For Quick Alerts
ALLOW NOTIFICATIONS  
For Daily Alerts

ಮುಟ್ಟಿನಲ್ಲಿ ಅತಿಯಾಗಿ ರಕ್ತಸ್ರಾವವಾಗುತ್ತಿದೆಯೇ?

By Super
|

ಮಾಸಿಕ ಋತು ಚಕ್ರದ ಅವಧಿಯಲ್ಲಿ ಕೆಲವು ಹೆಂಗಸರಲ್ಲಿ ಅಧಿಕ ರಕ್ತ ಸ್ರಾವದ ಸಮಸ್ಯೆ ಕಂಡುಬರುತ್ತದೆ. ಇದನ್ನು menorrhagia ಎಂದು ಕರೆಯುತ್ತಾರೆ. ಒಮ್ಮೊಮ್ಮೆ ನಮಗೆ ಗರ್ಭಾಶಯದಿಂದ ಸಹಜವಾಗಿ ರಕ್ತಸ್ರಾವವಾಗುತ್ತಿದೆಯೇ ಅಥವಾ ಇಲ್ಲವೆ ಎಂದು ಸೋಜಿಗವಾಗುತ್ತದೆ.

ಹಾಗಾದರೆ ನಮಗೆ ಉಂಟಾಗುತ್ತಿರುವ ರಕ್ತ ಸ್ರಾವವು ಸಾಮಾನ್ಯ ಮಟ್ಟದಲ್ಲಿ ಆಗುತ್ತಿದೆಯೇ? ಅಥವಾ ಇಲ್ಲವೇ? ಎಂದು ಹೇಗೆ ತಿಳಿಯುವುದು!. ಇದಕ್ಕೆ ಒಂದು ಸುಲಭ ಮಾರ್ಗವಿದೆ. ಅದೇ ನಾವು ಎಷ್ಟು ಪ್ಯಾಡ್ ಅಥವಾ ಟ್ಯಂಪನ್‍ಗಳನ್ನು ಲೆಕ್ಕವಿಡುವ ಮೂಲಕ ಇದನ್ನು ತಿಳಿದುಕೊಳ್ಳಬಹುದು. ಯಾರಿಗಾದರು menorrhagia ಬಂದಿದ್ದರೆ, ಅವರು ಪ್ರತಿ ಒಂದು ಅಥವಾ ಎರಡು ಗಂಟೆಗಳಿಗೆ ಒಮ್ಮೆ ತಮ್ಮ ಪ್ಯಾಡ್‍ಗಳನ್ನು ಬದಲಾಯಿಸುತ್ತಿರುತ್ತಾರೆ. ಇದು ಒಮ್ಮೊಮ್ಮೆ ರಕ್ತಸ್ರಾವ ಅಧಿಕವಾಗಿದ್ದರೆ, ವಾರ ಪೂರ್ತಿ ಪುನಾರವರ್ತನೆಯಾಗುತ್ತಿರುತ್ತದೆ.

ಇಲ್ಲಿ ನಾವು ನಿಮಗಾಗಿ ಋತು ಚಕ್ರದ ಅವಧಿಯಲ್ಲಿ ಅಧಿಕ ರಕ್ತ ಸ್ರಾವವಾಗಲು ಇರುವ ಕಾರಣಗಳ ಪಟ್ಟಿಯನ್ನು ನೀಡಿದ್ದೇವೆ ಓದಿ.

1. ಹಾರ್ಮೋನ್ ಗಳಲ್ಲಿ ಬದಲಾವಣೆ

1. ಹಾರ್ಮೋನ್ ಗಳಲ್ಲಿ ಬದಲಾವಣೆ

ಮೊದಲನೆಯದಾಗಿ ತಾರುಣ್ಯವಸ್ಥೆಯಲ್ಲಿ ಅಥವಾ ಋತುಚಕ್ರದ ಅವಧಿಯಲ್ಲಿ ಉಂಟಾಗುವ ಹಾರ್ಮೋನುಗಳ ಅಸಮತೋಲನವೇ ಈ ರಕ್ತಸ್ರಾವಕ್ಕೆ ಪ್ರಮುಖ ಕಾರಣವಾಗುತ್ತದೆ. ಮೊದಲ ಬಾರಿಗೆ ಋತುಮತಿಯಾದಾಗ ಅಥವಾ ಋತು ಚಕ್ರವು ನಿಲ್ಲುವ ಮೊದಲು ಹಾರ್ಮೋನುಗಳ ಪ್ರಮಾಣದಲ್ಲಿ ತೀವ್ರತರವಾದ ಏರು ಪೇರುಗಳು ಉಂಟಾಗಿ ಅಧಿಕ ರಕ್ತಸ್ರಾವವುಂಟಾಗುತ್ತದೆ. ಹಾಗಾಗಿಯೇ menorrhagia ವಿವಿಧ ಹಾರ್ಮೋನುಗಳ ಅಸಮತೋಲನದಿಂದ ಉಂಟಾಗುವ ಸಮಸ್ಯೆ ಎಂದು ಗುರುತಿಸಲಾಗಿರುವುದು. ಜೊತೆಗೆ ಗರ್ಭ ನಿರೋಧಕ ಮಾತ್ರೆಗಳು ಸಹ ಈ ಸಮಸ್ಯೆಯನ್ನು ಉಂಟು ಮಾಡುತ್ತವೆ ಎಂಬುದನ್ನು ನಾವು ಮರೆಯಬಾರದು.

