ದೇಹದಲ್ಲಿ ಕ್ಯಾಲ್ಸಿಯಂ ಅಧಿಕವಾದರೂ ಅಪಾಯ!

By:
Subscribe to Boldsky

ಕ್ಯಾಲ್ಸಿಯಂ ಅನ್ನುವ ಖನಿಜಾಂಶ ದೇಹಕ್ಕೆ ಅತ್ಯವಶ್ಯಕ. ಕ್ಯಾಲ್ಸಿಯಂ ಕೊರತೆ ಉಂಟಾದರೆ ಮೂಳೆಗಳು ಬಲಹೀನವಾಗುತ್ತದೆ ಎಂದು ಸಾಮಾನ್ಯವಾಗಿ ಎಲ್ಲರಿಗೆ ತಿಳಿದಿರುತ್ತದೆ. ಆದರೆ ಕ್ಯಾಲ್ಸಿಯಂ ಹೆಚ್ಚಾದರೂ ಆರೋಗ್ಯಕ್ಕೆ ಒಳ್ಳೆಯದಲ್ಲ ಅನ್ನುವ ವಿಷಯ ಗೊತ್ತೇ?

ನಮ್ಮ ದೇಹದಲ್ಲಿ ಕ್ಯಾಲ್ಸಿಯಂ ಪ್ರಮಾಣ 9-11mg/dlರಷ್ಟು ಇರಬೇಕು. ಇದಕ್ಕಿಂತ ಕಡಿಮೆಯಾದರೂ, ಹೆಚ್ಚಾದರೂ ಅನಾರೋಗ್ಯ ಉಂಟಾಗುವುದು. ದೇಹದಲ್ಲಿ ಕ್ಯಾಲ್ಸಿಯಂ ಅಂಶ ಅಧಿಕವಾದರೆ ಅದನ್ನು ವೈದ್ಯಕೀಯ ಭಾಷೆಯಲ್ಲಿ ಹೈಪರ್ ಕ್ಯಾಲ್ಸಿಯಂಮಿಯಾ(hypercalcemia) ಎಂದು ಕರೆಯುತ್ತಾರೆ.

ಹೈಪರ್ ಕ್ಯಾಲ್ಸಿಯಂಮಿಯಾದ ಮೊದಲನೇ ಹಂತದಲ್ಲಿ ಯಾವುದೇ ಲಕ್ಷಣಗಳು ಕಂಡು ಬರುವುದಿಲ್ಲ. ಕ್ಯಾಲ್ಸಿಯಂ ಪ್ರಮಾಣ ಹೆಚ್ಚಾದಂತೆ ಹೈಪರ್ ಕ್ಯಾಲ್ಸಿಯಂಮಿಯಾದ ಲಕ್ಷಣಗಳು ಈ ಕೆಳಗಿನಂತೆ ಇರುತ್ತವೆ:

ವಾಂತಿ

ತೇಗು ಬಂದಂತೆ ಅನಿಸುವುದು, ಇದರ ಜೊತೆಗೆ ವಾಂತಿ, ತಲೆ ಸುತ್ತು ಕೂಡ ಕಂಡು ಬರುತ್ತದೆ.

ಹೃದಯದ ಬಡಿತದಲ್ಲಿ ವ್ಯತ್ಯಾಸ

ದೇಹದಲ್ಲಿ ಕ್ಯಾಲ್ಸಿಯಂ ಪ್ರಮಾಣ ಹೆಚ್ಚಾದರೆ ಹೃದಯದ ಬಡಿತ ಹೆಚ್ಚಾಗುವುದು. ಇದು ECG(electrocardiogram)ಯಲ್ಲಿ ವ್ಯತ್ಯಾಸ ಉಂಟು ಮಾಡುತ್ತದೆ.

