For Quick Alerts
ALLOW NOTIFICATIONS  
For Daily Alerts

ಧೂಮಪಾನ ತ್ಯಜಿಸುವಂತೆ ಮಾಡುವ ಗಿಡಮೂಲಿಕೆಗಳು

By Super
|

ಕೆಟ್ಟ ಅಭ್ಯಾಸಗಳಲ್ಲಿ ಒಂದಾಗಿರುವ ಸಿಗರೇಟ್ ಸೇದುವುದನ್ನು ಬಿಡುವುದು ತುಂಬಾ ಕಷ್ಟ. ತಂಬಾಕು ಮತ್ತು ನಿಕೋಟಿನ್ ವ್ಯಸನ ಧೂಮಪಾನ ಮಾಡುವ ಸಮುದಾಯಕ್ಕೆ ತುಂಬಾ ಕಠಿಣ ಸಂಯೋಜನೆ. ಹದಿಹರೆಯದಲ್ಲಿ ಸ್ನೇಹಿತರೊಂದಿಗೆ ಸೇರಿ ಏನಾದರೂ ಹೊಸತನ್ನು ಪ್ರಯತ್ನಿಸಬೇಕೆಂಬ ಉತ್ಸಾಹದೊಂದಿಗೆ ಅಥವಾ ಇನ್ನೊಬ್ಬರು ಸೇದುವುದನ್ನು ನೋಡಿ ಅದನ್ನು ತಾನು ಮಾಡಬೇಕೆಂದು ಆರಂಭವಾಗಿರುವ ಧೂಮಪಾನ ಈಗ ಚಟವಾಗಿರಬಹುದು. ಧೂಮಪಾನ ಅಭ್ಯಾಸ ಮಾಡಲು ಕಾರಣ ಏನೇ ಆಗಿದ್ದರೂ ಒಂದು ಸಮಯದ ಬಳಿಕ ಇದನ್ನು ತ್ಯಜಿಸಬೇಕೆಂದು ಪ್ರತಿಯೊಬ್ಬರಿಗೂ ಅನಿಸುತ್ತದೆ.

ಧೂಮಪಾನ ತ್ಯಜಿಸಬೇಕೆಂದು ನಿರ್ಧರಿಸುವುದು ತುಂಬಾ ಸುಲಭ. ಆದರೆ ನಿಜವಾಗಿಯೂ ಅದನ್ನು ತ್ಯಜಿಸಲು ತುಂಬಾ ಸಮಯ ಬೇಕಾಗುತ್ತದೆ. ಧೂಮಪಾನ ಬಿಡಿಸಲು ಹಲವಾರು ಡಿ ಎಡಿಕ್ಷನ್ ಸೆಂಟರ್ ಗಳು ನೆರವಾಗುತ್ತದೆ. ನಿಕೊಟಿನ್ ಮಾತ್ರೆ, ಇ-ಸಿಗರೇಟ್, ಪ್ಯಾಚ್ ಇತ್ಯಾದಿಗಳಿಂದಲೂ ಧೂಮಪಾನವನ್ನು ದೂರ ಮಾಡಬಹುದು. ವಿವಿಧ ರೀತಿಯ ಗಿಡಮೂಲಿಕೆ ಮತ್ತು ಮೂಲಿಕೆಗಳಿಂದಲೂ ಧೂಮಪಾನ ತ್ಯಜಿಸಬಹುದು. ಆದರೆ ಇದು ಹೆಚ್ಚಿನವರಿಗೆ ತಿಳಿದಿಲ್ಲ. ಗಿಡಿಮೂಲಿಕೆಯ ಮದ್ದುಗಳು ನೈಸರ್ಗಿಕವಾಗಿರುವ ಕಾರಣ ಮತ್ತು ಯಾವುದೇ ಅಡ್ಡಪರಿಣಾಮವಿಲ್ಲದ ಕಾರಣ ಈಗ ಜನಪ್ರಿಯತೆ ಪಡೆಯುತ್ತಿದೆ. ಈ ಮದ್ದನ್ನು ಕೆಲವು ಸಸ್ಯಗಳು, ಹೂ, ಎಲೆ ಅಥವಾ ಕೆಲವು ಶಿಲೀಂಧ್ರ ಸಾರಗಳಿಂದ ಪಡೆಯಲಾಗುತ್ತದೆ.

