For Quick Alerts
ALLOW NOTIFICATIONS  
For Daily Alerts

ಈ ಟಿಪ್ಸ್ ಮದ್ಯ ಬೇಡ ಅನ್ನುವವರಿಗೆ ಮಾತ್ರ!

By Super
|

ಒಂದು ವೇಳೆ ನಿಮಗೆ ಮದ್ಯಪಾನದ ಅಭ್ಯಾಸವಿದ್ದು, ಇದನ್ನು ಓದುತ್ತಿದ್ದೀರಿ ಅಂದರೆ ಖಂಡಿತ ಆ ಚಟವನ್ನು ಬಿಡಲು ಬಯಸುತ್ತಿದ್ದೀರಿ ಎಂದರ್ಥ. ಮದ್ಯಪಾನ ಚಟವನ್ನು ಹೊಂದಿರುವವರಿಗೆ ಆ ಅಭ್ಯಾಸವನ್ನು ಬಿಡಿಸುವುದು ತುಂಬ ಕಷ್ಟ. ಕುಡಿತವನ್ನು ಬಿಡಿಸಲು ಪ್ರಯತ್ನಿಸಿ, ವಿಫಲವಾದ ಅದೆಷ್ಟೋ ಘಟನೆಗಳನ್ನು ನಾವು ಕಾಣುತ್ತೇವೆ. ಕುಡಿದ ಮತ್ತಿನಲ್ಲಿ ಸಂಸಾರಕ್ಕೆ ತೊಂದರೆಯನ್ನು ನೀಡುವ ಹಲವಾರು ಜನರು ನಮ್ಮ ನಡುವೆ ಇದ್ದಾರೆ. ಈ ಪ್ರಕ್ರಿಯೆ ನಿರಂತರವಾಗಿ ಮುಂದುವರಿದೇ ಇದೆ.

ಈ ಕುಡಿತದ ಚಟದಿಂದ ದೂರವುಳಿಯಲು ಇಂದು ಹಲವಾರು ಮಾರ್ಗಗಳಿವೆ. ಮದ್ಯಪಾನದ ಅಭ್ಯಾಸವನ್ನು ಬಿಡುವುದು ನೋವಿನ ಸಂಗತಿಯಾಗಿದ್ದರೂ (ಮದ್ಯಪಾನ ಮಾಡುವವರಿಗೆ) ಒಂದು ಉತ್ತಮವಾದ ಸುದ್ಧಿಯೆಂದರೆ, ವೈದ್ಯಕೀಯ ತಂತ್ರಜ್ಞಾನ, ಸಂಘಟಿತ ಸಮುದಾಯಗಳು ಮತ್ತು ಪರಿಣಾಮಕಾರಿ ಮನೋವೈಜ್ಞಾನಿಕ ಸಲಹೆ ಇವು ಮದ್ಯಪಾನ ಬಿಡುವುದನ್ನು ಎಂದಿಗಿಂತಲೂ ಸುಲಭವಾಗಿ ಮಾಡಿವೆ. ನೀವು ಅಧಿಕವಾಗಿ ಕುಡಿಯುತ್ತಿದ್ದಿರಿ ಎಂದು ಭಾಸವಾದರೆ ಅದನ್ನು ಬಿಡುವುದರಿಂದ ಹಲವಾರು ಪ್ರಯೋಜನಗಳಿವೆ.

