For Quick Alerts
ALLOW NOTIFICATIONS  
For Daily Alerts

ಪರಿಣಾಮಕಾರಿಯಾದ 9 ನೋವು ನಿವಾರಕ ಎಣ್ಣೆಗಳು

|

ಮೈಕೈ ನೋವು ಕಾಣಿಸಿಕೊಂಡ ತಕ್ಷಣ ನೋವು ನಿವಾರಕ ಮಾತ್ರೆ ನುಂಗುವ ಬದಲು ನೋವು ನಿವಾರಕ ಎಣ್ಣೆಯಿಂದ ಮಸಾಜ್ ಮಾಡುವುದು ಉತ್ತಮವಾದ ವಿಧಾನ. ಏಕೆಂದರೆ ನೋವು ನಿವಾರಕ ಮಾತ್ರೆಗಳು ಆರೋಗ್ಯದ ಮೇಲೆ ಕೆಟ್ಟ ಪ್ರಭಾವವನ್ನು ಬೀರಬಹುದು, ಎಣ್ಣೆ ಮಸಾಜ್ ಮಾಡಿದರೆ ಆ ಭಯವಿಲ್ಲ.

ಕೆಲವೊಂದು ಎಣ್ಣೆಗಳು ನೋವು ಪರಿಣಾಮಕಾರಿಯಾದ ನಿವಾರಕ ಎಣ್ಣೆಗಳಂದೇ ಪ್ರಸಿದ್ಧಿಯನ್ನು ಪಡೆದಿದೆ. ಈ ಎಣ್ಣೆಯನ್ನು ನೋವು ಇರುವ ಕಡೆ ಹಾಕಿ ತಿಕ್ಕಿದರೆ ನಿಮ್ಮ ನೋವು ಸ್ವಲ್ಪ ಹೊತ್ತಿನಲ್ಲಿಯೇ ಕಮ್ಮಿಯಾಗುವುದು.

ಆ ಪರಿಣಾಮಕಾರಿಯಾದ ನೋವು ನಿವಾರಕ ಎಣ್ಣೆಗಳ ಪಟ್ಟಿ ನೋಡಿ ಇಲ್ಲಿದೆ:

 ಪುದೀನಾ ತೈಲ

ಪುದೀನಾ ತೈಲ

ಶೀತವಾದಾಗ ಮೈ ಕೈ ನೋವು ಕಾಣಿಸಿಕೊಳ್ಳುವುದು ಸಹಜ. ಈ ನೋವನ್ನು ಹೋಗಲಾಡಿಸಲು ಪುದೀನಾ ತೈಲ ಬಳಸುವುದು ಒಳ್ಳೆಯದು.

ಲ್ಯಾವಂಡರ್ ಎಣ್ಣೆ

ಲ್ಯಾವಂಡರ್ ಎಣ್ಣೆ

ತುಂಬಾ ಮಾನಸಿಕ ಒತ್ತಡ ಉಂಟಾದಾಗ ತಲೆ ಸಿಡಿಯಲಾರಂಭಿಸುತ್ತದೆ, ಮೈಯಲ್ಲಿ ನೋವು ಕಂಡು ಬರುವುದು. ಈ ರೀತಿ ಕಾಣಿಸಿಕೊಂಡರೆ ಸ್ವಲ್ಪ ಲ್ಯಾವಂಡರ್ ತೈಲದಿಂದ ತಲೆಗೆ ಮಸಾಜ್ ಮಾಡಿ, ಮಾನಸಿಕ ಒತ್ತಡ ಕಡಿಮೆಯಾಗಿ ಸ್ವಲ್ಪ ರಿಲ್ಯಾಕ್ಸ್ ಆಗುವಿರಿ.

ಸಾಸಿವೆ ಎಣ್ಣೆ

ಸಾಸಿವೆ ಎಣ್ಣೆ

ಸಾಸಿವೆ ಎಣ್ಣೆಯನ್ನು ಬೆಳ್ಳುಳ್ಳಿ ಹಾಕಿ ಬಿಸಿ ಮಾಡಿ ಅದರಿಂದ ಎದೆ ಭಾಗಕ್ಕೆ ಮಸಾಜ್ ಮಾಡಿದರೆ ಕಫದಿಂದ ಮುಕ್ತಿ ದೊರೆಯುತ್ತದೆ.

