For Quick Alerts
ALLOW NOTIFICATIONS  
For Daily Alerts

ಸ್ನಾಯು ಸೆಳೆತ ತಡೆಗಟ್ಟುವ ಮಾರ್ಗಗಳು

By Super
|

ಅಯ್ಯೋ ಕಾಲು ನೋವು ಕುಳಿತಿಕೊಳ್ಳುವ ಹಾಗಿಲ್ಲ, ನಿಲ್ಲುವ ಹಾಗಿಲ್ಲ ಸದಾ ನೋವು. ಹೀಗೆ ಆಗಾಗ ಉಂಟಾಗುವ ಸಮಸ್ಯೆ ಕೆಲವರಲ್ಲಿದೆ. ಈ ಸ್ನಾಯು ಸೆಳೆತ ಅಥವಾ ಮಾಂಸಖಂಡಗಳ ಸೆಳೆತ ಅತ್ಯಂತ ತೊಂದರೆದಾಯಕ. ಇದು ಯಾವಾಗಲೂ ಬರದಿದ್ದರೂ ಆಗಾಗ ಅಂದರೆ ವ್ಯಾಯಾಮ ಮಾಡುವಾಗ, ರಾತ್ರಿ ಮಲಗಿದಾಗ ಅಥವಾ ಯಾವುದಾದರೂ ಕೆಲಸದಲ್ಲಿ ತೊಡಗಿರುವಾಗ ಬಂದು ಒಕ್ಕರಿಸಿಕೊಳ್ಳುತ್ತದೆ. ಹೆಚ್ಚು ಕಮ್ಮಿ ಹದಿನೈದು ನಿಮಿಷಗಳ ಕಾಲ ಈ ನೋವನ್ನು ಸಹಿಸಿಕೊಳ್ಳಲೇ ಬೇಕು!

ಕಾಲಿನ ಸೆಳೆತಕ್ಕೆ ಕಾರಣಗಳು:
ಸ್ನಾಯು ದೌರ್ಬಲ್ಯ
ವಿಪರೀತ ಸ್ನಾಯುವಿನ ಬಳಕೆ
ಬೆವರಿನಿಂದಾಗಿ ದೇಹದಲ್ಲಿ ಎಲೆಕ್ಟ್ರೊಲೈಟ್ ಗಳು ಕೊರತೆ (ಸಿಎ ಮತ್ತು ಕೆ)
ದೇಹದಲ್ಲಿ ಲ್ಯಾಕ್ಟಿಕ್ ಆಮ್ಲ ನಿರ್ಮಾಣವಾದಾಗ (ಸ್ನಾಯುಗಳಲ್ಲಿ ಚಯಾಪಚಯ ಉತ್ಪನ್ನಗಳು)
ಮಾಂಸಖಂಡಗಳಲ್ಲಿ ಆಮ್ಲಜನಕದ ಪೂರೈಕೆಯಲ್ಲಿ ವ್ಯತ್ಯಯ
ಅಂಗಾಂಶಗಳಲ್ಲಿ ರಕ್ತ ಪರಿಚಲನೆಗೆ ತಡೆ ಉಂಟಾದಾಗ

ಸ್ನಾಯು ಸೆಳೆತವನ್ನು ತಡೆಯಲು ಟಿಪ್ಸ್:
ಅತಿಯಾದ ಹಾಗೂ ಆಗಾಗ ಕಾಡುವ ಸ್ನಾಯು ಸೆಳೆತದಿಂದ ತಪ್ಪಿಸಿಕೊಳ್ಳಲು ಇಲ್ಲಿ ಕೆಲವು ಮಾರ್ಗೋಪಾಯಗಳನ್ನು ಹೇಳಲಾಗಿದೆ.

1. ಹೈ ಹೀಲ್ಸ್ ಚಪ್ಪಲಿಹಾಕಬೇಡಿ

1. ಹೈ ಹೀಲ್ಸ್ ಚಪ್ಪಲಿಹಾಕಬೇಡಿ

ಇಂತಹ ಚಪ್ಪಲಿಗಳಲ್ಲಿ ಬೆರಳುಗಳು ಯಾವಾಗಲು ಬಾಗಿರುವುದರಿಂದ ರಕ್ತದ ಪರಿಚಲನೆ ಸರಿಯಾಗಿ ಆಗದೆ ಕಾಲು ನೋವು ಉಂಟಾಗುತ್ತದೆ.

