For Quick Alerts
ALLOW NOTIFICATIONS  
For Daily Alerts

ಸಾಮಾನ್ಯ ಶೀತಕ್ಕೆ ಹೇಳಿ ಗುಡ್ ಬೈ!

|

ಚಳಿಗಾಲ ಪ್ರಾರಂಭವಾದರೆ ಸಾಕು ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ನೆಗಡಿ ಖಾಯಿಲೆ ಆರಂಭವಾಗುತ್ತದೆ. ವೈರಸ್ ಗಳು ಚಳಿಗಾಲದಲ್ಲಿ ಸಕ್ರಿಯಗೊಂಡು ಮೂಗು ಮತ್ತು ಉಸಿರಾಟಕ್ಕೆ ಸಂಬಂಧಿಸಿದ ತೊಂದರೆಗಳಿಗೆ ಮೂಲಗಳಾಗುತ್ತವೆ. ಶೀತ ಮೂಗಿನಿಂದಲೇ ಆರಂಭವಾದರೂ ನಿಧಾನವಾಗಿ ದೇಹದ ಎಲ್ಲಾ ಭಾಗಗಳಲ್ಲಿಯೂ ಪಸರಿಸುತ್ತದೆ.

ಶೀತದ ಲಕ್ಷಣಗಳಲ್ಲಿ ಮೂಗು ಸೋರುವಿಕೆ, ಸೀನುವಿಕೆ, ಗಂಟಲು ನೋವು, ಶೀತ, ಜ್ವರ, ತಲೆನೋವು ಮತ್ತು ದೇಹದ ನೋವುಗಳೂ ಸೇರಿವೆ. ಶೀತಕ್ಕೆ ಒಳಗಾದ ವ್ಯಕ್ತಿ ದುರ್ಬಲ ಮತ್ತು ಜಡರಾಗುತ್ತಾರೆ. ಆದಾಗ್ಯೂ ಚಳಿಗಾಲದಲ್ಲಿ ಬರುವ ಶೀತವನ್ನು ಬರದಂತೆ ತಡೆಯಲು ಸಾಧ್ಯವಿಲ್ಲ. ಔಷದಗಳಿಂದಲೂ ಸಂಪೂರ್ಣ ಪರಿಹಾರ ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ಹೆಚ್ಚಿನ ಆರಾಮವನ್ನು ನೀಡುವಂತಹ ಕೆಲವು ಮನೆಮದ್ದುಗಳನ್ನು ನೆಗಡಿ ಉಪಶಮನಕ್ಕಾಗಿ ಬಳಸುವುದು ಒಳ್ಳೆಯದು.

ಗಂಟಲು ಕಟ್ಟಿದಂತಾಗಿ ಶೀತ ಬರುವ ಲಕ್ಷಣ

ಗಂಟಲು ಕಟ್ಟಿದಂತಾಗಿ ಶೀತ ಬರುವ ಲಕ್ಷಣ

ಗಂಟಲು ಕಟ್ಟಿದಂತಾಗಿ ಶೀತ ಬರುವ ಲಕ್ಷಣಗಳಿದ್ದರೆ ಗಂಟಲಲ್ಲಿ ಕಿರಿಕಿರಿಯಾಗುತ್ತಿದ್ದರೆ, ಬೆಚ್ಚಗಿನ ನೀರಿನಲ್ಲಿ ಉಪ್ಪನ್ನು ಬೆರೆಸಿ ಬಾಯಿ ಮುಕ್ಕಳಿಸಿ. ಇದು ಹೆಚ್ಚಿನ ವೈರಸ್ ದೇಹವನ್ನು ಸೇರುವುದನ್ನು ತಪ್ಪಿಸುತ್ತದೆ.