2. ಗರ್ಭಕೋಶದಲ್ಲಿ ಗಡ್ಡೆ ಉಂಟಾದರೆ

2. ಗರ್ಭಕೋಶದಲ್ಲಿ ಗಡ್ಡೆ ಉಂಟಾದರೆ

ಸಾಮಾನ್ಯವಾಗಿ 30 ಅಥವಾ 40 ವರ್ಷಕ್ಕೆ ಕಂಡು ಬರುವ, ಗರ್ಭಾಶಯದಲ್ಲಿ ಉಂಟಾಗುವ ಫೈಬ್ರಾಯ್ಡ್ ಗಡ್ಡೆಯು (ಟ್ಯೂಮರ್) ಸಹ ಈ ಸಮಸ್ಯೆಗೆ ಕಾರಣವಾಗಿರುತ್ತದೆ. ಈ ಗಡ್ಡೆಯು ಅಂತಹ ಅಪಾಯಕಾರಿ ಗಡ್ಡೆಯಲ್ಲ. ಆದರೂ ಈ ರಕ್ತಸ್ರಾವಕ್ಕೆ ಇದೇ ಕಾರಣ ಎಂದು ಸಾಭೀತಾದರೆ ಶಸ್ತ್ರ ಚಿಕಿತ್ಸೆ ಮೂಲಕ ಇದನ್ನು ಸರಿಪಡಿಸಬಹುದು. ಈ ಫೈಬ್ರಾಯ್ಡ್ ಗಡ್ಡೆಗಳನ್ನು ತೆಗೆದುಹಾಕಲು ಮೈಯೊಮೆಕ್ಟೋಮಿ, ಎಂಡೊಮೆಟ್ರಿಯಲ್ ಅಬ್ಲಷನ್, ಯುಟೆರಿನ್ ಅರ್ಟೆರಿ ಎಂಬಲೈಜೆಷನ್ ಮತ್ತು ಯುಟೆರಿನ್ ಬಲೂನ್ ಥೆರಪಿ ಹಾಗು ಹೈಸ್ಟೆರೆಕ್ಟೊಮಿಯಂತಹ ಹಲವಾರು ಚಿಕಿತ್ಸೆಗಳು ಲಭ್ಯವಿವೆ. ಋತು ಚಕ್ರದ ಅವಧಿ ಪೂರ್ಣಗೊಂಡ ನಂತರ ಈ ಗಡ್ಡೆಗಳು ಕುಗ್ಗಿ ಹೋಗಿ, ಯಾವುದೇ ಚಿಕಿತ್ಸೆ ಬೇಕಿಲ್ಲದೆ ಕಣ್ಮರೆಯಾಗಿ ಹೋಗುತ್ತವೆ.