ಪಾರ್ಶ್ವವಾಯುವನ್ನು ತಡೆಯುವುದು, ತೂಕ ಕಳೆದುಕೊಳ್ಳುವುದನ್ನು ತಪ್ಪಿಸುವುದು, ಜಡತ್ವ ತಪ್ಪಿಸುವುದು, ಮತ್ತು ಯಕೃತ್ತಿನ ರೋಗದ ಸಾಧ್ಯತೆಯನ್ನು ಕಡಿಮೆ ಮಾಡುವುದು ಹೀಗೆ ಒಟ್ಟಾರೆ ನಿಮ್ಮ ಆರೋಗ್ಯ ಉತ್ತಮವಾಗಿರುವಂತೆ ನೋಡಿಕೊಳ್ಳಬಹುದು. ನೀವು ಕುಡಿಯುವುದನ್ನು ನಿಲ್ಲಿಸಲು ಬಯಸಿದರೆ, ಇಲ್ಲಿ ನಿಮ್ಮ ಸಮಚಿತ್ತತೆಯನ್ನು ಮರಳಿ ಪಡೆಯಲು ಕೆಲವು ಸಲಹೆಗಳು ಮತ್ತು ಮಾರ್ಗವನ್ನು ಹೇಳಲಾಗಿದೆ.

How to Quit Drinking Alcohol

ಮದ್ಯಪಾನವನ್ನು ಬಿಡುವುದು ಹೇಗೆ ?

1. ನಿಮ್ಮ ವೈದ್ಯರೊಂದಿಗೆ ಮೊದಲು ಮಾತನಾಡಿ. ನೀವು ನಿಮ್ಮ ಸ್ವಂತ ಅಭಿಲಾಷೆಯಿಂದ ಚೇತರಿಕೆಯ ಹಾದಿ ಪ್ರಾರಂಭಿಸಲು ಆಯ್ಕೆ ಮಾಡಿದ್ದರೆ, ಕುಡಿತ ತ್ಯಜಿಸಿದರೆ ಸಂಭಾವ್ಯ ಮಾರಕ ರೋಗಗಳನ್ನು ತಡೆಯಬಹುದು ಎಂಬುದನ್ನು ನಿಮ್ಮ ಮನಸ್ಸಿನಲ್ಲಿ ಗ್ರಹಿಸಿಕೊಳ್ಳಿ. ಅಥವಾ ನಿಮ್ಮಲ್ಲಿ ಮದ್ಯಪಾನ ಬಿಟ್ಟಾಗ ಕೈಕಾಲು ನಡುಗುವುದು, ತೀವ್ರ ಆತಂಕ, ಬೆವರುವುದು, ತೀವ್ರ ಹೃದಯದ ಬಡಿತ ಲಕ್ಷಣಗಳು ಕಾಣಿಸಿಕೊಂಡಲ್ಲಿ ನೀವು ತಕ್ಷಣ ವೈದ್ಯಕೀಯ ನೆರವನ್ನು ಪಡೆಯಬೇಕು.

2. ಮದ್ಯಪಾನ ತ್ಯಜಿಸುವ ಬಗ್ಗೆ ನಿಮ್ಮ ನಿಲುವನ್ನು ಬದಲಿಸಿ. ನೀವು ನಿಮ್ಮನ್ನು ಉತ್ತಮವಾಗಿ ನೋಡಿಕೊಳ್ಳುತ್ತಿದ್ದ ಒಳ್ಳೆಯ ಸ್ನೇಹಿತ ನನ್ನು ಬಿಟ್ಟುಬಿಡಲು ಬಲವಂತವಾಗಿ ಮುಂದಾಗುತ್ತಿಲ್ಲ. ಬದಲಿಗೆ, ನೀವು ಅಂತಿಮವಾಗಿ ಒಂದು ಶತ್ರುವನ್ನು ನಿಮ್ಮಿಂದ ನೀವೇ ದೂರಮಾಡುತ್ತಿದ್ದೀರಿ ಎಂಬುದನ್ನು ನೆನಪಿಡಿ. ಇದರಿಂದ ಮದ್ಯಪಾನ ತೊರೆಯಲು ಸುಲಭ ಸಾಧ್ಯವಾಗುತ್ತದೆ. ಆದ್ದರಿಂದ ನಿಮ್ಮ ವರ್ತನೆಯನ್ನು ಈ ಕಾರ್ಯಕ್ಕಾಗಿ ಹೊಂದಿಸಿ. ನಿಮ್ಮ ಮನಸ್ಸಿನ ಉತ್ತಮವಾದ ಅರ್ಧ ಭಾಗ ನೀವು ಈ ಚಟವನ್ನು ಬಿಟ್ಟು ಬಿಡಲು ಬಯಸಿದರೆ ನಿಮ್ಮ ಮನಸ್ಸಿನ ಸ್ವಾರ್ಥಿಯಾದ ಅರ್ಧ ಭಾಗ ನೀವು ಅದೇ ದುರಭ್ಯಾಸದಲ್ಲಿಯೇ ಉಳಿಯಲು ಬಯಸುತ್ತದೆ.