Polyuria( ಆಗಾಗ ಮೂತ್ರ ವಿಸರ್ಜನೆಗೆ)

ಆಗಾಗ ಮೂತ್ರ ವಿಸರ್ಜನೆಗೆ ಹೋಗುವುದು ಕೂಡ ಕ್ಯಾಲ್ಸಿಯಂ ಅಧಿಕವಾದರೆ ಕಂಡು ಬರುವ ಸಮಸ್ಯೆಯಾಗಿದೆ.

ಮಲಬದ್ಧತೆ

ಆಗಾಗ ಮೂತ್ರವಿಸರ್ಜನೆಗೆ ಹೋಗುವುದರಿಂದ ದೇಹದಲ್ಲಿ ನೀರಿನಂಶ ಕಡಿಮೆಯಾಗುತ್ತದೆ. ಇದರಿಂದ ಮಲಬದ್ಧತೆ ಉಂಟಾಗುವುದು.

ಕಿಡ್ನಿಯಲ್ಲಿ ಕಲ್ಲು

ದೇಹದಲ್ಲಿ ಕ್ಯಾಲ್ಸಿಯಂ ಅಧಿಕವಾದರೆ ಕಿಡ್ನಿಯಲ್ಲಿ ಕಲ್ಲು ಉಂಟಾಗುವುದು.

ತುಂಬಾ ಬಾಯಾರಿಕೆ

ಆಗಾಗ ಬಾಯಾರಿಕೆ ಉಂಟಾಗುವುದು, ಒಣ ತ್ವಚೆ, ಒಡೆದ ತುಟಿಗಳು ಕೂಡ ಹೈಪರ್ ಕ್ಯಾಲ್ಸಿಯಂಮಿಯಾದ ಲಕ್ಷಣಗಳಾಗಿವೆ.

ಅಸಿಡಿಟಿ

ಕ್ಯಾಲ್ಸಿಯಂ ಹೆಚ್ಚಾದರೆ ಅಸಿಡಿಟಿ ಉಂಟಾಗಿ ಅಲ್ಸರ್ ಗೆ ಕಾರಣವಾಗುತ್ತದೆ.

ಮೂಳೆ ಸಂಬಂಧಿ ಕಾಯಿಲೆಗಳು

ಕ್ಯಾಲ್ಸಿಯಂ ಜಾಸ್ತಿಯಾದರೂ ಮೂಳೆ ಸಂಬಂಧಿ ಕಾಯಿಲೆಗಳು ಕಂಡು ಬರುವುದು. ಮೂಳೆಗಳಲ್ಲಿ ನೋವು ಈ ಕಾಯಿಲೆಯ ಪ್ರಮುಖ ಲಕ್ಷಣವಾಗಿದೆ.

ಕೋಮಾ

ಕ್ಯಾಲ್ಸಿಯಂ ಪ್ರಮಾಣ 15-16mg/dl ಇದ್ದರೆ ವ್ಯಕ್ತಿ ಕೋಮಾಕ್ಕೆ ಹೋಗಬಹುದು.

ಹೋಲಿಕೆ ಮಾಡಿ ನೋಡಿ ಹಾಗೂ ಅತ್ಯುತ್ತಮ ಆರೋಗ್ಯ ವಿಮಾ ಪಾಲಿಸಿಗಳನ್ನು ಖರೀದಿಸಿ

Story first published: Tuesday, April 2, 2013, 10:47 [IST]
English summary

Signs Of High Calcium In Body | Tips For Health | ದೇಹದಲ್ಲಿ ಕ್ಯಾಲ್ಸಿಯಂ ಅಧಿಕವಾದರೆ ಕಂಡು ಬರುವ ಲಕ್ಷಣಗಳು | ದೇಹದ ಆರೈಕೆಗೆ ಕೆಲ ಸಲಹೆಗಳು

Signs and symptoms of hypercalcemia may range from mild to severe. Mild hypercalcemia might not show any signs or symptoms in most cases. Signs of moderate to severe increase of calcium in body depends on the organ that is affected.
Please Wait while comments are loading...
Subscribe Newsletter