For Quick Alerts
ALLOW NOTIFICATIONS  
For Daily Alerts

ನಿದ್ರಾಹೀನತೆ ಕಾಯಿಲೆಯ ಲಕ್ಷಣಗಳು

By Super
|

ಮನುಷ್ಯನ ದಿನಚರಿ ಸರಿಯಾಗಿರಬೇಕಾದರೆ ಹಲವು ಅಂಶಗಳು ಸರಿಯಾಗಿ ಕೆಲಸ ಮಾಡಬೇಕಾಗಿರುತ್ತದೆ. ಸರಿಯಾದ ಆಹಾರ, ಸೂಕ್ತ ಕೆಲಸ, ಅಗತ್ಯ ಪ್ರಮಾಣದ ವಿರಾಮ ಎಲ್ಲವೂ ಮುಖ್ಯ. ಆದರೆ ಇವುಗಳ ಜೊತೆಗೆ ಇವುಗಳಿಗಿಂತಲೂ ಹೆಚ್ಚು ಅಗತ್ಯವಾದ ಇನ್ನೊಂದು ವಿಚಾರವಿದೆ. ಅದೇ ನಿದ್ದೆ. ನಿದ್ದೆ ಸರಿಯಾಗಿ ಬಾರದ ದಿನಗಳನ್ನು ಎಲ್ಲರೂ ಅನಿಭವಿಸಿರಬಹುದು. ರಾತ್ರೆ ಕಳೆಯುವುದಂತೂ ಕಷ್ಟದ ಕೆಲಸ ಆದರೆ ನಿದ್ದೆ ಬಾರದ ಮರುದಿನ ಸರಿಯಾಗಿ ಕೆಲಸ ಮಾಡುವುದು ಮತ್ತೂ ಕಷ್ಟ.

ದಿನವಿಡಿ ಆಲಸ್ಯ ಮೈ ಯಲ್ಲಿ ಜಡತ್ವ ಸಾಮಾನ್ಯ ವಾಗಿರುತ್ತದೆ ಇದರ ಜೊತೆಗೆ ನಮ್ಮ ಮನಸ್ಸೂ ಉತ್ಸಾಹದಿಂದ ಇರುವುದಿಲ್ಲ. ಸ್ವಲ್ಪವೇ ಕೆಲಸವಿದ್ದರೂ ಇಷ್ಟೆಲ್ಲಾ ಕೆಲಸವೇ ಎಂದು ಅನ್ನಿಸುತ್ತದೆ. ಆದರೆ ಇದರ ಮರುದಿನ ಸರಿಯಾಗಿ ನಿದ್ದೆ ಬಂದರೆ ಅದರ ಮರುದಿನ ಎಷ್ಟೇ ಕೆಲಸ ಇದ್ದರೂ ಆಸಕ್ತಿಯಿಂದ ಮಾಡುತ್ತೇವೆ. ಒಂದು ರಾತ್ರಿಯ ಸರಿಯಾದ ನಿದ್ದೆಗೆ ಇಷ್ಟೆಲ್ಲಾ ಶಕ್ತಿಯಿದೆಯೇ ಎಂದು ನಿಮ್ಮ ಪ್ರಶ್ನೆಯೇ? ಇದಕ್ಕೆ ಉತ್ತರ ಹೌದು. ಒಂದೇ ರಾತ್ರಿಯು ನಿದ್ದೆಗೆ ಇಷ್ಟೆಲ್ಲಾ ಶಕ್ತಿ ಇದ್ದರೆ ಇನ್ನು ನಿದ್ರಾಹೀನತೆಯಿಂದ ಬಳಲುತ್ತಿದ್ದವರ ಸ್ಥಿತಿ ಹೇಗಿರಬೇಡ. ಇಲ್ಲಿದೆ ಅದಕ್ಕೆ ಉತ್ತರ.

ನಿದ್ರಾಹೀನತೆ ಎಂದರೇನು?

ನಿದ್ರಾಹೀನತೆ ಎಂದರೇನು?