3. ನೀವು ಮದ್ಯಪಾನವನ್ನು ಬಿಡಲು ಕೆಲವು ಗಮನಾರ್ಹ ದಿನಾಂಕವನ್ನು ಆಯ್ಕೆ ಮಾಡಲು ಪ್ರಯತ್ನಿಸಿ. ಮಹತ್ವಾಕಾಂಕ್ಷಿಗಳಾಗಿರಿ, ಆದರೆ ಅದು ಸಮಂಜಸವಾಗಿರಲಿ. ನೀವು ಅತೀಯಾಗಿ ಕುಡಿತವನ್ನು ಮಾಡುವವರಾಗಿದ್ದರೆ ಈ ಸಂದರ್ಭದಲ್ಲಿ ಕುಡಿತವನ್ನು ಬಿಡುವುದಕ್ಕೆ ಸೂಕ್ತವಾದ ದಿನಾಂಕವನ್ನು ನಿಗದಿಪಡಿಸಲು ನಿಮ್ಮ ವೈದ್ಯರ ಸಹಾಯ ಪಡೆಯಿರಿ.

4. ನಿಮ್ಮಲ್ಲಿರುವ ಮದ್ಯಪಾನದ ಎಲ್ಲಾ ಬಾಟಲಿಗಳು, ಡಬ್ಬಿಗಳು ಮೊದಲಾದವುಗಳನ್ನು ಬಿಸಾಡಿ. ನಿಮ್ಮ ಮನೆಗೆ ಬಂದ ಅತಿಥಿಗಳಿಗೆ ಬಿಯರ್, ವೈನ್, ಅಥವಾ ಕಾಕ್ಟೈಲ್ ನೀಡುವ ಅಗತ್ಯವಿದೆ ಎಂಬುದನ್ನು ನಿಮ್ಮ ಮನಸ್ಸಿನಿಂದ ಮೊದಲು ನಿವಾರಿಸಿ. ಜನರು ಟೀ, ನಿಂಬೆ ಪಾನಕ, ಕೋಕ್, ಅಥವಾ ಇಂತಹ ಪಾನೀಯಗಳನ್ನು ನೀಡುವುದೂ ಉತ್ತಮವಾದುದಾಗಿದೆ.

5. ಆರಂಭಿಕ ಹಂತದಲ್ಲಿ, ಆಲ್ಕೋಹಾಲ್ ಸೇವನೆಯ ಪ್ರಮಾಣವನ್ನು ಕಡಿಮೆ ಮಾಡಿ. ನೀವು ಬಹುಶಃ ಒಂದು ವಾರದಲ್ಲಿ ನಿಮ್ಮ ಅಭ್ಯಾಸವನ್ನು ಹೊರಗಟ್ಟುವುದು ಸಾಧ್ಯವಿಲ್ಲ. ಆದ್ದರಿಂದ ಆರಂಭದಲ್ಲಿ, ಕೇವಲ ನೀವು ಸೇವಿಸುವ ಆಲ್ಕೋಹಾಲ್ ಪ್ರಮಾಣವನ್ನು ಕಡಿಮೆ ಮಾಡಲು ಪ್ರಯತ್ನಿಸಿ. ಹೆಚ್ಚಿನ ಆಲ್ಕೊಹಾಲ್ ಸೇವನೆಯ ಕಾರಣ, ನೀವು ವಾಂತಿ ಮತ್ತು ಪಾರ್ಶ್ವವಾಯುವಿನಿಂದ, ತಲೆನೋವಿನಿಂದ ಬಳಲಬೇಕಾಗುತ್ತದೆ ಎಂಬುದನ್ನು ಊಹಿಸಿಕೊಳ್ಳಿ. ನೀವು ಕುಡಿಯುವ ಮೊದಲು ಈ ರೀತಿಯ ಅನುಭವವಾದವರನ್ನು ನೆನಪು ಮಾಡಿಕೊಳ್ಳಿ.

