For Quick Alerts
ALLOW NOTIFICATIONS  
For Daily Alerts

ಅನಿಯಮಿತ ಮುಟ್ಟಿಗೂ, ಮಾನಸಿಕ ಸ್ಥಿತಿಗೂ ಸಂಬಂಧವಿದೆ

|

ಮಹಿಳೆಯರು ಆರೋಗ್ಯಕರವಾಗಿರಲು ನಿಯಮಿತವಾದ ಮುಟ್ಟು ಅವಶ್ಯಕ. ಆದರೆ ಅನಿಯಮಿತ ಮುಟ್ಟಿನ ಸಮಸ್ಯೆಯಿಂದ ಹೆಚ್ಚಿನ ಮಹಿಳೆಯರು ಬಳಲುತ್ತಿದ್ದಾರೆ. ಒಂದು ವರ್ಷದಲ್ಲಿ ಮಹಿಳೆ ಸಾಮಾನ್ಯವಾಗಿ 12-13 ಬಾರಿ ಮುಟ್ಟಾಗುತ್ತಾಳೆ. ಕೆಲವರಿಗೆ 9 -10 ಬಾರಿ ಮಾತ್ರ ಕಾಣಿಸಿಕೊಳ್ಳುತ್ತದೆ. ಈ ರೀತಿಯಲ್ಲಿ ಮುಟ್ಟು ಆಗುತ್ತಿದ್ದರೆ ಹೆದರಬೇಕಾಗಿಲ್ಲ. ಆದರೆ ತಿಂಗಳಿಗೆ 2 ಬಾರಿ ಅಥವಾ ಎರಡು ತಿಂಗಳಾದರೂ ಮುಟ್ಟು ಆಗದಿದ್ದರೆ ವೈದ್ಯರನ್ನು ಕಂಡು ಸಲಹೆ ಪಡೆಯುವುದು ಅವಶ್ಯಕ.

ಮಹಿಳೆಯರ ಮಾನಸಿಕ ಸ್ಥಿತಿಗೂ ಹಾಗೂ ಮುಟ್ಟಿಗೂ ಸಂಬಂಧವಿದೆ ಎಂದು ಮನಶಾಸ್ತ್ರ ಹೇಳುತ್ತದೆ. ಮಾನಸಿಕ ಸ್ಥಿತಿ ಹಾರ್ಮೋನ್ ಗಳಲ್ಲಿ ವ್ಯತ್ಯಾಸ ಉಂಟು ಮಾಡಿ ಅನಿನಿಯಮಿತ ಮುಟ್ಟು ಉಂಟಾಗುತ್ತದೆ. ಮಾನಸಿಕ ಒತ್ತಡ, ನಿದ್ದೆ ಸರಿಯಾಗಿ ಮಾಡಿದ್ದರೆ, ಯಾವುದಾದರೂ ಆರೋಗ್ಯ ಸಮಸ್ಯೆಗೆ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದರೆ, ದೇಹದ ತೂಕ ಹೆಚ್ಚಾಗುವುದು, ಮೆನೋಪಸ್ ಹತ್ತಿರವಾಗುವುದು, ಓವ್ಯೂಲೇಷನ್ ಸಮಯದಲ್ಲಿ ವಿಳಂಬವಾಗುವುದು ಇವೆಲ್ಲಾ ಅನಿಯಮಿತ ಮುಟ್ಟಿಗೆ ಕಾರಣ.

ಗರ್ಭನಿರೋಧ ಮಾತ್ರೆ ತೆಗೆದುಕೊಳ್ಳುವುದು, ಮಧುಮೇಹ, ಲಿವರ್ ಸಮಸ್ಯೆ, ಥೈರಾಯ್ಡ್ ಇವು ಕೂಡ ಅನಿಯಮಿತ ಮುಟ್ಟಿನ ಸಮಸ್ಯೆ ತರುತ್ತವೆ. ಆದ್ದರಿಂದಲೇ ಅನಿಯಮಿತ ಮುಟ್ಟಿನ ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡಬೇಡಿ.

ಈ ಕೆಳಗೆ ಕೆಲವೊಂದು ಉಪಯುಕ್ತ ಸಲಹೆಗಳನ್ನು ನೀಡಿದ್ದೇವೆ. ಇವುಗಳನ್ನು ಪಾಲಿಸಿದರೆ ಅನಿಯಮಿತ ಮುಟ್ಟಿನ ಸಮಸ್ಯೆಯಿಂದ ಹೊರಬರಲು ಸಹಾಯ ಮಾಡುವುದು:

 ಎಳ್ಳು ಮತ್ತು ಬೆಲ್ಲ

ಎಳ್ಳು ಮತ್ತು ಬೆಲ್ಲ

ಬಿಳಿ ಅಥವಾ ಕಪ್ಪು ಎಳ್ಳನ್ನು ಚೆನ್ನಾಗಿ ಹುರಿದು ಪುಡಿ ಮಾಡಿಡಿ. ದಿನಾ ಬೆಳಗ್ಗೆ ಇದನ್ನು ಬೆಲ್ಲದ ಜೊತೆ ಮಿಕ್ಸ್ ಮಾಡಿ ಉಂಡೆ ಕಟ್ಟಿ ತಿನ್ನಿ. ಈ ರೀತಿ ಪ್ರತೀದಿನ ಮಾಡಿ. ಇದು ಅನಿಯಮಿತ ಮುಟ್ಟಿನ ಸಮಸ್ಯೆಯನ್ನು ಹೋಗಲಾಡಿಸುವಲ್ಲಿ ಸಹಕಾರಿಯಾಗಿದೆ.