3. ಸರ್ವಿಕಲ್ ಪಾಲಿಪ್ಸ್

3. ಸರ್ವಿಕಲ್ ಪಾಲಿಪ್ಸ್

ಪಾಲಿಪ್ಸ್ ಎಂಬುದು ಸರ್ವಿಕ್ಸಿನ ಬಾಯಿಯಲ್ಲಿ ಇರುವ ಎಂಡೊಸರ್ವಿಕಲ್ ಕ್ಯನಲ್ ಮತ್ತು ಪ್ರೊಟ್ರುಡ್ ಅಥವಾ ಸರ್ವಿಕಲ್ ಮ್ಯುಕೋಸದ ಮೇಲೆ ಬೆಳೆಯುವ ಒಂದು ಸಣ್ಣ ಪದರವಾಗಿದೆ. ಇದು ಉಂಟಾಗಲು ಕಾರಣ ಇದುವರೆಗು ಪತ್ತೆಯಾಗಿಲ್ಲ. ಆದರೆ ತಙ್ಞರ ಪ್ರಕಾರ ಸರ್ವಿಕ್ಸಿನಲ್ಲಿನ ರಕ್ತ ನಾಳಗಳಲ್ಲಿ ಉಂಟಾಗುವ ಅಡೆತಡೆಗಳು ಅಥವಾ ಎಸ್ಟ್ರೊಜೆನ್‍ಗಳ ಮಿತಿ ಮೀರಿದ ಮಟ್ಟದಿಂದ ಉಂಟಾಗುವ ಅಸಾಮಾನ್ಯ ಪ್ರತಿಕ್ರಿಯೆಯಿಂದಾಗುವ ಇನ್‍ಫೆಕ್ಷನ್ ಸರ್ವಿಕಲ್ ಪಾಲಿಪ್ಸ್ ಗೆ ಕಾರಣವಾಗುತ್ತದೆ. 20 ವರ್ಷ ವಯಸ್ಸಿನ ಸ್ತ್ರೀಯರು ಮತ್ತು ತಾಯಂದಿರಲ್ಲಿ ಈ ಸಮಸ್ಯೆ ವ್ಯಾಪಕವಾಗಿ ಕಂಡು ಬರುತ್ತದೆ. ಹಾಗೆಂದು ಇದಕ್ಕೆ ಹೆದರುವ ಅವಶ್ಯಕತೆ ಇಲ್ಲ. ಸಮಯಕ್ಕೆ ಸರಿಯಾಗಿ ಇದನ್ನು ವೈದ್ಯರ ಬಳಿ ತೋರಿಸಿದರೆ ಕೇವಲ ಹೊರ ರೋಗಿ ವಿಭಾಗದಲ್ಲಿ ನಿಮ್ಮ ಸಮಸ್ಯೆಗೆ ಪರಿಹಾರ ಮತ್ತು ಚಿಕಿತ್ಸೆ ಎರಡು ದೊರೆಯುತ್ತವೆ.

4. ಎಂಡೊಮೆಟ್ರಿಯಲ್ ಪಾಲಿಪ್ಸ್

4. ಎಂಡೊಮೆಟ್ರಿಯಲ್ ಪಾಲಿಪ್ಸ್

ಇದು ಗರ್ಭಾಶಯದ ಹೊರಭಾಗದಲ್ಲಿ ಬೆಳೆದು, ಅಲ್ಲಿಯೇ ನಿಲ್ಲುತ್ತದೆ. ಹಾಗೆಂದು ಇದೇನು ಕ್ಯಾನ್ಸರ್ ಕಾರಕವಲ್ಲ. ಇದು ಉಂಟಾಗಲು ಸಹ ಇರುವ ಕಾರಣದ ಮೂಲ ಇನ್ನು ಪತ್ತೆಯಾಗಿಲ್ಲ. ಆದರೆ ಇದುವರೆಗು ತಿಳಿದಿರುವ ಮಾಹಿತಿಯ ಪ್ರಕಾರ ಗರ್ಭಾಶಯದಲ್ಲಿ ಉಂಟಾಗುವ ಕೆಲ ಬಗೆಯ ಗಡ್ಡೆಗಳು ಅಥವಾ ಎಸ್ಟ್ರೊಜೆನ್‍ನ ಅಧಿಕ ಪ್ರಮಾಣದಿಂದಾಗಿ ಈ ಸಮಸ್ಯೆ ಕಂಡು ಬರುತ್ತದೆ.

5. ಲುಪುಸ್ ಡಿಸೀಸ್

5. ಲುಪುಸ್ ಡಿಸೀಸ್

ಲುಪುಸ್ ಎಂಬುದು ದೇಹದ ವಿವಿಧ ಅಂಗಗಳಲ್ಲಿ ಕಂಡು ಬರುವ ತೀವ್ರತರವಾದ ಉರಿಬಾವು ಆಗಿದೆ. ವಿಶೇಷವಾಗಿ ಇದು ಚರ್ಮ, ಸಂಧಿಗಳು, ರಕ್ತ, ಮೂತ್ರ ಪಿಂಡ ಮತ್ತು ರೋಗ ನಿರೋಧಕ ಶಕ್ತಿ ನೀಡುವ ಭಾಗಗಳಿಗೆ ಇದು ದುಷ್ಪರಿಣಾಮ ಬೀರುತ್ತದೆ. ಲುಪುಸ್ ಎಂಬುದು ಒಂದು ಅನುವಂಶೀಯ ವಂಶವಾಹಿಗಳ ಪೂರ್ವ ಹಂಚಿಕೆಯಿಂದ ಉಂಟಾಗುವ ಕಾಯಿಲೆಯಾಗಿದೆ. ವಿಜ್ಞಾನಿಗಳ ಪ್ರಕಾರ ಪರಿಸರದ ಅಂಶಗಳು, ಇನ್‍ಫೆಕ್ಷನ್, ಅಂಟಿ ಬಯೋಟಿಕ್, ಯು . ವಿ. ಕಿರಣಗಳು, ಅಧಿಕ ಒತ್ತಡ, ಹಾರ್ಮೋನ್ ಮತ್ತು ಔಷಧಿಗಳ ಅಡ್ಡ ಪರಿಣಾಮವು ಲುಪುಸ್‍ ಉಂಟಾಗಲು ಕಾರಣವಾಗುತ್ತವೆ.

