For Quick Alerts
ALLOW NOTIFICATIONS  
For Daily Alerts

ಔಷಧ ಇಲ್ಲದೆ ಜ್ವರ ಕಡಿಮೆಗೊಳಿಸುವುದು ಹೇಗೆ?

|

ಜ್ವರ ಬಂದಾಗ ಅದರಲ್ಲೂ ಜ್ವರ ಮಕ್ಕಳಿಗೆ ಬಂದಾಗ ಯಾರಾದರೂ ಆತಂಕಗೊಳ್ಳುವುದು ಸಹಜ. ಆದರೆ ಅದೆಷ್ಟೋ ಸಲ ತಕ್ಷಣಕ್ಕೆ ವೈದ್ಯರನ್ನು ಭೇಟಿ ಮಾಡಲು ಸಾಧ್ಯವಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ಇನ್ನಷ್ಟು ಗಾಬರಿಗೊಳ್ಳುತ್ತೇವೆ. ಆದರೆ ಹೀಗೆ ಭಯಗೊಳ್ಳುವುದರ ಬದಲು ಮನೆಯಲ್ಲಿಯೇ ಕೆಲವು ಮನೆಮದ್ದುಗಳ ಮೂಲಕ, ಕೆಲವು ಪ್ರಕ್ರಿಯೆಗಳ ಮೂಲಕವೂ ಜ್ವರವನ್ನು ಕಡಿಮೆಗೊಳಿಸಬಹುದು.

ಒಂದು ಮಗು ಜ್ವರ ಹೊಂದಿರುವಾಗ, ಹೆಚ್ಚಿನ ಜನರು ಅಸೆಟಾಮಿನೋಫೆನ್ ಗಾಗಿ ಔಷಧಾಲಯಕ್ಕೆ ಮುನ್ನುಗ್ಗುತ್ತಾರೆ. ನಿಮ್ಮ ಮಕ್ಕಳು ಎಲ್ಲಾ ರಾಸಾಯನಿಕಗಳ ಬಳಕೆಯಿಂದ ಜ್ವರ ಕಡಿಮೆ ಮಾಡಲು ಕೇವಲ ಪ್ರಯತ್ನ ಪಡಬಹುದು ಅಷ್ಟೇ. ಜ್ವರದ ಲಕ್ಷಣಗಳು ಕಾಣಿಸಿಕೊಂಡಾಗ ಜ್ವರದಿಂದ ಬಳಲುತ್ತಿರುವ ಸಂದರ್ಭದಲ್ಲಿ ಬೆಚ್ಚಗೆ ಮತ್ತು ಸ್ವಚ್ಛವಾಗಿ ಇರಲು ನೆನಪಿಡಿ. ಜ್ವರ ಒಂದು ದಿನ ಅಥವಾ ಎರಡು ದಿನಗಳ ಒಳಗೆ ಕಡಿಮೆಯಾಗುತ್ತದೆ.

How to Reduce a Fever without Medication

ಸಾಮಾನ್ಯ ಸಲಹೆಗಳು

1. ಆರ್ದ್ರಯುಕ್ತ ಸಾಕ್ಸ್ ಗಳನ್ನು ಕಾಲುಗಳಿಗೆ ಧರಿಸಿ. ಇದು ವಿಲಕ್ಷಣ ಎನಿಸಿದರು ನಿಮ್ಮ ಮಕ್ಕಳ ಜ್ವರ ನಿವಾರಣೆಯಾಗುವಲ್ಲಿ ಸಹಾಯವಾಗುತ್ತದೆ. ಒಂದು ಜೊತೆ ಕಾಟನ್/ ಹತ್ತಿ ಸಾಕ್ಸ್ (ಕಾಲುಚೀಲ) ಗಳನ್ನು ಬಳಸಿ ಮತ್ತು ಅವು ನಿಮ್ಮ ಮಗುವಿನ ಮೊಣಕಾಲುಗಳವರೆಗೆ ಮುಚ್ಚುವ ಹಾಗಿರಲಿ. ಅತ್ಯಂತ ತಂಪಾದ ನೀರಿನಲ್ಲಿ ಸಾಕ್ಸ್ ಗಳನ್ನು ಸಂಪೂರ್ಣವಾಗಿ ಒದ್ದೆ ಮಾಡಿ. ಹೆಚ್ಚುವರಿ ನೀರನ್ನು ಹಿಂಡಿ ತೆಗೆಯಿರಿ. ನಿಮ್ಮ ಮಗುವಿಗೆ ಈ ಸಾಕ್ಸ್ ನ್ನು ಹಾಕಿ. ಹಾಗೂ ಸಾಕ್ಸ್ ಒಣಗಿದರೆ ಮತ್ತೆ ಹಿಂದಿನ ಪ್ರಕ್ರಿಯೆಯನ್ನೇ ಮಾಡಿ.