2. ಸಡಿಲವಾದ ಶೂಗಳನ್ನು ಉಪಯೋಗಿಸಿ

2. ಸಡಿಲವಾದ ಶೂಗಳನ್ನು ಉಪಯೋಗಿಸಿ

ಅತ್ಯಂತ ಬಿಗಿಯಾದ ಶೂಗಳನ್ನು ಬಳಸುವುದರಿಂದ ನಡೆಯುವಾಗ ಅಥವಾ ಬಹಳ ಹೊತ್ತು ನಿಂತಾಗ ಕಾಲಿನ ಬೆರಳುಗಳ ಮೇಲೆ ಒತ್ತಡ ಬಿದ್ದು ಸೆಳೆತ ಉಂಟಾಗುತ್ತದೆ. ಆದ್ದರಿಂದ ನೀವು ಧರಿಸುವ ಶೂಗಳು ಸಡಿಲವಾಗಿರಲಿ.

3. ದೇಹದಲ್ಲಿ ನೀರಿನಂಶದ ಸಮತೋಲನ

3. ದೇಹದಲ್ಲಿ ನೀರಿನಂಶದ ಸಮತೋಲನ

ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾದಾಗ ಸ್ನಾಯು ಸೆಳೆತ ಉಂಟಾಗುವುದು ಸಹಜ. ಆದ್ದರಿಂದ ವ್ಯಾಯಾಮ ಅಥವಾ ಅತೀಯಾಗಿ ಬೆವರುತ್ತಿರುವ ಸಂದರ್ಭದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಕುಡಿಯಿರಿ.

4. ಅಸಪರ್ಪಕ ಖನಿಜಗಳ ಪೂರೈಕೆ

4. ಅಸಪರ್ಪಕ ಖನಿಜಗಳ ಪೂರೈಕೆ

ಕಾಲ್ಬೆರಳುಗಳ ಸೆಳೆತಕ್ಕೆ ದೇಹದಲ್ಲಿ ವಿಶೇಷವಾಗಿ ಖನಿಜಗಳು, ಕ್ಯಾಲ್ಸಿಯಂ, ಪೊಟ್ಯಾಶಿಯಂ ಮತ್ತು ಮೆಗ್ನೀಶಿಯಂ ಕೊರತೆಯೇ ಕಾರಣ. ದಿನಕ್ಕೆ ಕನಿಷ್ಠ 1,000 ಮಿ.ಗ್ರಾಂ ಕ್ಯಾಲ್ಸಿಯಂ ಮತ್ತು 4.7 ಗ್ರಾಂ ಪೊಟ್ಯಾಶಿಯಂ ಸೇವಿಸಬೇಕು. ವಿಶೇಷವಾಗಿ ಮೆಗ್ನೀಶಿಯಂನ್ನು ಪುರುಷರು ದಿನಕ್ಕೆ 400-420 ಮಿ.ಗ್ರಾಂ ಮತ್ತು ಮಹಿಳೆಯರು 310-320 ಮಿ.ಗ್ರಾಂ ಸೇವಿಸಬೇಕು.

5. ಕಾಲ್ಬೆರಳ ಚಲನೆ

5. ಕಾಲ್ಬೆರಳ ಚಲನೆ

ಕಾಲ್ಬೆರಳುಗಳ ಚಲನೆಗೆ ಯಾವುದೇ ವಿಶೇಷ ತರಬೇತಿ ಅಥವಾ ಉಪಕರಣಗಳು ಬೇಕಾಗಿಲ್ಲ. ಟವಲ್ ಸಹಾಯದಿಂದ ಅಥವಾ ಶಾಂತವಾಗಿ ಕುಳಿತಿರುವಾಗ ನೀವೆ ಕಾಲ್ಬೆರಳುಗಳ ಚಲನೆಯನ್ನು ಮಾಡಬಹುದು.

6. ಮಸಾಜ್ ಅಥವಾ ಬಿಸಿ ನೀರಿ ಶಾಖ ಕೊಡುವುದು

6. ಮಸಾಜ್ ಅಥವಾ ಬಿಸಿ ನೀರಿ ಶಾಖ ಕೊಡುವುದು

ರಕ್ತ ಪರಿಚಲನೆಗೆ ಸಹಾಯಕವಾಗುವ ಹಾಗೇ ಸ್ನಾಯುಗಳನ್ನು ಸಡಿಲಿಸಲು ಸಾಕಷ್ಟು ಮಾರ್ಗಗಳಿವೆ. ಆದರೆ ಅವುಗಳಿಗಿಂತ ಆಗಾಗ್ಗೆ ಮಸಾಜ್ ಮಾಡುವುದು ಅತ್ಯಂತ ಸುಲಭವಾದ ವಿಧಾನವಾಗಿದೆ. ಹಾಗೆಯೇ ಬಿಸಿ ನೀರಿನ ಸ್ನಾನ ಕೂಡ ಸ್ನಾಯುಗಳ ಸಡಿಲಿಕೆಗೆ ಸಹಾಯಕವಾಗಿದೆ.

