For Quick Alerts
ALLOW NOTIFICATIONS  
For Daily Alerts

ಸ್ತನ ಕಸಿಯ ಕೆಟ್ಟ ಪರಿಣಾಮಗಳು

By Hemanth P
|

ಸ್ತನದ ಗಾತ್ರ ಹೆಚ್ಚಿಸಲು ಅಥವಾ ಸರಿಪಡಿಸಲು ಮಾಡುವಂತಹ ಶಸ್ತ್ರಚಿಕಿತ್ಸೆಯೇ ಸ್ತನದ ಕಸಿ. ಈ ಶಸ್ತ್ರಚಿಕಿತ್ಸೆಯಲ್ಲಿ ಸ್ತನದ ಒಳಗೆ ಒಂದು ರೀತಿಯ ಕೃತಕ ವಸ್ತುವಿನ ಪದರ ಇಡಲಾಗುತ್ತದೆ. ಬಳಸಲಾಗುವ ಕೃತಕ ವಸ್ತುಗಳನ್ನು ಅನುಸರಿಸಿ ಎರಡು ರೀತಿಯ ಸ್ತನ ಕಸಿಯನ್ನು ಮಾಡಲಾಗುತ್ತದೆ. ಕೃತಕ ವಸ್ತುವಿನ ಪದರವು ಸಿಲಿಕಾನ್ ಅಥವಾ ಸಲೈನ್ ದ್ದಾಗಿರುತ್ತದೆ.

ಸಿಲಿಕಾನ್ ಸ್ತನಕಸಿಯಲ್ಲಿ ಸಿಲಿಕಾನ್ ಜೆಲ್ ನ್ನು ಕೃತಕ ವಸ್ತುವನ್ನಾಗಿ ಬಳಸಿ ಅದನ್ನು ಸಿಲಿಕಾನ್ ಚಿಪ್ಪುಗಳಲ್ಲಿ ತುಂಬಲಾಗುತ್ತದೆ. ಸಿಲಿಕಾನ್ ಜೆಲ್ ತುಂಬಿದ ಸಿಲಿಕಾನ್ ಚಿಪ್ಪುಗಳನ್ನು ಮಹಿಳೆಯರಲ್ಲಿ ಸ್ತನ ಕಸಿಗೆ ಬಳಸಲಾಗುತ್ತದೆ. ಸಲೈನ್ ಬಳಸುವ ಸ್ತನ ಕಸಿಯಲ್ಲಿ ಸಲೈನ್ ನೀರನ್ನು ಕೃತಕ ವಸ್ತುವನ್ನಾಗಿ ಬಳಸಿ ಸಿಲಿಕಾನ್ ಚಿಪ್ಪುಗಳಲ್ಲಿ ಬಳಸಲಾಗುತ್ತದೆ. ಸಲೈನ್ ನೀರು ತುಂಬಿದ ಸಿಲಿಕಾನ್ ಚಿಪ್ಪುಗಳನ್ನು ಮಹಿಳೆಯ ಸ್ತನ ಕಸಿಗೆ ಬಳಸಲಾಗುತ್ತದೆ.

Ill effects of breast implants

ಮಹಿಳೆಯರು ತಮ್ಮ ಸ್ತನದ ತೊಂದರೆ ಸರಿಪಡಿಸಲು ಅಥವಾ ಕಾಸ್ಮೆಟಿಕ್ ಕಾರಣಗಳಿಂದ ಈ ಎರಡರಲ್ಲಿ ಯಾವುದಾದರೂ ಒಂದು ಶಸ್ತ್ರಚಿಕಿತ್ಸೆ ಆಯ್ಕೆ ಮಾಡಬಹುದು. ಸಲೈನ್ ನಿಂದ ಮಾಡುವ ಸ್ತನಕಸಿಯು ಸಿಲಿಕಾನ್ ಬಳಸಿ ಮಾಡುವ ಸ್ತನಕಸಿಗಿಂತ ತುಂಬಾ ಸುರಕ್ಷಿತವೆಂದು ಪರಿಗಣಿಸಲಾಗಿದೆ. ಸಲೈನ್ ಸ್ತನಕಸಿಯಲ್ಲಿ ಮಹಿಳೆಯರಿಗೆ ಅಪಾಯ ತುಂಬಾ ಕಡಿಮೆ. ಆದರೆ ಇದರಿಂದ ಇತರ ಕೆಲವೊಂದು ಕೆಟ್ಟಪರಿಣಾಮಗಳು ಇವೆ. ಸ್ತನ ಕಸಿಯಿಂದಾಗಿ ಮಹಿಳೆಯರ ಸ್ತನ ಸಂಬಂಧಿ ಕಾಯಿಲೆ ಮತ್ತು ದೈಹಿಕ ದೌರ್ಬಲ್ಯ ನಿವಾರಿಸಲು ನೆರವಾಗುತ್ತದೆ. ಸ್ತನ ಕಸಿಯಿಂದ ಕೆಲವೊಂದು ಕೆಟ್ಟ ಪರಿಣಾಮಗಳು ಕೂಡ ಇದೆ. ಮಹಿಳೆಯರು ಸ್ತನ ಕಸಿಯಿಂದಾಗಿ ಕೆಲವೊಂದು ಸಾಮಾನ್ಯ ಅಡ್ಡ ಪರಿಣಾಮಗಳು ಮತ್ತು ಕೆಟ್ಟ ಪರಿಣಾಮಗಳನ್ನು ಇಲ್ಲಿ ಉಲ್ಲೇಖಿಸಲಾಗಿದೆ.

