For Quick Alerts
ALLOW NOTIFICATIONS  
For Daily Alerts

ಪದೇ-ಪದೇ ಮೂತ್ರ ವಿಸರ್ಜನೆ ಅಪಾಯದ ಸೂಚನೆ

|

ಪದೇ -ಪದೇ ಮೂತ್ರ ವಿಸರ್ಜನೆಗೆ ಹೋಗುತ್ತಿದ್ದರೆ ನಾವು ಅದರ ಬಗ್ಗೆ ಗಮನಿಸುವುದೇ ಇಲ್ಲ, ತಥ್ ಆಗಾಗ ಹೋಗಬೇಕು, ಇನ್ನು ಮೇಲೆ ನೀರು ಸ್ವಲ್ಪ ಕಮ್ಮಿ ಕುಡಿಯುತ್ತೇನೆ ಎಂದಷ್ಟೇ ಯೋಚಿಸುತ್ತೇವೆ ಹೊರತು, ಇದರ ಹಿಂದೆ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆ ಇರಬಹುದೇ ಎಂದು ಯೋಚಿಸುವುದೇ ಇಲ್ಲ.

ನೀರು ಅಧಿಕ ಕುಡಿದಾಗ ಗಂಟೆಗೆ 2-3 ಬಾರಿ ಮೂತ್ರ ವಿಸರ್ಜನೆಗೆ ಹೋಗುವುದು ಸ್ವಾಭಾವಿಕ. ಆದರೆ ನೀರು ಅಧಿಕ ಕುಡಿಯದಿದ್ದಾಗಲೂ ಪದೇ ಪದೇ ಮೂತ್ರ ವಿಸರ್ಜನೆಗೆ ಹೋಗಬೇಕೆಂದು ಅನಿಸಿ, ಅದನ್ನು ತಡೆಯುವುದು ನಿಮ್ಮಿಂದ ಅಸಾಧ್ಯವಾದರೆ ನಿರ್ಲಕ್ಷ್ಯ ಮಾಡಬೇಡಿ. ಏಕೆಂದರೆ ಪದೇ-ಪದೇ ಮೂತ್ರ ವಿಸರ್ಜನೆ ಈ ಕೆಳಗಿನ ಕಾಯಿಲೆಗಳ ಲಕ್ಷಣಗಳಲ್ಲಿ ಒಂದಾಗಿದೆ. ಆದ್ದರಿಂದ ಅಧಿಕ ಸಲ ಮೂತ್ರ ವಿಸರ್ಜನೆಗೆ ಹೋದರೆ ತಕ್ಷಣ ವೈದ್ಯರನ್ನು ಕಾಣಿ.

 ಮಧುಮೇಹ

ಮಧುಮೇಹ

ಮಧುಮೇಹ ಬಂದರೆ ಕಡಿಮೆಯೆಂದರೂ ದಿನದಲ್ಲಿ 20 ಬಾರಿ ಮೂತ್ರ ವಿಸರ್ಜನೆ ಹೋಗಬೇಕಾಗುವುದು. ಏಕೆಂದರೆ ರಕ್ತದಲ್ಲಿ ಗ್ಲೂಕೋಸ್ ಪ್ರಮಾಣ ಅಧಿಕವಿರುತ್ತದೆ. ಇದರಿಂದ ಕಿಡ್ನಿ ತನ್ನ ಕಾರ್ಯವನ್ನು ಸಾಮಾನ್ಯಗಿಂತ ವೇಗವಾಗಿ ಮಾಡುತ್ತದೆ, ಇದರಿಂದ ಆಗಾಗ ಮೂತ್ರವಿಸರ್ಜನೆಗೆ ಹೋಗಬೇಕಾಗುತ್ತದೆ.

ಲಕ್ವ

ಲಕ್ವ

ಲಕ್ವ ಹೊಡೆದ ವ್ಯಕ್ತಿಗೆ ಮೂತ್ರ ವಿಸರ್ಜನೆಯನ್ನು ತಡೆಯುವ ಸಾಮರ್ಥ್ಯವಿರುವುದಿಲ್ಲ. ಪದೇ-ಪದೇ ಮೂತ್ರ ವಿಸರ್ಜನೆಗೆ ಹೋಗಬೇಕೆನಿಸುತ್ತದೆ. ತಡೆ ಹಿಡಿಯಲು ಪ್ರಯತ್ನಿಸಿದರೆ ಬಟ್ಟೆಯಲ್ಲಿಯೇ ಹೋಗಬಹುದು.

ಕಿಡ್ನಿ

ಕಿಡ್ನಿ

ಕಿಡ್ನಿಯ ಆರೋಗ್ಯದಲ್ಲಿ ತೊಂದರೆ ಉಂಟಾದರೆ ಮೊದಲು ಕಂಡು ಬರುವ ಲಕ್ಷಣವೆಂದರೆ ಪದೇ-ಪದೇ ಮೂತ್ರ ವಿಸರ್ಜನೆಗೆ ಹೋಗುವುದು.

ಮೆನೋಪಸ್

ಮೆನೋಪಸ್

ಮಹಿಳೆಯರಿಗೆ ಮುಟ್ಟು ನಿಲ್ಲುವ ಹಂತವನ್ನು ಮೆನೋಪಸ್ ಎಂದು ಕರೆಯುತ್ತಾರೆ. ಈ ಸಮಯದಲ್ಲಿ ಹಾಟ್ ಫ್ಲಾಷ್, ಪದೇ-ಪದೇ ಮೂತ್ರ ವಿಸರ್ಜನೆ ಈ ಎಲ್ಲಾ ಲಕ್ಷಣಗಳು ಕಂಡು ಬರುವುದು.

