For Quick Alerts
ALLOW NOTIFICATIONS  
For Daily Alerts

ಸಿಹಿ ಕನಸುಗಳ ಸವಿ ನಿದ್ದೆಗೆ ಕೆಲ ಸೂತ್ರಗಳು

By Super
|

"ನಿನ್ನೆ ರಾತ್ರಿ ಸರಿಯಾಗಿ ನಿದ್ದೆ ಬರಲಿಲ್ಲ ಇವತ್ತು ಕೆಲಸ ಮಾಡಲು ಮೂಡ್ ಇಲ್ಲ", "ನಿನ್ನೆ ರಾತ್ರಿಯಿಡಿ ಕೆಟ್ಟ ಕನಸುಗಳು ಬೀಳುತ್ತಿದ್ದವು ಬೆಳಗ್ಗೆ ಏಳಲಿಕ್ಕೆ ಮನಸ್ಸಿಲ್ಲ" ಇಂತಹ ಮಾತುಗಳನ್ನು ನೀವು ಹೇಳಿರಬಹುದು ಅಥವಾ ನಿಮ್ಮ ಸ್ನೇಹಿತರು ಹೇಳಿರುವುದನ್ನು ಕೇಳಿರಬಹುದು. ರಾತ್ರಿಯ ನಿದ್ದೆ ಮರುದಿನದ ನಿಮ್ಮ ದಿನಚರಿಯ ಮೇಲೆ ಬಹಳ ಪ್ರಭಾವ ಬೀಳುತ್ತದೆ. ಹಾಗಾಗಿ ಕೆಟ್ಟ ಕನಸ್ಸುಗಳಿಲ್ಲದ ಆರಾಮದಾಯಕ ನಿದ್ದೆ ಬಹಳ ಪ್ರಮುಖವಾಗಿದೆ.

ಕನಸುಗಳು ಹಲವು ರೀತಿಯ ಆಲೋಚನೆಗಳು, ಭಾವನೆಗಳು, ಸಂವೇದನೆಗಳು ಅಥವಾ ಚಿತ್ರಣಗಳು ಮನುಷ್ಯನ ಮನಸ್ಸಿನಲ್ಲಿ ನಿದ್ದೆಯಲ್ಲಿರುವಾಗ ಬರುತ್ತವೆ. ಹಲವು ಜನರು ತಾವು ಮಲಗಿರುವಾಗ ಒಳ್ಳೆಯ ಕನಸುಗಳೇ ಬೀಳಬೇಕು ಎಂದು ಆಶಿಸುತ್ತಾರೆ. ನೀವು ನಿದ್ದೆಯಲ್ಲಿರುವಾಗ ಒಳ್ಳೆಯ ಕನಸುಗಳೇ ಬೀಳುವಂತೆ ಮಾಡಲು ಹಲವು ದಾರಿಗಳಿವೆ.

ಇದರ ಜೊತೆಗೆ ಎರಡು ತರಹದ ನಿದ್ದೆಯ ಚಕ್ರಗಳಿವೆ. ಒಂದು ಕಣ್ಣಿನ ತೀವ್ರಗತಿಯ ಚಲನೆಯ ನಿದ್ದೆ (ರಾಪಿಡ್ ಐಯ್ ಮೂವ್ ಮೆಂಟ್ ಸ್ಲೀಪ್) ಹಾಗೂ ಕಣ್ಣಿನ ತೀವ್ರಗತಿಯ ಚಲನೆ ಇಲ್ಲದ ನಿದ್ದೆ (ನಾನ್ ರಾಪಿಡ್ ಐಯ್ ಮೂವ್ ಮೆಂಟ್ ಸ್ಲೀಪ್). ಈ ಚಕ್ರವು ಪ್ರತಿ 90 ನಿಮಿಷಗಳಿಗೊಮ್ಮೆ ಬದಲಾಗುತ್ತಾ ಇರುತ್ತದೆ. ಹಾಗೂ ಕನಸುಗಳು ಯಾವಾಗಲೂ ತೀವ್ರಗತಿಯ ಕಣ್ಣಿನ ಚಲನೆಯ ನಿದ್ದೆಯಲ್ಲಿ ಬೀಳುತ್ತವೆ.