6. ನೀವು ಕುಡಿಯುವ ಮೊದಲು ಆಹಾರ ಸೇವಿಸಿ. ಕುಡಿಯುವ ಮೊದಲು ಊಟ, ಆಹಾರ ಸೇವಿಸಿದರೆ ಅದು ಕುಡಿಯುವ ನಿಮ್ಮ ಆಸಕ್ತಿಯನ್ನು ಕಡಿಮೆಯಾಗಿಸುತ್ತದೆ. ನೀವು ಇದನ್ನು ಮಾಡಿದರೆ, ನಿಮ್ಮ ದೇಹವು ಕುಡಿಯುವುದಕ್ಕಾಗಿ ಯಾವುದೇ ಆಹಾರವನ್ನೂ ಸೇವಿಸದೆ ನಿಮ್ಮನ್ನು ನೀವೆ ಮೋಸ ಗೊಳಿಸಬೇಡಿ.

7. ನೀವು ನಿಗದಿತ ಸಮಯದಲ್ಲಿ ಕುಡಿಯುವವರಾಗಿದ್ದರೆ ನಿಮ್ಮ ದಿನನಿತ್ಯದ ಸಮಯವನ್ನು ಬದಲಾಯಿಸಬಹುದು. ನೀವು ಕೆಲಸದ ನಂತರ ಅಥವಾ ನೀವು ಮನೆಗೆ ಹೋಗಿ ಕುಡಿಯುವುದನ್ನು ಆರಂಭಿಸುವ ವೇಳೆ, ಮತ್ತೊಂದು ಚಟುವಟಿಕೆಯಲ್ಲಿ ತೊಡಗಿಕೊಳ್ಳಿ. ನಿಮ್ಮ ಪೋಷಕರು ಅಥವಾ ಸ್ನೇಹಿತರನ್ನು ಈ ಸಮಯದಲ್ಲಿ ಭೇಟಿ ಮಾಡಿ.

8. ಮದ್ಯ ಬಿಡಲು ಮೊದಲ ವಾರದಲ್ಲಿ ದೈನಂದಿನ ಆಹಾರದಲ್ಲಿ ಬಿ ಜೀವಸತ್ವ ಪೂರಕ ಆಹಾರಗಳನ್ನು ತೆಗೆದುಕೊಳ್ಳಿ. ಈ ಮದ್ಯಪಾನವು ಜೀವಸತ್ವಗಳನ್ನು ಹೀರಿಕೊಳ್ಳುವ ದೇಹದ ಸಾಮರ್ಥ್ಯದ ಮೇಲೆ ಪರಿಣಾಮವನ್ನು ಬೀರುತ್ತದೆ. ಈ ಕೊರತೆ ವೆರ್ನಿಕೆ-ಕೊರ್ಸಾಕೋಫ್ಸ್ ಸಿಂಡ್ರೋಮ್ ಅಥವಾ ಆರ್ದ್ರ ಮೆದುಳು ಸೇರಿದಂತೆ ತೀವ್ರ ಅರಿವಿನ ಕೊರತೆ ಉಂಟಾಗಲು ಕಾರಣವಾಗಬಹುದು.

