For Quick Alerts
ALLOW NOTIFICATIONS  
For Daily Alerts

ಹಲ್ಲು ನೋವಿನ ಶಮನಕ್ಕೆ ಮನೆ ಮದ್ದು

By Super
|

ನನಗೆ ಅನೇಕ ವರ್ಷಗಳಿಂದ ಹಲ್ಲು ನೋವಿತ್ತು ಅದರಿಂದ ಎಷ್ಟು ಬಾಧೆ ಅನುಭವಿಸಿದ್ದೇನೆ ಎಂಬುದನ್ನು ಹೇಳ್ತಿನಿ ಕೇಳಿ.ಒಂದು ಸಣ್ಣ ಹಲ್ಲು ನೋವು ಇಡೀ ದಿನದ ಬದುಕನ್ನು ಅವ್ಯವಸ್ಥೆ ಮಾಡಿಬಿಡುತ್ತದೆ ಅಲ್ಲದೆ ಪ್ರತಿ ದಿನ ಭಯಾನಕವಾಗಿ ಕಾಡಲು ಶುರುಮಾಡುತ್ತೆ.ಹಲ್ಲು ನೋವಿನ ನಿವಾರಣೆಗೆ ಅನೇಕ ಮನೆ ಮದ್ದು ಮಾಡಿಕೊಂಡಿದ್ದೇನೆ ಅದರಲ್ಲಿ ಕೆಲವು ಉತ್ತಮ ಪರಿಣಾಮಕಾರಿಯಾದದ್ದು ಈ ಕೆಳಕಂಡವುಗಳು.

ಹಲ್ಲು ನೋವು ಸ್ವಲ್ಪವಾಗಿ ಕಾಣಿಸಿಕೊಂಡಿದ್ದರೆ ಆ ಹಲ್ಲಿನ ಮೇಲೆ ಒಂದು ಸ್ಫೂನ್ ವಿಸ್ಕಿ ಹಾಕಿ ಕೆಲಕಾಲ ಆ ಸ್ಥಳ ಬೆಂಡಾದಂತಾಗಿ ನೋವು ಮಾಯವಾಗುತ್ತದೆ. ನೆನಪಿರಲಿ ಇದು ತಾತ್ಕಾಲಿಕ ಉಪಶಮನ ಅಷ್ಟೇ.

ಲವಂಗದ ಎಣ್ಣೆ

ಲವಂಗದ ಎಣ್ಣೆ

ಲವಂಗದ ಎಣ್ಣೆ ಇದ್ದರೆ ಅದನ್ನು ನೋವಿರುವ ಹಲ್ಲಿನ ಮೇಲೆ ಹಾಕಿ.ಲವಂಗದ ಎಣ್ಣೆ ಒಸಡಿನ ಮೇಲೆ ಬೀಳದ ಹಾಗೆ ಎಚ್ಚರಿಕೆ ವಹಿಸಿ ಇಲ್ಲದಿದ್ದರೆ ವಸಡು ಉರಿಯಾಗುತ್ತದೆ. ಒಂದು ವೆಳೆ ಬಿದ್ದರೆ ಉರಿ ಹೆಚ್ಚು ಸಮಯ ಇರುವುದಿಲ್ಲ ಕೆಲ ನಿಮಿಷಗಳಲ್ಲಿ ಸರಿಹೋಗುತ್ತದೆ.

ಬೆಳ್ಳುಳ್ಳಿ

ಬೆಳ್ಳುಳ್ಳಿ

ಬೆಳ್ಳುಳ್ಳಿಯ ಒಂದು ಎಸಳನ್ನು ನೋವಿರುವ ಹಲ್ಲಿನಿಂದ ಕಚ್ಚಿ. ಈ ರೀತಿ ಮಾಡಿದರೆ ಸ್ವಲ್ಪ ಸಮಯದಲ್ಲಿ ನೋವು ಮಾಯವಾಗುತ್ತದೆ.ಹೀಗೆ ಮಾಡುವುದರಿಂದ ಅನೇಕ ಸಮಯದವರೆಗೂ ನೋವು ಕಾಣಿಸಿಕೊಳ್ಳುವುದಿಲ್ಲ.

