For Quick Alerts
ALLOW NOTIFICATIONS  
For Daily Alerts

ಸೂಜಿ ಚಿಕಿತ್ಸೆ ಎಷ್ಟು ಪರಿಣಾಮಕಾರಿ?

|

ಸೂಜಿ ಚಿಕಿತ್ಸೆ (Acupuncture) ಎಂದರೆ ಚೀನಾದಲ್ಲಿ ಪ್ರಚಲಿತವಿರುವ ಒಂದು ರೀತಿಯ ಚಿಕಿತ್ಸೆ. ಇದರಲ್ಲಿ ದೇಹದ ವಿವಿಧ ಕಡೆಗಳಲ್ಲಿ(ಶಕ್ತಿಕೇಂದ್ರಗಳಲ್ಲಿ) ಸೂಜಿ ಚುಚ್ಚಿ ರೋಗವನ್ನು ಗುಣಪಡಿಸಲಾಗುತ್ತದೆ. ಚೀನೀ ತತ್ವಜ್ಞಾನದ ಪ್ರಕಾರ ನಮ್ಮ ದೇಹದಲ್ಲಿ ನೋವು ಹಾಗೂ ಖಾಯಿಲೆಗಳು "ಯಿನ್" ಮತ್ತು "ಯಂಗ್" ಎಂಬ ಪ್ರಧಾನ ಬಲಗಳ ಅಸಮತೋಲನದಿಂದ ಬರುತ್ತದೆ. ಸೂಜಿ ಚಿಕಿತ್ಸೆ ಇದನ್ನು ಸಮತೋಲನಗೊಳಿಸುತ್ತದೆ.ಹಲವು ಜೀನೀಯರ ಪ್ರಕಾರ ನಮ್ಮ ದೇಹದಲ್ಲಿ 12 ಜತೆಯಾದ ಹಾಗೂ 2 ಸ್ವತಂತ್ರ ರೇಖೆಗಳಲ್ಲಿ ಜೀವ ಸೆಲೆ ಹರಿಯುತ್ತಿದ್ದು ಈ ರೇಖೆಗಳ ನಿರ್ಧಿಷ್ಟ ಬಿಂದುಗಳಲ್ಲಿ ಸೂಜಿ ಚುಚ್ಚುವುದರಿಂದ ರೋಗ ನಿವಾರಣೆ ಸಾದ್ಯ.

ಇದರ ಬಗ್ಗೆ ವೈಜ್ಞಾನಿಕ ವಿವರಣೆ

ವೈಜ್ಞಾನಿಕ ವಿಶ್ಲೇಷಣೆಗಳ ಪ್ರಕಾರ ಹಲವು ಸಂದರ್ಭಗಳಲ್ಲಿ ಸೂಜಿ ಚಿಕಿತ್ಸೆಯು ಪರಿಣಾಮಕಾರಿ ಎಂದು ಕಂಡುಬಂದಿದೆ. ಇದರ ಪರಿಣಾಮಕಾರಿತ್ವ ಬಗ್ಗೆ ವಿಜ್ಞಾನಿಗಳು ಕೆಲವು ಸಿದ್ಧಾಂತಗಳನ್ನು ಮುಂದಿಡುತ್ತಾರೆ.ಒಂದು ಸಿದ್ದಾಂತದ ಪ್ರಕಾರ ಜೀವಸೆಲೆ ಹಾಗೂ ರೇಖೆಗಳು ನಿಜವಾಗಿಯೂ ಇದ್ದು,ಸೂಜಿ ಚಿಕಿತ್ಸೆಯು ಈ ರೇಖೆಗಳಲ್ಲಿ ಚಟುವಟಿಕೆಗಳನ್ನು ಹೆಚ್ಚಿಸುತ್ತದೆ.ಇನ್ನೊಂದು ಸಿದ್ಧಾಂತವು ಸೂಜಿ ಚಿಕಿತ್ಸೆಯು ಮೆದುಳಿನಲ್ಲಿ 'ಎಂಡಾರ್ಫಿನ್' ಎಂಬ ನೋವು ನಿವಾರಕದ ಉತ್ಪತ್ತಿಯನ್ನು ಹೆಚ್ಚಿಸುತ್ತದೆ. ಕೊನೆಯದಾಗಿ ಇನ್ನೂ ಕೆಲವು ವಿಜ್ಞಾನಿಗಳು ಸೂಜಿಚಿಕಿತ್ಸೆಯು ನರವ್ಯೂಹದ ಮೂಲಕ ಸಾಗುವ ನೋವಿನ ಅನುಭವದ ಸಂಕೇತಗಳನ್ನು ತಡೆಯುವುದರ ಮೂಲಕ ಕೆಲಸ ಮಾಡುತ್ತದೆ ಎಂದು ವಾದಿಸುತ್ತಾರೆ.

ಸೂಜಿ ಚಿಕಿತ್ಸೆಯ ಬಗ್ಗೆ ಹೆಚ್ಚಿನ ವಿವರವನ್ನು ಈ ಕೆಳಗೆ ನೀಡಲಾಗಿದೆ ನೋಡಿ:

ಸೂಜಿ ಚಿಕಿತ್ಸೆ

ಸೂಜಿ ಚಿಕಿತ್ಸೆ

ಸೂಜಿ ಚಿಕಿತ್ಸೆಯನ್ನು ಗಂಟಲುನೋವು, ಅಸ್ತಮಾ, ಮೈಗ್ರೇನ್, ಕೆಲವು ಕಣ್ಣಿನ ತೊಂದರೆ, ಮನೋವ್ಯಾಧಿ ಮುಂತಾದವುಗಳ ಉಪಶಮನಕ್ಕೆ ಬಳಸುತ್ತಾರೆ. ಇತ್ತೀಚೆಗೆ ಚೀನೀ ವೈದ್ಯರುಗಳು ಇದನ್ನು ಪ್ರಮುಖ ಶಸ್ತ್ರಚಿಕಿತ್ಸೆಗಳ ಸಂದರ್ಭದಲ್ಲೂ ಬಳಸುತ್ತಾರೆ.