9. ನೀವು ಮದ್ಯ ಪಾನೀಯ ಸೇವಿಸುವುದಿಲ್ಲ ಎಂದು ನಿಮಗೆ ನೀವೇ ಪ್ರತಿದಿನ ಅಥವಾ ಪ್ರತಿ ಗಂಟೆಗೆ ಒಂದು ಬಹುಮಾನ ನೀಡಿ. ಆರಂಭದಲ್ಲಿ, ಇದು ನಿರೀಕ್ಷೆಗಿಂತ ಹೆಚ್ಚು ವ್ಯತ್ಯಾಸ ತರಬಲ್ಲದು. ನಿಮ್ಮ ಬಹುಮಾನವನ್ನು ನಿಮ್ಮ ಪಂದ್ಯ ಅಂತ್ಯ ಗೊಳ್ಳುವವರೆಗೆ ಕುಟುಂಬದ ಸದಸ್ಯರು ಅಥವಾ ಸ್ನೇಹಿತರ ಬಳಿ ನೀಡಿ. ನೀವು ಒಂದು ಗಂಟೆ, ಅಥವಾ ದಿನದ ನಂತರ ನಿಮ್ಮ ಸಮಚಿತ್ತತೆಯನ್ನು ಕಾಪಾಡುವಲ್ಲಿ ಯಶಸ್ವಿಯಾಗಿದ್ದೀರೆ ಎಂದು ಸ್ನೇಹಿತನ ಜೊತೆ ಪರಿಶೀಲಿಸಿ ಮತ್ತು ನಿಮ್ಮ ಪ್ರಸ್ತುತತೆಯನ್ನು ಉಳಿಸಿಕೊಳ್ಳಿ !

10. ಜನರೊಂದಿಗೆ ಅಥವಾ ನೀವು ಕುಡಿಯಲು ನೀಡಬಹುದಾದ ಸಂದರ್ಭಗಳಲ್ಲಿ ನೀವೇ ಕುಡಿಯುವ ಬಾಟಲಿಗಳನ್ನು ಆ ಜಾಗದಲ್ಲಿ ಇರಿಸಬೇಡಿ. "ಆಟದ ಮೈದಾನಗಳು ಮತ್ತು ಜೊತೆಯಾಟಗಾರರು” ಎಂಬ ಹಳೆಯ ಹೇಳಿಕೆಯಂತೆ – ನೀವು, ನೀವು ಹಿಂದೆ ನಿಮ್ಮ ಕುಡಿತಕ್ಕೆ ಜೊತೆಯಾಗಿದ್ದ ಹಳೆಯ ಸ್ನೇಹಿತರನ್ನು ಬಿಟ್ಟು ಬಿಡಬೇಕಾಗುತ್ತದೆ. ಒಂದು ಮಾತಿನಂತೆ, ನಿಮ್ಮೊಂದಿಗೆ ಕುಡಿಯುತ್ತಿದ್ದ ನಿಮ್ಮ ಸ್ನೇಹಿತರು ಸಾಂದರ್ಭಿಕವಾಗಿ ಕುಡಿಯುತ್ತಿದ್ದರು ಹಾಗೂ ಅವರು ನಿಮಗಿಂತ ಕಡಿಮೆ ಕುಡಿಯುತ್ತಿದ್ದರು ಎಂದು ನಿಮ್ಮ ಅರಿವಿಗೆ ಬರುವುದು ಕಷ್ಟ ಸಾಧ್ಯ !

ಒಟ್ಟಿನಲ್ಲಿ ನಿಮ್ಮ ಆರೋಗ್ಯದ ದೃಷ್ಟಿಯಿಂದ ಹಾಗೂ ಕುಟಂಬದ ಒಳಿತಿಗಾಗಿ ನೀವು ಮದ್ಯಪಾನದಿಂದ ದೂರ ಉಳಿಯುವುದು ಸೂಕ್ತ.

English summary

How to Quit Drinking Alcohol | Tips For Health | ಮದ್ಯಪಾನದ ಚಟ ಬಿಡುವುದು ಹೇಗೆ? | ಆರೋಗ್ಯಕ್ಕಾಗಿ ಕೆಲ ಸಲಹೆಗಳು

You're looking at this page, which means you want to quit. That's the good news. The not-so-good news is that quitting is hard. It's a truth that is painful, and one shouldn't sugar-coat it.
X
Desktop Bottom Promotion