For Quick Alerts
ALLOW NOTIFICATIONS  
For Daily Alerts

ಪುರುಷರಿಗಾಗಿ 8 ಶಕ್ತಿವರ್ಧಕ ಆಹಾರಗಳು

By Super
|

ಮನೆಯಲ್ಲಿ ಪುರುಷರಿಗೆ ಬೇರೆ ಅಡುಗೆ, ಮಹಿಳೆಯರಿಗೆ ಬೇರೆ ಅಡುಗೆ ಅಂತ ಮಾಡುವುದಿಲ್ಲ. ಮಾಡಿರುವ ಅಡುಗೆಯಲ್ಲಿ ತಮಗೆ ಬೇಕಾದ ಪ್ರಮಾಣದಷ್ಟು ಆಹಾರವನ್ನು ತಿನ್ನುತ್ತೇವೆ ಹೊರತು ಬಾಡಿ ಬಿಲ್ಡರ್ ಹೊರತು ಪಡಿಸಿ ಪ್ರತ್ಯೇಕ ಡಯಟ್ ಮಾಡುವವರು ತುಂಬಾ ಕಡಿಮೆ.

ಪುರುಷರ ದೇಹಕ್ಕೆ, ಮಹಿಳೆಯರ ದೇಹಕ್ಕೆ ಅಗತ್ಯವಿರುವ ಪ್ರೊಟೀನ್ ಹಾಗೂ ಖನಿಜಾಂಶಗಳ ಪ್ರಮಾಣದಲ್ಲಿ ವ್ಯತ್ಯಾಸವಿರುತ್ತದೆ. ಮಹಿಳೆಯರಿಗೆ ಕಬ್ಬಿಣದಂಶ ಮತ್ತು ಕ್ಯಾಲ್ಸಿಯಂ ಅಧಿಕವಾಗಿ ಬೇಕಾಗಿರುವುದರಿಂದ ಅಂತಹ ಆಹಾರಗಳನ್ನು ತಿಂದರೆ ಒಳ್ಳೆಯದು , ಪುರುಷರಿಗೆ ಸತುವಿನಂಶ ಮತ್ತು ಪ್ರೊಟೀನ್ ಹೆಚ್ಚಿರುವ ಆಹಾರಗಳ ಸೇವನೆ ಅತ್ಯಗತ್ಯ. ಇಲ್ಲದಿದ್ದರೆ ನಿಶ್ಯಕ್ತಿ ಸಮಸ್ಯೆ ಕಾಡುವುದು.

ಪುರುಷರು ತಮ್ಮ ಆಹಾರಕ್ರಮದಲ್ಲಿ ಈ ಆಹಾರಗಳನ್ನು ಸೇರಿಸಿದರೆ ದೇಹದ ಶಕ್ತಿ ವೃದ್ಧಿಸುವುದು:

ಮೊಟ್ಟೆ

ಮೊಟ್ಟೆ

ಇದರಲ್ಲಿ ಪ್ರೊಟೀನ್, ಸತು ಮತ್ತು ಒಳ್ಳೆಯ ಕೊಲೆಸ್ಟ್ರಾಲ್ ಇರುವುದರಿಂದ ಪ್ರತಿದಿನ ಒಂದು ಮೊಟ್ಟೆ ತಿನ್ನುವುದು ಒಳ್ಳೆಯದು.

ಸಾವಕ್ಕಿ

ಸಾವಕ್ಕಿ

ಅನ್ನ, ಗೋಧಿಗೆ ಬದಲು ಸಾವಕ್ಕಿ ಬಳಸಿದರೆ ದೇಹಕ್ಕೆ ಅಗತ್ಯವಾದ ಪ್ರೊಟೀನ್ ದೊರೆಯುವುದು, ಇದು ದೇಹದಲ್ಲಿ ಶಕ್ತಿ ವರ್ಧಕವಾಗಿ ಕೆಲಸ ಮಾಡುತ್ತದೆ.

ಮೃದ್ವಂಗಿಗಳು

ಮೃದ್ವಂಗಿಗಳು

ಸಮುದ್ರಾಹಾರಗಳಲ್ಲಿ ಸತುವಿನಂಶ ಅಧಿಕವಿರುತ್ತದೆ. ಅದರಲ್ಲೂ ಮೃದ್ವಂಗಿಗಳಲ್ಲಿ ಈ ಅಂಶ ಅಧಿಕವಾಗಿರುತ್ತದೆ. ಮೃದ್ವಂಗಿಗಳಲ್ಲಿ ಸತುವಿನಂಶ ಮಾತ್ರವಲ್ಲ ಇತರ ಖನಿಜಾಂಶಗಳು ಕೂಡ ಇರುವುದರಿಂದ ಇದು ಆರೋಗ್ಯವನ್ನು ವೃದ್ಧಿಸುತ್ತದೆ.

