For Quick Alerts
ALLOW NOTIFICATIONS  
For Daily Alerts

ಓಡುವಾಗ ಮಾಡಬಾರದ ತಪ್ಪುಗಳು

By Hemanth Amin
|

ಓಡುವುದು ತುಂಬಾ ಮಿತವ್ಯಯಿ ಮತ್ತು ಒಂದು ಒಳ್ಳೆಯ ದೈಹಿಕ ವ್ಯಾಯಾಮ. ಒಂದು ಜತೆ ಆರಾಮದಾಯಕ ಓಟದ ಶೂಗಳು ಮತ್ತು ಹೊಂದಿಕೊಳ್ಳುವ ಬಟ್ಟೆಯೊಂದಿಗೆ ಓಡಬಹುದು. ಇದು ತುಂಬಾ ಸರಳವೆಂದು ನೀವು ಭಾವಿಸಿದರೂ ಓಡುವಾಗ ಕೆಲವೊಂದು ವಿಷಯಗಳನ್ನು ಕಡೆಗಣಿಸಿದರೆ ಆಗ ಗಂಭೀರ ರೀತಿಯ ದೈಹಿಕ ಗಾಯ ಸಮಸ್ಯೆ ಉಂಟಾಗುತ್ತದೆ. ಸರಿಯಾದ ಆರೈಕೆಯಿಲ್ಲದಿದ್ದರೆ ಅದು ಕೀಲು ಮತ್ತು ಮೂಳೆಗಳ ಮೇಲೆ ಗಂಭೀರ ಪರಿಣಾಮ ಬೀರಬಹುದು.

ನಿಯಮಿತವಾಗಿ ಓಡಲು ಸರಿಯಾದ ಶೂ ಧರಿಸಲು ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ಕಚೇರಿಗೆ ಹಾಕಿಕೊಂಡು ಹೋಗುವ ಶೂ ಅಥವಾ ಸಾಮಾನ್ಯ ಸ್ಪೋರ್ಟ್ಸ್ ಶೂಗಳನ್ನು ಹಾಕಿಕೊಂಡು ಓಡಿದರೆ ಇದರಿಂದ ಪಾದ ಮತ್ತು ಕೀಲುಗಳ ಮೇಲೆ ಪರಿಣಾಮ ಬೀರಬಹುದು. ನಿಯಮಿತವಾಗಿ ಓಡುವುದನ್ನು ಆರಂಭಿಸುವುದಿದ್ದರೆ ಮೊದಲನೇ ದಿನ ಗಮನಿಸಬೇಕಾದ ವಿಷಯವೆಂದರೆ ಮೊದಲ ದಿನವೇ ನೀವು ವೇಗವಾಗಿ ಓಡಿದರೆ ಸ್ನಾಯುಗಳು ಎಳೆದುಕೊಳ್ಳುವ ಸಾಧ್ಯತೆಗಳಿವೆ. ನಿಯಮಿತವಾಗಿ ಓಡುವುದನ್ನು ಆರಂಭಿಸುವ ಮೊದಲು ಸ್ವಲ್ಪ ಅಧ್ಯಯನ ಅಥವಾ ಸಲಹೆ ಪಡೆಯುವುದು ಮುಖ್ಯ.

Running Mistakes To Avoid

ನಿಯಮಿತವಾಗಿ ಓಡಲು ಗಂಭೀರ ನಿರ್ಧಾರ ಮಾಡಿದ್ದರೆ ಓಡುವ ಭಂಗಿಗಳು ಮತ್ತು ಇತರ ಮೂಲಭೂತ ವಿಧಾನಗಳ ಬಗ್ಗೆ ಸಲಹೆ ಪಡೆಯಿರಿ ಅಥವಾ ಅಧ್ಯಯನ ಮಾಡಿ. ಓಡುವಾಗ ನಿಮ್ಮ ಹೆಜ್ಜೆಗಳ ಬಗ್ಗೆ ಗಮನಹರಿಸಬೇಕು. ನಿಮ್ಮ ದೇಹಕ್ಕೆ ಹೊಂದಿಕೊಂಡು ಯಾವ ರೀತಿಯ ಹೆಜ್ಜೆ ಹಾಕಬೇಕೆನ್ನುವ ಬಗ್ಗೆ ತಿಳಿದುಕೊಳ್ಳಬೇಕು. ನೀವು ಮೊದಲ ಸಲ ಓಡುತ್ತಿದ್ದರೆ ಆಗ ಕೆಲವೊಂದು ಸಿದ್ಧತೆ ಮಾಡಿಕೊಳ್ಳಬೇಕು. ದೇಹದಲ್ಲಿನ ಜಡತ್ವ ಹೋಗಿ ನಿಮ್ಮ ಸ್ನಾಯುಗಳು ದೂರ ಓಟಕ್ಕೆ ಹೊಂದಿಕೊಳ್ಳುತ್ತದೆಯಾ ಎಂದು ದೃಢಪಡಿಸಿಕೊಳ್ಳಿ.

