For Quick Alerts
ALLOW NOTIFICATIONS  
For Daily Alerts

ಕಣ್ಣೀರಿನ ಬಗ್ಗೆ ಕೆಲ ಸ್ವಾರಸ್ಯಕರ ಅಂಶಗಳು

By Super
|

ದುಃಖ ಅಥವಾ ಅತಿಯಾದ ಸಂತೋಷವಾದಾಗ ಕಣ್ಣೀರು ಬರುವುದು ಸಹಜ. ಕೆಲವು ಮಂದಿ ಅತಿಯಾದ ಕಣ್ಣೀರು ಸುರಿಸಿದರೆ ಮತ್ತೆ ಕೆಲವರು ಸ್ವಲ್ಪವೇ ಕಣ್ಣೀರು ಹಾಕುವುದಿದೆ. ಮತ್ತೊಂದು ಬಗೆಯ ಕಣ್ಣೀರನ್ನು ಮೊಸಳೆ ಕಣ್ಣೀರು ಎಂದೂ ಕರೆಯುವುದುಂಟು. ಇದು ಇನ್ನೊಬ್ಬರನ್ನು ಭಾವನಾತ್ಮಕವಾಗಿ ವಂಚಿಸಲು ಸುರಿಸುವ ಕಣ್ಣೀರು.

ಕಣ್ಣೀರು ದುರ್ಬಲ ಮನಸ್ಥಿತಿಯ ಲಕ್ಷಣವೆಂದು ಕೆಲವರು ಹೇಳುವುದುಂಟು. ಆದರೆ ಅಳುವುದರಿಂದ ದೇಹದಲ್ಲಿನ ಒತ್ತಡ ಕಡಿಮೆಯಾಗುತ್ತದೆ ಎನ್ನುವುದು ಹೆಚ್ಚಿನವರಿಗೆ ತಿಳಿದಿಲ್ಲ. ಅಳುವುದರಿಂದ ಮನಸ್ಸು ಕೂಡ ಹಗುರವಾಗುತ್ತದೆ ಎನ್ನುವುದನ್ನು ಪ್ರತಿಯೊಬ್ಬರು ಮನಗಂಡಿರಬಹುದು. ಕೆಲವೊಂದು ಸಂಶೋಧನೆಗಳಿಂದ ಕೂಡ ಇದು ದೃಢಪಟ್ಟಿದೆ.

ದುಃಖದಿಂದ ಅಥವಾ ಆನಂದದಿಂದ ಅಳುವುದರಿಂದ ಮನಸ್ಸಿನಲ್ಲಿರುವ ಭಾವನೆಗಳೆಲ್ಲವೂ ಹೊರಬರುತ್ತದೆ. ಕೇವಲ ಇಷ್ಟು ಮಾತ್ರವಲ್ಲದೆ ಇದರಿಂದ ಆರೋಗ್ಯಕ್ಕೂ ಹಲವಾರು ಲಾಭಗಳಿವೆ. ಕಣ್ಣೀರು ಸುರಿಸುವುದರಿಂದ ಆರೋಗ್ಯಕ್ಕೆ ಯಾವ ರೀತಿಯ ಲಾಭಗಳಿವೆ ಎನ್ನುವುದನ್ನು ತಿಳಿದುಕೊಳ್ಳುವ.

ಭಾವನಾತ್ಮಕ ಕಣ್ಣೀರು

ಭಾವನಾತ್ಮಕ ಕಣ್ಣೀರು

ಅಳುವುದನ್ನು ಮೂರು ವಿಧಗಳಾಗಿ ವಿಂಗಡಿಸಲಾಗಿದೆ. ವಿಭಿನ್ನ ರೀತಿಯ ಕಣ್ಣೀರಿನಲ್ಲಿ ಬೇರೆ ಬೇರೆ ವಿಧದ ರಾಸಾಯನಿಕಗಳು ಪತ್ತೆಯಾಗಿವೆ.

