For Quick Alerts
ALLOW NOTIFICATIONS  
For Daily Alerts

ಟೀ ಕುಡಿಯುವವರಿಗೆ ಇಲ್ಲಿದೆ 10 ಸಿಹಿ ಸುದ್ದಿ

By Super
|

ಟೀ ಕುಡಿಯುವುದರಿಂದ ತಲೆನೋವಿನಿಂದ ಮಾನಸಿಕ ತೊಂದರೆಗಳಿಗೂ ಕೂಡ ಪರಿಹಾರ ಕಂಡುಕೊಳ್ಳಬಹುದು ಎಂದು ಪುರಾತನ ಕಾಲದಿಂದಲೂ ಹೇಳಲಾಗಿದೆ. ಟೀ ಯ ಬಗ್ಗೆ ಈ ಕೆಳಕಂಡ ವಿವರಗಳು ಹೆಚ್ಚು ಮಾಹಿತಿಯನ್ನು (ಟೀ ಕುಡಿಯಲು ಕಾರಣವನ್ನು) ನೀಡುತ್ತವೆ.

ಅದರಲ್ಲೂ ಗ್ರೀನ್ ಟೀ ಆರೋಗ್ಯಕ್ಕೆ ಒಳ್ಳೆಯದು, ದೇಹದ ತೂಕವನ್ನು ನಿಯಂತ್ರಣದಲ್ಲಿಡುತ್ತದೆ, ತ್ವಚೆ ಸೌಂದರ್ಯವನ್ನು ಹೆಚ್ಚಿಸುತ್ತದ, ಹೀಗೆ ಇದರಿಂದ ನಾನಾ ಪ್ರಯೋಜನವನ್ನು ಪಡೆಯಬಹುದು. ಆದರೆ ಭಾರತದಲ್ಲಿ ಗ್ರೀನ್ ಟೀಗಿಂತ ಬ್ಲ್ಯಾಕ್ ಟೀಗೆ ಹೆಚ್ಚು ಪ್ರಾಮುಖ್ಯತೆಯನ್ನು ಕೊಡುತ್ತೇವೆ.

ಹೆಚ್ಚಿನವರು ಬ್ಲ್ಯಾಕ್ ಟೀ ಕುಡಿಯುವುದಿಲ್ಲ. ಆದರೆ ಆರೋಗ್ಯಕ್ಕೆ ಹಾಲು ಟೀಗಿಂತ ಬ್ಲ್ಯಾಕ್ ಟೀ ಒಳ್ಳೆಯದು. ಗ್ರೀನ್ ಟೀ ಕಹಿ ಇರುವುದರಿಂದ ಹೆಚ್ಚಿನರು ಕುಡಿಯಲು ಇಷ್ಟ ಪಡುವುದಿಲ್ಲ. ಅಂತಹವರು ಲೈಟಾಗಿ ಬ್ಲ್ಯಾಕ್ ಟೀ ಮಾಡಿ ಕುಡಿಯುವುದರಿಂದ ಈ ಕೆಳಗಿನ ಪ್ರಮುಖ ಪ್ರಯೋಜನಗಳನ್ನು ಪಡೆಯಬಹುದು.

ಟೀ ಏಕೆ ಕುಡಿಯಬೇಕು?

ಟೀ ಏಕೆ ಕುಡಿಯಬೇಕು?

1 . ಮಾಹಿತಿ ಪ್ರಕಾರ ಟೀ ಯಲ್ಲಿ ಸಣ್ಣ ಪ್ರಮಾಣದ ನೈಸರ್ಗಿಕ ಫ್ಲೋರೈಡ್ ಎಂಬ ರಾಸಾಯನಿಕ ಅಂಶ ಇದ್ದು ಅದು ಹಲ್ಲಿನ ಕ್ಷಯವನ್ನು ತಡೆಯುತ್ತದೆ.

ಫ್ಲೋರಿಡಾ ಅಂಶವು ಸಾಲಿವ ದೊಂದಿಗೆ ಮಿಶ್ರ ಗೊಂಡಾಗ ಅದರಿಂದ ಬ್ಯಾಕ್ಟೀರಿಯಕ್ಕೆ ಹಲ್ಲಿನಲ್ಲಿ ಪೊಳ್ಳನ್ನು ಬೀಳಿಸುವುದು ಅಸಾಧ್ಯ ಟೀಯಲ್ಲಿರುವ ಫ್ಲೋರಿಡಾವು ಹಲ್ಲಿನಲ್ಲಿ ಪೊಳ್ಳು ಬೀಳುವುದನ್ನು ಮತ್ತು ದಂತ ಕ್ಷಯದ ಮೊದಲ ಹಂತವನ್ನು ತಡೆಗಟ್ಟುವಲ್ಲಿ ಸಹಾಯ ಮಾಡುತ್ತದೆ .