7. ನಿರಂತರ ವ್ಯಾಯಾಮ

7. ನಿರಂತರ ವ್ಯಾಯಾಮ

ಕಾಲುಗಳಿಗೆ ಸಂಬಂಧಿಸಿದ ವ್ಯಾಯಾಮವನ್ನು ದಿನವೂ ಮಾಡಬೇಕು. ಕಾಲುಗಳನ್ನು ಮಡಚುವುದು, ಕಾಲುಗಳನ್ನು ವಿಸ್ತರಿಸಿ ಮಲಗುವುದು ರಕ್ತದ ಹರಿವಿಗೆ ನೆರವಾಗುತ್ತವೆ.

8. ಪೊಟ್ಯಾಶಿಯಂ ಮತ್ತು ಕ್ಯಾಲ್ಸಿಯಂ

8. ಪೊಟ್ಯಾಶಿಯಂ ಮತ್ತು ಕ್ಯಾಲ್ಸಿಯಂ

ಈ ಎರಡೂ ಖನಿಜಾಂಶಗಳು ರಕ್ತ ಪರಿಚಲನೆಗೆ ಅತ್ಯಂತ ಅಗತ್ಯ. ಪೊಟ್ಯಾಶಿಯಂ ಅಧಿಕವಾಗಿರುವ ಆಹಾರಗಳಾದ ಬಾಳೆಹಣ್ಣು, ಕೋಳಿ, ಮೀನುಗಳನ್ನು ಸೇವಿಸಿ. ಹಾಲು ಕಡಿಮೆ ಕೊಬ್ಬಿನಂಶವಿರುವ ಮೊಸರು ಕ್ಯಾಲ್ಸಿಯಂ ಅಂಶವನ್ನು ಒದಗಿಸುತ್ತದೆ.

9. ದೇಹಕ್ಕೆ ಸೂಕ್ತವೆನಿಸುವ ಚಪ್ಪಲಿಗಳನ್ನೇ ಧರಿಸಿ

9. ದೇಹಕ್ಕೆ ಸೂಕ್ತವೆನಿಸುವ ಚಪ್ಪಲಿಗಳನ್ನೇ ಧರಿಸಿ

ನಮ್ಮ ದೇಹಕ್ಕೆ ಹಾಗೂ ಪಾದಗಳಿಗೆ ಸರಿಹೊಂದುವ ಚಪ್ಪಲಿ ಧರಿಸುವುದು ಒಳ್ಳೆಯದು. ಚಪ್ಪಲಿ ತುಂಬಾ ಬಿಗಿಯಾಗಿ ಇರದಿರಲಿ.

10. ಒಂದು ದಪ್ಪ ಹೊದಿಕೆ ಬಳಸಿ

10. ಒಂದು ದಪ್ಪ ಹೊದಿಕೆ ಬಳಸಿ

ದಪ್ಪ ಹೊದಿಕೆ ಕಾಲಿನ ಮೇಲೆ ಒತ್ತಡವನ್ನು ಹಾಕುತ್ತದೆ, ಇದರಿಂದ ಸೆಳೆತ ಕಮ್ಮಿಯಾಗುವುದು. ತಂಪಾದ ಗಾಳಿಯಲ್ಲಿ, ಬೆಚ್ಚಗಿನ ಸಾಕ್ಸ್ ಧರಿಸಿ.

English summary

How To Get Rid Of Leg Cramps | Tips For Health | ಸ್ನಾಯು ಸೆಳೆತ ತಡೆಗಟ್ಟುವ ಮಾರ್ಗಗಳು | ಆರೋಗ್ಯಕ್ಕಾಗಿ ಕೆಲ ಸಲಹೆಗಳು

Leg cramps is a very disturbing and certainly painless, can occur at any time, either in the middle of exercise, in the middle of the night and so on. Cramps usually last less than a minute, but it could be more than 15 minutes.
X
Desktop Bottom Promotion