ಹಬೆಯ ಉಸಿರೆಳೆದುಕೊಳ್ಳುವಿಕೆ

ಹಬೆಯ ಉಸಿರೆಳೆದುಕೊಳ್ಳುವಿಕೆ

ಹಬೆಯ ಇನ್ಹಲೇಷನ್ ಮಾಡುವುದು ಶೀತದ ಕಿರಿಕಿರಿಗೆ ಉತ್ತಮ ಪರಿಹಾರ. ಇದು ತಾತ್ಕಾಲಿಕ ಪರಿಹಾರವನ್ನು ಒದಗಿಸುತ್ತದೆ. ಬಿಸಿ ಹಬೆಯನ್ನು ಮೂಗಿನಿಂದ ಒಳಗೆಳೆದುಕೊಳ್ಳುವುದರಿಂದ ಸೂಕ್ಷ್ಮಾಣು ಜೀವಿಗಳನ್ನು ಕೊಲ್ಲುತ್ತದೆ. ಆದರೆ ಹಬೆಯನ್ನು ತೆಗೆದುಕೊಳ್ಳುವಾಗ ನೀರು ಅತೀ ಬಿಸಿಯಾಗದಿರಲಿ. ಇದು ಮೂಗಿನ ಸೂಕ್ಷ್ಮ ಅಂಗಾಂಶಗಳನ್ನು ಹಾನಿಗೊಳಿಸುತ್ತದೆ. ಹಬೆಯ ಇನ್ಹಲೇಷನ್ ಇಲ್ಲದಿದ್ದರೆ ಬಿಸಿ ನೀರನ್ನು ಪಾತ್ರೆಯಲ್ಲಿ ಹಾಕಿ ಹಬೆಯನ್ನು ತೆಗೆದುಕೊಳ್ಳಬಹುದು. ಹೆಚ್ಚಿನ ಪರಿಣಾಮಕ್ಕಾಗಿ ಈ ನೀರಿಗೆ ಬಾಮ್ ಗಳು ಅಥವಾ ವೇಪರೈಸರ್ಸ್ (vaporizers) ಗಳನ್ನು ಹಾಕಬಹುದು.

ಶುಂಠಿ ಟೀ

ಶುಂಠಿ ಟೀ

ಬಿಸಿ ಬಿಸಿಯಾದ ಶುಂಠಿ ಟೀಯನ್ನು ಕುಡಿದರೆ ಶೀತ ಹೇಳ ಹೆಸರಿಲ್ಲದಂತೆ ಮಾಯವಾಗುತ್ತದೆ.

ಮಿಂಟ್ ಜೊತೆ ಟೀ

ಮಿಂಟ್ ಜೊತೆ ಟೀ

ಮಿಂಟ್ ಅತಹ್ವಾ ಪುದೀನಾ ಮತ್ತು ತುಳಸಿ ಎಲೆಗಳನ್ನು ಬೆರೆಸಿ ಟೀ ಮಾಡಿ ಕುಡಿದರೆ ಗಂಟಲಿಗೂ ಆರಾಮವಾಗಿ ಜಾಕೀರ್ ಹುಸೇನ್ ತರಹ ನೀವೂ 'ವಾಹ್ ತಾಜ್' ಎನ್ನಬಹುದು ಏನಂತೀರಿ?

ಹಾಟ್ ಸ್ಟ್ರೀಮಿಂಗ್ ರಸಂ

ಹಾಟ್ ಸ್ಟ್ರೀಮಿಂಗ್ ರಸಂ

ಹಾಟ್ ಸ್ಟ್ರೀಮಿಂಗ್ ರಸಂ (ದಕ್ಷಿಣ ಭಾರತದ ಸೂಪ್) ಹುಣುಸೇ ಹಣ್ಣು ಮತ್ತು ಕರಿಮೆಣಸಿನ ಕಾಳಿನಿಂದ ತಯಾರಿಸಲಾಗುತ್ತದೆ. ಇದು ಅನಗತ್ಯ ಜೀವಾಣುಗಳನ್ನು ತೊಲಗಿಸಿ ಶೀತದಿಂದ ಮೂಗು ಕಟ್ಟುವಿಕೆಯನ್ನು ತಪ್ಪಿಸುತ್ತದೆ.

ಬೆಳ್ಳುಳ್ಳಿ ಸೂಪ್

ಬೆಳ್ಳುಳ್ಳಿ ಸೂಪ್

ಶೀತವನ್ನು ಕಡಿಮೆಗೊಳಿಸಲು ಕೆಲವು ಬೆಳ್ಳುಳ್ಳಿ ಎಸಳುಗಳನ್ನು ಕುದಿಸಿ ತಯಾರಿಸುವ ಬೆಳ್ಳುಳ್ಳಿ ಸೂಪ್ ಅತ್ಯಂತ ಹಳೆಯ ಪರಿಣಾಮಕಾರಿ ಮನೆಮದ್ದು. ಅಥವಾ ಬೆಳ್ಳುಳ್ಳಿಯನ್ನು ರಸಂ ಗೆ ಹಾಕಿ ಕೂಡ ಸೇವಿಸಬಹುದು.

ಅರಿಶಿನದ ಪುಡಿ

ಬಿಸಿ ಹಾಲಿಗೆ ಅರಿಶಿನವನ್ನು ಬೆರೆಸಿ ಕುಡಿಯಿರಿ. ಇದೊಂದು ಪರಿಣಾಮಕಾರಿ ಮನೆಮದ್ದಾಗಿದ್ದು. ಬ್ಯಾಕ್ಟೀರಿಯ ನಿರೋಧಕ ಮತ್ತು ಉರಿಯೂತ ವಿರೋಧಿ ಗುಣಗಳನ್ನು ಹೊಂದಿದೆ.

