For Quick Alerts
ALLOW NOTIFICATIONS  
For Daily Alerts

ನೈಸರ್ಗಿಕವಾದ 10 ನೋವು ನಿವಾರಕ ಔಷಧಿಗಳು

|

ನಮ್ಮ ಸಾಕಷ್ಟು ಆರೋಗ್ಯ ಸಮಸ್ಯೆಗಳಿಗೆ ಮದ್ದು ಪ್ರಕೃತಿಯಲ್ಲಿಯೇ ಇದೆ. ಅವುಗಳನ್ನು ಕಡೆಗಣಿಸಿ ಮೆಡಿಕಲ್ ಡ್ರಗ್ಸ್ ತೆಗೆದುಕೊಳ್ಳುತ್ತೇವೆ. ತಲೆನೋವು, ಜ್ವರ, ನೋವು ಈ ರೀತಿಯ ಸಮಸ್ಯೆ ಕಾಣಿಸಿಕೊಂಡಾಗ ಸ್ವ ಮದ್ದು ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಿದೆ. ಆ ಸಣ್ಣ ಪುಟ್ಟ ಕಾಯಿಲೆಗೆ ಯಾರು ವೈದ್ಯರ ಬಳಿ ಹೋಗುತ್ತಾರೆ? ಮೆಡಿಕಲ್ ಗೆ ಹೋಗಿ ಒಂದು ಮಾತ್ರೆ ತಂದು ಕುಡಿದರೆ ಸಾಕು ಎಂಬ ಉಡಾಫೆ ಮನೋಭಾವ ಕೂಡ ನಮ್ಮಲ್ಲಿ ಇರುತ್ತದೆ. ಆದರೆ ಯಾವುದೇ ಮಾತ್ರೆಯಾಗಿರಲಿ ವೈದ್ಯರ ಸಲಹೆಯಿಲ್ಲದೆ ಕುಡಿಯುವುದು ಒಳ್ಳೆಯದಲ್ಲ.

ನೀವು ಸ್ವ ಚಿಕಿತ್ಸೆ ಮಾಡಬೇಕೆಂದು ಬಯಸುವುದಾದರೆ ಮನೆ ಮದ್ದು ಮಾಡುವುದು ಒಳ್ಳೆಯದು. ಇಲ್ಲಿ ನಾವು ಉತ್ತಮ ನೋವು ನಿವಾರಕ ಔಷಧಿಗಳಾದ, ಯಾವುದೇ ಅಡ್ಡ ಪರಿಣಾಮ ಬೀರದ 10 ಮನೆಮದ್ದನ್ನು ನೀಡಿದ್ದೇವೆ ನೋಡಿ:

 1. ಹಲ್ಲುನೋವಿಗೆ-ಲವಂಗ

1. ಹಲ್ಲುನೋವಿಗೆ-ಲವಂಗ

ಹಲ್ಲು ನೋವು ಉಂಟಾದಾಗ ಲವಮಗ ಕಚ್ಚಿದರೆ ನೋವು ಶಮನವಾಗುವುದು. ವಸಡುಗಳಲ್ಲಿರುವ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಿ, ಹಲ್ಲುಗಳ ಆರೋಗ್ಯವನ್ನು ಹೆಚ್ಚಿಸುತ್ತದೆ.

2. ಮಾಂಸ ಖಂಡಗಳ ನೋವಿಗೆ-ಶುಂಠಿ

2. ಮಾಂಸ ಖಂಡಗಳ ನೋವಿಗೆ-ಶುಂಠಿ

ಸಂಧಿ ಊತ, ಮಾಂಸ ಖಂಡ, ಸ್ನಾಯುಗಳಲ್ಲಿ ನೋವು ಕಂಡು ಬಂದರೆ ಹಸಿ ಶುಂಠಿಯ ರಸ ತೆಗೆದು 1 ಚಮಚ ಕುಡಿದರೆ ಸಾಕು ಕಡಿಮೆಯಾಗುವುದು.

3. ಕಿವಿ ನೋವಿಗೆ- ಬೆಳ್ಳುಳ್ಳಿ

3. ಕಿವಿ ನೋವಿಗೆ- ಬೆಳ್ಳುಳ್ಳಿ

ಕಿವಿ ನೋವು ಕಾಣಿಸಿದರೆ ನೋವು ಸಹಿಸುವುದು ಅಸಾಧ್ಯ. ತಕ್ಷಣದ ಪರಿಹಾರಕ್ಕೆ ಬೆಳ್ಳುಳ್ಳಿಯನ್ನು ಬಳಸಬಹುದು. 2 ಎಸಳು ಬೆಳ್ಳುಳ್ಳಿಯನ್ನು ಜಜ್ಜಿ, 1 ಚಮಚ ಎಣ್ಣೆಯಲ್ಲಿ ಹಾಕಿ ಕುದಿಸಿ. ಎಣ್ಣೆ ಆರಿದ ನಂತರ ಕಿವಿಗೆ ಎಣ್ಣೆ ಬಿಡಿ. ಈ ರೀತಿ ಬೆಳಗ್ಗೆ - ರಾತ್ರಿಯಂತೆ 5 ದಿನ ಕಿವಿಗೆ ಎಣ್ಣೆ ಬಿಟ್ಟರೆ ಕಿವಿ ನೋವು ಸಂಪೂರ್ಣ ಕಡಿಮೆಯಾಗುವುದು.

