For Quick Alerts
ALLOW NOTIFICATIONS  
For Daily Alerts

ಜ್ವರ ಬಂದಾಗ ತಿನ್ನಬೇಕಾದ ಆಹಾರಗಳಿವು

By Super
|

ಜ್ವರ ಬಂದಾಗ ಯಾವ ಆಹಾರವೂ ಬಾಯಿಗೆ ರುಚಿ ಅನಿಸುವುದಿಲ್ಲ. ಹಾಗಂತ ಏನೂ ತಿನ್ನದೆ ಇದ್ದರೆ ಮತ್ತಷ್ಟು ಸುಸ್ತು ಬೀಳುತ್ತೇವೆ. ಕೆಲವೊಂದು ಆಹಾರಗಳು ನಮ್ಮ ಸುಸ್ತನ್ನು ಕಡಿಮೆ ಮಾಡುವಲ್ಲಿ ತುಂಬಾ ಪ್ರಯೋಜನಕಾರಿಯಾಗಿದೆ.

ಉದಾಹರಣೆಗೆ ಚಿಕನ್ ಸೂಪ್. ಜ್ವರ ಬಂದಾಗ ಚಿಕನ್ ಸೂಪ್ ಕುಡಿದರೆ ಸುಸ್ತು ಕಡಿಮೆಯಾಗಿ ಆರಾಮ ಅನಿಸುವುದು. ಕೆಲವೊಂದು ಆಹಾರಗಳನ್ನು ಜ್ವರ ಬಂದಾಗ ಹೆಚ್ಚಾಗಿ ಕೊಡುತ್ತಾರೆ. ಔಷಧಿ ಜೊತೆಗೆ ನಮ್ಮ ಆಹಾರಕ್ರಮ ನಮ್ಮ ಆರೋಗ್ಯ ಸುಧಾರಿಸುವಲ್ಲಿ ಸಹಾಯ ಮಾಡುತ್ತದೆ.

ಜ್ವರ ಬಂದಾಗ ಈ ಕೆಳಗಿನ ಆಹಾರ ತಿಂದರೆ ಜ್ವರದ ಸುಸ್ತನ್ನು ಬೇಗನೆ ಕಮ್ಮಿಯಾಗುವುದು.

ಗಂಜಿ

ಗಂಜಿ

ಅನ್ನ ತಿನ್ನುವ ಬದಲು ಈ ಸಮಯದಲ್ಲಿ ಗಂಜಿ ಮಾಡಿ ತಿನ್ನುವುದು ಒಳ್ಳೆಯದು.

 ಸೂಪ್

ಸೂಪ್

ತರಕಾರಿ ಹಾಕಿ ಮಾಡಿದ ಸೂಪ್ ಆಗಿರಲಿ, ಚಿಕನ್ ಸೂಪ್ ಆಗಿರಲಿ ಜ್ವರ ಕಡಿಮೆ ಮಾಡಿ ಸುಸ್ತು ನಿವಾರಿಸುವಲ್ಲಿ ಸಹಕಾರಿ.

ಕಿಚಡಿ

ಕಿಚಡಿ

ಜ್ವರ ಬಂದಾಗ ಕಿಚಡಿ ತಿನ್ನುವುದು ಒಳ್ಳೆಯದು, ಇದನ್ನು ಉಪ್ಪಿನಕಾಯಿ ಜೊತೆ ತಿಂದರೆ ರುಚಿಯಾಗಿಯೂ ಇರುತ್ತದೆ.

 ಬೇಯಿಸಿದ ಆಲೂಗಡ್ಡೆ

ಬೇಯಿಸಿದ ಆಲೂಗಡ್ಡೆ

ಜ್ವರ ಬಂದಾಗ ಬೇಯಿಸಿದ ಆಲೂಗಡ್ಡೆ ತಿನ್ನುವುದು ಒಳ್ಳೆಯದು. ಇದು ದೇಹಕ್ಕೆ ಶಕ್ತಿಯನ್ನು ತುಂಬುತ್ತದೆ.

ಚಪಾತಿ

ಚಪಾತಿ

ಎಣ್ಣೆ ಹಾಕದ ಚಪಾತಿಯನ್ನು ಜ್ವರ ಬಂದಾಗ ತಿನ್ನಬೇಕು.

 ಸೇಬು

ಸೇಬು

ಸೇಬನ್ನು ಹಾಗೇ ತಿನ್ನುವುದಕ್ಕಿಂತ ಬೇಯಿಸಿ ತಿಂದರೆ ತುಂಬಾ ಒಳ್ಳೆಯದು.