 ಖರ್ಜೂರ

ಖರ್ಜೂರ

ದಿನಾ ಖರ್ಜೂರ ತಿಂದರೆ ದೇಹದಲ್ಲಿ ರಕ್ತ ಕಣಗಳು ಹೆಚ್ಚಾಗುವುದು ಹಾಗೂ ನಿಯಮಿತವಾದ ಮುಟ್ಟಿಗೆ ಸಹಾಯಕಾರಿ.

ಅಂಜೂರ

ಅಂಜೂರ

ಅಂಜೂರ ಹಣ್ಣು ಕೂಡ ಮುಟ್ಟಿನ ಸಮಸ್ಯೆಯನ್ನು ಹೋಗಲಾಡಿಸುವಲ್ಲಿ ಸಹಕಾರಿಯಾಗಿದೆ.

 ಪಪ್ಪಾಯಿ

ಪಪ್ಪಾಯಿ

ಮುಟ್ಟು ವಿಳಂಬವಾಗುವ ಸಮಸ್ಯೆ ಇರುವವರು ಪಪ್ಪಾಯಿ ತಿಂದರೆ ತಕ್ಷಣ ಪರಿಹಾರ ದೊರೆಯುವುದು.

 ಜೀರಿಗೆ

ಜೀರಿಗೆ

ಬರೀ ನೀರು ಕುಡಿಯುವ ಬದಲು ಪ್ರತೀದಿನ ಒಂದು ಲೋಟ ಜೀರಿಗೆ ನೀರು ಕುಡಿಯಿರಿ. ಇದು ಮುಟ್ಟು ಸರಿಯಾದ ಸಮಯದಲ್ಲಿ ಬರುವಂತೆ ಮಾಡುತ್ತದೆ.

 ಗ್ರೀನ್ ಟೀ

ಗ್ರೀನ್ ಟೀ

ಗ್ರೀನ್ ಟೀ ರಕ್ತ ಶುದ್ಧ ಮಾಡುವಲ್ಲಿ ಸಹಕಾರಿಯಾಗಿದೆ. ಇದು ಮುಟ್ಟಿನ ಸಮಸ್ಯೆ ಉಂಟಾಗದಂತೆ ತಡೆಯುತ್ತದೆ.

 ಹಾಗಾಲಕಾಯಿ ಜ್ಯೂಸ್

ಹಾಗಾಲಕಾಯಿ ಜ್ಯೂಸ್

ಹಾಗಾಲಕಾಯಿ ಜ್ಯೂಸ್ ಕೂಡ ನಿಯಮಿತವಾದ ಮುಟ್ಟಿಗೆ ಸಹಕಾರಿಯಾಗಿದೆ.

ನಿದ್ದೆ

ನಿದ್ದೆ

ನಿದ್ದೆ ಸರಿಯಾಗಿ ಮಾಡಿದಿದ್ದರೆ ಅನಿಯಮಿತ ಮುಟ್ಟು ಉಂಟಾಗುವುದು. ಆದ್ದರಿಂದ ರಾತ್ರಿಯಲ್ಲಿ ಟಿವಿ, ಲ್ಯಾಪ್ ಟಾಪ್ ನೋಡುತ್ತಾ ಸಮಯ ಕಳೆಯದೆ ಎಷ್ಟೇ ಕೆಲಸವಿದ್ದರೂ ಕಮ್ಮಿಯೆಂದರೂ 6 ಗಂಟೆಗಳ ನಿದ್ದೆ ಮಾಡಿ.

 ಬಾಳೆಕಾಯಿ

ಬಾಳೆಕಾಯಿ

ಬಾಳೆ ಸಾರು, ಪಲ್ಯ ತಿನ್ನುವುದರಿಂದ ಅನಿಯಮಿತ ಮುಟ್ಟಿನ ಸಮಸ್ಯೆ ಉಂಟಾಗುವುದು.

 ಮಾನಸಿಕ ಒತ್ತಡವನ್ನು ಹೊರದಬ್ಬಿ

ಮಾನಸಿಕ ಒತ್ತಡವನ್ನು ಹೊರದಬ್ಬಿ

ಮಾನಸಿಕ ಒತ್ತಡವನ್ನು ಹೊರದೂಡಲು ಧ್ಯಾನ ಮಾಡಿ. ಮನಸ್ಸನ್ನು ಶಾಂತವಾಗಿ ಇಡಿ.

 ಸೂರ್ಯ ನಮಸ್ಕಾರ

ಸೂರ್ಯ ನಮಸ್ಕಾರ

ಸೂರ್ಯ ನಮಸ್ಕಾರ ಮಾಡಿದರೆ ಮನಸ್ಸಿನ ಮತ್ತು ದೇಹದ ಆರೋಗ್ಯ ಹೆಚ್ಚಿಸುವುದು. ಅನಿಯಮಿತ ಮುಟ್ಟಿನ ಸಮಸ್ಯೆ ಇರುವವರು ಇದನ್ನು ಮಾಡಿದರೆ ಉತ್ತಮ ಪ್ರಯೋಜನವನ್ನು ಪಡೆಯಬಹುದು.

English summary

Home Remedies For Irregular Periods | Tips For Women Health | ಅನಿಯಮಿತ ಮುಟ್ಟಿನ ಸಮಸ್ಯೆಗೆ ಮನೆಮದ್ದು | ಮಹಿಳೆಯರ ಆರೋಗ್ಯಕ್ಕೆ ಕೆಲ ಸಲಹೆಗಳು

Some of the factors that could lead to a delayed or missed periods are anxiety, stress, depression, medication, lack of sleep, heavy weight activity, menopause and delayed ovulation
X
Desktop Bottom Promotion