For Quick Alerts
ALLOW NOTIFICATIONS  
For Daily Alerts

ಡೆಂಗ್ಯೂ ಜ್ವರಕ್ಕೆ 9 ಬಗೆಯ ಮನೆಮದ್ದು

|

ಮಳೆಗಾಲದಲ್ಲಿ ಡೆಂಗ್ಯೂ ಕಾಯಿಲೆ ಹೆಚ್ಚಾಗಿ ಕಂಡುಬರುತ್ತದೆ. ಈ ಕಾಯಿಲೆಯನ್ನು ನಿರ್ಲಕ್ಷ್ಯ ಮಾಡಿದರೆ ಪ್ರಾಣಕ್ಕೂ ಕೂಡ ಅಪಾಯ ಉಂಟಾಗಬಹುದು.ಡೆಂಗ್ಯೂ ಕಾಯಿಲೆ ಸೊಳ್ಳೆಗಳಿಂದಾಗಿ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ಆದ್ದರಿಂದ ಮನೆ ಸುತ್ತ ಮುತ್ತಲಿನ ಪರಿಸರವನ್ನು ಶುದ್ಧವಾಗಿ ಇಟ್ಟುಕೊಳ್ಳಬೇಕು.

ಡೆಂಗ್ಯೂ ಬಂದರೆ ಆ ಜ್ವರದಿಂದ ಸುಧಾರಿಸಿಕೊಳ್ಳಲು ಕನಿಷ್ಠವೆಂದರೂ 10-11 ದಿನಗಳು ಬೇಕಾಗುತ್ತದೆ. ಜ್ವರ ತುಂಬಾ ಜಾಸ್ತಿಯಾದರೆ ಬಾಯಿ, ವಸಡು ಮತ್ತು ಮೂಗಿನಿಂದ ರಕ್ತ ಬರಲಾರಭಿಸುತ್ತದೆ. ಡೆಂಗ್ಯೂ ಕಾಯಿಲೆಗೆ ವಯಸ್ಸಾದಾವರು ಮತ್ತು ಮಕ್ಕಳು ಬೇಗನೆ ತುತ್ತಾಗುತ್ತಾರೆ. ಡೆಂಗ್ಯೂ ಕಾಯಿಲೆ ಬಂದರೆ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳಬೇಕು, ಈ ಕಾಯಿಲೆ ಬಂದರೆ ಸಾಕಷ್ಟು ನೀರು ಕುಡಿಯಬೇಕು, ನಂತರ ಸಾಕಷ್ಟು ವಿಶ್ರಾಂತಿ ತೆಗೆದುಕೊಳ್ಳಬೇಕು.

ಡೆಂಗ್ಯೂ ಕಾಯಿಲೆಯ ಲಕ್ಷಣಗಳು:
* 105 ಡಿಗ್ರಿಗಿಂತ ಅಧಿಕ ಜ್ವರ
* ತಲೆನೋವು ಮತ್ತು ಮೈಕೈ ನೋವು
* ಮೈಯೆಲ್ಲಾ ತುರಿಕೆ ಮತ್ತು ಚರ್ಮದಲ್ಲಿ ಕೆಂಪು ಗುಳ್ಳೆಗಳು ಕಂಡುಬರುವುದು
* ಕಣ್ಣಿನಲ್ಲಿ ತುಂಬಾ ನೋವು ಕಂಡುಬರುವುದು
* ಸ್ನಾಯು ಮತ್ತು ಮೊಣ ಕಾಲು ಮತ್ತು ಮೊಣಕೈಗಳಲ್ಲಿ ನೋವು
* ವಾಂತಿ ಮತ್ತು ಬೇಧಿ

ಡೆಂಗ್ಯೂ ಕಾಯಿಲೆಗೆ ಸೂಕ್ತ ಚಿಕಿತ್ಸೆ ಮಾಡಬೇಕು. ಇಲ್ಲಿ ನಾವು ಕೆಲ ಮನೆ ಮದ್ದುಗಳ ಬಗ್ಗೆ ಹೇಳಿದ್ದೇವೆ . ಇವುಗಳು ಕೂಡ ಡೆಂಗ್ಯೂ ಕಾಯಿಲೆಯಿಂದ ನಿಮ್ಮನ್ನು ಮುಕ್ತರನ್ನಾಗಿ ಮಾಡುತ್ತದೆ:

1. ಪಪ್ಪಾಯಿ ಬೀಜ

1. ಪಪ್ಪಾಯಿ ಬೀಜ

ಪಪ್ಪಾಯಿ ಬೀಜವನ್ನು ಆಹಾರದ ಜೊತೆ ತಿನ್ನಿ. ಇದರಲ್ಲಿರುವ Antibacteria ಗುಣ ಡೆಂಗ್ಯೂ ಜ್ವರವನ್ನು ಕಮ್ಮಿ ಮಾಡುತ್ತದೆ.