ನಿದ್ರಾಹೀನತೆ ಅಥವಾ ನಿದ್ರಾಭಾವವು ವಿಶ್ವದೆಲ್ಲೆಡೆ ಇರುವ ಒಂದು ಸಾಮಾನ್ಯವಾದ ಆರೋಗ್ಯ ಸಂಬಂಧಿ ಕಾಯಿಲೆಯಾಗಿದೆ. ಇದು ಪುರುಷ ಮತ್ತು ಮಹಿಳೆಯರಿಬ್ಬರನ್ನೂ ಹಾಗೂ ಎಲ್ಲಾ ವಯೋಮಾನದ ಜನರನ್ನೂ ಸಮಾನವಾಗಿ ಕಾಡುತ್ತಿದೆ. ನಿದ್ರಾಭಾವದ ವ್ಯಾಖ್ಯಾನ ಬಹಳ ಸರಳವಾಗಿದೆ. ನಿಮಗೆ ನಿದ್ರೆ ಬರುವುದಿಲ್ಲ ಅಥವಾ ನಿದ್ರಾವಸ್ಥೆಗೆ ಹೋಗಲು ಸಾಧ್ಯ ವಾಗದೇ ಇರುವ ಸ್ಥಿತಿ. ಈ ನಿದ್ರಾಭಾವದಲ್ಲೂ ಕೆಲವು ವಿಧಗಳಿವೆ. ಇವುಗಳಲ್ಲಿ ಮುಖ್ಯವಾದುದು ಅಲ್ಪಾವಧಿಯ ಅಥವಾ ತೀವ್ರ ನಿದ್ರಾಹೀನತೆ. ಇದು ಕೆಲವೇ ದಿನಗಳಲ್ಲಿ ಕಡಿಮೆಯಾಗಬಹುದು ಅಥವಾ ಕೆಲವು ಔಷಧಿಗಳ ಸಹಾಯದಿಂದ ಮತ್ತು ಜೀವನ ವಿಧಾನದಲ್ಲಿ ಸ್ವಲ್ಪ ಬದಲಾವಣೆಗಳನ್ನು ಮಾಡುವ ಮೂಲಕ ಸರಿಪಡಿಸಬಹುದು.

ಸರಿಯಾಗಿ ಮಲಗಿ ವಾರಗಳು ಕಳೆದಿದ್ದರೆ

ಸರಿಯಾಗಿ ಮಲಗಿ ವಾರಗಳು ಕಳೆದಿದ್ದರೆ

ಬಹಳ ಹೆಚ್ಚಿನ ಸಮಯದವರೆಗೆ ಮುಂದುವರೆಯುವ ನಿದ್ರಾಹೀನತೆ ಜನರನ್ನು ಹೆಚ್ಚಾಗಿ ಪ್ರಭಾವ ಬೀರುತ್ತದೆ. ಇದಕ್ಕೆ ಸರಿಯಾದ ಔಷಧೋಪಚಾರದ ಅಗತ್ಯವಿದೆ. ಸುಮಾರು ಮೂವತ್ತು ದಿನಗಳ ವರೆಗೆ ಕನಿಷ್ಟ ವಾರದ ಮೂರು ದಿನಗಳಲ್ಲೂ ಸರಿಯಾಗಿ ಮಲಗಲು ಸಾಧ್ಯವಾಗದೇ ಇದ್ದರೆ ಇದನ್ನು ತೀವ್ರ ನಿದ್ರಾಹೀನತೆ ಎನ್ನುತ್ತಾರೆ. ನಿದ್ರಾಹೀನರು ಎನ್ನುವ ಪದ ಸಾಮಾನ್ಯವಾಗಿ ಇಂತಹ ನಿದ್ರಾಹೀನತೆಯಿಂದ ಬಳಲುವ ಜನರಿಗೆ ಸೇರಿದುದಾಗಿದೆ.