ಕೆಟ್ಟ ಕನಸ್ಸುಗಳು ಯಾವಾಗಲೂ ನಿಮ್ಮ ನಿಜ ಜೀವನದ ಒತ್ತಡದ ಚಟುವಟಿಕೆಗಳಿಂದ ಅಂದರೆ ಡ್ರಗ್ಸ್, ನೀವು ಮಲಗುವುದಕ್ಕೆ ಸ್ವಲ್ಪ ಮೊದಲು ನೋಡುವ ಗಾಬರಿಗೊಳಿಸುವ ಘಟನೆಗಳು ಹಾಗೂ ಚಿತ್ರಗಳು ಕಾರಣವಾಗುತ್ತದೆ. ಇಂತಹ ಕೆಟ್ಟ ಕನಸ್ಸುಗಳು ನಿಮ್ಮ ನೆಮ್ಮದಿಯ ನಿದ್ದೆಯನ್ನು ಹಾಳು ಮಾಡುವ ಕಾರಣ ಒಳ್ಳೆಯ ಕನಸ್ಸುಗಳನ್ನು ಹೊಂದುವುದು ಬಹಳ ಅಗತ್ಯವಾಗಿದೆ. ಇದಕ್ಕೆ ನೀವು ಚೆನ್ನಾಗಿ ಮಲಗುವುದು ಅಗತ್ಯವಾಗಿದೆ.

ಇಲ್ಲಿ ಆರಾಮದಾಯಕ ನಿದ್ದೆಯನ್ನು ಪಡೆಯಲು ಕೆಲವು ಸಲಹೆಗಳನ್ನು ನೀಡಲಾಗಿದೆ.

1. ಮಲಗುವ ಮುನ್ನ ಭಯಾನಕ ಚಲನಚಿತ್ರಗಳನ್ನು ನೋಡಬೇಡಿ

1. ಮಲಗುವ ಮುನ್ನ ಭಯಾನಕ ಚಲನಚಿತ್ರಗಳನ್ನು ನೋಡಬೇಡಿ

ಮಲಗುವ ಮುನ್ನ ಭಯಾನಕ ಚಿತ್ರಗಳನ್ನು ನೋಡುವುದು ಮತ್ತು ಇಂತಹ ಸಾಹಿತ್ಯವನ್ನು ಓದುವುದನ್ನು ಆದಷ್ಟು ಮಾಡಬೇಡಿ. ಇದು ನಿಮ್ಮಲ್ಲಿ ಮಲಗುವ ಮುನ್ನ ಒಂದು ರೀತಿಯ ಭಯವನ್ನು ಹುಟ್ಟಿಸುತ್ತದೆ ಹಾಗೂ ಇದು ಭಯಾನಕ ಕನಸುಗಳಿಗೆ ಕಾರಣವಾಗುತ್ತದೆ.

2. ಮಲಗುವ ಮುನ್ನ ಸ್ವಲ್ಪ ಹೊತ್ತು ಆರಾಮವಾಗಿರಿ

2. ಮಲಗುವ ಮುನ್ನ ಸ್ವಲ್ಪ ಹೊತ್ತು ಆರಾಮವಾಗಿರಿ

ಮಲಗುವ ಸ್ವಲ್ಪ ಹೊತ್ತು ಮುನ್ನ ಏನ್ದಾರೂ ವಿಶ್ರಾಂತಿ ಹೊಂದುವ ಕೆಲಸಗಳನ್ನು ಮಾಡಿ. ಒತ್ತಡದೊಂದಿಗೆ ಮಲಗುವುದು ನಿದ್ದೆಯಲ್ಲಿ ಕೆಟ್ಟ ಕನಸ್ಸುಗಳನ್ನು ಕಾಣುವಂತೆ ಮಾಡುತ್ತದೆ. ನಿಮಗೆ ಇಷ್ಟವಾಗುವ ಮನಸ್ಸನ್ನು ಖುಷಿಯಾಗಿಡುವ ಏನಾದರು ಕೆಲಸಗಳನ್ನು ಮಾಡಿ. ನಿಮಗೆ ಓದುವುದು ಇಷ್ಟವಾದರೆ ಓದಿ, ಸಂಗೀತ ಕೇಳುವುದು ಇಷ್ಟವಾದರೆ ಸಂಗೀತ ಕೇಳಿ ಅಥವಾ ಧ್ಯಾನ ಮಾಡಿ