6. ಪೆಲ್ವಿಕ್ ಇನ್‍ಫ್ಲೆಮ್ಮಟರಿ ಡಿಸೀಸ್

6. ಪೆಲ್ವಿಕ್ ಇನ್‍ಫ್ಲೆಮ್ಮಟರಿ ಡಿಸೀಸ್

ಪೆಲ್ವಿಕ್ ಇನ್‍ಫ್ಲೆಮ್ಮಟರಿ ಡಿಸೀಸ್ ( ಪಿ ಐ ಡಿ) ಎಂಬುದು ಗರ್ಭಾಶಯ, ಗರ್ಭನಾಳ ಮತ್ತು ಸರ್ವಿಕ್ಸ್ ಮುಂತಾಹ ಅಂಗಗಳ ಮೇಲೆ ಉಂಟಾಗುವ ಇನ್‍ಫೆಕ್ಷನ್ ಆಗಿದೆ. ಪಿಐಡಿಯು ಮುಖ್ಯವಾಗಿ ಲೈಂಗಿಕ ಗುಪ್ತ ರೋಗದಿಂದ ಉಂಟಾಗುವ ಇನ್‍ಫೆಕ್ಷನ್‍ನಿಂದ ಉಂಟಾಗುತ್ತದೆ. ಪಿ ಆರ್ ಪಿ ಚಿಕಿತ್ಸೆಯನ್ನು ಇದಕ್ಕೆ ಸೂಚಿಸಲಾಗುತ್ತದೆ. ಇದೊಂದು anti ಬಯೋಟೀಕ್ ಥೆರಪಿಯಾಗಿರುತ್ತದೆ.

7. ಸರ್ವಿಕಲ್ ಕ್ಯಾನ್ಸರ್

7. ಸರ್ವಿಕಲ್ ಕ್ಯಾನ್ಸರ್

ಈ ಕ್ಯಾನ್ಸರ್ ಸರ್ವಿಕ್ಸ್ ನಲ್ಲಿರುವ ಜೀವಕೋಶಗಳು ಅಸಾಮಾನ್ಯವಾಗಿ ವರ್ತಿಸಿ, ನಿಯಂತ್ರಣವನ್ನು ತಪ್ಪಿಸಿಕೊಂಡು, ದೇಹದ ಆರೋಗ್ಯವನ್ನು ಆಳು ಮಾಡುವುದರಿಂದಾಗಿ ಸಂಭವಿಸುತ್ತದೆ. ಶೇ 90%ರಷ್ಟು ಸರ್ವಿಕಲ್ ಕ್ಯಾನ್ಸರ್ ಮಾನವನ ಪಾಪಿಲ್ಲೊಮವರಿಯಸ್‍ನಿಂದಾಗಿ ಸಂಭವಿಸುತ್ತದೆ. ಶಸ್ತ್ರ ಚಿಕಿತ್ಸೆ, ಕಿಮೋ ಥೆರಪಿ ಮತ್ತು ರೇಡಿಯೇಷನ್ ಥೆರಪಿಯ ಮೂಲಕ ಇದಕ್ಕೆ ಚಿಕಿತ್ಸೆ ನೀಡಬಹುದು.

