For Quick Alerts
ALLOW NOTIFICATIONS  
For Daily Alerts

ಅಲ್ಸರ್ ಖಾಯಿಲೆಯನ್ನು ಗುಣಪಡಿಸುವುದು ಹೇಗೆ?

By Super
|

ಮನುಷ್ಯನ ಆಹಾರ ಕ್ರಮ ಹಾಗೂ ಜೀವನ ಶೈಲಿ ಬದಲಾದಂತೆ ದೇಹದಲ್ಲಿನ ಆರೋಗ್ಯದಲ್ಲಿಯೂ ಸಾಕಷ್ಟು ಬದಲಾವಣೆಗಳು ಉಂಟಾಗುತ್ತವೆ. ಅದರಲ್ಲೂ ಹಲವಾರು ರೋಗಗಳೂ ಉದ್ಭವಿಸಿ ತೊಂದರೆಗಳೂ ಉಂಟಾಗುತ್ತವೆ.

ಇಂತಹ ಆಹಾರ ವ್ಯತ್ಯಯದಿಂದ ಉಂಟಾಗುವ ಪ್ರಮುಖ ರೋಗವೆಂದರೆ ಅಲ್ಸರ್ ಅಥವಾ ಹುಣ್ಣು. ಜಠರದ ಭಾಗದಲ್ಲಿ ಕಾಣಿಸಿಕೊಳ್ಳವ ಈ ಸಮಸ್ಯೆ ಚಿಕಿತ್ಸೆ ಮಾಡಿಸದಿದ್ದರೆ ಅದು ಇನ್ನಷ್ಟು ಉಲ್ಭಣಿಸುತ್ತದೆ.

ಅಲ್ಸರ್ ಅಥವಾ ಹುಣ್ಣುಗಳು, ಹೊಟ್ಟೆ ಹುಣ್ಣು, ಜಠರ ಹುಣ್ಣು ಹೀಗೆ ಬೇರೆ ಬೇರೆ ಹೆಸರಿನಲ್ಲಿ ಕರೆಯಲಾಗುತ್ತದೆ. ಇದು ಹೊಟ್ಟೆ ಅಥವಾ ಸಣ್ಣ ಕರುಳು ಮೇಲಿನ ಭಾಗದಲ್ಲಿ ನೋವು ಅಥವಾ ಗಾಯಗಳು ಕಾಣಿಸಿಕೊಳ್ಳುವ ಮೂಲಕ ಉಂಟಾಗುತ್ತವೆ. ನಾವು ಸೇವಿಸುವ ಆಹಾರವನ್ನು ಕರಗಿಸುವ ಆಮ್ಲವು ಜಠರ ಅಥವಾ ಕರುಳಿನ ಒಳಗೋಡೆಗಳನ್ನು ಹಾನಿಗೊಳಿಸುವುದರಿಂದಾಗಿ ಹುಣ್ಣುಗಳು ಸಂಭವಿಸುತ್ತದೆ. ನಮ್ಮ ಆಹಾರಕ್ರಮ ಮತ್ತು ಜೀವನಶೈಲಿಯ ಒತ್ತಡದ ಕಾರಣದಿಂದಾಗಿ ಅಲ್ಸರ್ ಉಂಟಾಗುತ್ತದೆ. ಇದನ್ನು ಗುಣಪಡಿಸದಿದ್ದರೆ ಪ್ರಾಣಕ್ಕೆ ಅಪಾಯ ಉಂಟಾಗಬಹುದು. ಇಲ್ಲಿ ನಾವು ಇದರ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ್ಧೆವೆ ನೋಡಿ:

(ಗುಣಪಡಿಸುವ) ಹಂತಗಳು/ ಕ್ರಮಗಳು

ಕೆಂಪು ಎಲೆಕೋಸು

ಕೆಂಪು ಎಲೆಕೋಸು

ಬ್ರಾಸಿಕಾದಂತಹ (ಸಾಸಿವೆ ಕುಟುಂಬಕ್ಕೆ ಸೇರಿದ ಸಸ್ಯಗಳು)ಅದರಲ್ಲೂ ವಿಶೇಷವಾಗಿ ಕೆಂಪು ಎಲೆಕೋಸು ಮೊದಲಾದ ಯಾವುದೇ ಸಸ್ಯಗಳನ್ನು ಸೇವಿಸುವಾಗ ಅವುಗಳ ರುಚಿಯನ್ನು ಹೆಚ್ಚಿಸಲು ಅದರ ರಸ ಅಥವಾ ಅದರ ಫೈಬರ್ (ನಾರು) ಅಂಶಗಳನ್ನು ಸಂಪೂರ್ಣವಾಗಿ ಸೇವಿಸಲು ಕಲಿಯಬೇಕು./ ಸೇವಿಸಬೇಕು. ಇದರಿಂದ ಹುಣ್ಣುಗಳು ಉಪಶಮನವಾಗುತ್ತವೆ.

