For Quick Alerts
ALLOW NOTIFICATIONS  
For Daily Alerts

ರಕ್ತಹೀನತೆ ಸಮಸ್ಯೆ ಬೀಟ್ರೂಟ್ ನಿಂದ ದೂರ

By ಪೂರ್ಣಿ
|

ಬೀಟ್ ರೂಟ್ ಒಂದು ಅದ್ಭುತ ಗುಣಗಳಿರುವ ಆಹಾರವಾಗಿದೆ. ರಕ್ತಹೀನತೆಯ ವಿಷಯ ಬಂದಾಗಲಂತೂ ಬೀಟ್ರೂಟ್ ಒಂದು ತರಕಾರಿಯ ಹಾಗೆ ಮಾತ್ರವಲ್ಲದೇ ಔಷಧಿಯಾಗಿಯೇ ಬಳಸಲಾಗುತ್ತದೆ. ರೋಮನ್ನರು ಇದನ್ನು ತಮ್ಮ ಲೈಂಗಿಕ ಶಕ್ತಿಯನ್ನು ವೃದ್ಧಿಸಲು ಬಳಸಿದ್ದರೆ ಭಾರತೀಯರು ರಕ್ತಹೀನತೆ ಮತ್ತು ಬಲಹೀನತೆಯಂತಹ ಸಮಸ್ಯೆಗಳನ್ನು ಹೋಗಲಾಡಿಸಲು ಬಳಸುತ್ತೇವೆ. ಅಂತೂ ಬೀಟ್ರೂಟ್ ವಿವಿಧ ಉಪಯೋಗಗಳನ್ನಂತೂ ಹೊಂದಿರುವುದು ನಿಜ,

ಸಾಮಾನ್ಯವಾಗಿ, ಜನರಲ್ಲಿ ಕೇಳಿದಾಗ ಬೀಟ್ರೂಟ್ ಯಾರೂ ಇಷ್ಟಪಡುವುದಿಲ್ಲ ಹಾಗೆಂದ ಮಾತ್ರಕ್ಕೆ ದ್ವೇಷಿಸುವುದೂ ಇಲ್ಲ. ನಾನು ಸಣ್ಣವನಿದ್ದಾಗ ಮೊದಲ ಬಾರಿಗೆ ಬೀಟ್ ತಿಂದದ್ದು ನನಗೆ ಇನ್ನೂ ನೆನಪಿನಲ್ಲಿದೆ. ಒಂದು ಬಾರಿ ತಿಂದ ಬಳಿಕ ಅವು ಪ್ರತಿ ದಿನವೂ ಅಗತ್ಯವಾಗಿ ಕಾಣಲಾರಂಭಿಸಿದವು. ಅವು ರುಚಿಕರ ಜೊತೆಗೆ ಆರೋಗ್ಯಕ್ಕೂ ಬಹಳವೇ ನೆರವು ನೀಡುತ್ತವೆ ಹಾಗಾಗಿ ಬೀಟ್ ಯಾಕೆ ತಿನ್ನಬೇಕು ಎನ್ನಲು ನಾಲ್ಕಾರು ಕಾರಣಗಳನ್ನು ಇಲ್ಲಿ ನೀಡುವುದು ಸೂಕ್ತ.

Reasons to Eat More Beets

ರಕ್ತದೊತ್ತಡ ನಿಯಂತ್ರಣದಲ್ಲಿಡಲು ಸಹಾಯಕ: ಬೀಟ್ರೂಟ್ ನಲ್ಲಿ ನೈಟ್ರೇಟ್ ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ಇದನ್ನು ಸೇವಿಸಿದಾಗ ನೈಟ್ರೈಟ್ ಗಳು ಮತ್ತು ನೈಟ್ರಿಕ್ ಆಕ್ಸೈಡ್ ಗಳಾಗಿ ವಿಂಗಡನೆಯಾಗುತ್ತವೆ. ಇವು ನಮ್ಮ ಅಪಧಮನಿಗಳನ್ನು ಹಿಗ್ಗಿಸಲು ಜೊತೆಗೆ ನಮ್ಮ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಸಹಕಾರಿ. ಸಂಶೋಧನೆಗಳನು ಹೇಳುವ ಪ್ರಕಾರ ದಿನಕ್ಕೆ 500 ಗ್ರಾಂ ಬೀಟ್ರೂಟ್ ಸೇವಿಸಿದರೆ ಮನುಷ್ಯನ ರಕ್ತದೊತ್ತಡವನ್ನು ಆರು ಗಂಟೆಗಳಷ್ಟು ಕಾಲ ಕಡಿಮೆ ಮಾಡುತ್ತವೆ. ಇದರ ಇನ್ನೊಂದು ಉಪಯೋಗ ಇದರ ಸೇವನೆಯ ಮೇಲೆ ಹೆಚ್ಚು ರಕ್ತದೊತ್ತಡ ಇದ್ದಷ್ಟು ಹೆಚ್ಚು ವೇಗವಾಗಿ ರಕ್ತದೊತ್ತಡ ಕಡಿಮೆಯಾಗುತ್ತದೆ.

