For Quick Alerts
ALLOW NOTIFICATIONS  
For Daily Alerts

ಮುಟ್ಟು ನಿಲ್ಲುವಾಗ ಕಾಡುವ ಹಾಟ್ ಫ್ಲಾಷ್ ಗೆ ಪರಿಹಾರ

|

ಮಹಿಳೆಯರಿಗೆ 4-50 ವರ್ಷದಲ್ಲಿ ಮುಟ್ಟು ನಿಂತು ಹೋಗುತ್ತದೆ. ಈ ಸಮಯದಲ್ಲಿ ಹಾಟ್ ಫ್ಲಾಷ್ ಕಂಡುಬರುವುದು. ಹಾಟ್ ಫ್ಲಾಷ್ ಅಂದರೆ ಸೆಕೆಯಾಗುವುದು ಮುಖ್ಯವಾಗಿ ಮುಖ, ಕುತ್ತಿಗೆ ಮತ್ತು ತಲೆ ತುಂಬಾ ಬಿಸಿಯಾಗಿ ಉರಿ ಅನಿಸತೊಡಗುವುದು. ಮೈಯೆಲ್ಲಾ ಬೆವರಲಾರಂಭಿಸುತ್ತದೆ. ಈ ರೀತಿ ಸ್ವಲ್ಪ ಹೊತ್ತು ಅಥವಾ 30 ನಿಮಿಷದವರೆಗೆ ಆಗುವುದು. ಅಗ ತ್ವಚೆಯೆಲ್ಲಾ ಕೆಂಪಾಗುತ್ತದೆ.

ಈ ಸಮಯದಲ್ಲಿ ಹೆಚ್ಚಿನ ಮಹಿಳೆರಲ್ಲಿ ಖಿನ್ನತೆ ಕಾಣಿಸಿಕೊಳ್ಳುತ್ತದೆ. ಗಂಡ ನನ್ನ ಮೇಲೆ ಪ್ರೀತಿ ತೋರಿಸುತ್ತಿಲ್ಲ, ಮಕ್ಕಳು ನನ್ನನ್ನು ಗಮನಿಸುತ್ತಿಲ್ಲವೆಂದು ವೃಥಾ ಬೇಜಾರು ಪಟ್ಟುಕೊಳ್ಳುತ್ತಾರೆ.

ಹಾಟ್ ಫ್ಲಾಷ್ ಉಂಟಾದಾಗ ತುಂಬಾ ಹಿಂಸೆಯಾಗುತ್ತದೆ. ಈ ಸಮಯದಲ್ಲಿ ಪೌಷ್ಟಿಕಾಂಶವಿರುವ ಆಹಾರ ತಿನ್ನಬೇಕು. ಹಾಟ್ ಫ್ಲಾಷ್ ಸಮಸ್ಯೆಯನ್ನು ಕಮ್ಮಿ ಮಾಡುವಲ್ಲಿ ಈ ಕೆಳಗಿನ ಸಲಹೆಗಳು ಸಹಾಯಕಾರಿಯಾಗಿವೆ:

Home Remedies To Treat Hot Flashes

ವಿಟಮಿನ್
ಇದು ವಿಟಮಿನ್ ಇ ಮತ್ತು ಸಿ ಇರವ ಮಾತ್ರೆಗಳನ್ನು ತಿನ್ನಬೇಕು. ಅಲ್ಲದೆ ಈ ಅಂಶಗಳಿರುವ ಮಾತ್ರೆಗಳನ್ನು ಹೆಚ್ಚಾಗಿ ತಿನ್ನಬೇಕು.

ತಣ್ಣೀರು ಕುಡಿಯಿರಿ
ತಣ್ಣೀರನ್ನು ಪ್ರತೀದಿನ 10 ಗ್ಲಾಸ್ ಕುಡಿಯಬೇಕು. ಇದರಿಂದ ದೇಹದಲ್ಲಿ ಉಂಟಾದ ಉರಿ ಕಡಿಮೆಯಾಗುವುದು.

ಫ್ಲ್ಯಾಕ್ಸ್ ಸೀಡ್ ಎಣ್ಣೆ
ಇದರಲ್ಲಿ ವಿಟಮಿನ್ ಹಾಗೂ ಒಮೆಗಾ 3 ಅಂಶವಿರುವುದರಿಂದ ಮುಟ್ಟು ನಿಲ್ಲುವ ಸಮಯದಲ್ಲಿ ಇದನ್ನು ಬಳಸಿದರೆ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ನೀಡುತ್ತದೆ. ಹಾಟ್ ಫ್ಲಾಷ್ ಕೂಡ ಕಡಿಮೆಯಾಗುವುದು.

ತಣ್ಣೀರಿನಲ್ಲಿ ಸ್ನಾನ
ಈ ಸಮಯದಲ್ಲಿ ತಣ್ಣೀರಿನಲ್ಲಿ ಸ್ನಾನ ಮಾಡುವುದು ಒಳ್ಳೆಯದು. ಮನಸ್ಸುಗೆ ನೆಮ್ಮದಿ ಸಿಗಲು ಬುಕ್ ಓದುವುದು, ಧ್ಯಾನ ಮಾಡುವುದು ಮಾಡಿ.

ಹಾಟ್ ಫ್ಲಾಷ್ ಉಂಟಾದರೆ ಮಾಡಬೇಕಾದ ಕಾರ್ಯಗಳು
1. ಸಡಿಲವಾದ ಹತ್ತಿ ಬಟ್ಟೆಯನ್ನು ಧರಿಸಬೇಕು.
2. ತಂಪಾದ ರೂಮಿನಲ್ಲಿ ನಿದ್ದೆ ಮಾಡಿ
3. ಖಾರದ ಆಹಾರ ತಿನ್ನುವುದಾಗಲಿ ಆಲ್ಕೋಹಾಲ್, ಕಾಫಿ ಕುಡಿಯುವುದಾಗಲಿ ಮಾಡಬಾರದು.

ವಿಟಮಿನ್ ಇ ಇರುವ ಆಹಾರ ಸೇವನೆ ಮತ್ತು ಹಾರ್ಮೋನ್ ಗಳ ನಿಯಂತ್ರಣಕ್ಕೆ ಔಷಧಿಯನ್ನು ತೆಗೆದುಕೊಳ್ಳುವುದರಿಂದ ಮುಟ್ಟು ನಿಲ್ಲುವ ಸಮಯದಲ್ಲಿ ಬರುವ ಈ ಸಮಸ್ಯೆಯನ್ನು ನಿವಾರಿಸಬಹುದು.

English summary

Home Remedies To Treat Hot Flashes | Tips For Women Health | ಹಾಟ್ ಫ್ಲಾಷ್ ಹೋಗಲಾಡಿಸಲು ಮನೆಮದ್ದು | ಮಹಿಳೆಯರ ಆರೋಗ್ಯಕ್ಕಾಗಿ ಕೆಲ ಸಲಹೆಗಳು

There is a sudden increase in the body temperature followed by excessive sweating and discomfort. A majority of women suffer from this symptom of menopause.
X
Desktop Bottom Promotion