1. ಮಹಿಳೆಯರಲ್ಲಿ ಸ್ತನ ಕಸಿಯಿಂದಾಗುವ ಅತೀ ದೊಡ್ಡ ಕೆಟ್ಟ ಪರಿಣಾಮವೆಂದರೆ ಸೋರಿಕೆ. ಎದೆಯ ಮೇಲೆ ಯಾವುದೇ ರೀತಿಯ ಪರಿಣಾಮವಾದರೆ ಆಗ ಸಿಲಿಕಾನ್ ಜೆಲ್ ಅಥವಾ ಸಲೈನ್ ಸೋರಿಕೆಯಾಗಬಹುದು. ಸಿಲಿಕಾನ್ ಜೆಲ್ ಸೋರಿಕೆ ಆರಂಭವಾದಾಗ ತಲೆತಿರುಗುವಿಕೆ, ನರದುಬ್ಬರ ಮತ್ತು ವಾಕರಿಕೆ ಆರಂಭವಾಗಬಹುದು. ಸಲೈನ್ ಸೋರಿಕೆಯಿಂದ ದೇಹದಲ್ಲಿ ಬ್ಯಾಕ್ಟೀರಿಯಾ ಮತ್ತು ಬೂಸ್ಟ್ ಉತ್ಪತ್ತಿಯಾಗಬಹುದು.

2. ಸ್ತನಕಸಿಗೆ ಕೃತಕ ವಸ್ತುಗಳನ್ನು ಬಳಸುವುದರಿಂದ ಹೊರಗಿನ ವಸ್ತುಗಳನ್ನು ನಮ್ಮ ದೇಹವು ನಿರಾಕರಿಸುವ ಸಾಧ್ಯತೆಗಳಿವೆ. ದೇಹವು ಕಸಿಯನ್ನು ಸ್ವೀಕರಿಸದೆ ಇರಬಹುದು ಮತ್ತು ಇದರಿಂದಾಗಿ ಸ್ತನದ ಬದಿಯಲ್ಲಿ ನೋವು, ಬಾವು ಮತ್ತು ತುರಿಕೆ ಉಂಟಾಗಬಹುದು.

3. ಮಹಿಳೆಯರ ಸ್ತನ ಕಸಿಯಿಂದಾಗಿ ಉಂಟಾಗುವ ಕೆಟ್ಟ ಪರಿಣಾಮವೆಂದರೆ ಸ್ತನಗಳ ಗಾತ್ರದಲ್ಲಿ ವ್ಯತ್ಯಾಸ ಕಾಣಿಸುವುದು. ಶಸ್ತ್ರಚಿಕಿತ್ಸೆಯಿಂದ ಸ್ತನದ ಗಾತ್ರ ಮತ್ತು ಆಕಾರದಲ್ಲಿ ವ್ಯತ್ಯಾಸವಾಗಬಹುದು. ಸ್ತನ ಕಸಿ ಶಸ್ತಚಿಕಿತ್ಸೆ ವೇಳೆ ತಪ್ಪುಗಳಾಗಿ ಅದು ನೈಸರ್ಗಿಕ ಸ್ತನಗಳ ಅಂದ ಕೆಡಿಸಬಹುದು.

4. ಪ್ರತಿಯೊಂದು ಸ್ತನಕಸಿಗೆ ಪ್ರತೀ 7-8 ವರ್ಷಗಳಲ್ಲಿ ಬದಲಾವಣೆ ಅಥವಾ ಸರಿಪಡಿಸುವಿಕೆ ಬೇಕಾಗುತ್ತದೆ. ಸ್ತನಕಸಿಯು ಶಾಶ್ವತವಲ್ಲ, ಇದನ್ನು ಬದಲಾಯಿಸಬೇಕು. ಕೆಲವು ವರ್ಷಗಳ ಬಳಿಕ ಬಿರಿಯುವಿಕೆ ಅಥವಾ ಸೋರಿಕೆ ಉಂಟಾಗಬಹುದು.

5. ಮಹಿಳೆಯರಿಗೆ ಸ್ತನಕಸಿಯ ಕೆಟ್ಟ ಪರಿಣಾಮವೆಂದರೆ ಸ್ತನ ಕಸಿಯು ಬಿರಿಯುವುದು. ಚಿಪ್ಪು ಬಿರಿಯುವಿಕೆಯಿಂದ ಸಿಲಿಕಾನ್ ಜೆಲ್ ಅಥವಾ ಸಲೈನ್ ನೀರು ದೇಹದಲ್ಲಿ ಸೋರಿಕೆಯಾಗಬಹುದು. ಬಿರಿಯುವಿಕೆ ಮೌನವಾಗಿ ನಡೆಯುತ್ತದೆ. ಇದರ ಯಾವುದೇ ಲಕ್ಷಣಗಳು ನಿಮಗೆ ಗೋಚರಿಸದು.