ಬಾದಾಮಿ

ಬಾದಾಮಿ

ಬಾದಾಮಿ ಕೂಡ ಶಕ್ತಿ ವರ್ಧಕ ಆಹಾರವಾಗಿದ್ದು, ಇದನ್ನು ಮಹಿಳೆಯರು, ಪುರುಷರು, ಮಕ್ಕಳು ಎನ್ನುವ ಬೇಧವಿಲ್ಲದೆ ಎಲ್ಲರೂ ತಮ್ಮ ಆಹಾರಕ್ರಮದಲ್ಲಿ ಸೇರಿಸುವುದು ಒಳ್ಳೆಯದು.

ನೇರಳೆ ಹಣ್ಣು

ನೇರಳೆ ಹಣ್ಣು

ಕೆಲವೊಮ್ಮೆ ನಮ್ಮಆಲೋಚನಾ ಶಕ್ತಿ ಕುಂದಿದಂತೆ ಅನಿಸುವುದು. ಏಕಾಗ್ರತೆ ಕಡಿಮೆಯಾಗುವುದು, ಇದಕ್ಕೆ ಮಿದುಳಿನ ನರಗಳು ಬಳಲಿರುವುದು ಕೂಡ ಒಂದು ಕಾರಣ. ನೇರಳೆ ಹಣ್ಣಿಗೆ ಮಿದುಳಿನ ನರವನ್ನು ಚುರುಕುಗೊಳಿಸುವ ಸಾಮರ್ಥ್ಯ ಹೊಂದಿದೆ ಅನ್ನುವುದು ಗೊತ್ತಿದೆಯೇ?

ಸಿಹಿ ಗೆಣಸು

ಸಿಹಿ ಗೆಣಸು

ದೇಹದಲ್ಲಿ ಸಕ್ಕರೆಯಂಶ ಕಡಿಮೆಯಾದರೆ ತಲೆ ಸುತ್ತು ಕಂಡು ಬರುವುದು. ಈ ರೀತಿಯ ಸಮಸ್ಯೆ ಕಾಣಿಸಿದಾಗ ಕಾರ್ಬೋಹೈಡ್ರೇಟ್ ತಿನ್ನುವುದು ಒಳ್ಳೆಯದು. ಸಿಹಿ ಗೆಣಸಿನಲ್ಲಿ ಕಾರ್ಬೋಹೈಡ್ರೇಟ್ ಅಧಿಕವಿರುವುದರಿಂದ ಇದನ್ನು ತಿಂದರೆ ರಕ್ತದಲ್ಲಿ ಕಡಿಮೆಯಾದ ಸಕ್ಕರೆಯಂಶವನ್ನು ಹೆಚ್ಚು ಮಾಡುವಲ್ಲಿ ಸಹಕಾರಿಯಾಗುವುದು.

 ಮೀನು

ಮೀನು

ಇದರಲ್ಲಿರುವ ಒಮೆಗಾ 3 ಕೊಬ್ಬಿನಂಶ ದೇಹಕ್ಕೆ ಅವಶ್ಯಕವಾದ ಕೊಬ್ಬಿನಂಶವಾಗಿದೆ. ಮಾಂಸಾಹಾರಿಗಳು ತಮ್ಮ ಆಹಾರಕ್ರಮದಲ್ಲಿ ಮೀನನ್ನು ಸೇರಿಸುವುದು ಒಳ್ಳೆಯದು.

ಕಾಫಿ

ಕಾಫಿ

ಕಾಫಿ ಕುಡಿಯುವುದರ ಬಗ್ಗೆ ಅನೇಕ ವಾದ, ಪ್ರತಿವಾದಗಳಿವೆ. ಮಿತವಾಗಿ ಕಾಫಿ ಕುಡಿಯುವುದರಿಂದ ದೇಹದಲ್ಲಿ ಲವಲವಿಕೆ ತುಂಬುವುದು ಅನ್ನುವ ಅಂಶವನ್ನು ಅಲ್ಲಗಳೆಯುವಂತಿಲ್ಲ.

English summary

Must-Have Energetic Foods For Men | Tips For Health | ಶಕ್ತಿ ವರ್ಧಕ ಆಹಾರಗಳು | ಆರೋಗ್ಯಕ್ಕಾಗಿ ಕೆಲ ಸಲಹೆಗಳು

Energetic foods for men are even more required to those who hit the gym regularly. You cannot build muscles and strength with the energy to workout. Besides, most men like to keep their sexual stamina high. That is why, they need to eat the right foods to stay fit.
X
Desktop Bottom Promotion