1. ಮೊದಲ ಸಲ ಓಡುವವರು ಮಾಡುವ ತಪ್ಪೆಂದರೆ ಅವರು ಮೊದಲ ದಿನವೇ ತುಂಬಾ ಓಡುತ್ತಾರೆ. ದೀರ್ಘ ಕಾಲದವರೆಗೆ ಒಳ್ಳೆಯ ಓಟಗಾರನಾಗಲು ಈ ತಪ್ಪನ್ನು ತಿದ್ದಿಕೊಳ್ಳಬೇಕು. ಮೊದಲನೇ ಸಲ ಓಡುವವರಾಗಿರುವ ಕಾರಣ ದೈಹಿಕ ವ್ಯಾಯಾಮವಿಲ್ಲದೆ ನಿಮ್ಮ ದೇಹ ಮತ್ತು ಸ್ನಾಯುಗಳು ಬಿಗಿಯಾಗಿರುತ್ತದೆ. ದೇಹದಲ್ಲಿನ ಬಿಗಿತ ಸಡಿಲಿಸಲು ನೀವು ಓಟಕ್ಕೆ ಮೊದಲು ಲಘು ವ್ಯಾಯಾಮ ಮಾಡಬೇಕು.

2. ಓಡಲು ಆರಂಭಿಸಿದ ಬಳಿಕ ಜನರು ಮಾಡುವ ಮತ್ತೊಂದು ದೊಡ್ಡ ತಪ್ಪೆಂದರೆ ಸರಿಯಾಗಿ ತಿನ್ನದಿರುವುದು. ಒಮ್ಮೆ ನೀವು ನಿಗದಿತವಾಗಿ ಓಡಲು ಆರಂಭಿಸಿದ ಬಳಿಕ ಪ್ರೋಟೀನ್ ಮತ್ತು ಕಾರ್ಬೋಹೈಡ್ರೆಡ್ ಸಮೃದ್ಧವಾಗಿರುವ ಪೌಷ್ಠಿಕಾಂಶಗಳುಳ್ಳ ಆಹಾರ ಸೇವಿಸಬೇಕು. ಓಡುವಾಗ ನಿಮ್ಮ ದೇಹಕ್ಕೆ ಶಕ್ತಿ ನೀಡಲು ಇದು ಇಂಧನದಂತೆ ಕೆಲಸ ಮಾಡುತ್ತದೆ.

3. ಓಡುವ ಹೊಸಬರು ಮತ್ತು ನಿಯಮಿತವಾಗಿ ಓಡುವವರು ಮಾಡುವ ಮತ್ತೊಂದು ತಪ್ಪೆಂದರೆ ಶೂಗಳನ್ನು ನಿರ್ಲಕ್ಷಿಸುವುದು. ಹೊಸಬರು ಕೈಗೆ ಸಿಕ್ಕಿದ ಯಾವುದಾದರೂ ಶೂವನ್ನು ಕಾಲಿಗೆ ಸಿಕ್ಕಿಸಿಕೊಳ್ಳುತ್ತಾರೆ. ಓಡಲು ಸರಿಯಾದ ಶೂಗಳು ಇಲ್ಲದಿದ್ದರೆ ಆಗ ದೈಹಿಕವಾಗಿ ಗಾಯಾಳುವಾಗುವ ಸಾಧ್ಯತೆ ಹೆಚ್ಚು.