3. ನೀವು ಮಲಗುವ ಕೋಣೆಯನ್ನು ಎಷ್ಟು ಸಾಧ್ಯವೋ ಅಷ್ಟು ಆರಾಮದಾಯಕವನ್ನಾಗಿಸಿ

3. ನೀವು ಮಲಗುವ ಕೋಣೆಯನ್ನು ಎಷ್ಟು ಸಾಧ್ಯವೋ ಅಷ್ಟು ಆರಾಮದಾಯಕವನ್ನಾಗಿಸಿ

ನಿಮ್ಮ ಮಲಗುವ ಕೋಣೆಯನ್ನು ನಿದ್ದೆ ಮಾಡಲು ಹೇಳಿ ಮಾಡಿಸಿದಂತಹ ಸ್ಥಳವನ್ನಾಗಿಸಿ. ಅಲ್ಲಿ ವಿಶ್ರಾಂತಿ ತೆಗೆದುಕೊಳ್ಳಲು ಬೇಕಾದ ಎಲ್ಲಾ ವಾತಾವರಣವನ್ನು ಸೃಷ್ಟಿಸಿಕೊಳ್ಳಿ. ನಿಮಗೆ ಇಷ್ಟವಾಗುವ ಬೆಡ್ ಶೀಟ್ ಗಳನ್ನು ಇಷ್ಟವಾಗುವ ಬಣ್ಣದ ಹಾಸಿಗೆಯನ್ನೇ ಹೊಂದಿ. ಹಾಗೂ ತಾಪಮಾನವನ್ನೂ ಬಹಳ ಹೆಚ್ಚು ಅಥವಾ ಬಹಳ ಕಡಿಮೆ ಮಾಡಬೇಡಿ.

4. ಮಲಗುವ ಮೊದಲು ಆಹಾರ ಅಥವಾ ಪಾನೀಯಗಳನ್ನು ಸೇವಿಸದಿರಿ

4. ಮಲಗುವ ಮೊದಲು ಆಹಾರ ಅಥವಾ ಪಾನೀಯಗಳನ್ನು ಸೇವಿಸದಿರಿ

ಮಲಗುವ ಸ್ವಲ್ಪ ಮೊದಲು ಆಹಾರ ಸೇವಿಸುವುದು ಮತ್ತು ಮುಖ್ಯವಾಗಿ ದ್ರವ ಪದಾರ್ಥಗಳನ್ನು ಸೇವಿಸಿವುದನ್ನು ಆದಷ್ಟು ಕಡಿಮೆ ಮಾಡಿ. ಮಲಗುವ ಕನಿಷ್ಠ ಪಕ್ಷ ಎರಡು ಗಂಟೆ ಮೊದಲು ಆಹಾರ ಸೇವನೆ ಮಾಡಿ. ಇದರಿಂದಾಗಿ ನೀವು ರಾತ್ರಿಯಿಡಿ ಬಾತ್ ರೂಂಗೆ ಹೋಗಲು ಏಳಬೇಕಾದ ಅಗತ್ಯ ಇರುವುದಿಲ್ಲ.

5. ಮಲಗಲು ನಿಗದಿತ ಸಮಯವನ್ನು ನಿಗದಿ ಮಾಡಿ

5. ಮಲಗಲು ನಿಗದಿತ ಸಮಯವನ್ನು ನಿಗದಿ ಮಾಡಿ

ಸಂಶೋಧನೆಗಳು ಮಲಗುವ ನಿಗದಿತ ಸಮಯವನ್ನು ಹೊಂದಿರುವುದು ಚೆನ್ನಾಗಿ ನಿದ್ದೆ ಮಾಡಲು ಸಹಕಾರಿ ಎಂದು ಹೇಳುತ್ತವೆ. ಪ್ರತಿ ರಾತ್ರಿ ಒಂದೇ ಸಮಯಕ್ಕೆ ಮಲಗಿ ಹಾಗೂ ಪ್ರತಿ ದಿನ ಒಂದೇ ಸಮಯಕ್ಕೆ ಏಳುವ ಅಭ್ಯಾಸ ಮಾಡಿ. ನಿಗದಿತ ವೇಳೆ ನಿಮ್ಮ ದೇಹವನ್ನು ಒಂದೇ ಸಮಯಕ್ಕೆ ಮಲಗಲು ಏಳಲು ಅಭ್ಯಾಸ ಮಾಡುತ್ತದೆ.