2. ನಿರಂತರವಾದ ಹೊಟ್ಟೆ ನೋವು

2. ನಿರಂತರವಾದ ಹೊಟ್ಟೆ ನೋವು

ನಿರಂತರವಾದ ಅಥವಾ ಪುನಃ ಪುನಃ ಹೊಟ್ಟೆ ಅಥವಾ ಜಠರದ ನೋವು ಕಾಣಿಸಿಕೊಂಡರೆ ಇದು ಸಾಮಾನ್ಯವಾಗಿ ಈ ಹುಣ್ಣುಗಳ ಮೊದಲ ಲಕ್ಷಣಗಳಾಗಿದ್ದು ಕೂಡಲೇ ನಿಮ್ಮ ವೈದ್ಯರನ್ನು ಭೇಟಿ ಮಾಡಿ. ಈ ಹುಣ್ಣುಗಳ ಇತರ ಲಕ್ಷಣಗಳೆಂದರೆ ವಾಕರಿಕೆ, ವಾಂತಿ, ಗ್ಯಾಸ್, ಹೊಟ್ಟೆ ಉಬ್ಬುವುದು, ಹಸಿವಾಗದಿರುವುದು ಮತ್ತು ತೂಕ ಕಡಿಮೆಯಾಗುವುದು ಮೊದಲಾದವುಗಳಾಗಿವೆ.

3. ವೈದ್ಯರ ಭೇಟಿ

3. ವೈದ್ಯರ ಭೇಟಿ

ನಿಮ್ಮ ಕರುಳಿನ ಚಲನೆಗಳಲ್ಲಿ ಬದಲಾವಣೆಗಳಾಗಿ ವಾಂತಿ ಉಂಟಾಗಿ ಅದರಲ್ಲಿ ರಕ್ತ ಬರುವಿಕೆ ಕಾಣಿಸಿಕೊಂಡರೆ ಅಥವಾ ನಿಮ್ಮ ರೋಗಲಕ್ಷಣಗಳು ಉಲ್ಭಣಿಸಿದ್ದರೆ ಅಥವಾ ಔಷಧಿಗಳಿಗೆ ದೇಹ ಪ್ರತಿಕ್ರಿಯಿಸದಿದ್ದರೆ ತಕ್ಷಣವೇ ವೈದ್ಯರಲ್ಲಿಗೆ ಹಿಂತಿರುಗಿ. ಜೊತೆಗೆ ನಿಮ್ಮ ವೈದ್ಯರನ್ನು ನಿಮ್ಮನ್ನು ಈ ಕೆಳಗಿನ ಪರೀಕ್ಷೆಗೆ ಒಳಪಡಿಸುವಂತೆ ಕೇಳಿಕೊಳ್ಳಿ.

4. ನೋವು ನಿವಾರಕ ಮಾತ್ರೆ

4. ನೋವು ನಿವಾರಕ ಮಾತ್ರೆ

4. ನಿಮ್ಮ ಪರೀಕ್ಷೆಗಳಿಂದಾಗಿ ಅಲ್ಸರ್ ಇರುವಿಕೆ (ಉಪಸ್ಥಿತಿ) ಯನ್ನು ಖಚಿತಪಡಿಸಿಕೊಂಡು ನಿಮ್ಮ ವೈದ್ಯರ ಶಿಫಾರಸ್ಸಿನ ಮೆರೆಗೆ ಚಿಕಿತ್ಸೆಯನ್ನು ಅನುಸರಿಸಿ. ಬಹಳಷ್ಟು ಚಿಕಿತ್ಸೆಗಳು ಹುಣ್ಣುಗಳನ್ನು ತೆಗೆದುಹಾಕುತ್ತವೆ ಮತ್ತು ಉಪಶಮನ ಮಾಡುತ್ತವೆ ಅಥವಾ ಶಸ್ತ್ರಚಿಕಿತ್ಸೆ ಮೂಲಕ ಅದನ್ನು ಗುಣಪಡಿಸಬೇಕಾಗುತ್ತದೆ.