ಸೂಚಿ ಚುಚ್ಚಿದಾಗ ನೋವಾಗುತ್ತದಾ?

ಸೂಚಿ ಚುಚ್ಚಿದಾಗ ನೋವಾಗುತ್ತದಾ?

ಈ ಸೂಜಿ ತುಂಬಾ ಚಿಕ್ಕದಾಗಿದ್ದು, ಇದನ್ನು ಚುಚ್ಚಿದಾಗ ನೋವು ಉಂಟಾಗುವುದಿಲ್ಲ. ಈ ಚಿಕಿತ್ಸೆ ಮಾಡಿಸಿದ ನಂತರ ದೇಹದಲ್ಲಿ ಶಕ್ತಿ ಹೆಚ್ಚಾಗುವುದು, ಮಾನಸಿಕ ಒತ್ತಡ ಕಡಿಮೆಯಾಗಿ, ಮನಸ್ಸಿಗೆ ವಿಶ್ರಾಂತಿಯ ಅನುಭವ ಉಂಟಾಗುವುದು.

 ತಲೆ ನೋವಿಗೆ ಸೂಜಿ ಚಿಕಿತ್ಸೆ

ತಲೆ ನೋವಿಗೆ ಸೂಜಿ ಚಿಕಿತ್ಸೆ

ಮೈಗ್ರೇನ್ ಸಮಸ್ಯೆ ಇರುವವರು ಈ ಚಿಕಿತ್ಸೆ ಮಾಡಿಸಿದರೆ ತಲೆನೋವಿನಿಂದ ಸಂಪೂರ್ಣ ಗುಣಮುಕ್ತರಾಗಬಹುದು ಎಂದು ಸಂಶೋಧನೆಯಿಂದ ದೃಢ ಪಟ್ಟಿದೆ. ಆಗಾಗ ಜ್ವರ, ತಲೆನೋವು ಬರುತ್ತಿದ್ದರೆ ಈ ಚಿಕಿತ್ಸೆ ಮಾಡಿಸಿದರೆ ಗುಣಮುಖವಾಗುವುದು.

ಹಲ್ಲು ನೋವಿಗೆ ಸೂಜಿ ಚಿಕಿತ್ಸೆ

ಹಲ್ಲು ನೋವಿಗೆ ಸೂಜಿ ಚಿಕಿತ್ಸೆ

ಹಲ್ಲಿಗೆ ಸಂಬಂಧಿಸಿದ ಸಮಸ್ಯೆಯನ್ನು ಸರ್ಜರಿಯಿಂದ ಸರಿಪಡಿಸುವ ಬದಲು ಈ ಸೂಜಿ ಚಿಕಿತ್ಸೆ ಮಾಡಿಸಿದರೆ ಗುಣಮುಖವಾಗುವುದು.

 ಸಂತೋನೋತ್ಪತ್ತಿ ಚಿಕಿತ್ಸೆಗೆ

ಸಂತೋನೋತ್ಪತ್ತಿ ಚಿಕಿತ್ಸೆಗೆ

ಮಕ್ಕಳಾಗದವರಿಗೆ ಈ ಚಿಕಿತ್ಸೆಯಿಂದ ಮಕ್ಕಳಾಗುವಂತೆ ಮಾಡಬಹುದು. ಇದು ಮಾನಸಿಕ ಒತ್ತಡವನ್ನು ಕಡಿಮೆ ಮಾಡಿ, ಗರ್ಭಕೋಶಕ್ಕೆ ರಕ್ತ ಸರಿಯಾಗಿ ಹರಿಯುವಂತೆ ಮಾಡುತ್ತದೆ.

ಧೂಮಪಾನ ಚಟವನ್ನು ಬಿಡಲು ಈ ಚಿಕಿತ್ಸೆ

ಧೂಮಪಾನ ಚಟವನ್ನು ಬಿಡಲು ಈ ಚಿಕಿತ್ಸೆ

ಧೂಮಪಾನ ಚಟವನ್ನು ಬಿಡಲು ಮನಸ್ಸು ಮಾಡಿ ಸಾಧ್ಯವಾಗದಿದ್ದರೆ, ಈ ಚಿಕಿತ್ಸೆ ತೆಗೆದುಕೊಂಡರೆ ಸಾಕು ಧೂಮಪಾನವನ್ನು ಬಿಡಬಹುದು.

English summary

How Effective is Acupuncture? | Tips For Health | ಸೂಜಿ ಚಿಕಿತ್ಸೆ ಎಷ್ಟು ಪರಿಣಾಮಕಾರಿ? | ಆರೋಗ್ಯಕ್ಕಾಗಿ ಕೆಲ ಸಲಹೆ

Acupuncture is an ancient remedial practice of traditional Chinese medicine where in thin needles are inserted at specific energy points of the body. The primary focus is to relieve the pain and moreover also used in treating other conditions.
X
Desktop Bottom Promotion