ಭಾವನಾತ್ಮಕ ಕಣ್ಣೀರು: ಯಾವುದೇ ಸಮಯದಲ್ಲಿ ಭಾವನಾತ್ಮಕವಾಗಿ ಸಂವೇದನಾಶೀಲರಾದಾಗ ನೀವು ಕಣ್ಣೀರು ಸುರಿಸುತ್ತೀರಿ. ಇದು ಬೇಸರ, ಹತಾಶೆ, ಒತ್ತಡ ಅಥವಾ ಆನಂದದಿಂದ ಬಂದಿರಬಹುದು.

ತಳದ ಕಣ್ಣೀರು

ತಳದ ಕಣ್ಣೀರು

ತಳದ ಕಣ್ಣೀರು: ಲ್ಯಾಕ್ರಿಮಲ್ ಗ್ರಂಥಿಗಳು ಬಿಡುಗಡೆ ಮಾಡುವ ದ್ರವ. ಇದು ಬ್ಯಾಕ್ಟೀರಿಯಾ ದಾಳಿಯಿಂದ ಕಣ್ಣುಗಳನ್ನು ರಕ್ಷಿಸಲು ಅತ್ಯಗತ್ಯವಾಗಿದೆ.

ಕಣ್ಣೀರು

ಕಣ್ಣೀರು

ಅನ್ಯ ಹಾಗೂ ಉಪದ್ರವಕಾರಿ ಕಣಗಳಿಂದ ರಕ್ಷಿಸಲು ಕಣ್ಣಿನಿಂದ ಒಂದು ಪ್ರತಿಫಲಿತ ಕಾರ್ಯಾಚರಣೆ.

1. ದೃಷ್ಟಿ ಸುಧಾರಿಸುತ್ತದೆ

1. ದೃಷ್ಟಿ ಸುಧಾರಿಸುತ್ತದೆ

ಕಣ್ಣೀರು ನಿಮ್ಮ ದೃಷ್ಟಿಯನ್ನು ಸುಧಾರಿಸಲು ನೆರವಾಗುತ್ತದೆ. ಕೆಲವೊಮ್ಮೆ ಕಣ್ಣಿನ ನಿರ್ಜಲೀಕರಣವಾದ ಪೊರೆಗಳಿಂದಾಗಿ ದೃಷ್ಟಿ ಸ್ವಲ್ಪ ಮಂದವಾದಂತಾಗಬಹುದು. ನೀವು ಅತ್ತಾಗ ಕಣ್ಣೀರು ಪೊರೆಗಳಿಗೆ ನೀರನ್ನು ಒದಗಿಸುತ್ತದೆ ಮತ್ತು ಇದರಿಂದ ಸಂಪೂರ್ಣ ದೃಷ್ಟಿ ಸುಧಾರಿಸಲು ನೆರವಾಗುತ್ತದೆ.

2. ಕಣ್ಣನ್ನು ಶುಭ್ರಗೊಳಿಸುತ್ತದೆ

2. ಕಣ್ಣನ್ನು ಶುಭ್ರಗೊಳಿಸುತ್ತದೆ

ದೇಹದ ಇತರ ಭಾಗಗಳಂತೆ ಕಣ್ಣಿನಲ್ಲಿಯೂ ಬ್ಯಾಕ್ಟೀರಿಯಾ ಕಂಡುಬರುತ್ತದೆ. ಕಣ್ಣೀರು ಎನ್ನುವುದು ನೈಸರ್ಗಿಕ ಬ್ಯಾಕ್ಟೀರಿಯ ನಿರೋಧಕ ಗುಣಗಳನ್ನು ಹೊಂದಿರುತ್ತದೆ. ಕಣ್ಣೀರಿನಲ್ಲಿ ಲಿಸೊಝೊಮ್ ಎನ್ನುವ ದ್ರವವಿದ್ದು, ಇದು ಕಣ್ಣಿನಲ್ಲಿರುವ ಶೇ. 90ರಿಂದ 95ರಷ್ಟು ಬ್ಯಾಕ್ಟೀರಿಯಾಗಳನ್ನು ಕೇವಲ ಐದು ನಿಮಿಷದಲ್ಲಿ ಕೊಲ್ಲುತ್ತದೆ.