 ಹಣ್ಣಿನ ಜ್ಯೂಸ್

ಹಣ್ಣಿನ ಜ್ಯೂಸ್

ಜ್ವರ ಬಂದಾಗ ಯಾವುದೇ ತಂಪು ಪಾನೀಯಾಗಳನ್ನು ಕುಡಿಯಬೇಡಿ. ಅದರ ಬದಲು ಹಣ್ಣಿನ ಜ್ಯೂಸ್ ಕುಡಿಯಿರಿ. ಇದು ದೇಹಕ್ಕೆ ಶಕ್ತಿಯನ್ನು ತುಂಬುತ್ತದೆ.

ತುಳಸಿ ಟೀ

ತುಳಸಿ ಟೀ

ಶುಂಠಿ ಅಥವಾ ತುಳಸಿ ಟೀ ಕುಡಿಯಿರಿ. ಶೀತ, ಕೆಮ್ಮು ಇವೆಲ್ಲಾ ಕೂಡ ಕಡಿಮೆಯಾಗುವುದು, ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವುದು.

ಮೊಟ್ಟೆ

ಮೊಟ್ಟೆ

ಮೊಟ್ಟೆಯನ್ನು ಬೇಯಿಸಿ ಅಥವಾ ಆಫ್ ಬಾಯಲ್ ಮಾಡಿ ತಿಂದರೆ ದೇಹಕ್ಕೆ ಶಕ್ತಿ ದೊರೆಯುತ್ತದೆ.

ಹಾಲು

ಹಾಲು

ಕೆಲವರು ಜ್ವರ ಬಂದಾಗ ಹಾಲು ಕುಡಿಯಬಾರದೆನ್ನುತ್ತಾರೆ. ಆದರೆ ಹಾಲನ್ನು ಕಾಯಿಸಿ ತೆಳ್ಳಗಿನ ಹಾಲು ಕುಡಿಯುವುದು ಒಳ್ಳೆಯದು.

 ಚೀಸ್

ಚೀಸ್

ಜ್ವರ ಬಂದಾಗ ಚೀಸ್ ಗೆ ಸ್ವಲ್ಪ ಸಕ್ಕರೆ ಹಾಕಿ ತಿನ್ನುವುದು ಒಳ್ಳೆಯದು.

 ದಾಲಿಯಾ

ದಾಲಿಯಾ

ಜ್ವರ ಬಂದಾಗ ಚೂರು ಗೋಧಿಯನ್ನು ಬೇಯಿಸಿ ಮಾಡುವ ದಾಲಿಯಾ ಬೆಸ್ಟ್.

 ಅವಲಕ್ಕಿ

ಅವಲಕ್ಕಿ

ಅವಲಕ್ಕಿ ಉಪ್ಪಿಟ್ಟು ನಾಲಗೆಗೆ ಸಪ್ಪೆ ಅನಿಸುವುದಿಲ್ಲ, ಹೊಟ್ಟೆಯೂ ತುಂಬುವುದು, ಇದರಲ್ಲಿರುವ ಕಾರ್ಬೋಹೈಡ್ರೇಟ್ಸ್ ದೇಹಕ್ಕೆ ಶಕ್ತಿಯನ್ನು ತುಂಬುತ್ತದೆ.

ಮೊಸರನ್ನ

ಮೊಸರನ್ನ

ಗಂಟಲು ಕೆರತ ಮೊಸರನ್ನ ತಿಂದರೆ ಕಡಿಮೆಯಾಗುವುದು. ಫ್ರಿಜ್ ನಲ್ಲಿ ಇಟ್ಟ ಮೊಸರು ಬಳಸಬೇಡಿ.

ಓಟ್ಸ್

ಓಟ್ಸ್

ಓಟ್ಸ್ ಸ್ಲಿಮ್ ಫಿಗರ್ ಪಡೆಯಲು ಮಾತ್ರವಲ್ಲ, ಜ್ವರ ಬಂದಾಗ ಸುಸ್ತು ಕಮ್ಮಿ ಮಾಡಲು ಇದನ್ನು ತಿನ್ನಿ. ಓಟ್ಸ್ ಗೆ ಹಣ್ಣುಗಳನ್ನು ಹಾಕಿ ತಿಂದರೆ ಹೆಚ್ಚು ರುಚಿಕರವಾಗಿರುತ್ತದೆ.

English summary

Indian Foods To Eat During Fever |Health Tips

If you are suffering from fever and do not know which Indian foods can be of help, then check out the below list. Have these foods in small amounts to get relief.
X
Desktop Bottom Promotion