For Quick Alerts
ALLOW NOTIFICATIONS  
For Daily Alerts

ತಂಪು ಪಾನೀಯ ಕುಡಿದರೆ ಕಿಡ್ನಿ ಹಾಳಾಗುವುದೇ?

|

ಹೊಟ್ಟೆ ತುಂಬಿದಾಗ ಒಂದು ಗ್ಲಾಸ್ ಸೋಡಾ ಕುಡಿದರೆ ತುಂಬಾ ರಿಲ್ಯಾಕ್ಸ್ ಆದಂತೆ ಅನಿಸುವುದು ಅಲ್ಲವೇ? ಇನ್ನು ಕೆಲವರನ್ನು ನೋಡಿದ್ದೇನೆ ಪ್ರತೀದಿನ ಸೋಡಾ ಕುಡಿಯುವ ಅಭ್ಯಾಸ ರೂಢಿಸಿಕೊಂಡಿರುತ್ತಾರೆ. ಈ ಸೋಡಾ ಕುಡಿಯುವುದರಿಂದ ಕೆಲವರು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಹೇಳಿದರೆ ಮತ್ತೆ ಕೆಲವರು ಹಾಗೇನು ಇಲ್ಲ, ಜೀರ್ಣ ಕ್ರಿಯೆ ಸರಿಯಾಗಿ ನಡೆಯಲು ಸೋಡಾ ಕುಡಿದರೆ ಒಳ್ಳೆಯದು ಎನ್ನುವ ಅಭಿಪ್ರಾಯವನ್ನು ವ್ಯಕ್ತ ಪಡಿಸುತ್ತಾರೆ. ಇವುಗಳಲ್ಲಿ ಯಾವುದು ಸರಿ ಎಂದು ತಿಳಿಯಲು ಮುಂದೆ ಓದಿ:

ಇತ್ತೀಚಿಕೆಗೆ ನಡೆಸಿದ ಸಂಶೋಧನೆಯು ಸೋಡಾವಿರುವ ತಂಪು ಪಾನೀಯ ಕುಡಿಯುವುದರಿಂದ ಕಿಡ್ನಿಯಲ್ಲಿ ಕಲ್ಲು ಬೆಳೆಯುವುದು ಎಮದು ಖಚಿತ ಪಡಿಸಿದೆ. ಅಲ್ಲದೆ ಕೃತಕ ಸಿಹಿ ಇರುವ ಕಾರ್ಬೋಹೈಡ್ರೇಟ್ ಪಾನೀಯಗಳು ಬಾಯಿಗೆ ಮಾತ್ರ ರುಚಿ ಆದರೆ ದೇಹಕ್ಕೆ ನಯಾ ಪೈಸೆಯ ಪ್ರಯೋಜವಿಲ್ಲ. ಸೋಡಾ ಕುಡಿಯುವುದರಿಂದ ಕಿಡ್ನಿ ಹೇಗೆ ಹಾಳಾಗುತ್ತದೆ ಎಂದು ತಿಳಿಯಲು ಮುಂದೆ ಓದಿ:

ರಂಜಕದ ಅಂಶ ಹೆಚ್ಚಾಗಿ ಕಲ್ಲು ಬೆಳೆಯುವುದು

ರಂಜಕದ ಅಂಶ ಹೆಚ್ಚಾಗಿ ಕಲ್ಲು ಬೆಳೆಯುವುದು

ಸಾಮಾನ್ಯವಾಗಿ ಸೋಡಾದಲ್ಲಿ ಅಧಿಕ ರಂಜಕದಂಶವಿರುತ್ತದೆ, ಇದು ಕ್ಯಾಲ್ಸಿಯಂನಂತಹ ಇತರ ಖನಿಜಾಂಶಗಳ ಜೊತೆ ಸೇರಿ ಕಲ್ಲಾಗಿ ಮಾರ್ಪಡುವುದು.ಆದ್ದರಿಂದ ತಂಪು ಪಾನೀಯಗಳಿಂದ ದೂರವಿರುವುದು ಒಳ್ಳೆಯದು.