2. ಬೆಚ್ಚಗಿನ ಅಥವಾ ಕುದುಷ್ಣ ಸ್ನಾನವನ್ನು ಮಾಡಿ. ಬೆಚ್ಚಗಿನ ಸ್ನಾನ ಉತ್ತಮವಾದುದು. ಜ್ವರದಿಂದ ಬಳಲುತ್ತಿರುವ ವ್ಯಕ್ತಿಯಲ್ಲಿ ಜ್ವರವು ಹೆಚ್ಚುತ್ತಿದ್ದರೆ ಬೆಚ್ಚಗಿನ ತಾಪಮಾನದಲ್ಲಿ ನಿಧಾನವಾಗಿ ಜ್ವರ ಇಳಿಯುತ್ತದೆ. ಆದ್ದರಿಂದ ಬೆಚ್ಚಗಿನ ಸ್ನಾನ ಒಳ್ಳೆಯದು. ವ್ಯಕ್ತಿ ದೇಹದ ತಾಪಮಾನದಲ್ಲಾದ ಬದಲಾವಣೆಗಳನ್ನು ಗಮನಿಸಬಹುದು. ಸ್ವಲ್ಪ ತಾಪಮಾನ ಉಳಿಸಿಕೊಳ್ಳಲು (ತುಲನಾತ್ಮಕವಾಗಿ) ತಂಪಾದ, ತೇವ ನೀರನ್ನು ಬಳಸಬಹುದು.

3. ತಲೆ ಮತ್ತು ಕುತ್ತಿಗೆಯ ಭಾಗಗಳನ್ನು ತಂಪಾಗಿಡಿ. ಅತಿ ಹೆಚ್ಚು ಜ್ವರ ಬಂದಾಗ ದೊಡ್ಡ ಹತ್ತಿಯ/ ಕಾಟನ್ ಸ್ಕಾರ್ಫ್ ತೆಗೆದುಕೊಂಡು ಹೆಚ್ಚುವರಿ ನೀರನ್ನು ಹಿಂಡಿ ಮಗುವಿನ ತಲೆ ಮತ್ತು ಕುತ್ತಿಗೆಯ ಸುತ್ತ ಸ್ಕಾರ್ಫ್ ನ್ನು ಅತ್ಯಂತ ಸಡಿಲವಾಗಿ ಸುತ್ತಿ. ಯಾವಾಗ ಸ್ಕಾರ್ಫ್ ಒಣಗುತ್ತದೆಯೋ ಇದೇ ಕ್ರಿಯೆಯನ್ನು ಪುನರಾವರ್ತಿಸಿ.

4. ತೈಲ ರಬ್ ನ್ನು ಬಳಸಿ. ಎರಡು ವರ್ಷಗಳ ಒಳಗಿನ ಮಗುವಿಗೆ ಮಲಗಿಸುವುದಕ್ಕಿಂತ ಮೊದಲು ಶುದ್ಧ ಆಲಿವ್ ಎಣ್ಣೆಯಿಂದ ಇಡೀ ದೇಹವನ್ನು ರಬ್ ಮಾಡಿ ಮತ್ತು ಹತ್ತಿ ಉಡುಪುಗಳ ಅಥವಾ ಹೊದಿಕೆಯನ್ನು ಉತ್ತಮ ಮಗುವನ್ನು ಕಟ್ಟಿ ಮಲಗಿಸಿ. ನಂತರ ತೈಲ ತೆಗೆದುಹಾಕಲು ಬೆಳಗ್ಗೆ ಸ್ನಾನ ಮಾಡಿಸಿ ಈ ಹಂತವೂ ತೇವ ಸಾಕ್ಸ್ ಜೊತೆಗೆ ಚೆನ್ನಾಗಿ ಕಾರ್ಯನಿರ್ವಹಿಸುತ್ತದೆ.