 ನೋವು ನಿವಾರಕ ಮಾತ್ರೆ

ನೋವು ನಿವಾರಕ ಮಾತ್ರೆ

ಒಂದು ನೋವು ನಿವಾರಕ ಮಾತ್ರೆಯನ್ನು ತೆಗೆದುಕೊಂಡು ಪುಡಿ ಮಾಡಿ ಬಾಯಿಯೊಳಗೆ ಹಾಕಿಕೊಂಡು ಉಗುಳಿನಿಂದ ಅದನ್ನು ಪೇಸ್ಟ್ ನಂತೆ ಮಾಡಿ ಒಸಡಿಗೆ ಹಚ್ಚಿಕೊಳ್ಳಿ.ಇದನ್ನು ಒಂದು ಅಥವಾ ಎರಡು ನಿಮಿಷದವರೆಗೂ ಮಾಡಿ ನಂತರ ಉಗಿದು ಬಿಡಿ.ಇದನ್ನು ನಿರಂತರವಾಗಿ ಎರಡು ಗಂಟೆಗಳಿಗೊಮ್ಮೆ ಮಾಡುತ್ತಿದ್ದರೆ ನೋವು ನಿವಾರಣೆಯಾಗುತ್ತದೆ.

ವೆನಿಲಾ ಎಣ್ಣೆ

ವೆನಿಲಾ ಎಣ್ಣೆ

ಒಂದು ಹತ್ತಿಯ ಉಂಡೆಗೆ 3-4 ಹನಿ ವೆನಿಲಾ ಎಣ್ಣೆಯನ್ನು ಹಾಕಿ ಅದನ್ನು ನೋವಿರು ಹಲ್ಲು ಹಾಗೂ ಒಸಡಿನ ಮೇಲೆ ಇರಿಸಿ.ಸಾಧ್ಯವಾದರೆ ನೋವಿರುವ ಹಲ್ಲಿನ ಮೇಲೆ ಎಣ್ಣೆಯನ್ನು ನೇರವಾಗಿ ಹಾಕಿಕೊಳ್ಳಬಹುದು.ಇದರಿಂದ ತಾತ್ಕಾಲಿಕ ಉಪಶಮನಕ್ಕಿಂತಲೂ ಹೆಚ್ಚಾದ ಪರಿಹಾರ ಸಿಗುತ್ತದೆ.

ಪರಾಕ್ಸೈಡ್ ದ್ರಾವಣ

ಪರಾಕ್ಸೈಡ್ ದ್ರಾವಣ

ನೋವಿರುವ ಹಲ್ಲಿನ ಸುತ್ತಲೂ ಪರಾಕ್ಸೈಡ್ ದ್ರಾವಣ ಹಚ್ಚಿಕೊಂಡು ದ್ರಾವಣವನ್ನು ಉಗಿದುಬಿಡಿ(ಅದನ್ನು ನುಂಗಬಾರದು)ನಂತರ ಒಂದು ಟೀ ಸ್ಪೂನ್ ಉಪ್ಪಿನ ಪುಡಿಯನ್ನು ನೀರಿನಲ್ಲಿ ಬೆರೆಸಿ ಬಾಯಿ ಮುಕ್ಕಳಿಸಿ.ಇದರಿಂದ ನೋವು ತಾತ್ಕಾಲಿಕವಾಗಿ ನೋವು ನಿವಾರಣೆಗೊಂಡು ತುರಿಕೆ ಹಾಗೂ ಗಾಯ ಆಗುವುದನ್ನು ತಡೆಗಟ್ಟಬಹುದು.

 ವಿಕ್ಸ್

ವಿಕ್ಸ್

ನೋವು ಇರುವ ಸ್ಥಳದಲ್ಲಿ ಸ್ವಲ್ಪ ವಿಕ್ಸ್ ವೇಪರಗೆ ಹಚ್ಚಿಕೊಳ್ಳಿ.ಒಂದು ಪೇಪರ್ ಟವಲ್ ಗೆ ವಿಕ್ಸ್ ಹಚ್ಚಿ ಅದನ್ನು ನೋವಿರುವ ಹಲ್ಲಿನ ಭಾಗದಲ್ಲಿ ಇಡಿ. ಇದರಿಂದ ವಿಕ್ಸಿನಲ್ಲಿರುವ ಶಾಖವನ್ನು ಒಸಡು ಹೀರಿಕೊಳ್ಳುವ ಮೂಲಕ ಹಲ್ಲು ನೋವು ತಕ್ಕಮಟ್ಟಿಗೆ ನಿವಾರಣೆಯಾಗುತ್ತದೆ.