ಸಾಸಿವೆ ಎಣ್ಣೆ

ಸಾಸಿವೆ ಎಣ್ಣೆ

ಸಾಸಿವೆ ಎಣ್ಣೆಯನ್ನು ಬೆಳ್ಳುಳ್ಳಿ ಹಾಕಿ ಬಿಸಿ ಮಾಡಿ ಅದರಿಂದ ಎದೆ ಭಾಗಕ್ಕೆ ಮಸಾಜ್ ಮಾಡಿದರೆ ಕಫದಿಂದ ಮುಕ್ತಿ ದೊರೆಯುತ್ತದೆ.

ಚಂದನ ತೈಲ

ಚಂದನ ತೈಲ

ಗಂಟುಗಳಲ್ಲಿ ಉರಿ, ತುಂಬಾ ಮೈ ಕೈ ನೋವು ಕಾಣಿಸಿಕೊಂಡರೆ ಚಂದನ ತೈಲದಿಂದ ಮಸಾಜ್ ಮಾಡಿದರೆ ಮೈಯನ್ನು ತಂಪು ಮಾಡಿ, ಮೈಕೈ ನೋವನ್ನು ಕಡಿಮೆಮಾಡುತ್ತದೆ.

ನೀಲಗಿರಿ ಎಣ್ಣೆ

ನೀಲಗಿರಿ ಎಣ್ಣೆ

ಸಂಧಿನೋವು ಕಾಣಿಸಿಕೊಂಡರೆ ಅದನ್ನು ಕಡಿಮೆ ಮಾಡುವಲ್ಲಿ ನೀಲಗಿರಿ ಎಣ್ಣೆ ಸಹಾಯ ಮಾಡುತ್ತದೆ.

ರೋಸ್ಮೆರಿ ತೈಲ

ರೋಸ್ಮೆರಿ ತೈಲ

ಇದು ಎರಡು ಪ್ರಮುಖ ಪ್ರಯೋಜವನ್ನು ಹೊಂದಿದೆ. ಇದನ್ನು ಹಚ್ಚಿದಾಗ ನೋವು ಕಮ್ಮಿಯಾಗುವುದರ ಜೊತೆಗೆ ರಕ್ತಸಂಚಾರ ಸರಿಯಾಗಿ ನಡೆಯುವಲ್ಲಿ ಸಹಕಾರಿಯಾಗಿದೆ.

ಶುಂಠಿ ತೈಲ

ಶುಂಠಿ ತೈಲ

ಮೈಕೈ ನೋವನ್ನು ಕಮ್ಮಿ ಮಾಡುವಲ್ಲಿ ಶುಂಠಿ ತೈಲ ತುಂಬಾ ಪರಿಣಾಮಕಾರಿ. ಸ್ನಾಯು ಸೆಳೆತ ಹೋಗಲಾಡಿಸುವಲ್ಲಿ ಇದು ಬೆಸ್ಟ್. ಸ್ನಾಯು ಸೆಳೆತ ಕಾಣಿಸಿಕೊಂಡಾಗ ಸ್ವಲ್ಪ ಶುಂಠಿಯನ್ನು ಜಗಿದು ತಿಂದರೂ ನೋವು ಕಮ್ಮಿಯಾಗುವುದು.

ಕ್ಯಮೊಮೈಲ್ ತೈಲ (Chamomile oil)

ಕ್ಯಮೊಮೈಲ್ ತೈಲ (Chamomile oil)

ಈ ಸುಗಂಧಭರಿತ ಎಣ್ಣೆ ಒತ್ತಡವನ್ನು ಹೋಗಲಾಡಿಸಿ, ನೋವನ್ನು ನೀವಾರಿಸುತ್ತದೆ.

English summary

Natural Massage Oils For Pain Relief

These massage oils have natural anti-spasmodic properties that help you get relief from different kinds of pain. First identify the cause of the pain and then try out these natural massage oils to bid body pain adieu.
X
Desktop Bottom Promotion