For Quick Alerts
ALLOW NOTIFICATIONS  
For Daily Alerts

ಮಲಬದ್ಧತೆಗೆ ಸಮಸ್ಯೆಗೆ ಮನೆಮದ್ದು-ಲೋಳೆಸರ

|

ಮಲಬದ್ಧತೆ ಸಮಸ್ಯೆ ಹೆಚ್ಚಿನವರಲ್ಲಿ ಕಂಡು ಬರುತ್ತಿರುವ ಸಮಸ್ಯೆಯಾಗಿದೆ. ಕಾಯಿಲೆ, ಅನಾರೋಗ್ಯಕರ ಆಹಾರಕ್ರಮ ಮಲಬದ್ಧತೆಗೆ ಪ್ರಮುಖ ಕಾರಣವಾಗಿದೆ. ಮಲ ಬದ್ಧತೆ ಸಮಸ್ಯೆ ಬಾಳೆ ಹಣ್ಣು ತಿಂದರೆ ಕಡಿಮೆಯಾಗುತ್ತದೆ.

ಇದರಿಂದ ಸಂಪೂರ್ಣ ಮುಕ್ತಿ ಪಡೆಯಲು ಲೋಳೆಸರ ಬಳಸುವುದು ಒಳ್ಳೆಯದು. ಮಲಬದ್ಧತೆ ಹೋಗಲಾಡಿಸಲು ಪುರಾತನ ಕಾಲದಿಂದಲೂ ಈ ಮದ್ದನ್ನು ಬಳಸಲಾಗುತ್ತಿದೆ. ಇದು ಕರುಳನ್ನು ಶುದ್ಧ ಮಾಡಿ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಇದರಿಂದ ಮಲಬದ್ಧತೆ ಉಂಟಾಗುವುದಿಲ್ಲ.

ಮಲಬದ್ಧತೆ ಸಮಸ್ಯೆಯಿಂದ ಹೊರಬರಲು ಲೋಳೆಸರವನ್ನು ಹೇಗೆ ಬಳಸಬೇಕೆಂದು ಹೇಳಲಾಗಿದೆ ನೋಡಿ:

Aloe Vera To Get Rid Of Constipation

* ಮಲಬದ್ಧತೆ ಸಮಸ್ಯೆಯಿಂದ ಹೊರಬರಲು ವಾರದಲ್ಲಿ 5 ದಿನ ಇದರ ಜ್ಯೂಸ್ ಕುಡಿಯಬೇಕು.

* ಜ್ಯೂಸ್ ಮಾಡುವ ಮುನ್ನ ಲೋಳೆಸರವನ್ನು ಕಡಿಮೆ ಉರಿಯಲ್ಲಿ 40-45 ನಿಮಿಷ ಬಿಸಿ ಮಾಡಿ. ನಂತರ ಅದನ್ನು ತಣಿಯಲು ಬಿಡಿ. ನಂತರ ಜ್ಯೂಸ್ ಮಾಡಿ ಸೋಸಿ ಆ ಕ್ಷಣವೇ ಕುಡಿಯಿರಿ.

* ಅದರ ಜೆಲ್ ತಿನ್ನುವುದಾದರೆ 2 ಚಮಚ ಜೆಲ್ ಅನ್ನು ಆಪಲ್ ಜ್ಯೂಸ್ ಅಥವಾ ನಿಮಗೆ ಇಷ್ಟವಾದ ಹಣ್ಣಿನ ಜ್ಯೂಸ್ ಜೊತೆ ಹಾಕಿ ಕುಡಿಯಿರಿ.

ಸಲಹೆ: ಇದಕ್ಕೆ ಫ್ರೆಶ್ ಲೋಳೆಸರ ಮಾತ್ರ ಬಳಸಿ. ಜೆಲ್ ಆದರೆ ದಿನದಲ್ಲಿ 2 ಚಮಚ, ಜ್ಯೂಸ್ ಆದರೆ 1 ಲೀಟರ್ ನೀರಿಗೆ ಎರಡು ಚಮಚ ಜೆಲ್ ಹಾಕಿ ಜ್ಯೂಸ್ ಮಾಡಿ ದಿನದಲ್ಲಿ 5 ಬಾರಿ ಕುಡಿಯಿರಿ.

English summary

How To Use Aloe Vera To Get Rid Of Constipation | ಮಲಬದ್ಧತೆ ಸಮಸ್ಯೆಯಿಂದ ಹೊರಲು ಲೋಳೆಸರ ಬಳಸುವ ವಿಧಾನ

Aloe vera juice is known to facilitate bowel movement launched defecation thereby reducing constipation. And also Aloe vera is a herb that has been used for centuries to treat a variety of diseases. Anti-fungal and anti-bacterial properties owned aloe vera help treat a variety of internal and external problems.
X
Desktop Bottom Promotion