Herbs To Quit Smoking

ಧೂಮಪಾನ ಬಿಡುವ ನಿರ್ಧಾರ ತೆಗೆದುಕೊಂಡಾಗ ಕುಟುಂಬದ ಬೆಂಬಲ ಕೂಡ ಬೇಕಾಗುತ್ತದೆ ಮತ್ತು ಉತ್ತಮ ಹಾದಿಗೆ ಹೋಗಲು ಕೆಲವು ಸಲ ವ್ಯಾಕುಲತೆ ಕೂಡ ಉಂಟಾಗಬಹುದು. ಧೂಮಪಾನ ತ್ಯಜಿಸಲು ಗಿಡಮೂಲಿಕೆಯ ಮದ್ದನ್ನು ಉಪಯೋಗಿಸಿ. ಧೂಮಪಾನ ತ್ಯಜಿಸುವಾಗ ಉಂಟಾಗುವ ಲಕ್ಷಣವೆಂದರೆ ಕೆಲವು ಸಲ ಲಘು ವಾಕರಿಕೆ ಆರಂಭವಾಗಬಹುದು. ಆದರೆ ಇದು ನೀವು ಯಾವ ಮಟ್ಟದಲ್ಲಿ ನಿಮ್ಮ ಅಭ್ಯಾಸವಿದೆ ಮತ್ತು ಎಷ್ಟು ಸಮಯದಿಂದ ಧೂಮಪಾನ ಮಾಡುತ್ತಿದ್ದೀರಿ ಎನ್ನುವುದರ ಮೇಲೆ ಅವಲಂಬಿತವಾಗಿರುತ್ತದೆ. ಧೂಮಪಾನ ತ್ಯಜಿಸಲು ಗಿಡಮೂಲಿಕೆ ಮದ್ದುಗಳನ್ನು ಆಯ್ಕೆ ಮಾಡುವುದಾದರೆ ವಿಭಿನ್ನ ನಿಕೋಟಿನ್ ಪತ್ತೆಹಚ್ಚುವ ಲಕ್ಷಣಗಳಿಗೆ ವಿವಿಧ ರೀತಿಯ ಗಿಡಮೂಲಿಕೆಗಳನ್ನು ಶಿಫಾರಸ್ಸು ಮಾಡಲಾಗುತ್ತದೆ. ಪ್ರತಿಯೊಂದು ಲಕ್ಷಣಕ್ಕೂ ಭಿನ್ನ ರೀತಿಯ ಗಿಡಮೂಲಿಕೆ ಔಷಧಿಯಿರುತ್ತದೆ.

ಧೂಮಪಾನ ತ್ಯಜಿಸಲು ಇರುವ ಕೆಲವು ಜನಪ್ರಿಯ ಗಿಡಮೂಲಿಕೆ ಔಷಧಿಗಳು.
1. ಸೇಂಟ್ ಜಾನ್ಸ್ ವರ್ಟ್
ಧೂಮಪಾನ ತ್ಯಜಿಸಲು ಇದು ಅತ್ಯಂತ ಜನಪ್ರಿಯ ಗಿಡಮೂಲಿಕೆ ಮದ್ದು. ಇದು ದೇಹವನ್ನು ಶಾಂತ ಹಾಗೂ ಆರಾಮವಾಗಿರುವಂತೆ ಮಾಡುತ್ತದೆ. ನಿಕೋಟಿನ್ ತ್ಯಜಿಸುವುದರಿಂದ ಆಗುವ ಒತ್ತಡ ಮತ್ತು ಕಿರಿಕಿರಿ ಕಡಿಮೆ ಮಾಡಲು ಇದು ನೆರವಾಗುತ್ತದೆ.