8. ಎಂಡೊಮೆಟ್ರಿಯಲ್ ಕ್ಯಾನ್ಸರ್

8. ಎಂಡೊಮೆಟ್ರಿಯಲ್ ಕ್ಯಾನ್ಸರ್

ಸಾಮಾನ್ಯವಾಗಿ 50 ವರ್ಷ ದಾಟಿದ ಹೆಂಗಸರಲ್ಲಿ ಎಂಡೊಮೆಟ್ರಿಯಲ್ ಕ್ಯಾನ್ಸರ್ ಕಂಡು ಬರುತ್ತದೆ. ಇದು ಎಂಡೊಮೆಟ್ರಿಯಲ್ ಹೈಪರ್ ಲಸಿಯ ಅಥವಾ ನಿಯಮಿತವಾಗಿ ಹಾರ್ಮೋನ್ ರಿಪ್ಲೇಸ್‍ಮೆಂಟ್ ಥೆರಪಿಗೆ ಒಳಗಾಗುವುದರಿಂದಾಗಿ ಬರುತ್ತದೆ. ಇದಕ್ಕೆ ಇರುವ ಪ್ರಥಮ ಚಿಕಿತ್ಸೆಯೆಂದರೆ ಗರ್ಭಾಶಯವನ್ನು ತೆಗೆದು ಹಾಕುವುದು ( ಹೈಸ್ಟೆಕ್ಟೊಮಿ), ಬಹುಶಃ ಇದಾದ ನಂತರ ಕಿಮೊಥೆರಪಿ ಅಥವಾ ರೇಡಿಯೇಷನ್ ಚಿಕಿತ್ಸೆ ಸಹ ಬೇಕಾಗಬಹುದು.

9. ಇಂಟ್ರಯುಟೆರೈನ್ ಗರ್ಭನಿರೋಧಕಗಳು ( ಐಯುಡಿಗಳು)

9. ಇಂಟ್ರಯುಟೆರೈನ್ ಗರ್ಭನಿರೋಧಕಗಳು ( ಐಯುಡಿಗಳು)

ಐಯುಡಿ ಬಳಸುವ ಮಹಿಳೆಯರಲ್ಲಿ ಋತು ಚಕ್ರದ ಸಂದರ್ಭದಲ್ಲಿ ರಕ್ತಸ್ರಾವವಾಗುವ ಅಪಾಯವಿರುತ್ತದೆ. ಒಂದೊಮ್ಮೆ ರಕ್ತಸ್ರಾವವಾದರೆ ತತ್‍ಕ್ಷಣ ನಿಮ್ಮ ಐಯುಡಿ ಗರ್ಭನಿರೋಧಕವನ್ನು ಬದಲಿಸಿ. ನಿಮಗೆ ಸರಿಹೊಂದುವಂತಹ ಗರ್ಭನಿರೋಧಕವನ್ನು ಅಳವಡಿಸಿಕೊಳ್ಳಿ.

10. ರಕ್ತ ಸ್ರಾವದ ಸಮಸ್ಯೆ ( ಡಿಸಾರ್ಡರ್)

10. ರಕ್ತ ಸ್ರಾವದ ಸಮಸ್ಯೆ ( ಡಿಸಾರ್ಡರ್)

ರಕ್ತಸ್ರಾವದ ಡಿಸಾರ್ಡರ್ ಇದ್ದರೆ, ಋತು ಚಕ್ರದ ಅವಧಿಯಲ್ಲಿ ರಕ್ತ ಸ್ವಾಭಾವಿಕವಾಗಿ ಹೆಪ್ಪುಗಟ್ಟಲು ತೊಂದರೆಯಾಗಿ, ಅಧಿಕ ರಕ್ತ ಸ್ರಾವವಾಗುತ್ತದೆ. ರಾಷ್ಟ್ರೀಯ ಹೃದಯ, ಶ್ವಾಸಕೋಶ ಮತ್ತು ರಕ್ತ ಸಂಸ್ಥೆಯವರು ಈ ಸಮಸ್ಯೆಯನ್ನು ವೊನ್ ವಿಲ್ಲೆಬ್ರಾಂಡ್ ಕಾಯಿಲೆಯೆಂದು ವ್ಯಾಖ್ಯಾನಿಸಿದೆ. ಈ ಕಾಯಿಲೆಯಿರುವವರಲ್ಲಿ ರಕ್ತದ ಕಿರುತಟ್ಟೆಗಳು ಕಡಿಮೆಯಿದ್ದು, ರಕ್ತ ಹೆಪ್ಪುಗಟ್ಟಲು ನಿಶ್ಶಕ್ತವಾಗುತ್ತದೆ. ಇದರೊಂದಿಗೆ ರಕ್ತವನ್ನು ತೆಳುವಾಗಿಸಲು ಔಷಧಿಯನ್ನು ತೆಗೆದುಕೊಳ್ಳುತ್ತಿರುವ ಹೆಂಗಸರಲ್ಲಿ ಸಹ ಋತುಚಕ್ರದ ಅವಧಿಯಲ್ಲಿ ಅಧಿಕ ರಕ್ತ ಸ್ರಾವವಾಗುತ್ತದೆ.

English summary

Reasons for Heavy Menstrual Bleeding

A person diagnosed with menorrhagia (heavy menstrual bleeding), if during the period, must often mangganti pads more than 1-2 hours once, or if the whole week we had a lot of bleeding.
X
Desktop Bottom Promotion