ಪ್ಲೇಕ್ ರಚನೆಯನ್ನು ತಡೆಯುತ್ತದೆ ಮತ್ತು ಅನುಪಯುಕ್ತ ಕಾಲೆಸ್ಟ್ರಾಲ್ ಪ್ರಮಾಣವನ್ನು ನಿಯಂತ್ರಣದಲ್ಲಿಡುತ್ತದೆ: ಕರಗುವ ನಾರು ಪದಾರ್ಥಗಳು, ಪ್ಲವೊನೈಡ್ ಗಳು ಮತ್ತು ಬೆಟಾಸಿಯಾನಿನ್ ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುವು ಬೀಟ್ರೂಟ್ ನ ಮತ್ತೊಂದು ಹೆಗ್ಗಳಿಕೆ. ಇದರಲ್ಲಿನ ಬೆಟಾಸಿಯಾನಿನ್ ಇದಕ್ಕೆ ನೇರಳೆ ಮಿಶ್ರಿತ ಕೆಂಪು ಬಣ್ಣವನ್ನು ನೀಡಿದೆ ಹಾಗೂ ಆಂಟಿ ಆಕ್ಸಿಡೆಂಟ್ ಆಗಿದೆ, ಇದು ಎಲ್.ಡಿ.ಏಲ್ ಕೊಲೆಸ್ಟ್ರಾಲಿನ ಆಕ್ಸಿಡೇಷನ್ ಅನ್ನು ಕಡಿಮೆ ಮಾಡುತ್ತದೆ ಹಾಗೂ ಇದು ನಮ್ಮ ಅಪಧಮನಿಗಳ ಮೇಲೆ ಶೇಖರಣೆ ಆಗುವುದನ್ನೂ ತಡೆಗಟ್ಟುತ್ತದೆ, ಇದು ಹೃದಯಾಘಾತದ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ ಹಾಗೂ ಔಷಧಿಗಳ ಅಗತ್ಯವನ್ನೂ ಕಡಿಮೆ ಮಾಡುತ್ತದೆ,

ಗರ್ಭಿಣಿಯರಿಗೆ ಬಹಳ ಸೂಕ್ತ ತರಕಾರಿ: ಇದು ಬಹಳ ಹೆಚ್ಚಿನ ಪ್ರಮಾಣದ ಫಾಲಿಕ್ ಆಸಿಡ್ ಅನ್ನು ಹೊಂದಿರುತ್ತದೆ, ಇದು ಗರ್ಭಿಣಿಯರಿಗೆ ಮತ್ತು ಮಗುವಿಗೆ ಬಹಳ ಅಗತ್ಯ. ಇದು ಗರ್ಭದಲ್ಲಿರುವ ಮಗುವಿನ ಬೆನ್ನುಮೂಳೆಯ ಸಮರ್ಪಕ ಬೆಳವಣಿಗೆಗೆ ಬಹಳ ಅಗತ್ಯ. ಹಾಗೂ ಇದು ಗರ್ಭದಲ್ಲಿರುವ ಮಗು ಸ್ಪೈನಾ ಬಿಫಿಡಾ (ಬೆನ್ನುಮೂಳೆ ಸರಿಯಾಗಿ ಬೆಳೆಯದೇ ಹೆಚ್ಚಿನ ಸಂದರ್ಭಗಳಲ್ಲಿ ಕೆಳಭಾಗದಲ್ಲು ಎರಡು ಭಾಗಗಳಾಗಿ ಕವಲೊಡೆಯುವ ಅನಾರೋಗ್ಯತೆ). ಇದು ಮಹಿಳೆಯರಿಗೆ ಪ್ರಸವದ ಸಂದರ್ಭದಲ್ಲಿ ಹೆಚ್ಚಿನ ಶಕ್ತಿಯನ್ನೂ ನೀಡುತ್ತದೆ.