3. ಒತ್ತಡದಿಂದ ಮುಕ್ತಿ

3. ಒತ್ತಡದಿಂದ ಮುಕ್ತಿ

ಆಘಾತ ಅಥವಾ ಒತ್ತಡಕ್ಕೊಳಗಾದಾಗ ದೇಹದಲ್ಲಿ ಅಸಮತೋಲನ ಮತ್ತು ರಾಸಾಯನಿಕ ಜಮಾವಣೆಯಾಗುತ್ತದೆ. ಇದನ್ನು ಕಡಿಮೆ ಮಾಡಲು ಕಣ್ಣೀರು ನೆರವಾಗುತ್ತದೆ. ಒತ್ತಡದ ಪರಿಸ್ಥಿತಿಯಲ್ಲಿ ಅಳುವ ವ್ಯಕ್ತಿಯ ಖಿನ್ನತೆ ಮಟ್ಟ ಕಡಿಮೆಯಿರುತ್ತದೆ ಎಂದು ಹೇಳಲಾಗುತ್ತಿದೆ. ಭಾವನಾತ್ಮಕ ಕಣ್ಣೀರಿನಿಂದ ಆಂಡ್ರೆನೊಕೊರ್ಟಿಕೊಟ್ರೊಪಿಕ್ ಮತ್ತು ಲ್ಯೂಸಿನ್ ಎನ್ಕೆಫಾಲಿನ್ ನಂತಹ ಹಾರ್ಮೋನ್ ಬಿಡುಗಡೆಯಾಗುತ್ತದೆ. ಇದರಿಂದ ದೇಹದಲ್ಲಿನ ಒತ್ತಡ ನಿವಾರಿಸುತ್ತದೆ.

4. ಜೀವಾಣು ವಿಷಗಳನ್ನು ತೊಡೆದುಹಾಕಲು

4. ಜೀವಾಣು ವಿಷಗಳನ್ನು ತೊಡೆದುಹಾಕಲು

ಸಾಮಾನ್ಯ ಕಣ್ಣೀರಿನಲ್ಲಿ ಶೇ. 98ರಷ್ಟು ನೀರು ಇರುವುದು ಪತ್ತೆಯಾಗಿದೆ. ಭಾವನಾತ್ಮಕ ಕಣ್ಣೀರಿನಿಂದ ಬಿಡುಗಡೆಯಾಗುವ ಒತ್ತಡದ ಹಾರ್ಮೋನುಗಳಿಂದ ದೇಹ ತುಂಬಾ ಆರಾಮಗೊಳ್ಳುತ್ತದೆ. ದೇಹದಲ್ಲಿ ಭಾವನಾತ್ಮಕ ಒತ್ತಡದಿಂದ ಉತ್ಪತ್ತಿಯಾಗುವ ಜೀವಾಣು ವಿಷ ಈ ಕಣ್ಣೀರಿನಲ್ಲಿರುತ್ತದೆ.

5. ಉಪದ್ರವಕಾರಿಗಳಿಂದ ರಕ್ಷಣೆ

5. ಉಪದ್ರವಕಾರಿಗಳಿಂದ ರಕ್ಷಣೆ

ಈರುಳ್ಳಿ ಕತ್ತರಿಸುವಾಗ ಕಣ್ಣಿನಲ್ಲಿ ನೀರು ಯಾಕೆ ಬರುತ್ತದೆಯೆಂದು ನಿಮಗೆ ಯಾವತ್ತಾದರೂ ಅಚ್ಚರಿಯಾಗಿದೆಯಾ? ಯಾಕೆಂದರೆ ಈರುಳ್ಳಿ ಕೆಲವು ಕಿಣ್ವಗಳನ್ನು ಹೊಂದಿರುತ್ತದೆ. ಇದು ಕಣ್ಣಿಗೆ ಕಿರಕಿರಿಯುಂಟು ಮಾಡುತ್ತದೆ. ಕಣ್ಣಿಗೆ ಧೂಳು ಬಿದ್ದರೂ ಇದೇ ರೀತಿಯ ನೀರು ಬರುತ್ತದೆ. ಈ ರೀತಿ ಅಳುವುದರಿಂದ ಕಣ್ಣನ್ನು ರಕ್ಷಿಸಬಹುದು ಮತ್ತು ಕಣಗಳು ಕಣ್ಣೀರಿನೊಂದಿಗೆ ಹೊರಹೋಗುತ್ತದೆ.