ಕೆಮ್ಮಿನ ಸಿರಪ್

ಕೆಮ್ಮಿನ ಸಿರಪ್

ಕೆಮ್ಮಿನ ಸಿರಪ್ಪಿನಲ್ಲಿ ಸ್ವಲ್ಪ ಪ್ರಮಾಣದ ಅನಸ್ತೇಷಿಯಾ ಇರುತ್ತದೆ.2 ಹನಿಯನ್ನು ಬಾಯಿಗೆ ಹಾಕಿಕೊಳ್ಳಿ.ಇದರಿಂದ ಹಲ್ಲು ನೋವು ಸ್ವಲ್ಪ ಕಡಿಮೆಯಾಗುತ್ತದೆ.

ಗೋಧಿ ತೆನೆಯ ರಸ

ಗೋಧಿ ತೆನೆಯ ರಸ

ಹಲ್ಲು ಹಾಗೂ ಒಸಡಿನ ನೋವಿನ ನಿವಾರಣೆಗೆ ಗೋಧಿ ತೆನೆಯ ರಸ ಬಹಳ ಒಳ್ಳೆಯ ಔಷಧಿ.ಇದು ಹಲ್ಲಿನ ನೋವನ್ನು ತೆಗೆದು ಹಾಕುತ್ತದೆ ಹಾಗೂ ಬ್ಯಾಕ್ಟೀರಿಯಾಗಳನ್ನು ತೊಲಗಿಸುತ್ತದೆ.

ಐಸ್ ಕ್ಯೂಬ್

ಐಸ್ ಕ್ಯೂಬ್

ಸುಮಾರು 15-20 ನಿಮಿಷಗಳ ಕಾಲ ಐಸ್ ಕ್ಯೂಬನ್ನು ನೋವಿರುವ ಭಾಗದಲ್ಲಿ ದಿನಕ್ಕೆ 3 ರಿಂದ 4 ಬಾರಿ ಇರಿಸಿಕೊಳ್ಳಿ.ಇದು ಆ ಜಾಗವನ್ನು ಬೆಂಡಂತೆ ಮಾಡಿ ನೋವು ಪರಿಹಾರಕ್ಕೆ ಸಹಾಯಕವಾಗಿರುತ್ತದೆ.

ಕಾಳು ಮೆಣಸು

ಕಾಳು ಮೆಣಸು

ಕಾಳು ಮೆಣಸನ್ನು ನೋವಿರುವ ಜಾಗದಲ್ಲಿ ಉಜ್ಜಿಕೊಳ್ಳವುದರಿಂದ ಆ ಜಾಗವು ಬೆಂಡಂತಾಗಿ ನೋವು ಮಾಯವಾಗುತ್ತದೆ.

ಈರುಳ್ಳಿ

ಈರುಳ್ಳಿ

ಹಸಿ ಈರುಳ್ಳಿಯಲ್ಲಿ ಆ್ಯಂಟಿಸೆಪ್ಟಿಕ್ ಅಂಶವಿದೆ,ಆದ್ದರಿಂದ 3 ನಿಮಿಷಗಳ ಕಾಲ ಈರುಳ್ಳಿಯನ್ನು ಜಗಿಯುವುದರಿಂದ ನೋವು ನಿವಾರಣೆಗೆ ಸಹಾಯವಾಗುತ್ತದೆ.ಅಗಿಯುವುದಕ್ಕೂ ಕಷ್ಟವಾದರೆ ಈರುಳ್ಳಿಯನ್ನು ಚಿಕ್ಕದಾಗಿ ಕತ್ತರಿಸಿ ನೋವಿರುವ ಹಲ್ಲಿನ ಮೇಲ ಇರಿಸಿಕೊಳ್ಳಿ.

English summary

Home Remedies - Toothache | Tips For Health | ಹಲ್ಲು ನೋವಿಗೆ ಮನೆಮದ್ದು | ಆರೋಗ್ಯಕ್ಕಾಗಿ ಕೆಲ ಸಲಹೆಗಳು

I have had toothaches over the years and let me tell you they will drive you crazy. Something as simple as a toothache can immobilize you and make everyday a walking nightmare. Here are few remedies to get rid from tooth pain.
X
Desktop Bottom Promotion