For Quick Alerts
ALLOW NOTIFICATIONS  
For Daily Alerts

ಶೀತದಿಂದಾಗಿ ಮೂಗು ಕಟ್ಟಿದರೆ ಈ ರೀತಿ ಮಾಡಿ

|

ಶೀತದಿಂದ ಮೂಗು ಕಟ್ಟಿದರೆ ಸರಿಯಾಗಿ ಉಸಿರಾಡಲು ಆಗುವುದಿಲ್ಲ, ಬಾಯಿಂದಲೇ ಉಸಿರಾಡಬೇಕಾಗುವುದು, ಅದರಲ್ಲೂ ನಿದ್ದೆ ಮಾಡುವಾಗಂತೂ ತುಂಬಾ ತೊಂದರೆ ಉಂಟಾಗುತ್ತದೆ.

ಶೀತವಾದಾಗ ಮೂಗಿನ ನರಗಳು ಊದಿಕೊಳ್ಳುವುದರಿಂದ ಮೂಗು ಕಟ್ಟಿದ ಅನುಭವ ಉಂಟಾಗುವುದು. ಕೆಲವರಿಗಂತೂ ಮೂಗು ಕಟ್ಟಿದ ಅನುಭವದ ಜೊತೆಗೆ ವಿಪರಿತ ಸೋರುವುದು. ಈ ರೀತಿಯಾದರೆಯಂತೂ ಯಾವುದೇ ಕೆಲಸಕ್ಕೆ ಗಮನ ಹರಿಸಲು ಸಾಧ್ಯವಾಗದೆ ಒದ್ದಾಡುವಂತಾಗುವುದು.

ಮೂಗು ಕಟ್ಟಿದರೆ ಅದನ್ನು ಹೋಗಲಾಡಿಸಲು ಮನೆ ಮದ್ದು ಹೇಳಿದ್ದೇವೆ. ಇವುಗಳನ್ನು ಪಾಲಿಸಿದರೆ ಸರಾಗವಾಗಿ ಉಸಿರಾಡಬಹುದು ಹಾಗೂ ಶೀತ ಕೂಡ ಕಮ್ಮಿಯಾಗುತ್ತದೆ.

ಬಿಸಿ ಬಿಸಿಯಾದ ಹರ್ಬಲ್ ಟೀ

ಬಿಸಿ ಬಿಸಿಯಾದ ಹರ್ಬಲ್ ಟೀ

ಶೀತವಾದಾಗ ಶುಂಠಿ, ಏಲಕ್ಕಿ ಹಾಕಿದ ಟೀ ಮಾಡಿ ಕುಡಿದರೆ ಊದಿದ ಮೂಗಿನ ನರಗಳನ್ನು ಚಿಕ್ಕದಾಗಿಸುತ್ತದೆ. ಶುಂಠಿ ಟೀಯಲ್ಲದೆ ಇತರ ಹರ್ಬಲ್ ಟೀ ಕುಡಿದರೂ ಶೀತ ಕಮ್ಮಿಯಾಗಿ ಉಸಿರಾಟಕ್ಕೆ ಸಹಾಯ ಮಾಡುವುದು.

ಹಬೆ ತೆಗೆದುಕೊಳ್ಳುವುದು

ಹಬೆ ತೆಗೆದುಕೊಳ್ಳುವುದು

ಮೂಗು ಕಟ್ಟಿದಾಗ ಹಬೆ ತಗೆದುಕೊಂಡರೆ ಒಳ್ಳೆಯದು. ಬಿಸಿ ನೀರಿಗೆ ಸ್ವಲ್ಪ ವಿಕ್ಸ್ ಹಾಕಿ, ಬೇಕಿದ್ದರೆ ಸ್ವಲ್ಪ ನೀಲಗಿರಿ ಎಣ್ಣೆ ಕೂಡ ಹಾಕಬಹುದು, ನಂತರ ಆ ಹಬೆಗೆ ಮುಖವನ್ನು ಒಡ್ಡಿ 5 ನಿಮಿಷ ನಿಲ್ಲಬೇಕು. ಈ ರೀತಿ ಮಾಡುವುದರಿಂದ ಬ್ಲಾಕ್ ಆದ ಮೂಗನ್ನು ಸರಿಪಡಿಸಬಹುದು.