ದೇಹದಲ್ಲಿ ಕ್ಯಾಲ್ಸಿಯಂ ಅಧಿಕವಾದಾಗ

ದೇಹದಲ್ಲಿ ಕ್ಯಾಲ್ಸಿಯಂ ಅಧಿಕವಾದಾಗ

ಆರೋಗ್ಯವಾಗಿರಲು ಕ್ಯಾಲ್ಸಿಯಂ ಅವಶ್ಯಕ. ಆದರೆ ದೇಹದಲ್ಲಿ ಕ್ಯಾಲ್ಸಿಯಂ ಪ್ರಮಾಣ ಅಧಿಕವಾದರೂ ಕೂಡ ಕಷ್ಟ. ಪದೇ-ಪದೇ ಮೂತ್ರ ವಿಸರ್ಜನೆಗೆ ಹೋಗಬೇಕೆನಿಸುವುದು ಕ್ಯಾಲ್ಸಿಯಂ ಅಧಿಕವಾಗಿದೆ ಎಂದು ಸೂಚಿಸುವ ಲಕ್ಷಣವಾಗಿದೆ. ಯಾವುದಕ್ಕೂ ವೈದ್ಯರನ್ನು ಕಂಡು ಪರೀಕ್ಷಿಸಿ.

ಮೂತ್ರ ಸೋಂಕು(Urinary Tract Infections)

ಮೂತ್ರ ಸೋಂಕು(Urinary Tract Infections)

ಮೂತ್ರ ಸೋಂಕು ಉಂಟಾದಾಗ ಮೂತ್ರ ವಿಸರ್ಜನೆ ಸರಿಯಾಗಿ ಆಗುವುದಿಲ್ಲ. ಇದರಿಂದ ಆಗಾಗ ಮೂತ್ರ ವಿಸರ್ಜನೆಗೆ ಹೋಗಬೇಕೆನಿಸುವುದು. ಈ ರೀತಿ ಉಂಟಾದಾಗ ಮೂತ್ರ ವಿಸರ್ಜನೆ ತುಂಬಾ ಉರಿಯಿಂದ ಕೂಡಿರುತ್ತದೆ.

ಥೈರಾಯ್ಡ್ ಸಮಸ್ಯೆ

ಥೈರಾಯ್ಡ್ ಸಮಸ್ಯೆ

ಥೈರಾಯ್ಡ್ ಹಾರ್ಮೋನ್ ಗಳಲ್ಲಿ ಅಸಮತೋಲನವಿದ್ದರೆ ಕೂಡ ಆಗಾಗ ಮೂತ್ರ ವಿಸರ್ಜನೆಗೆ ಹೋಗಬೇಕೆಂದು ಅನಿಸುವುದು.

ಒತ್ತಡ

ಒತ್ತಡ

ಮಾನಸಿಕ ಒತ್ತಡ ಅಧಿಕವಾದಂತೆ ಆಗಾಗ ಮೂತ್ರವಿಸರ್ಜನೆಗೆ ಹೋಗುವುದು ಸ್ವಾಭಾವಿಕ. ನಾವು ಬಾಳುತ್ತಿರುವ ಜೀವನ ಶೈಲಿಯೇ ಆಗಿದೆ, ಒಂದಲ್ಲಾ ಒಂದು ಕಾರಣದಿಂದ ನಮ್ಮ ಮಾನಸಿಕ ಒತ್ತಡ ಅಧಿಕವಾಗುವುದು. ಆದರೆ ಅದಕ್ಕೆ ನಾವೇ ಪರಿಹಾರ ಕಂಡುಕೊಳ್ಳಬೇಕು.

ಮದ್ಯಪಾನ

ಮದ್ಯಪಾನ

ಮದ್ಯಪಾನ ಮಾಡಿದಾಗ ಆಗಾಗ ಮೂತ್ರವಿಸರ್ಜನೆಗೆ ಹೋಗುವುದು ಸ್ವಾಭಾವಿಕ. ಮದ್ಯಪಾನ ವ್ಯಸನಿಗಳಲ್ಲಿ ಮದ್ಯಪಾನ ಮಾಡದಿದ್ದಾಗ ಕೂಡ ಆಗಾಗ ಮೂತ್ರ ವಿಸರ್ಜನೆಗೆ ಹೋಗಬೇಕಾನಿಸುವುದು. ಇದಕ್ಕೆ ಕಾರಣ ದೇಹದಲ್ಲಿರುವ ಆಲ್ಕೋಹಾಲ್ ಪ್ರಭಾವ.

ಗರ್ಭಿಣಿಯಾದಾಗ

ಗರ್ಭಿಣಿಯಾದಾಗ

ಗರ್ಭಿಣಿಯಾದಾಗ ಮೂತ್ರವನ್ನು ತಡೆ ಹಿಡಿಯಲು ಸಾಧ್ಯವಾಗುವುದಿಲ್ಲ. ಆಗಾಗ ಮೂತ್ರ ವಿಸರ್ಜನೆಗೆ ಹೋಗಬೇಕಾಗುವುದು. ಆದರೆ ಇದರಿಂದ ಯಾವುದೇ ಅಪಾಯ ಉಂಟಾಗುವುದಿಲ್ಲ. ಇದು ಗರ್ಭಿಣಿಯರಲ್ಲಿ ಕಂಡು ಬರುವ ಸ್ವಾಭಾವಿಕ ಪ್ರಕ್ರಿಯೆ.

English summary

Medical Causes Of Frequent Urination

Frequent urination is a problem that many people face without realising. The urge to relieve your bladder too soon is not normal. Some people are born with small bladders. But otherwise, frequent urination is often a symptom of some sort of health disorder. There are many causes of frequent urination.
X
Desktop Bottom Promotion