6. ಸಂಪೂರ್ಣ ಆರೋಗ್ಯಕ್ಕಾಗಿ ರೋದಿಸಿ

6. ಸಂಪೂರ್ಣ ಆರೋಗ್ಯಕ್ಕಾಗಿ ರೋದಿಸಿ

ಭಾವನಾತ್ಮಕ ಕಾರಣಗಳಿಂದ ಬಿಡುಗಡೆಯಾಗುವ ಕಣ್ಣೀರಿನಲ್ಲಿ ಶೇ. 24ರಷ್ಟು ಆಲ್ಬುಮಿನ್ ಪ್ರೊಟೀನ್ ಒಳಗೊಂಡಿರುತ್ತದೆ. ಇದು ದೇಹದ ಚಯಾಪಚಯ ವ್ಯವಸ್ಥೆ ನಿಯಂತ್ರಿಸಲು ಸಹಾಯ ಮಾಡುತ್ತದೆ. ಅತಿಯಾದ ಒತ್ತಡದಿಂದ ಬರುವಂತಹ ರಕ್ತದೊತ್ತಡ, ಬೊಜ್ಜು ಮತ್ತು ಮಧುಮೇಹ ರೋಗ ವಿರುದ್ಧ ಹೋರಾಡಲು ಅಳು ನೆರವಾಗುತ್ತದೆ.

7. ಹಿತಕರ ಅನುಭವವಾಗಲು

7. ಹಿತಕರ ಅನುಭವವಾಗಲು

ನೀವು ತುಂಬಾ ಸಂಕಷ್ಟದ ಸಮಯವನ್ನು ಎದುರಿಸುತ್ತಿದ್ದರೆ ಆಗ ಅಳುವುದರಿಂದ ಪರಿಹಾರದ ಭಾವನೆ ಮೂಡುತ್ತದೆ. ಕಣ್ಣೀರು ಸುರಿಸಿದ ಬಳಿಕ ನಿಮ್ಮ ಮೆದುಳು, ಹೃದಯ ಮತ್ತು ಅಂಗಾಂಗ ವ್ಯವಸ್ಥೆ ಅತ್ಯುತ್ತಮವಾಗಿ ಕಾರ್ಯ ಪ್ರಾರಂಭವಾಗುತ್ತದೆ ಮತ್ತು ನಿಮಗೆ ಹಿತಕರ ಭಾವನೆಯಾಗುತ್ತದೆ.

ಮುಂದಿನ ಸಲ ನಿಮ್ಮ ಹೃದಯ ಭಾರವಾಗಿ ಕಣ್ಣೀರು ಬಂದರೆ ಆಗ ನೀವು ಇದೊಂದು ದುರ್ಬಲತೆಯ ಲಕ್ಷಣವೆಂದು ಭಾವಿಸಬೇಡಿ. ಇದರಿಂದ ಹಲವಾರು ಲಾಭಗಳಿರುವ ಕಾರಣ ಕಣ್ಣೀರು ಸುರಿಸುವುದು ಕೆಟ್ಟದೇನಲ್ಲ.

English summary

Some Health Benefits Of Crying

Many people look upon tears as a sign of emotional weakness. But, what they fail to realise is that crying is a form of stress buster for the body. Crying has many other health benefits as well. So, let’s take a look at different types of tears and some health benefits of crying.
X
Desktop Bottom Promotion