ಆಸ್ಪಿರಿನ್ ಮತ್ತು ಸ್ಟಿರಾಯ್ಡ್ ಅಲ್ಲದ ಉರಿಯೂತದ ವಿರೋಧಿ ಔಷಧಗಳು (NSAID) ಕೂಡಾ ಹುಣ್ಣನ್ನು ಕಡಿಮೆ ಮಾಡಬಹುದು. ಆದರೆ ನೀವು ಸಕ್ರಿಯ ಹುಣ್ಣು ಹೊಂದಿದ್ದರೆ, ಎನ್ಎಸ್ಎಐಡಿ ತೆಗೆದುಕೊಳ್ಳುವುದು, ಮತ್ತು ನಂತರ ದೀರ್ಘಕಾಲದವರೆಗೆ ಇದನ್ನು ಮುಂದುವರಿಸುವುದನ್ನು ನಿಲ್ಲಿಸಿ. ನೀವು ಎನ್ಎಸ್ಎಐಡಿ ( NSAID ) ತೆಗೆದುಕೊಳ್ಳಬೇಕೆಂದಿದ್ದರೆ, ನಿಮ್ಮ ಆಯ್ಕೆಗಳ ಬಗ್ಗೆ ವೈದ್ಯರಿಗೆ ಹೇಳಿ ಆಮ್ಲ ಇಳಿಸುವ ವಸ್ತುಗಳ ಜೊತೆಗೆ ಎನ್ಎಸ್ಎಐಡಿ ( NSAID) ಯನ್ನು ಪಡೆಯಬಹುದು.

ನಿಮ್ಮಲ್ಲಿ ಹುಣ್ಣಿಗೆ ಚಿಕಿತ್ಸೆ ಇಲ್ಲದೆ ಗಂಭೀರ ಅಥವಾ ಮಾರಣಾಂತಿಕ ಸಮಸ್ಯೆಗಳು ಉದ್ಭವಿಸಿದ್ದರೆ ಇದನ್ನು ಗುಣಪಡಿಸಲು ಶಸ್ತ್ರಚಿಕಿತ್ಸೆ ಅಗತ್ಯವಾಗಬಹುದು.

5. ಫೈಬರ್ ಇರುವ ಆಹಾರ

5. ಫೈಬರ್ ಇರುವ ಆಹಾರ

ಅಲ್ಸರ್ ನ್ನು ಕಡಿಮೆ ಮಾಡುವ ಮತ್ತು ಅಸ್ತಿತ್ವದಲ್ಲಿರುವ ಹುಣ್ಣು ಗುಣವಾಗಲು ಸಹಾಯವಾಗುವುದಕ್ಕೆ ಹೆಚ್ಚಿನ ಫೈಬರ್ (ನಾರಿನ) ಅಂಶಗಳನ್ನು ಸಾಕಷ್ಟು ಹೊಂದಿರುವ ಆಹಾರಗಳಾದ ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ಹೆಚ್ಚೆಚ್ಚು ಸೇವಿಸಿ.

ಪ್ಲವೊನೈಡ್ಸ್ ಅಂಶಗಳನ್ನು ಹೊಂದಿರುವ ಆಹಾರ

ಪ್ಲವೊನೈಡ್ಸ್ ಅಂಶಗಳನ್ನು ಹೊಂದಿರುವ ಆಹಾರ

ಪ್ಲವೊನೈಡ್ಸ್ ಅಂಶಗಳನ್ನು ಹೊಂದಿರುವ ಆಹಾರಗಳು ಸಾಕಷ್ಟು ತಿನ್ನಿ ಮತ್ತು ಕುಡಿಯಿರಿ. ಉತ್ತಮ ಮೂಲಗಳ ಸೇಬುಗಳು, ಸೆಲರಿ, ಕ್ರಾನ್ಬೆರ್ರಿ, ಬೆಳ್ಳುಳ್ಳಿ ಮತ್ತು ಈರುಳ್ಳಿ, ಮೊದಲಾದ ಹಣ್ಣುಗಳು ಮತ್ತು ತರಕಾರಿಗಳಿಂದ ಬರುವ ರಸಗಳನ್ನು ಕುಡಿಯಬಹುದು.