6. ಸ್ತನಕಸಿಯಿಂದಾಗಿ ಮಹಿಳೆಯರಲ್ಲಿ ಹತ್ತಿರದ ಅಪಧಮನಿಗಳಲ್ಲಿ ಉಬ್ಬರ ಕಾಣಿಸಬಹುದು. ಕೃತಕ ವಸ್ತುಗಳು ಅಪಧಮನಿ ಮೇಲೆ ಪರಿಣಾಮ ಬೀರಬಹುದು. ಸಿಲಿಕಾನ್ ಜೆಲ್ ಉಬ್ಬರ ಮತ್ತು ಬಾವು ಉಂಟು ಮಾಡಬಹುದು.

7. ಮಹಿಳೆಯರಲ್ಲಿ ಸ್ತನ ಕಸಿಯಿಂದಾಗಿ ಶಸ್ತ್ರಚಿಕಿತ್ಸೆ ನಡೆಸಿದ ಜಾಗದಲ್ಲಿ ಗುರುತು ಕಾಣಬಹುದು. ಇದು ಜೀವಮಾನಪೂರ್ತಿ ಹಾಗೆ ಉಳಿದು ಕಾಣಿಸುತ್ತಿರಬಹುದು. ಸ್ತನ ಕಸಿ ಶಸ್ತ್ರಚಿಕಿತ್ಸೆ ಬಗ್ಗೆ ಹೇಳಲು ಬಯಸದ ಮಹಿಳೆಯರಿಗೆ ಇದೊಂದು ಕೆಟ್ಟ ಪರಿಣಾಮ

8. ಸ್ತನಕಸಿಯಲ್ಲಿ ಬಳಸುವ ಕೃತಕ ವಸ್ತುಗಳು ಸ್ವಾಭಾವಿಕವಾಗಿ ನರವಿಷಕಾರಿಯಾಗಿರುತ್ತದೆ. ಸಿಲಿಕಾನ್ ಜೆಲ್ ನಲ್ಲಿರುವ ಕೆಲವೊಂದು ಅಂಶಗಳು ಸೋರಿಕೆಯಾದಾಗ ನರಮಂಡಲದ ಚಟುವಟಿಕೆ ಮೇಲೆ ಪರಿಣಾಮ ಬೀರಬಹುದು.

9. ಸ್ತನಕಸಿಯಲ್ಲಿ ಬಳಸುವಂತಹ ಸಿಲಿಕಾನ್ ಜೆಲ್ ನಲ್ಲಿರುವ ಕೆಲವೊಂದು ಅಂಶಗಳು ಸ್ವಾಭಾವಿಕವಾಗಿ ಕ್ಯಾನ್ಸರ್ ಕಾರಕಗಳು. ಸ್ತನ ಕಸಿಯಿಂದ ಸ್ತನದ ಕ್ಯಾನ್ಸರ್ ಬರುವುದಿಲ್ಲ. ಆದರೆ ಹೊಟ್ಟೆಯ ಕ್ಯಾನ್ಸರ್, ಶ್ವಾಸಕೋಶದ ಕ್ಯಾನ್ಸರ್ ಮತ್ತು ಇತರ ಕೆಲವೊಂದು ಕೆಟ್ಟ ಕ್ಯಾನ್ಸರ್ ಬರಬಹುದು. ದೇಹದಲ್ಲಿ ಸಿಲಿಕಾನ್ ಸೋರಿಕೆಯಿಂದಾಗಿ ಹಲವಾರು ರೀತಿಯ ತೊಂದರೆ ಉಂಟಾಗಬಹುದು.

10. ಸ್ತನ ಕಸಿಯಿಂದಾಗಿ ಸ್ತನದ ಗಾತ್ರ ಮತ್ತು ಆಕಾರ ಬದಲಾಗುತ್ತದೆ. ಆದರೆ ನೀವು ಕಸಿ ಮಾಡಿಸಿದ ಬಳಿಕ ಇದು ಸ್ಪಷ್ಟವಾಗುತ್ತದೆ. ಸಲೈನ್ ಸ್ತನಕಸಿಯಲ್ಲಿ ಸ್ತನವು ನೈಸರ್ಗಿಕವಲ್ಲವೆಂದು ಸ್ಪಷ್ಟವಾಗಿ ಗೊತ್ತಾಗುತ್ತದೆ.

English summary

Ill effects of breast implants

Breast implant is a surgery done to improve, enhance or correct the shape and size of breasts. In this surgery, a layer of artificial material is implanted inside the breast. There are two categories of breast implants based on the type of artificial material used. The layers can be either of silicon or saline.
Story first published: Monday, December 30, 2013, 11:34 [IST]
X
Desktop Bottom Promotion