 ಬಿಸಿ ನೀರಿನ ಸ್ನಾನ

ಬಿಸಿ ನೀರಿನ ಸ್ನಾನ

ಮೂಗು ಕಟ್ಟಿದ ಅನುಭವ, ತಲೆನೋವು ಇವೆಲ್ಲಾ ಕಾಣಿಸಿಕೊಂಡರೆ ಬಿಸಿ- ಬಿಸಿ ನೀರಿನಿಂದ ಸ್ನಾನ ಮಾಡಿದರೆ ರಿಲ್ಯಾಕ್ಸ್ ಅನಿಸುವುದು.

ಖಾರವಾದ ತಿಂಡಿ

ಖಾರವಾದ ತಿಂಡಿ

ಮೂಗು ಕಟ್ಟಿದಾಗ ಕರಿ ಮೆಣಸಿನ ಪುಡಿ ಶುಂಠಿ ಹಾಕಿ ಮಾಡಿದ ಕಷಾಯ ಕುಡಿಯಿರಿ. ಶೀತ ಕಡಿಮೆಯಾಗುವುದು.

ಬಿಸಿ ನೀರು

ಬಿಸಿ ನೀರು

2 ಗ್ಲಾಸ್ ಬಿಸಿ ನೀರಿಗೆ 1 ಚಮಚ ಉಪ್ಪು ಹಾಕಿ ಮಿಕ್ಸ್ ಮಾಡಿ ಅದನ್ನು ನಿಧಾನಕ್ಕೆ ಮೂಗಿನ ಮೇಲೆ ಸುರಿದರೆ ಕಟ್ಟಿದ ಮೂಗು ಸರಿಯಾಗುವುದು.

 ಈರುಳ್ಳಿ

ಈರುಳ್ಳಿ

ಈರುಳ್ಳಿಯನ್ನು ಕತ್ತರಿಸಿ, ಅದರ ವಾಸನೆಯನ್ನು ಆಗಾಗ ಗ್ರಹಿಸಿ, ಈ ರೀತಿ ಮಾಡುವುದರಿಂದಲೂ ಕಟ್ಟಿದ ಮೂಗನ್ನು ಸರಿಪಡಿಸಬಹುದು.

ಹಾಟ್ ಟೊಮೆಟೊ ಸೂಪ್

ಹಾಟ್ ಟೊಮೆಟೊ ಸೂಪ್

ಶೀತವನ್ನು ಹೋಗಲಾಡಿಸುವಲ್ಲಿ ಟೊಮೆಟೊ ಸೂಪ್ ತುಂಬಾ ಪರಿಣಾಮಕಾರಿ. ಬೆಳ್ಳುಳ್ಳಿ, ನಿಂಬೆ ರಸ, ಕರಿ ಮೆಣಸಿನ ಪುಡಿ ಹಾಕಿ ಮಾಡಿದ ಟೊಮೆಟೊ ಸೂಪ್ ಕುಡಿದರೆ ಉಸಿರಾಟದ ತೊಂದರೆಯಿಂದ ಮುಕ್ತಿ ಹೊಂದಬಹುದು. ಶೀತವಾದರೆ ರಾತ್ರಿ ಮಲಗುವ ಮುನ್ನ ಈ ಸೂಪ್ ಕುಡಿದು ಮಲಗಿದರೆ ನಿದ್ದೆ ಚೆನ್ನಾಗಿ ಬರುತ್ತದೆ.

English summary

Remedies For Nasal Blockage

When a person suffers from a cold or allergy, it irritates and inflames the nasal passage. The most important thing to remember when you are experiencing nasal blockage is to keep the nasal passages and sinus moist.So let us look at some home remedies for nasal blockage.
X
Desktop Bottom Promotion