6. ತಲೆದಿಂಬು ಮತ್ತು ಹೊದಿಕೆಯ ಪರೀಕ್ಷೆ

6. ತಲೆದಿಂಬು ಮತ್ತು ಹೊದಿಕೆಯ ಪರೀಕ್ಷೆ

ನಿಮಗೆ ಸರಿಹೊಂದುವ ತಲೆದಿಂಬು ಮತ್ತು ಹೊದಿಕೆಯನ್ನು ಹೊಂದಿದ್ದೀರಿ ಎಂದು ಖಚಿತ ಪಡಿಸಿ. ಪ್ರತಿ ದಿನ ಒಂದು ಹೊಸ ಮಾದರಿಯ ದಿಂಬು ಮತ್ತು ಹೊದಿಕೆಯನ್ನು ಹೊಂದುವುದು ಸರಿಯಾಗಿ ನಿದ್ದೆ ಬಾರದೇ ಇರಲು ಕಾರಣಬಾಗಬಹುದು.

7. ಮಲಗುವ ಮುನ್ನ ಟೀ/ಕಾಫಿ ಕುಡಿಯಬೇಡಿ

7. ಮಲಗುವ ಮುನ್ನ ಟೀ/ಕಾಫಿ ಕುಡಿಯಬೇಡಿ

ಮಲಗುವ ಮೊದಲು ಕೆಫೀನ್ ಸೇವನೆ ನಿಮ್ಮನ್ನು ಎಚ್ಚರದಲ್ಲಿಡುತ್ತದೆ.

8. ಉತ್ತೇಜಕಗಳು ಮತ್ತು ಮದ್ಯಪಾನ ಮಾಡದಿರಿ

8. ಉತ್ತೇಜಕಗಳು ಮತ್ತು ಮದ್ಯಪಾನ ಮಾಡದಿರಿ

ಡ್ರಗ್ಸ್ ಮತ್ತು ಇತರ ಬಗೆಯ ಉತ್ತೇಜಕಗಳನ್ನು ಮಲಗುವ ಮೊದಲು ಬಳಸುವುದನ್ನು ಮಾಡದಿರಿ. ಮದ್ಯಪಾನ, ನಿಕೋಟಿನ್, ಕೆಫೀನ್, ರಕ್ತದೊತ್ತಡ ನಿಯಂತ್ರಕ ಮಾತ್ರೆಗಳು ಮತ್ತು ಇತರೆ ಮನಸ್ಸಿಗೆ ಸಂಬಂಧಿಸಿದ ಮಾತ್ರೆಗಳನ್ನು ತೆಗೆದುಕೊಳ್ಳಬೇಡಿ.

9.ಲಾಸ್ಟ್ ಬಟ್ ನಾಟ್ ಲೀಸ್ಟ್

9.ಲಾಸ್ಟ್ ಬಟ್ ನಾಟ್ ಲೀಸ್ಟ್

ಸಂಶೋಧನೆಗಳ ಪ್ರಕಾರ ಬೆಳಗ್ಗೆ ಮತ್ತು ಸಂಜೆಯ ಹೊತ್ತಿನಲ್ಲಿ ವ್ಯಾಯಾಮ ಮಾಡುವುದು ರಾತ್ರೆಯ ವೇಳೆ ನಿದ್ದೆ ಮಾಡಲು ಬಹಳ ಸಹಕಾರಿ ಎಂದು ಸೂಚಿಸಿವೆ.

English summary

Some Tips For Sweet Dreams At Night | Health Tips | ಸಿಹಿಗನಸುಗಳ ಸವಿನಿದ್ದೆಗೆ ಕೆಲ ಸೂತ್ರಗಳು | ಆರೋಗ್ಯಕ್ಕಾಗಿ ಕೆಲ ಸಲಹೆಗಳು

Nightmares are usually going to happen because the reflection of stressful things like drugs, events or frightening visual images that you observe before bed. Because nightmares may affect sleep quality, it is important to practice to get a beautiful dream while sleeping. For That you need to get sound sleep.
X
Desktop Bottom Promotion