ಟೀ ಏಕೆ ಕುಡಿಯಬೇಕು?

ಟೀ ಏಕೆ ಕುಡಿಯಬೇಕು?

2 . ಗ್ರೀನ್ ಟೀ ಯನ್ನು ಕುಡಿಯುವುದರಿಂದ ಅದರಲ್ಲಿರುವ ಕ್ಯಾಟ್ಚಿನ್ ಅಂಶವು ದೇಹದಲ್ಲಿರುವ ಕೊಬ್ಬಿನ ಅಂಶವನ್ನು ದೇಹದ ತೂಕವನ್ನು ಕಡಿಮೆ ಮಾಡುವಲ್ಲಿ ಸಹಕರಿಸುತ್ತದೆ ಅದರಲ್ಲೂ ಹೊಟ್ಟೆ ಕರಗಿಸಲು ಇದು ಹೆಚ್ಚು ಸಹಕಾರಿ ಎಂದು ಹೇಳಲಾಗುತ್ತದೆ .

ಟೀ ಏಕೆ ಕುಡಿಯಬೇಕು?

ಟೀ ಏಕೆ ಕುಡಿಯಬೇಕು?

3. ಟೀ ಯಲ್ಲಿರುವ ಪೋಲೋಪ್ಹೆನೋಲ್ಸ್ ಅಂಶವು ಕ್ಯಾನ್ಸರ್ ವಿರುದ್ಧ ಹೋರಾಡುವ ಗುಣವನ್ನು ಹೊಂದಿದೆ ಎನ್ನಲಾಗಿದೆ . ಟೀಯಲ್ಲಿರುವ ಪೋಲೋಪ್ಹೆನೋಲ್ಸ್ ಅದರಲ್ಲೂ ಅಧಿಕೃತವಾಗಿ ಕ್ಯಾಟ್ಚನ್ ನ ಜೈವಿಕ ಚಟುವಟಿಕೆಗಳು ಕ್ಯಾನ್ಸರ್ ಅನ್ನು ತಡೆಗಟ್ಟುವಲ್ಲಿ ಸಹಕರಿಸುತ್ತವೆ ಎಂದು ಸಂಶೋಧನೆಯ ಪ್ರಕಾರ ತಿಳಿಸಲಾಗಿದೆ .

ಟೀ ಏಕೆ ಕುಡಿಯಬೇಕು?

ಟೀ ಏಕೆ ಕುಡಿಯಬೇಕು?

4. ಇಟಲಿ ಯ ಒಂದು ಅಧ್ಯಯನದ ಪ್ರಕಾರ ಪ್ರತಿದಿನ 3 ಲೋಟ ಟೀ ಕುಡಿಯುವುದರಿಂದ ಪುರುಷರಲ್ಲಿರುವ ಜನನೇಂದ್ರಿಯ ಸಂಬಂಧಿ ಕ್ಯಾನ್ಸರನ್ನು ತಡೆಗಟ್ಟಬಹುದು.

ಟೀ ಏಕೆ ಕುಡಿಯಬೇಕು?

ಟೀ ಏಕೆ ಕುಡಿಯಬೇಕು?

5. ದಿನಕ್ಕೆ ಎಂಟು ಲೋಟ ನೀರು ಕುಡಿಯುವುದರ ಜೊತೆ ಒಂದು ಅಥವಾ ಎರಡು ಲೋಟ ಕಾಫಿ / ಟೀ ಕೂಡ ಕುಡಿಯುವುದರಿಂದ ಏನು ಅಪಾಯವಿಲ್ಲ ಎಂದು ವಿಜ್ಞಾನಿಗಳು ಒಪ್ಪುತ್ತಾರೆ .

ಟೀ ಏಕೆ ಕುಡಿಯಬೇಕು?

ಟೀ ಏಕೆ ಕುಡಿಯಬೇಕು?