2. ಲೋಬೀಲಿಯಾ
ಇದು ವ್ಯಸನವುಂಟು ಮಾಡದ ರೀತಿಯಲ್ಲಿ ಮಿದುಳಿನ ಮೇಲೆ ನಿಕೋಟಿನ್ ಪರಿಣಾಮಗಳನ್ನು ಅನುಕರಿಸುವ ಗಿಡಮೂಲಿಕ. ಧೂಮಪಾನ ತ್ಯಜಿಸಲು ಬಳಸುವ ಅತ್ಯಂತ ಪರಿಣಾಮಕಾರಿ ಗಿಡಮೂಲಿಕೆ ಇದಾಗಿದೆ. ಮಾರುಕಟ್ಟೆಯಲ್ಲಿ ಸಿಗುವ ಧೂಮಪಾನ ತ್ಯಜಿಸಲು ಇರುವ ಹೆಚ್ಚಿನ ಎಲ್ಲಾ ಔಷಧಿಗಳಲ್ಲಿ ಈ ಗಿಡಮೂಲಿಕೆ ಇರುತ್ತದೆ.

3. ಬ್ಲೂ ವೆರ್ವೈನ್
ಒತ್ತಡ, ಆತಂಕ, ಉದ್ವೇಗ ಮತ್ತು ತಳಮಳದಿಂದ ನೀವು ಆರಾಮವಾಗಿರಲು ಇದು ನೈಸರ್ಗಿಕ ರೀತಿಯಲ್ಲಿ ಕೆಲಸ ಮಾಡುತ್ತದೆ. ನಿಕೋಟಿನ್ ತ್ಯಜಿಸುವುದಿಂದ ಆಗುವ ಲಕ್ಷಣಗಳನ್ನು ನಿಭಾಯಿಸಲು ನೆರವಾಗುತ್ತದೆ ಮತ್ತು ಧೂಮಪಾನ ಮಾಡಬೇಕೆಂಬ ತುಡಿತವನ್ನು ಇದು ನಿಯಂತ್ರಿಸುತ್ತದೆ.

4. ಪೆಪ್ಪರ್ ಮಿಂಟ್
ಧೂಮಪಾನ ತ್ಯಜಿಸಿದಾಗ ಉಂಟಾಗುವ ಮೊದಲ ಲಕ್ಷಣವೆಂದರೆ ವಾಕರಿಕೆ ಮತ್ತು ಕೆಲವು ಸಂದರ್ಭಗಳಲ್ಲಿ ವಾಂತಿಯಾಗುವುದು. ಪೆಪ್ಪರ್ ಮಿಂಟ್ ವಾಕರಿಕೆ ಕಡಿಮೆ ಮಾಡಿ ಆರಾಮವಾಗಿರಲು ನೆರವಾಗುತ್ತದೆ. ಇದು ದೇಹದಲ್ಲಿ ಅರಿವಳಿಕೆ ಮತ್ತು ನೋವು ನಿವಾರಕವಾಗಿ ಕೆಲಸ ಮಾಡುತ್ತದೆ.

5.ಕೊರಿಯನ್ ಗಿನ್ ಸೆಂಗ್
ಶಕ್ತಿಯ ಮಟ್ಟವನ್ನು ಹೆಚ್ಚು ಮಾಡಿ ದೇಹವು ಒತ್ತಡವನ್ನು ನಿಭಾಯಿಸಲು ನೆರವಾಗುವ ಅತ್ಯಂತ ಶಕ್ತಿಶಾಲಿ ಗಿಡಮೂಲಿಕೆ. ಧೂಮಪಾನ ತ್ಯಜಿಸಲು ನಿರ್ಧರಿಸಿದಾಗ ನಿಮ್ಮ ದೇಹವು ಹೆಚ್ಚಿನ ಒತ್ತಡ ಮತ್ತು ಆಲಸ್ಯವನ್ನು ಎದುರಿಸಬೇಕಾಗುತ್ತದೆ. ಧೂಮಪಾನ ತ್ಯಜಿಸುವಾಗ ದೇಹದಲ್ಲಿ ಉಂಟಾಗುವ ಕೆಲವು ಲಕ್ಷಣಗಳನ್ನು ನಿಭಾಯಿಸಲು ಗಿನ್ ಸೆಂಗ್ ನೆರವಾಗುತ್ತದೆ.