ಓಸ್ಟೆಪೊರೊಸಿಸ್ ವಿರುದ್ಧ ಉಪಯೋಗಕಾರಿ: ಇದರಲ್ಲಿ ಹೆಚ್ಚಿನ ಪ್ರಮಾಣದ ಖನಿಜ ಸಿಲಿಕಾ ಇರುತ್ತದೆ. ಇದು ಕ್ಯಾಲಿಸಿಯಂ ಅನ್ನು ದೇಹದ ಭಾಗಗಳು ಪ್ರಭಾವಶಾಲಿಯಾಗಿ ಬಳಸಲು ನೆರವು ನೀಡುತ್ತದೆ. ನಮ್ಮ ಮೂಳೆ ಮತ್ತು ಹಲ್ಲುಗಳು ಕ್ಯಾಲ್ಸಿಯಂ ನಿಂದಲೇ ಆಗಿರುವ ಕಾರಣ ದಿನಕ್ಕೆ ಒಂದು ಕಪ್ ಬೀಟ್ರೂಟ್ ಜ್ಯೂಸ್ ಸೇವಿಸಿದರೆ ಓಸ್ಟ್ರೋಪೋಸಿಸ್ ಹಾಗೂ ಸುಲಭವಾಗಿ ಮೂಳೆ ಮುರಿತಕ್ಕೆ ಒಳಗಾಗುವ ಸಾಧ್ಯತೆಗಳನ್ನು ದೂರವಿರಿಸುತ್ತದೆ.

ಮಧುಮೇಹ ನಿಯಂತ್ರಕ: ಸ್ವಲ್ಪ ಬೀಟ್ರೂಟ್ ಸೇವಿಸುವ ಮೂಲ ನಮ್ಮ ಸಿಹಿ ತಿನ್ನುವ ಆಸೆಯನ್ನು ಪೂರೈಸುವುದು ಬಹಳ ಫಲಕಾರಿಯಾಗಿದೆ. ಇದರಲ್ಲಿ ಸಕ್ಕರೆಯ ಅಂಶ ಇದೆ, ಹೆಚ್ಚಿನ ಫ್ಯಾಟ್ ಇಲ್ಲ, ಕಡಿಮೆ ಕ್ಯಾಲೋರಿಗಳಿವೆ ಹಾಗೂ ಸಾಮಾನ್ಯ ಗ್ಲೈಸಾಮೆನ್ ಇಂಡೆಕ್ಸ್ ಇದೆ. ಇದು ವೈದ್ಯರು ಹೇಳಿ ಮಾಡಿಸಿದ ಆಹಾರದಂತೆಯೇ ಇದೆ. ಸಾಮಾನ್ಯ ಗ್ಲೈಸಾಮಿನ್ ಅಂಶ ಇದೆ ಎನ್ನು ಅರ್ಥ ಇದು ಬಹಳ ನಿಧಾನ ಗತಿಯಲ್ಲಿ ನಿಮ್ಮ ದೇಹಕ್ಕೆ ಸಕ್ಕರೆಯ ಅಂಶವನ್ನು ಬಿಡುಗಡೆ ಮಾಡುತ್ತದೆ. ಇದು ಸಕ್ಕರೆಯ ಅಂಶವನ್ನೂ ನಿಯಂತ್ರಣದಲ್ಲಿಡುತ್ತದೆ ಹಾಗೂ ದೇಹದ ಸಕ್ಕರೆಯ ಅಗತ್ಯವನ್ನೂ ಪೂರೈಸುತ್ತದೆ.