ಸೋಡಿಯಂ

ಸೋಡಿಯಂ

ತಂಪು ಪಾನೀಯಗಳಲ್ಲಿ ಸೋಡಿಯಂ ಅಂಶವಿರುತ್ತದೆ. ಇದು ಕಿಡ್ನಿ ಆರೋಗ್ಯವನ್ನು ಮತ್ತಷ್ಟು ಹದಗೆಡಿಸುತ್ತದೆ. ಕಿಡ್ನಿ ಬೇಡದ ಕಲ್ಮಶಗಳನ್ನು ಹೊರಹಾಕುವ ಸಾಮರ್ಥ್ಯ ಕಳೆದುಕೊಳ್ಳುತ್ತದೆ. ದೇಹದಲ್ಲಿ ಕಲ್ಮಶಗಳು ಸಂಗ್ರಹವಾಗುತ್ತಾ ಹೋದಂತೆ ರಕ್ತ ಸಂಚಾರಕ್ಕೆ ಅಡಚಣೆ ಉಂಟಾಗಿ ಅಧಿಕ ರಕ್ತದೊತ್ತಡ ಉಂಟಾಗುವುದು.

 ಸಿಟ್ರಸ್ ಸೋಡಾ

ಸಿಟ್ರಸ್ ಸೋಡಾ

ತಂಪು ಪಾನೀಯಗಳ ತಯಾರಿಯಲ್ಲಿ ಸಿಟ್ರಸ್ ಸೋಡಾ ಬಳಸುತ್ತಾರೆ. ಇದು ಕಿಡ್ನಿಯಲ್ಲಿ ಕಲ್ಲು ಬೆಳೆಯುವಂತೆ ಮಾಡುತ್ತದೆ. ಅದರಲ್ಲೂ ಮಧುಮೇಹ, ಹೃದಯ ಸಂಬಂಧಿ ಸಮಸ್ಯೆ ಇರುವವರು ಈ ತಂಪು ಪಾನೀಯಗಳನ್ನು ಮುಟ್ಟಲೇಬಾರದು.

 ಡಯಟ್ ಸೋಡಾ

ಡಯಟ್ ಸೋಡಾ

ಕೃತಕ ಸಿಹಿ ಇರುವ ಪಾನೀಯಗಳು ಆರೋಗ್ಯಕರವಲ್ಲವೆಂದು artificial sweeteners ಬಳಸಿ ಮಾಡುವ ಸೋಡಾ ಕುಡಿಯುತ್ತಾರೆ. ಆದರೆ ಈ ಸೋಡಾ ಕೃತಕ ಸಿಹಿ ಇರುವ ಸೋಡಾಕ್ಕಿಂತ ಹೆಚ್ಚು ಅನಾರೋಗ್ಯಕರವೆಂದು ಇದರ ಬಗ್ಗೆ ನಡೆಸಿದ ಸಂಶೋಧನೆಯಿಂದ ತಿಳಿದು ಬಂದಿದೆ.

ಕೆಫೀನ್

ಕೆಫೀನ್

ಸಾಮಾನ್ಯವಾಗಿ ಎಲ್ಲಾ ಬಗೆಯ ತಂಪು ಪಾನೀಯಗಳಲ್ಲಿ ಕೆಫೀನ್ ಅಂಶವಿರುತ್ತದೆ. ಇದು ಕಿಡ್ನಿಯ ಆರೋಗ್ಯವನ್ನು ಹಾಳು ಮಾಡುವುದರ ಜೊತೆಗೆ, ರಕ್ತದೊತ್ತಡವನ್ನು ಹೆಚ್ಚು ಮಾಡುವುದು.

ಕಾರ್ನ್ ಸಿರಪ್

ಕಾರ್ನ್ ಸಿರಪ್

ತಂಪು ಪಾನೀಯಗಳ ರುಚಿ ಹೆಚ್ಚಿಸಲು ಕಾರ್ನ್ ಸಿರಪ್ ಸೇರಿಸಿರುತ್ತಾರೆ. ಈ ಕಾರ್ನ್ ಸಿರಪ್ ಕಿಡ್ನಿಗೆ ಸಂಬಂಧಿಸಿದ ಕಾಯಿಲೆ ತರುವುದರ ಜೊತೆಗೆ ರಕ್ತದೊತ್ತಡ ಸಮಸ್ಯೆಯನ್ನು ಮಾಡುತ್ತದೆ ಹಾಗೂ ಮೈ ತೂಕವನ್ನು ಹೆಚ್ಚಿಸುತ್ತದೆ.

English summary

Soda Effects On Kidney

A recent Study has found that if you drink more than two sodas every day, you are increasing your risk of contracting chronic kidney disease. The soda can be cola, non-cola, diet or any sugar sweetened carbonated drink.
X
Desktop Bottom Promotion