಳಿದ್ದು ಶೀತ, ಸೋಂಕು ಇವುಗಳನ್ನು ತಪ್ಪಿಸಲು ಸಹಕಾರಿಯಾಗಿದೆ. ಇದರಲ್ಲಿ antioxidant ಪ್ರಮಾಣ ಅಧಿಕವಾಗಿದೆ.

ಪ್ಲಮ್

ಪ್ಲಮ್

ಇದು ಸ್ವಲ್ಪ ದುಬಾರಿಯಾದ ಹಣ್ಣಾದರೂ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ವಿಟಮಿನ್ ಸಿ ಇದ್ದು ಜೀರ್ಣಕ್ರಿಯೆಗೆ ತುಂಬಾ ಸಹಕಾರಿ. ಇದು ದೇಹದಲ್ಲಿ ರೋಗ ನಿರೋಧಕ ಸಾಮರ್ಥ್ಯ ಹೆಚ್ಚಿಸುತ್ತದೆ.

ಬಾಳೆ ಹಣ್ಣು

ಬಾಳೆ ಹಣ್ಣು

ಇದರಲ್ಲಿ ಪೊಟಾಷ್ಯಿಯಂ ಹಾಗೂ ಕಬ್ಬಿಣದಂಶ ಅಧಿಕವಿದೆ ಹಾಗೂ ಇದು ದೇಹವನ್ನು ತಂಪಾಗಿಯೂ ಇಡುತ್ತದೆ.

ಪಪ್ಪಾಯಿ

ಪಪ್ಪಾಯಿ

ಹಣ್ಣಾದ ಪಪ್ಪಾಯಿ ದೇಹವನ್ನು ತಂಪಾಗಿಟ್ಟು, ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಹಾಗೂ ದೇಹದಲ್ಲಿ ನೀರಿನಂಶ ಇರುವಂತೆ ನೋಡಿಕೊಳ್ಳುತ್ತದೆ.

ಕರ್ಬೂಜದ ಹಣ್ಣು

ಕರ್ಬೂಜದ ಹಣ್ಣು

ಕರ್ಬೂಜದ ಜ್ಯೂಸ್ ಕುಡಿದರೆ ಬಾಯಿಗೂ ರುಚಿ, ಆರೋಗ್ಯಕ್ಕೂ ಒಳ್ಳೆಯದು. ಕರ್ಬೂಜ ಎಲ್ಲಾ ಸಮಯದಲ್ಲಿ ದೊರೆಯುವುದಾದರೆ ಮುಖ್ಯವಾಗಿ ಇದು ಬೇಸಿಗೆ ಕಾಲದ ಹಣ್ಣಾಗಿದೆ.

 ಜೇನು ಕರ್ಬೂಜ

ಜೇನು ಕರ್ಬೂಜ

ಇದರಲ್ಲಿ ನೀರಿನಂಶ ಅಧಿಕವಿದ್ದು ತಿನ್ನಲೂ ಸಿಹಿಯಾಗಿರುತ್ತದೆ. ಇದರಲ್ಲಿ ವಿಟಮಿನ್ ಎ, ಸಿ, ಪೊಟಾಷ್ಯಿಯಂ ಮತ್ತು ಸತುವಿನಂಶವಿದೆ.

ಕ್ಯಾನರಿ ಕಲ್ಲಂಗಡಿ

ಕ್ಯಾನರಿ ಕಲ್ಲಂಗಡಿ

ಈ ಹಣ್ಣಿನಲ್ಲಿ ಪೊಟಾಷ್ಯಿಯಂ, ವಿಟಮಿನ್ ಎ, ಸಿ ಇದ್ದು ಇದು ಕೂಡ ಬೇಸಿಗೆಯಲ್ಲಿ ತಿನ್ನಲೇಬೇಕಾದ ಹಣ್ಣುಗಳಲ್ಲಿ ಒಂದಾಗಿದೆ.

ಚೆರ್ರಿ ಹಣ್ಣು

ಚೆರ್ರಿ ಹಣ್ಣು

ಇದು ತಿನ್ನಲೂ ಬಲು ರುಚಿ, ಇದರಲ್ಲಿ ವಿಟಮಿನ್ಸ್ ಅಧಿಕವಿದೆ. ಬೇಸಿಗೆಯಲ್ಲಿ ತಿನ್ನಲೇಬೇಕಾದ ಹಣ್ಣುಗಳಲ್ಲಿ ಇದು ಕೂಡ ಒಂದು.

ನೇರಳೆ

ನೇರಳೆ

ಇದು ಕೂಡ ಬೇಸಿಗೆಯಲ್ಲಿ ದೊರೆಯುವಂತಹ ಹಣ್ಣಾಗಿದೆ. ಇದರಲ್ಲಿರುವ antioxidants ದೇಹದಲ್ಲಿರುವ ಬೇಡದ ಕಲ್ಮಶಗಳನ್ನು ಹೊರಹಾಕುವಲ್ಲಿ ಸಹಕಾರಿಯಾಗಿದೆ.

ಕಿವಿ ಹಣ್ಣು

ಕಿವಿ ಹಣ್ಣು

ಕಿವಿ ಹಣ್ಣು ಎಲ್ಲಾ ಸಮಯದಲ್ಲಿ ತಿನ್ನಲು ಸೂಕ್ತವಾದ ಹಣ್ಣಾಗಿದೆ. ಹಣ್ಣುಗಳಲ್ಲಿ ಅತ್ಯಧಿಕ ಪೋಷಕಾಂಶ ಹೊಂದಿರುವ ಹಣ್ಣು ಇದಾಗಿದೆ.

ಅಂಜೂರ

ಅಂಜೂರ

ಅಂಜೂರದಲ್ಲಿ ಪೊಟಾಷ್ಯಿಯಂ ಅಧಿಕವಿದ್ದು, ಇದನ್ನು ತಿನ್ನುವುದರಿಂದ ನಾನಾ ಆರೊಗ್ಯಕರ ಗುಣಗಳನ್ನು ಪಡೆಯಬಹುದು.

ಆಪ್ರಿಕಾಟ್

ಆಪ್ರಿಕಾಟ್

ಆಪ್ರಿಕಾಟ್ ನಲ್ಲಿ ಪೊಟಾಷ್ಯಿಯಂ, ಮ್ಯಾಗ್ನಿಷಿಯಂ, ವಿಟಮಿನ್ ಸಿ, ಬೀಟಾ ಕೆರೋಟಿನ್ ಅಧಿಕವಿದೆ.

ಸೂಚನೆ: ಈ ಹಣ್ಣು ಭಾರತದಲ್ಲಿ ದೊರೆಯುವುದು ತುಂಬಾ ವಿರಳ, ಈ ಹಣ್ಣನ್ನು ವಿದೇಶದಲ್ಲಿರುವ ನಮ್ಮ ಓದುಗರನ್ನು ಗಮನದಲ್ಲಿಟ್ಟುಕೊಂಡು ನೀಡಿದ್ಧೇನೆ.

English summary

Summer-Friendly Fruits To Eat | Tips For Health | ಇವೆಲ್ಲಾ ಬೇಸಿಗೆಯಲ್ಲಿ ತಿನ್ನಬೇಕಾದ ಹಣ್ಣುಗಳು | ಆರೋಗ್ಯಕ್ಕಾಗಿ ಕೆಲ ಸಲಹೆಗಳು

Take a look at the 25 best summer fruits that you must include in your diet. These fruits keep you hydrated, and avoids summer health problems.
X
Desktop Bottom Promotion