ವಿಟಮಿನ್ ಸಿ

ವಿಟಮಿನ್ ಸಿ

ಸಿ ಜೀವಸತ್ವ ಆಕ್ರಮಣಕಾರಿ ಜೀವಾಣುಗಳನ್ನು ತಡೆಯುವ ಅತ್ಯಂತ ಉತ್ತಮ ಔಷಧ. ನಿಂಬೆರಸ ಮತ್ತು ಜೇನುತುಪ್ಪವನ್ನು ಬಿಸಿ ನೀರಿಗೆ ಬೆರೆಸಿ ಕುಡಿಯುವುದರಿಂದ ದೇಹಕ್ಕೆ ಜೀವಸತ್ವ ಸಿ ಹೇರಳವಾಗಿ ದೊರಕುತ್ತದೆ.

ತುಳಸಿ ಎಲೆಗಳು

ತುಳಸಿ ಎಲೆಗಳು

ತುಳಸಿ ರಸವನ್ನು ಜೇನಿನೊಂದಿಗೆ ಬೆರೆಸಿ ಮಕ್ಕಳಿಗೆ ಕೊಡುವುದು ಬಹಳ ಒಳ್ಳೆಯದು. ಹಾಗೆಯೇ ವಯಸ್ಕರೂ ಕೂಡ ತುಳಸಿ ಎಲೆಗಳನ್ನು ಶೀತ ನಿವಾರಣೆಗಾಗಿ ಆಗಾಗ ಅಗೆಯಬಹುದು.

ಕೈ ತೊಳೆಯಿರಿ

ಕೈ ತೊಳೆಯಿರಿ

ಯಾವುದೇ ತಿನಿಸುಗಳನ್ನು ತಿನ್ನುವಾಗ ಅಥವಾ ಕುಡಿಯುವುದಕ್ಕೆ ಮೊದಲು ಕೈಗಳನ್ನು ಹ್ಯಾಂಡ್ ಸ್ಯಾನಿಟೈಜರ್ ಮೂಲಕ ಚೆನ್ನಾಗಿ ತೊಳೆಯಿರಿ. ಇದು ಸೂಕ್ಷ್ಮ ಜೀವಾಣುಗಳು ನಿಮ್ಮ ದೇಹವನ್ನು ಸೇರದಂತೆ ತಡೆಯುತ್ತದೆ.

ಅಂತರವಿರಲಿ

ಅಂತರವಿರಲಿ

ಚಳಿಗಾಲ ಅಥವಾ ಆರ್ದ್ರ ತಿಂಗಳುಗಳಲ್ಲಿ ನೆಗಡಿಯಾದ ವ್ಯಕ್ತಿಯಿಂದ ದೂರವಿರಿ. ಜ್ವರ ಅಥವಾ ನೆಗಡಿ ಒಬ್ಬರಿಂದೊಬ್ಬರಿಗೆ ಹರಡಬಹುದು. ಅಜಾಗರೂಕತೆಯಿಂದ ನಿಮ್ಮ ಮಗು ಜ್ವರದಿಂದಾಗಿ ಶಾಲೆ, ಆಟ ಪಾಠಗಳನ್ನು ತಪ್ಪಿಸಿಕೊಳ್ಳುವುದು ನಿಮಗಿಷ್ಟವೇ?

ಮಕ್ಕಳನ್ನು ಸುರಕ್ಷಿತವಾಗಿಡಲು ಆರೋಗ್ಯಕರ ಸಲಹೆಗಳು -

ಮಕ್ಕಳು ಶಾಲೆಯಿಂದ ಅಥವಾ ಆಟವಾಡಿ ಬಂದನಂತರ ಬಟ್ಟೆಗಳನ್ನು ಚೆನ್ನಾಗಿ ತೊಳೆಯಿರಿ.

ತಿನ್ನುವ ಮೊದಲು ಕೈ ತೊಳೆಯಿರಿ.

ಶೀನುವಾಗ ಕರವಸ್ತ್ರವನ್ನು ಬಳಸಿ.

ತಂಪು ಪಾನೀಯ, ಐಸ್-ಕ್ರೀಮ್ ಗಳಿಂದ ನಿಮ್ಮ ಮಕ್ಕಳನ್ನು ದೂರವಿಡಿ. ನಿಮ್ಮ ದೇಹದಿಂದ ಜೀವಾಣುಗಳು ತೊಲಗಲು ಯಥೇಚ್ಛವಾಗಿ ನೀರು ಕುಡಿಯಿರಿ.

ಈ ಮೇಲಿನ ಎಲ್ಲಾ ವಿಧಾನಗಳು ಶೀತದಿಂದ ನಿಮ್ಮನ್ನು ದೂರವಿಡಲು ಸಹಕರಿಸುತ್ತದೆ.

English summary

Home Made Remedies For Common Cold | ಸಾಮಾನ್ಯ ಶೀತಕ್ಕೆ ಹೇಳಿ ಗುಡ್ ಬೈ!

Medications may not always provide complete relief. Hence a few home concoctions that might give the much needed respite when contacted with the virus.
X
Desktop Bottom Promotion