2. ಪಪ್ಪಾಯಿ ಎಲೆಯ ರಸ

2. ಪಪ್ಪಾಯಿ ಎಲೆಯ ರಸ

ತಾಜಾ, ಎಳೆಯ ಪಪ್ಪಾಯಿ ಎಲೆಯನ್ನು ಶುದ್ಧ ಮಾಡಿ ಅದನ್ನು ಹಿಂಡಿ ರಸ ತೆಗೆದು ದಿನಕ್ಕೆ ಎರಡು ಚಮಚದಂತೆ ಕೊಟ್ಟರೆ ಬೇಗನೆ ಕಡಿಮೆಯಾಗುವುದು.

 3. ಈರುಳ್ಳಿ ಮತ್ತು ವಿನೆಗರ್

3. ಈರುಳ್ಳಿ ಮತ್ತು ವಿನೆಗರ್

ಈರುಳ್ಳಿಯನ್ನು ಕತ್ತರಿಸಿ ಮಿಕ್ಸಿಗೆ ಹಾಕಿ ಅದಕ್ಕೆ ವಿನೆಗರ್ ಹಾಕಿ ಮಿಕ್ಸಿಯಲ್ಲಿ ರುಬ್ಬಿ ಇದನ್ನು ಊಟದ ಜೊತೆ ತಿನ್ನಿ. ಡೆಂಗ್ಯೂ ಕಾಯಿಲೆಯಿಂದ ಗುಣಮುಖವಾಗುವವರೆಗೆ ತಿನ್ನಿ.

4. ಕಹಿ ಬೇವಿನ ಎಲೆ

4. ಕಹಿ ಬೇವಿನ ಎಲೆ

ಕಹಿ ಬೇವಿನ ಎಲೆಯ ರಸ ಕೂಡ ಡೆಂಗ್ಯೂ ಕಾಯಿಲೆಯನ್ನು ಕಡಿಮೆ ಮಾಡುತ್ತದೆ.

5. ಕೊತ್ತಂಬರಿ ಸೊಪ್ಪು

5. ಕೊತ್ತಂಬರಿ ಸೊಪ್ಪು

ಕೊತ್ತಂಬರಿ ಸೊಪ್ಪನ್ನು ಅಡುಗೆಗೆ ಬಳಸಿ, ಇದರ ಎಲೆಯಿಂದ ರಸವನ್ನು ಹಿಂಡಿ ಟಾನಿಕ್ ರೀತಿ ಬಳಸಬಹುದು.

6. ವಿಟಮಿನ್ ಸಿ

6. ವಿಟಮಿನ್ ಸಿ

ವಿಟಮಿನ್ ಸಿ ಇರುವ ಹಣ್ಣುಗಳನ್ನು ತಿನ್ನುವುದು ಒಳ್ಳೆಯದು. ನೆಲ್ಲಿಕಾಯಿ, ಕಿತ್ತಳೆ ರಸ ತಿನ್ನಿ.

7. ತುಳಸಿ

7. ತುಳಸಿ

ಕುಡಿಯುವ ನೀರಿಗೆ ತುಳಸಿ ಎಲೆ ಹಾಕಿ ಕುದಿಸಿ, ಆ ನೀರನ್ನು ಕುಡಿಯುವುದು ಒಳ್ಳೆಯದು. ಬಿಸಿ ನೀರಿಗೆ 1 ಚಮಚ ತುಳಸಿ ರಸ ಮತ್ತು ಸ್ವಲ್ಪ ಕರಿ ಮೆಣಸಿನ ಪುಡಿ ಹಾಕಿ ಮಿಕ್ಸ್ ಮಾಡಿ ಕುಡಿಯುವುದು ಕೂಡ ಒಳ್ಳೆಯದು.

8.ಮೆಂತೆ ಸೊಪ್ಪು

8.ಮೆಂತೆ ಸೊಪ್ಪು

ಮೆಂತೆ ಸೊಪ್ಪನ್ನು ತಿಂದರೆ ಡೆಂಗ್ಯೂ ಜ್ವರ ಕಡಿಮೆಯಾಗುವುದು.

9. ಕೆಂಪಕ್ಕಿಯ ಗಂಜಿ

9. ಕೆಂಪಕ್ಕಿಯ ಗಂಜಿ

ಕೆಂಪಕ್ಕಿಯಿಂದ ತಯಾರಿಸಿದ ಗಂಜಿ ಕುಡಿಯುವುದರಿಂದ ಡೆಂಗ್ಯೂ ಜ್ವರ ಬೇಗನೆ ಕಮ್ಮಿಯಾಗುವುದು ಅಲ್ಲದೆ ಗಂಜಿ ದೇಹಕ್ಕೆ ಶಕ್ತಿಯನ್ನೂ ತುಂಬುವುದು.

English summary

Home Remedies For Dengue Fever

There are some things in life that you wish would never happen to you and dengue fever is one of them. The disease itself enters so seamlessly into a human’s immune system that by the time one gets cracking the code, the body comes crashing down.Here are the few remedies for dengue.
X
Desktop Bottom Promotion