5. ಸಾಕಷ್ಟು ನೀರನ್ನು ಕುಡಿಯಿರಿ. ಜ್ವರವು ದೇಹದಲ್ಲಿನ ಜೀವಿಗಳೊಂದಿಗೆ ಹೋರಾಟ ಮಾಡುವ ದೇಹದ ನೈಸರ್ಗಿಕ ಪ್ರತಿಕ್ರಿಯೆಯಾಗಿದೆ. ಆದರೆ ಅತೀ ಶಾಖ ಎಂದರೆ ಕಡಿಮೆ ಹೈಡ್ರೇಶನ್ ಎಂದರ್ಥ. ಅದರಲ್ಲೂ ಅತಿಸಾರ ಅಥವಾ ವಾಂತಿ ಸಂದರ್ಭದಲ್ಲಿ, ನಿಮ್ಮ ದೇಹದಲ್ಲಿ ಅಗತ್ಯದಷ್ಟು ನೀರಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಸದಾ ನೀರನ್ನು ಕುಡಿಯುತ್ತಿರಿ.

6. ಒಂದು ಲಘು ಬಟ್ಟೆಯನ್ನು ಧರಿಸಿ ಮತ್ತು ದಪ್ಪ ಬಟ್ಟೆಗಳನ್ನು ಧರಿಸಬೇಡಿ. ದಪ್ಪ ಬಟ್ಟೆ ನಿಮ್ಮ ದೇಹದ ಉಷ್ಣತೆ ಹೆಚ್ಚಾಗುವಂತೆ ಮಾಡುತ್ತದೆ. ನಿಮಗೆ ಚಳಿಯ ಅನುಭವವಾರದೂ ಸಹ ನಿಮ್ಮ ಸಂಪೂರ್ಣ ದೇಹವನ್ನು ಹೊದಿಕೆಗಳಿಂದ ಮುಚ್ಚಿಕೊಳ್ಳಬೇಡಿ. ಹೀಗೆ ಮಾಡುವುದರಿಂದ ನಿಮ್ಮ ದೇಹದ ತಾಪಮಾನ ಅಧಿಕವಾಗುತ್ತದೆ.

7. ತ್ವರಿತ ರೀತಿಯಲ್ಲಿ ನಿಮ್ಮ ದೇಹದ ತಾಪಮಾನ ತಗ್ಗಿಸಲು ಹುಣಿಸೆಹಣ್ಣಿನ ರಸ ಅಥವಾ ಅಲೋ ವೆರಾ ಜೆಲ್ ಅಥವಾ ಪೇರಲ ಎಲೆಯ ರಸವನ್ನು ಬಳಸಿ. ಹಣೆಗೆ ರಸವನ್ನು ಹಚ್ಚಿ. ಇದು ನಿಮ್ಮ ದೇಹದ ತಾಪಮಾನ ಇಳಿಕೆಯಾಗುವವರೆಗೆ ಮತ್ತೆ ಹಚ್ಚಿ. ನಿಮ್ಮ ಮನೆಯಲ್ಲಿ ಗಾಳಿಯು ಎಲ್ಲಾ ಕಡೆ ಚಲಾವಣೆಯಾಗುವಂತೆ ನೋಡಿಕೊಳ್ಳಿ. ಚೆನ್ನಾಗಿ ಮಲಗಿ ಮತ್ತು ಉತ್ತಮವಾಗಿ ವಿಶ್ರಾಂತಿ ಪಡೆಯಿರಿ.

English summary

How to Reduce a Fever without Medication | Tips For Health | ಜ್ವರವನ್ನು ಔಷಧಿಯಿಲ್ಲದೆ ಗುಣಪಡಿಸುವುದು ಹೇಗೆ? | ಆರೋಗ್ಯಕ್ಕಾಗಿ ಕೆಲ ಸಲಹೆಗಳು

When a child has a fever, most people rush to the medicine cabinet for the acetaminophen. Before you force your kids to choke down all those chemicals, attempt some of these tried and true natural fever reducers. 
X
Desktop Bottom Promotion