ರಕ್ತಹೀನತೆಯನ್ನು ತಡೆಯುತ್ತದೆ; ಬೀಟ್ರೂಟ್ ನೋಡಲು ನೇರಳೆ ಮಿಶ್ರಿತ ಕೆಂಪು ಬಣ್ಣದಲ್ಲಿರುವುದರಿಂದ ಇದು ನಮ್ಮ ದೇಹದಲ್ಲಿ ಕಡಿಮೆಯಾದ ರಕ್ತದ ಅಂಶವನ್ನು ಮರಳಿ ಒದಗಿಸಲು ನೆರವಾಗುತ್ತದೆ ಎಂಬುದು ಎಲ್ಲರ ಸಾಮಾನ್ಯ ನಂಬಿಕೆಯಾಗಿದೆ. ಆದರೆ ಈ ನಂಬಿಕೆಯಲ್ಲಿ ಅರ್ಧ ಸತ್ಯವೂ ಇದೆ. ಬೀಟ್ರೂಟ್ ನಲ್ಲಿ ಕಬ್ಬಿಣದ ಅಂಶ ಸಾಕಷ್ಟು ಪ್ರಮಾಣದಲ್ಲಿರುತ್ತದೆ. ಇದು ಹಿಮೋಗ್ಲೋಬಿನ್ ರಚನೆಗೆ ಸಹಕಾರಿ ಇದು ನಮ್ಮ ರಕ್ತದ ಒಂದು ಭಾಗವಾಗಿದ್ದು ಇದು ಆಮ್ಲಜನಕ ಮತ್ತು ಪೋಷಕಾಂಶಗಳನ್ನು ದೇಹದ ವಿವಿಧ ಭಾಗಳಿಗೆ ತಲುಪಿಸಲು ಸಹಕಾರಿ. ಆದ್ದರಿಂದ ರಕ್ತಹೀನತೆ ತಡೆಯುವುದೇನೋ ನಿಜ ಆದರೆ ಇದು ಇದರ ಬಣ್ಣದಿಂದಾಗಿ ಅಲ್ಲ ಬದಲಾಗಿ ಇದರಲ್ಲಿರುವ ಕಬ್ಬಿಣದ ಅಂಶದಿಂದಾಗಿ.

ದೌರ್ಬಲ್ಯ ನಿವಾರಣೆಗೆ ಸಹಕಾರಿ: ಅಮೇರಿಕಾದಲ್ಲಿ ನಡೆದ ಡಯಾಬಿಟಿಸ್ ಕಾನ್ಫರೆನ್ಸ್ ನಲ್ಲಿ ಮಂಡಿಸಲಾದ ಸಂಶೋಧನೆಯ ಪರಿಣಾಮದ ಪ್ರಕಾರ ಬೀಟ್ರೂಟ್ ಮನುಷ್ಯನ ದೈಹಿಕ ಕ್ಷಮತೆಯನ್ನು ಹೆಚ್ಚಿಸುತ್ತದೆ. ಅವರ ಪ್ರಕಾರ ಇದರಲ್ಲಿನ ನೈಟ್ರೇಟ್ ಅಂಶ ನಮ್ಮ ಅಪಧಮನಿಗಳನ್ನು ಹಿಗ್ಗಿಸುತ್ತದೆ ಹಾಗೂ ಇದು ನಮ್ಮ ದೇಹದ ಎಲ್ಲಾ ಭಾಗಗಳಿಗೆ ರಕ್ತವನ್ನು ಸಂಚರಿಸಲು ಉಪಯುಕ್ತವಾಗಿದೆ. ಇದು ನಮ್ಮಲ್ಲಿ ಶಕ್ತಿ ವರ್ಧನೆಗೆ ಸಹಕಾರಿ. ಇನ್ನೊಂದು ವಾದದ ಪ್ರಕಾರ ಇದರಲ್ಲಿ ಕಬ್ಬಿಣದ ಅಂಶ ಹೆಚ್ಚಿನ ಪ್ರಮಾಣದಲ್ಲಿದೆ ಹಾಗಾಗಿ ಮನುಷ್ಯನ ಶಕ್ತಿಯನ್ನು ವೃದ್ಧಿಸುತ್ತದೆ ಎಂಬುದಾಗಿದೆ. ಆದರೆ ದಣಿದ ದಿನ ಬೀಟ್ ಸೇವನೆ ಶಕ್ತಿಯನ್ನು ಮರಳಿ ಪಡೆಯಲು ಸಹಕಾರಿಯಾಗುವುದಂತೂ ಸುಳ್ಳಲ್ಲ.