1.ನಿದ್ರೆ ಬಾರದೆ ಎಚ್ಚರವಾಗಿರುವುದು

1.ನಿದ್ರೆ ಬಾರದೆ ಎಚ್ಚರವಾಗಿರುವುದು

ನಿದ್ರಾಹೀನೆತಯ ಅತಿ ಸಾಮಾನ್ಯ ಲಕ್ಷಣವೆಂದರೆ ಸರಿಯಾಗಿ ನಿದ್ದೆ ಬಾರದಿರುವುದು. ಹೀಗೆ ಬಳಲುತ್ತಿರುವವರು ನಿದ್ರಾ ಹೀನತೆಯನ್ನು ಹೋಗಲಾಡಿಸಲು ಹತ್ತು ಹಲವು ನಿಯಮಗಳನ್ನು ತಮ್ಮಷ್ಟಕ್ಕೆ ತಾವೇ ಪಾಲಿಸುತ್ತಾರೆ ಆದರೆ ಯಾವುದರಲ್ಲೂ ಯಶಸ್ಸು ಕಾಣುವುದಿಲ್ಲ. ಸ್ವಲ್ಪ ಮದ್ಯಪಾನ ಮಾಡಿದರೆ ನಿದ್ದೆ ಬರುತ್ತದೆ ಎಂಬ ಮಾತು ನಿದ್ರಾಹೀನರು ಸಾಮಾನ್ಯವಾಗಿ ಹೇಳುತ್ತಾರೆ. ಕೆಲವರಿಗೆ ನಿದ್ದೆಯೇ ಬರುವುದಿಲ್ಲ ಕೆಲವರಿಗೆ ಬೇಗನೆ ಎಚ್ಚರವಾಗುತ್ತದೆ ಹಾಗೂ ಇನ್ನೂ ಕೆಲವರಿಗೆ ಸಣ್ಣ ಸಣ್ಣ ಅವಧಿಗಳಲ್ಲಿ, ಕೆಲವೇ ನಿಮಿಷಗಳ ನಿದ್ದೆ ಬರುತ್ತದೆ. ಇದರಲ್ಲಿ ಹೆಚ್ಚು ತೀವ್ರವಾದುದು ಹಲವು ದಿನಗಳ ವರೆಗೆ ನಿದ್ದೆಯೇ ಬಾರದಿರುವ ಜನರು.

2.ಎಚ್ಚರವಾದಾಗ ದಣಿವು

2.ಎಚ್ಚರವಾದಾಗ ದಣಿವು

ಸರಿಯಾಗಿ ನಿದ್ದೆ ಬಾರದ ಹೊರತಾಗಿ ಹೆಚ್ಚು ದಣಿವಾಗುತ್ತದೆ ಎನ್ನುವುದು ವೈದ್ಯಕೀಯವಾಗಿ ಸಾಬೀತಾದ ಅಂಶವಾಗಿದೆ. ಸರಿಯಾದ ನಿದ್ದೆಯ ಹೊರತಾಗಿ ನಮ್ಮ ಎಲ್ಲಾ ಚಯಾಪಚಯ ಕ್ರಿಯೆಗಳೇ ಹಾದಿ ತಪ್ಪಿರುತ್ತವೆ ಎನ್ನುವುದು ಸತ್ಯ. ಇದರಿಂದಾಗಿ ಸರಿಯಾಗಿ ನಿದ್ದೆ ಬಾರದ ಹೊರತು ಎದ್ದಾಗ ನಮ್ಮ ದೇಹ ದಣಿವನ್ನು ಅನುಭವಿಸುತ್ತದೆ.

3.ದಿನದ ಅವಧಿಯಲ್ಲಿ ಉದಾಸೀನತೆ

3.ದಿನದ ಅವಧಿಯಲ್ಲಿ ಉದಾಸೀನತೆ

ನಿದ್ರಾಹೀನತೆಯ ಸಾಮಾನ್ಯ ಲಕ್ಷಣಗಳಲ್ಲೊಂದು ದೇಹದಲ್ಲಿ ಜಡತ್ವ. ನಮಗೆ ಕಾಯಿಲೆ ಬಂದಾಗ ಅನುಭವಿಸುವ ಲಕ್ಷಣಗಳನ್ನೇ ನಿದ್ರಾಹೀನತೆಯ ಅವಧಿಯಲ್ಲಿ ಅನುಭವಿಸುತ್ತೇವೆ. ದಿನದ ಅವಧಿಯಲ್ಲಿ ನಿದ್ದೆ ಬರುವಿಕೆ ಮತ್ತು ಆಲಸ್ಯ ನಮ್ಮ ಕೆಲಸದ ಸ್ಥಳದಲ್ಲಿ ಹಾಗೂ ನಮ್ಮ ಸಾಮಾಜಿಕ ಜೀವನದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ.

4.ಹೆಚ್ಚಾದ ಮುಂಗೋಪ ಮತ್ತು ಲಹರಿಯ ಬದಲಾವಣೆಗಳು

4.ಹೆಚ್ಚಾದ ಮುಂಗೋಪ ಮತ್ತು ಲಹರಿಯ ಬದಲಾವಣೆಗಳು

ದಿನದ ಕನಿಷ್ಟ ಅಗತ್ಯದ ನಿದ್ದೆಯೂ ಬಾರದೇ ಹೋದರೆ ಮನುಷ್ಯ ಹೆಚ್ಚು ಮುಂಗೋಪಿ, ಸಿಡುಕುತನ ತೊರುವ ಸಾಧ್ಯತೆಗಳಿವೆ. ಹೀಗಾಗಿ ಕೋಪ ಹೆಚ್ಚಾಗುತ್ತದೆ, ಆತಂಕ ಖಿನ್ನತೆಗಳು ಸಾಮಾನ್ಯ ಲಕ್ಷಣಗಳಾಗುತ್ತವೆ. ಅವರ ಸ್ವಭಾವವೇ ಅಸಾಮಾನ್ಯ ಎನ್ನುವ ಹಂತಕ್ಕೆ ತಲುಪುತ್ತದೆ. ನೆನಪಿನ ಶಕ್ತಿ ಮತ್ತು ಅವರ ಏಕಾಗ್ರತೆಯ ಮೇಲೆ ಇದು ತೀವ್ರವಾಗಿ ಪರಿಣಾಮ ಬೀರುತ್ತದೆ.