ಮಸಾಲೆಯುಕ್ತ ಆಹಾರಗಳಿಂದ ದೂರವಿರಿ

ಮಸಾಲೆಯುಕ್ತ ಆಹಾರಗಳಿಂದ ದೂರವಿರಿ

ನಿಮ್ಮ ಹುಣ್ಣಿನ ನೋವು ನಿಮ್ಮ ಆಹಾರಕ್ರಮದಲ್ಲಿನ ಮಸಾಲೆಯುಕ್ತ ಆಹಾರಗಳ ಸೇವನೆಯಿಂದ ಅಧಿಕವಾದರೆ ಅಂತಹ ಆಹಾರಗಳಿಂದ ದೂರವಿರಿ. ವೈದ್ಯರು ಈ ಮಸಾಲೆಯುಕ್ತ (ಖಾರಾ) ಆಹಾರಗಳು ಹುಣ್ಣು ಉಂಟಾಗಲು ಕಾರಣವಲ್ಲ ಎಂದು ಹೇಳಿದ್ದರೂ ಸಹ, ಕೆಲವು ಜನರಲ್ಲಿ ಅವರ ರೋಗಲಕ್ಷಣಗಳು ಇಂತಹ ಆಹಾರಗಳನ್ನು ಸೇವಿಸಿದ ನಂತರವೇ ಕಂಡುಬಂದಿರುತ್ತದೆ ಎಂದೂ ವರದಿ ಮಾಡಲಾಗಿದೆ.

8. ತಂಪು ಪಾನೀಯಾಗಳು

8. ತಂಪು ಪಾನೀಯಾಗಳು

ತಂಪು ಪಾನೀಯಗಳು, ಕಾಫಿ ಸೇರಿದಂತೆ ಅನೇಕ ಪಾನೀಯಗಳಲ್ಲಿರುವ ಆಮ್ಲತೆ ಹೊಟ್ಟೆ ಹುಣ್ಣು ರೋಗಲಕ್ಷಣಗಳನ್ನು ಉಲ್ಬಣಗೊಳಿಸಬಹುದು.

9.ಆಲ್ಕೋಹಾಲ್

9.ಆಲ್ಕೋಹಾಲ್

ನಿಮ್ಮ ಹುಣ್ಣು ಸಂಪೂರ್ಣವಾಗಿ ಗುಣಮುಖವಾಗುವ ತನಕ ಎಲ್ಲಾ ಆಲ್ಕೋಹಾಲ್ ವಸ್ತುಗಳನ್ನು ತಪ್ಪಿಸಿ. ಚಿಕಿತ್ಸೆಯ ನಂತರ ಮದ್ಯ ಕುಡಿಯುವ ಮೊದಲು ನಿಮ್ಮ ವೈದ್ಯರ ಬಳಿ ಇದರ ಬಗ್ಗೆ ಚರ್ಚಿಸಬೇಕು.

10. antioxidants ಆಹಾರಗಳು

10. antioxidants ಆಹಾರಗಳು

ಅಜೀರ್ಣ ಹಾಗೂ ಎದೆಯುರಿ ನಂತಹ ಹುಣ್ಣಿನ ಲಕ್ಷಣಗಳನ್ನು ನಿಯಂತ್ರಿಸಲು antioxidants (ಪ್ರತ್ಯಾಮ್ಲ) ಗಳನ್ನು ಬಳಸಿ.

ಈ ಮೊದಲಾದ ವಿಧಾನಗಳ ಮೂಲಕ ನಿಮ್ಮ ಹುಣ್ಣಿನಿಂದ ಸಂಪೂರ್ಣ ಮುಕ್ತಿ ಪಡೆಯಿರಿ.

English summary

How to Treat Ulcers | Tips For Health | ಅಲ್ಸರ್ ಅನ್ನು ಗುಣಪಡಿಸುವುದು ಹೇಗೆ? | ಆರೋಗ್ಯಕ್ಕಾಗಿ ಕೆಲ ಸಲಹೆಗಳು

Ulcers, also sometimes called stomach ulcers, peptic ulcers, gastric ulcers or duodenal ulcers, are sores or lesions in your stomach or the upper part of your small intestines.
X
Desktop Bottom Promotion