6. ಮದರ್ ವರ್ತ್
ಶಮನಕಾರಿಯಾಗಿ ಕೆಲಸ ಮಾಡುವ ಗಿಡಮೂಲಿಕೆಗಳಲ್ಲಿ ಇದು ಒಂದು. ಇದು ವ್ಯಾಕುಲತೆ ಸಮಯದಲ್ಲಿ ಪ್ರಶಾಂತತೆಯಿಂದ ಇರುವಂತೆ ಮಾಡುತ್ತದೆ. ಧೂಮಪಾನ ತ್ಯಜಿಸಲು ನಿರ್ಧರಿಸಿದ ವೇಲೆ ವ್ಯಾಕುಲತೆಯು ನಿಮ್ಮನ್ನು ಅತಿಯಾಗಿ ಕಾಡುತ್ತದೆ. ಈ ವೇಳೆ ಮದರ್ ವರ್ತ್ ಪ್ರಶಾಂತತೆ ಉಂಟುಮಾಡಲು ನೆರವಾಗುತ್ತದೆ.

7. ಬ್ಲ್ಯಾಕ್ ಕೊಹೊಶ್
ಈ ಚಿರಪರಿಚಿತ ಗಿಡಮೂಲಿಕೆಯನ್ನು ಹೆದರಿಕೆ ಮತ್ತು ವ್ಯಾಕುಲತೆ ಎದುರಿಸಲು ಅತ್ಯಂತ ಸುರಕ್ಷಿತ ಶಮನಕಾರಿಯನ್ನಾಗಿ ಬಳಸಲಾಗುತ್ತದೆ. ಧೂಮಪಾನ ತ್ಯಜಿಸಿದಾಗ ಉಂಟಾಗುವ ಸಾಮಾನ್ಯ ಲಕ್ಷಣಗಳನ್ನು ಸರಿಯಾದ ರೀತಿಯಲ್ಲಿ ನಿಭಾಯಿಸದೆ ಇದ್ದಾಗ ಅದು ಪ್ರಚೋದಕಕ್ಕೆ ಕಾರಣವಾಗುತ್ತದೆ. ನಿಕೋಟಿನ್ ತ್ಯಜಿಸಿದಾಗ ಉಂಟಾಗುವ ಇಂತಹ ಲಕ್ಷಣಗಳನ್ನು ನಿಭಾಯಿಸಲು ಬ್ಲ್ಯಾಕ್ ಕೊಹೊಶ್ ಗಿಡಮೂಲಿಕೆ ತುಂಬಾ ನೆರವಾಗುತ್ತದೆ.

8. ಸ್ಲಿಪ್ಪರಿ ಎಲ್ಮ್
ಧೂಮಪಾನ ತ್ಯಜಿಸುವುದರಿಂದ ಕೆಲವೊಂದು ಸಲ ಜೀರ್ಣ ಕ್ರಿಯೆ ಸಮಸ್ಯೆಯಾಗಬಹುದು ಮತ್ತು ಅಜೀರ್ಣದಿಂದಾಗಿ ಹಲವಾರು ರೀತಿಯಿಂದ ಇರಿಸುಮುರಿಸು ಉಂಟಾಗಬಹುದು. ಈ ಗಿಡಮೂಲಿಕೆಯು ಸಮೃದ್ಧವಾದ ಪೌಷ್ಠಿಕಾಂಶಗಳನ್ನು ಹೊಂದಿದೆ ಮತ್ತು ಜೀರ್ಣ ಕ್ರಿಯೆಗೆ ನೆರವಾಗುತ್ತದೆ. ಧೂಮಪಾನ ತ್ಯಜಿಸುವ ವೇಳೆ ಇದೊಂದು ಅತ್ಯುತ್ತಮ ಆಹಾರ ತಯಾರಿಕೆಯಾಗುತ್ತದೆ.

English summary

Herbs To Quit Smoking

Whatever may be the reason for entering into the habit of smoking, after a period of time, you do feel like quitting at some point.There are lesser known methods involving various herbs and herbal supplements that help you quit smoking.
X
Desktop Bottom Promotion