ನಿದ್ರಾಹೀನತೆ ಬಗ್ಗೆ ನಿರ್ಲಕ್ಷ್ಯ ಸಲ್ಲದು

ನಿದ್ರಾಹೀನತೆ ಬಗ್ಗೆ ನಿರ್ಲಕ್ಷ್ಯ ಸಲ್ಲದು

ನಿದ್ರಾಹೀನತೆಯನ್ನು ಸರಿಯಾದ ಸಮಯದಲ್ಲಿ ಸೂಕ್ತ ಔಷಧೋಪಚಾರಗಳೊಂದಿಗೆ ಗುಣ ಪಡಿಸದೇ ಇದ್ದಲ್ಲಿ ಇದು ಮುಂದೆ ಬಹಳವಾಗಿ ಕಾಡುತ್ತದೆ. ನಿದ್ರಾಹೀನತೆ ಹೀಗೆಯೇ ಮುಂದುವರಿದರೆ ಮೇಲೆ ಹೇಳಿದ ಲಕ್ಷಣಗಳಿಗಿಂತಲೂ ತೀವ್ರವಾದ ಬಾಧೆಗೆ ಜನರು ಒಳಗಾಗಬೇಕಾಗುತ್ತದೆ. ಉದಾಹರಣೆಗೆ ಅಂತಹ ರೋಗಿಯು ಶಾಶ್ವತ ಖಿನ್ನತೆಗೆ ಒಳಗಾಗಬಹುದು. ಇದು ಅಲ್ಪ ಕಾಲದ ಅಥವಾ ಸರಿಪಡಿಸಬಹುದಾದ ಕಾಯಿಲೆಯಲ್ಲ ಬದಲಾಗಿ ಶಾಶ್ವತವಾದ ಮತ್ತು ನರವ್ಯವಸ್ಥೆಯನ್ನು ಸರಿಮಾಡದಷ್ಟು ಹಾಳಾಗುವ ಖಿನ್ನತೆಯಾಗಿದೆ.

ನಿದ್ರಾಹೀನತೆಯ ವಿರುದ್ಧ ಹೋರಾಡಲು ಚಿಕಿತ್ಸೆಗಳು

ನಿದ್ರಾಹೀನತೆಯ ವಿರುದ್ಧ ಹೋರಾಡಲು ಚಿಕಿತ್ಸೆಗಳು

ಆರೋಮಾ ಥೆರಪಿ (ಸುಗಂಧ ಚಿಕಿತ್ಸೆ)

ಒತ್ತಡ ಹೆಚ್ಚಾಗಿ ನಿದ್ರಾಹೀನತೆಯಾದರೆ ಆರೋಮಾ ಥೆರಪಿ ಸೂಕ್ತವಾಗಿದೆ. ಇಲ್ಲಿ ಕೆಲವು ಎಣ್ಣೆಗಳ ಹೆಸರುಗಳನ್ನು ಕೊಡಲಾಗಿದೆ ಇವು ನಿಮ್ಮ ನೆರವಾಗಬಹುದು.

ಬೆಂಜೋಯಿನ್ (ಸಾಂಬ್ರಾಣಿ ಸುವಾಸನೆ)

ಬೆಂಜೋಯಿನ್ (ಸಾಂಬ್ರಾಣಿ ಸುವಾಸನೆ)

ಇದು ಒಂದು ಬಗೆಯ ನಿದ್ರಾಜನಕ ಮತ್ತು ಬೆಚ್ಚಗಿಡುವ ಸಾಧನ. ನಿಮ್ಮ ನಿದ್ರಾಹೀನತೆ ಕೆಮ್ಮು, ಗಂಟಲೂತ (ಬ್ರಾಂಕೈಟಿಸ್) ಅಥವಾ ಒತ್ತಡದ ಕಾರಣದಿಂದ ಆಗಿದ್ದರೆ ಇದು ನಿಮ್ಮ ನೆರವಿಗಾಗುತ್ತದೆ.