6.ಅಧ್ಯಯನದ ಪ್ರಕಾರ ಪ್ರತಿದಿನ ಒಂದು ಅಥವಾ 2 ಲೋಟ ಟೀ ಕುಡಿಯುವುದರಿಂದ ಮಹಿಳೆಯರಲ್ಲಾಗುವ ತೀವ್ರ ಅಪದಮನಿ ಕಾಠಿಣ್ಯವನ್ನು 50%ನಷ್ಟು ಕಡಿಮೆ ಮಾಡಬಹುದು ಎಂದು ತಿಳಿಸಲಾಗಿದೆ .

ಟೀ ಏಕೆ ಕುಡಿಯಬೇಕು?

ಟೀ ಏಕೆ ಕುಡಿಯಬೇಕು?

7. ಇನ್ನೊಂದು ಅಧ್ಯಯನದ ಪ್ರಕಾರ ಗ್ರೀನ್ (ಹಸಿರು) , ವೈಟ್ (ಬಿಳಿ) ಮತ್ತು ಕಪ್ಪು (ಬ್ಲಾಕ್) ಟೀ ಯನ್ನು ದೀರ್ಘ ಕಾಲ ಬಳಸುವುದರಿಂದ ಶೇಕಡಾ 60 ರಷ್ಟು ಪಾರ್ಶ್ವವಾಯು ಆಗುವುದನ್ನು ತಡೆಯಬಹುದು ಎನ್ನಲಾಗುತ್ತದೆ .

ಟೀ ಏಕೆ ಕುಡಿಯಬೇಕು?

ಟೀ ಏಕೆ ಕುಡಿಯಬೇಕು?

8. ಟೀ ನರವೈಜ್ನಾನಿಕ ರೋಗಗಳನ್ನು ತಡೆಗಟ್ಟುವಲ್ಲಿ ಸಹಕಾರಿ ಅದರಲ್ಲೂ ಮರೆವಿನ ರೋಗಗಳನ್ನು ತಡೆಯಲು ಸಹಾಯ ಮಾಡಲಾಗುತ್ತದೆ ಎನ್ನಲಾಗಿದೆ . ಸಂಶೋಧನೆಯ ಪ್ರಕಾರ ಗ್ರೀನ್ ಟೀ ಯಲ್ಲಿರುವ ಪೋಲಿಪೆನೋಲ್ಸ್ ಎಂಬ ಅಂಶವು ಮಿದುಳಿನಲ್ಲಿರುವ ನರಪ್ರೇಕ್ಷಕ ಅಂಶಗಳನ್ನು ತಡೆಗಟ್ಟುವಲ್ಲಿ ಸಹಕರಿಸುತ್ತದೆ .

ಟೀ ಏಕೆ ಕುಡಿಯಬೇಕು?

ಟೀ ಏಕೆ ಕುಡಿಯಬೇಕು?

ಒಟ್ಟಾರೆ ದಿನದಲ್ಲಿ ಒಂದು ಅಥವಾ ಎರಡು ಕಪ್ ಟೀ ಕುಡಿಯುವುದರಿಂದ ನೆನಪಿನ ಶಕ್ತಿ ಹೆಚ್ಚುತ್ತದೆ.

ಟೀ ಏಕೆ ಕುಡಿಯಬೇಕು?

ಟೀ ಏಕೆ ಕುಡಿಯಬೇಕು?

10. ಹಸಿರು ಟೀ ಕುಡಿಯುವುದರಿಂದ ಮೂಳೆ ಸಾಂದ್ರತೆ ಮತ್ತು ಬಲವನ್ನು ಹೆಚ್ಚಿಸುತ್ತದೆ . ಅಧ್ಯಯನದ ಪ್ರಕಾರ ಟೀ ಕುಡಿಯುವ ಹಿರಿಯ ಮಹಿಳೆಯರ ಸೊಂಟದ ಮೂಳೆ ಸಾಂದ್ರತೆ ಹೆಚ್ಚು ಟೀ ಕುಡಿಯದ ಮಹಿಳೆಯರಿಗಿಂತ ಹೆಚ್ಚು ಸದೃಡ ಆಗಿದೆ.

Read more about: ಟೀ ಆರೋಗ್ಯ tea health
English summary

Reasons you must drink tea

Studies continue to unlock the medicinal benefits of tea, which has been touted to help with everything from headaches to depression since Ancient times.
X
Desktop Bottom Promotion