ಲೈಂಗಿಕ ಆರೋಗ್ಯ ಮತ್ತು ಬಲವನ್ನು ಹೆಚ್ಚಿಸುತ್ತದೆ: ಹಾಗೆಯೇ 'ನೈಸರ್ಗಿಕ ವಯಾಗ್ರ' ಎಂದು ಕರೆಯಲಾಗುವ ಬೀಟ್ರೂಟ್ ಸಾಮಾನ್ಯವಾಗಿ ಲೈಂಗಿಕ ಆರೋಗ್ಯ ಹೆಚ್ಚಿಸಲು ಪುರಾತನ ಕಾಲದಿಂದಲೂ ಬಳಸಲ್ಪಡುತ್ತಿದೆ. ಈ ತರಕಾರಿ ನೈಟ್ರೇಟ್ ನ ಸಮೃದ್ಧ ಮೂಲವಾಗಿದೆ. ದೇಹಕ್ಕೆ ನೈಟ್ರಿಕ್ ಆಕ್ಸೈಡ್ ಬಿಡುಗಡೆ ಮಾಡಲು ಸಹಾಯ ಮಾಡುವುದರ ಮೂಲಕ, ರಕ್ತನಾಳಗಳು ಮತ್ತು ಜನನಾಂಗಗಳಲ್ಲಿ ರಕ್ತದ ಹರಿವನ್ನು ವಿಸ್ತರಣೆ ಮಾಡುತ್ತದೆ. ವೈದ್ಯಕೀಯ ಕ್ಷೇತ್ರದಲ್ಲಿ ಈಗೀಗ ಪ್ರಮುಖ ವಯಾಗ್ರ ಉತ್ಪಾದಕವಾಗಿಯೂ ಇದನ್ನು ಬಳಸಲಾಗುತ್ತದೆ. ಮಾನವ ಲೈಂಗಿಕ ಹಾರ್ಮೋನುಗಳ ಉತ್ಪಾದನೆಯಲ್ಲಿ ಅಗತ್ಯವಾದ ಪ್ರಮುಖ ರಾಸಾಯನಿಕ ಸಂಯುಕ್ತವಾದ ಬೊರೊನ್ ನ್ನು ಬೀಟ್ರೂಟ್ ಬಹಳಷ್ಟು ಪ್ರಮಾಣದಲ್ಲಿ ಹೊಂದಿರುತ್ತದೆ. ಆದ್ದರಿಂದ ಬೇರೆ ಯಾವುದೇ ಮಾತ್ರೆಗಳ ಬದಲಿಗೆ ಇನ್ನುಮುಂದೆ ಆಗಾಗ ಬೀಟ್ರೂಟ್ ರಸವನ್ನೇ ಸೇವಿಸಿ!

ಕ್ಯಾನ್ಸರ್ ನಿಂದ ರಕ್ಷಣೆ: ಬೀಟ್ರೂಟ್ ನಲ್ಲಿರುವ betacyanin (ಬೀಟಾಸೈನಿನ್) ಇನ್ನೊಂದು ಅತ್ಯಂತ ಪ್ರಮುಖ ಕಾರ್ಯವನ್ನು ನಿರ್ವಹಿಸುತ್ತದೆ. ವಾಷಿಂಗ್ಟನ್ ನ, ಹೊವರ್ಡ್ ವಿಶ್ವವಿದ್ಯಾಲಯದಲ್ಲಿ ನಡೆಸಿದ ಒಂದು ಅಧ್ಯಯನದ ಪ್ರಕಾರ ಬೀಟಾಸೈನಿನ್/ betacyanin ಸ್ತನ ಮತ್ತು ಪ್ರೊಸ್ಟ್ರೇಟ್ ಕ್ಯಾನ್ಸರ್ ರೋಗಿಗಳಲ್ಲಿ, ಕ್ಯಾನ್ಸರ್ ಗ್ರಂಥಿಯಯನ್ನು 12.5 ಶೇಕಡಾದಷ್ಟು ಬೆಳವಣಿಗೆಯನ್ನು ಕಡಿಮೆಗೊಳಿಸುತ್ತದೆ. ಇದು ಕ್ಯಾನ್ಸರ್ ರೋಗನಿರ್ಣಯ ಮತ್ತು ಚಿಕಿತ್ಸೆಗಳನ್ನು ನೀಡುವುದು ಮಾತ್ರವಲ್ಲದೆ ಕ್ಯಾನ್ಸರ್ ನಿಂದ ಬದುಕುಳಿದವರಲ್ಲಿ ಕ್ಯಾನ್ಸರ್ ಮುಂದೆ ಮರುಕಳಿಸದಂತೆಯೂ ಸಹಾಯ ಮಾಡುತ್ತದೆ.