4. ಸಾಮಾನ್ಯವಾಗಿ ಜನರು ಮಾಡುವ ಮತ್ತೊಂದು ತಪ್ಪೆಂದರೆ ಅದು ಡ್ರೆಸ್. ಓಡುವುದು ತುಂಬಾ ಮೂಲ ವಿಷಯವಾದರೂ ನಿಯಮಿತವಾಗಿ ಓಡಲು ಸರಿಯಾದ ಬಟ್ಟೆ ಧರಿಸುವುದು ತುಂಬಾ ಮುಖ್ಯ. ನೀವು ಧರಿಸುವ ಬಟ್ಟೆ ತುಂಬಾ ಬಿಗಿಯಾಗಿಯೂ ಇರಬಾರದು ಮತ್ತು ದೊಡ್ಡದಾಗಿಯೂ ಇರಬಾರದು. ಓಡುವಾಗ ಧರಿಸುವ ಬಟ್ಟೆ ಆಯ್ಕೆ ಮಾಡಿ ಮತ್ತು ಇದು ಸರಿಹೊಂದುತ್ತದೆಯಾ ಎನ್ನುವುದನ್ನು ಮುಖ್ಯವಾಗಿ ಗಮನಿಸಿ.

5. ದೀರ್ಘ ಮತ್ತು ಆರೋಗ್ಯಕರವಾಗಿ ಓಡಲು ನಿಮ್ಮ ದೇಹದ ಮೇಲೆ ಬೀಳುವ ಒತ್ತಡ ಕಡಿಮೆ ಮಾಡಲು ಯಾವ ರೀತಿಯ ಹೆಜ್ಜೆಗಳನ್ನು ಹಾಕಬೇಕೆಂದು ನೀವು ತಿಳಿದುಕೊಳ್ಳಬೇಕು. ನಿಮ್ಮ ಇಡೀ ದೇಹ ಸಡಿಲಿಸಿ ಮತ್ತು ನೇರವಾಗಿ ಸರಿಹೊಂದುವಂತೆ ಇರಲಿ.

6. ನಿಮ್ಮ ದೇಹಕ್ಕೆ ಹೆಚ್ಚಿನ ಆಯಾಸ ಮತ್ತು ಒತ್ತಡವಾಗದಂತೆ ನಯವಾಗಿ ಓಡಲು ಪಾದಗಳನ್ನು ಭೂಮಿಗೆ ಬಲವಾಗಿ ಇಡಬಾರದು. ಹೀಗೆ ಇಟ್ಟರೆ ಕೀಲು ಮತ್ತು ಮೂಳೆಯ ಗಾಯಾಳು ಸಮಸ್ಯೆಯಾಗುತ್ತದೆ. ಭೂಮಿ ಮೇಲೆ ಜಾರಿದಂತೆ ಓಡಿದರೆ ಆಗ ದೇಹದ ಮೇಲಿನ ಆಯಾಸ ಮತ್ತು ಕೀಲುಗಳ ಮೇಲಿನ ಒತ್ತಡ ಕಡಿಮೆಯಾಗುತ್ತದೆ.

7. ನಿಯಮಿತವಾಗಿ ಓಡುವಾಗ ಬಳಿಕ ನೀವು ತುಂಬಾ ವೇಗವಾಗಿ ಓಡಬಾರದು. ಅತಿಯಾದ ಆಯಾಸ ಮತ್ತು ಒತ್ತಡ ಕಡಿಮೆ ಮಾಡಲು ನೀವು ಒಂದು ಮಟ್ಟದ ವೇಗದಲ್ಲಿ ಓಡಬೇಕು. ತುಂಬಾ ವೇಗವಾಗಿ ಓಡುವುದರಿಂದ ದೇಹಕ್ಕೆ ನೋವುಂಟಾಗಿ ನಿಮ್ಮ ಶಕ್ತಿ ಕುಂದಿ ದಿನವಿಡೀ ನಿಮಗೆ ದಣಿವಾಗಬಹುದು.

English summary

Running Mistakes To Avoid

Running is one of the most affordable and best fitness exercises one can think of. With a pair of comfortable running shoes and flexible clothes and you are good to go. Though it is as simple as that, there are risks involved in running that when neglected results in serious physical injuries to you.
Story first published: Wednesday, November 27, 2013, 15:39 [IST]
X
Desktop Bottom Promotion