 4. ಗಂಟಲು ನೋವಿಗೆ-ಉಪ್ಪು

4. ಗಂಟಲು ನೋವಿಗೆ-ಉಪ್ಪು

ಗಂಟಲು ನೋವು ಉಂಟಾದಾಗ ಬಿಸಿ ನೀರಿಗೆ ಸ್ವಲ್ಪ ಉಪ್ಪು ಹಾಕಿ ಮುಕ್ಕಳಿಸಿದರೆ ಗಂಟಲು ನೋವು ಕಡಿಮೆಯಾಗುವುದು. ಈ ರೀತಿ ಬಾಯಿ ಮುಕ್ಕಳಿಸಲು ಉಪ್ಪು ಜೊತೆ, ಜಜ್ಜಿದ ಬೆಳ್ಳುಳ್ಳಿ ಬೇಕಾದರೂ ಸೇರಿಸಬಹುದು.

5. ಮುಟ್ಟಿನ ನೋವಿಗೆ- ಓಟ್ಸ್

5. ಮುಟ್ಟಿನ ನೋವಿಗೆ- ಓಟ್ಸ್

ಇದರಲ್ಲಿ ಮ್ಯಾಗ್ನಿಷಿಯಂ ಮತ್ತು ಅಧಿಕವಿರುವುದರಿಂದ ಇದನ್ನು ತಿಂದರೆ ಮುಟ್ಟಿನ ಸಮಯದಲ್ಲಿ ಕಂಡು ಬರುವ ನೋವನ್ನು ತಕ್ಷಣ ಕಡಿಮೆಯಾಗುತ್ತದೆ.

 6. ಮೂತ್ರ ಉರಿಗೆ-ನೇರಳೆ ಹಣ್ಣು

6. ಮೂತ್ರ ಉರಿಗೆ-ನೇರಳೆ ಹಣ್ಣು

ಮೂತ್ರ ಉರಿ ಕಂಡು ಬಂದರೆ ನೇರಳೆ ಹಣ್ಣು ತಿಂದರೆ ಸಾಕು ತಕ್ಷಣ ಕಡಿಮೆಯಾಗುವುದು. ಇದರಲ್ಲಿರುವ antioxidants ಮೂತ್ರ ಉರಿ ಕಡಿಮೆ ಮಾಡುವ ಅಂಶವಾಗಿದೆ.

7. ಮೈಕೈ ನೋವಿಗೆ- ಪುದೀನಾ

7. ಮೈಕೈ ನೋವಿಗೆ- ಪುದೀನಾ

ಪುದೀನಾ ದೇಹದ ನರಗಳಿಗೆ ವಿಶ್ರಾಂತಿಯ ಅನುಭವ ನೀಡುತ್ತದೆ. ಬಿಸಿ ನೀರು ಹಾಕಿರುವ ಟಬ್ ಗೆ 10 ಹನಿ ಪುದೀನಾ ಎಣ್ಣೆ ಹಾಕಿ ಅದರಲ್ಲಿ ಮುಳುಗಿ ಅರ್ಧ ಗಂಟೆ ವಿಶ್ರಾಂತಿ ತೆಗೆದುಕೊಂಡರೆ ಮೈಕೈ ನೋವು ಕಡಿಮೆಯಾಗುವುದು.

 8. ಅಜೀರ್ಣಕ್ಕೆ-ಪೈನಾಪಲ್

8. ಅಜೀರ್ಣಕ್ಕೆ-ಪೈನಾಪಲ್

ಅಸಿಡಿಟಿ, ಅಜೀರ್ಣ ಸಮಸ್ಯೆ ಕಂಡು ಬಂದರೆ ಪೈನಾಪಲ್ ತಿನ್ನುವುದು ಒಳ್ಳೆಯದು. ಇದನ್ನು ತಿಂದರೆ ಅಜೀರ್ಣ ಸಮಸ್ಯೆಯಿಂದ ಹೊರಬರಲು ಸಹಕಾರಿಯಾಗುವುದು.

ಸಂಧಿ ನೋವಿಗೆ- ಅರಿಶಿಣ

ಸಂಧಿ ನೋವಿಗೆ- ಅರಿಶಿಣ

ಮೂಳೆ ಸಂಬಂಧಿ ರೋಗ ಇರುವವರು ಅರಿಶಿಣವನ್ನು ನಮ್ಮ ಆಹಾರಕ್ರಮದಲ್ಲಿ ಸೇರಿಸಿದರೆ ಉತ್ತಮ ಪ್ರಯೋಜನವನ್ನು ಪಡೆಯಬಹುದು. ಇದು ಸಂಧಿ ನೋವನ್ನು ಕಡಿಮೆ ಮಾಡುವಲ್ಲಿ ಸಹಕಾರಿಯಾಗಿದೆ.

ತಲೆ ನೋವಿಗೆ - ನೀಲಗಿರಿ ಎಣ್ಣೆ

ತಲೆ ನೋವಿಗೆ - ನೀಲಗಿರಿ ಎಣ್ಣೆ

ತಲೆ ನೋವು ಕಡಿಮೆ ಮಾಡಲು ನೀಲಗಿರಿ ಎಣ್ಣೆಯಿದ್ದರೆ ಸಾಕು. ಅಲ್ಲದೆ ಸ್ನಾಯು ನೋವು, ನರ ಎಳೆಯುವುದು ಮುಂತಾದ ಸಮಸ್ಯೆಗಳನ್ನು ನಿವಾರಿಸುವಲ್ಲಿಯೂ ಸಹಕಾರಿಯಾಗಿದೆ.

English summary

Natural Pain Killers | Tips For Health | ನೈಸರ್ಗಿಕವಾದ 10 ನೋವು ನಿವಾರಕ ಔಷಧಿಗಳು | ಆರೋಗ್ಯಕ್ಕಾಗಿ ಕೆಲ ಸಲಹೆಗಳು

Natural painkillers can help you to a great extend, but at the same time any long lasting and chronic pain should be given medical attention. Natural painkillers can act by blocking of pain signals, relaxing muscles or soothing the nerves. Heat is the most common home remedy for pain.
X
Desktop Bottom Promotion