ಮಲ್ಲಿಗೆ

ಮಲ್ಲಿಗೆ

ಇದು ನಿಮ್ಮನ್ನು ಆರಾಮದಾಯಕವನ್ನಾಗಿಸುತ್ತದೆ ಹಾಗೂ ಇದೊಂದು ಬಹಳ ಪ್ರಸಿದ್ಧವಾದ ಖಿನ್ನತೆ ನಿವಾರಕವೂ ಹೌದು. ಇದು ಖಿನ್ನತೆ ಮತ್ತು ಉಸಿರಾಟಾದ ತೊಂದರೆ ಇದ್ದಲ್ಲಿ ಹೋಗಲಾಡಿಸುತ್ತದೆ.

ಲ್ಯಾವೆಂಡರ್

ಲ್ಯಾವೆಂಡರ್

ಇದು ನೋವು ನಿವಾರಕವಾಗಿ ಬಹಳ ಪ್ರಸಿದ್ಧವಾಗಿದೆ. ಇದು ತಲೆನೊವು ಮತ್ತಿತರ ನೋವುಗಳನ್ನು ಹೋಗಲಾಡಿಸಿ ಆರಾಮದಾಯಕ ನಿದ್ದೆಯನ್ನು ನಿಮ್ಮದಾಗಿಸುತ್ತದೆ. ಇದು ಆಘಾತದ ಕಾರಣದಿಂದ ನಿದ್ರಾಹೀನತೆ ಆಗಿದ್ದರೆ ಸೂಕ್ತ ಉಪಚಾರವಾಗಿದೆ.

ಯೋಗಿಕ ಉಪಚಾರ

ಯೋಗಿಕ ಉಪಚಾರ

ಯೋಗ ನಮ್ಮ ದೇಹದ ನರ ವ್ಯವಸ್ಥೆಯನ್ನು ಪ್ರಚೋದಿಸುತ್ತದೆ. ಇದು ನಿದ್ರಾಹೀನತೆಯ ಸಾಮಾನ್ಯ ಕಾರಣವಾದ ಒತ್ತಡವನ್ನು ನಿವಾರಿಸುವ ಮೂಲಕ ಕೆಲಸ ಮಾಡುತ್ತದೆ. ಶವಾಸನ ನಿಮ್ಮ ಒತ್ತಡವನ್ನು ಹೋಗಲಾಡಿಸಿ ನಿಮ್ಮ ನಿದ್ರಾಹೀನತೆಯನ್ನು ದೂರಮಾಡುವ ಅತ್ಯುತ್ತಮ ಆಸನವಾಗಿದೆ. ಇದು ಹೆಚ್ಚೆಂದರೆ 20 ನಿಮಿಷಗಳ ಅವಧಿಗೆ ಮಾಡಿದರೆ ಸಾಕು ನಿಮ್ಮ ನಿದ್ರಾಹೀನತೆ ಸಾಕಷ್ಟು ದೂರವಾಗುತ್ತದೆ.

ಮೂಲಿಕೆ ಉಪಚಾರ

ಮೂಲಿಕೆ ಉಪಚಾರ

ಚೀನಾದವರು ನಮ್ಮ ಆರೋಗ್ಯದ ಗುಟ್ಟು ಯಿನ್ ಮತ್ತು ಯಾಂಗ್ ನಲ್ಲಿ ಅಡಗಿದೆ ಎಂದು ಹೇಳುತ್ತಾರೆ. ಈ ಎರಡು ಎಷ್ಟು ಸರಿತೂಗಿಕೊಂಡಿರುತ್ತವೆಯೋ ಅಷ್ಟು ಸರಿಯಾಗಿ ನಮ್ಮ ಆರೋಗ್ಯ ಇರುತ್ತದೆ. ಕ್ರೈಸಾಂಥೆಮಮ್, ಚಮೋಮೈಲ್ ಮತ್ತು ಲಾವೆಂಡರ್ ಚಹಾಗಳು ನಿದ್ರಾಹೀನತೆಯನ್ನು ಬಹುಬೇಗನೇ ಮತ್ತು ಬಹಳ ಪರಿಣಾಮಕಾರಿಯಾಗಿ ದೂರಮಾಡುತ್ತವೆ.

English summary

Signs That You Are Suffering From Insomnia

People are prone to suffering from various types of insomnia. The most common type is short-term or Acute Insomnia that tends to recede within a few days itself or with some over-the-counter medications or minor changes in lifestyle.
X
Desktop Bottom Promotion