ಮಲಬದ್ಧತೆ ಮತ್ತು ಹೊಟ್ಟೆ ಆರೋಗ್ಯವನ್ನು ಕಾಪಾಡುತ್ತದೆ: ಇದರಲ್ಲಿರುವ ಕರಗಬಲ್ಲ ಫೈಬರ್ ಮಲವಿಸರ್ಜನೆಗೆ ಅತ್ಯಂತ ಸಹಾಯಮಾಡುತ್ತದೆ. ಇದು ಕರುಳಿನ ಶುದ್ಧೀಕರಿಸುವುದು ಮತ್ತು ಕರುಳಿನ ಚಲನೆಗಳನ್ನು ಸುಲಭಗೊಳಿಸಿ ಹೊಟ್ಟೆ ಆರೋಗ್ಯವನ್ನು ಕಾಪಾಡುತ್ತದೆ. (ಇದನ್ನೂ ಓದಿ: ಮಲಬದ್ಧತೆ ನಿವಾರಿಸಲು 10 ಮನೆಯ ಮದ್ದುಗಳು)

ಮೆದುಳಿನ ಶಕ್ತಿ ಹೆಚ್ಚಿಸುತ್ತದೆ ಮತ್ತು ಬುದ್ಧಿಮಾಂದ್ಯತೆಗೆ ಚಿಕಿತ್ಸೆ ನೀಡುತ್ತದೆ: ಯು. ಕೆಯ ಎಕ್ಸೆಟರ್ ವಿಶ್ವವಿದ್ಯಾನಿಲಯದ ನಿರ್ವಹಿಸಿದ ಅಧ್ಯಯನದ ಪ್ರಕಾರ, ಬೀಟ್ರೂಟ್ ರಸ ಕುಡಿಯುವುದರಿಂದ ಅದರಲ್ಲಿರುವ ನೈಟ್ರೇಟ್ ಅಂಶ 16 ಶೇಕಡಾ ವ್ಯಕ್ತಿಯ ಸಾಮರ್ಥ್ಯವನ್ನು ಹೆಚ್ಚಿಸಬಹುದು ಎಂದು ತೋರಿಸಲಾಗಿದೆ. ಜೊತೆಗೆ ಬೀಟ್ರೂಟ್, ಮೆದುಳಿಗೆ ಸರಿಯಾಗಿ ಕಾರ್ಯ ನಿರ್ವಹಿಸಲು ಸಹಾಯ ಮಾಡಿ ಡಿಮೆನ್ಷಿಯಾವನ್ನು ಸೋಲಿಸುತ್ತದೆ. ಇದರಲ್ಲಿನ ನೈಟ್ರೇಟ್, ನೈಟ್ರೈಟ್ ಯಾಗಿ ಪರಿವರ್ತನೆಯಾದಾಗ. ಮೆದುಳಿನ ಕೆಲಸ ಮಾಡುವ, ನರಗಳ ಪ್ರಚೋದನೆಗಳ ಉತ್ತಮ ಸಂವಹನಕ್ಕೆ ಸಹಾಯ ಮಾಡುತ್ತದೆ ಎಂಬುದೂ ಕೂಡ ಸಾಬೀತಾಗಿದೆ.

ಹೀಗೆ ದೇಹದ ಪ್ರತಿಯೊಂದು ಭಾಗಕ್ಕೆ ಅಗತ್ಯವಾದ ಶಕ್ತಿಯನ್ನು ನೀಡುವ ಬೀಟ್ರೂಟ್ ಸದಾ ನಿಮ್ಮ ಅಡುಗೆಯಲ್ಲಿ ಮಿಶ್ರಣವಾಗುವುದು ಅತ್ಯಗತ್ಯ!

Read more about: blood food ರಕ್ತ ಆಹಾರ
English summary

Reasons to Eat More Beets

Whether you already love beetroot, or just haven’t discovered their many marvels, Here are some reasons you should include them into your diet.
X
Desktop Bottom Promotion