For Quick Alerts
ALLOW NOTIFICATIONS  
For Daily Alerts

ಜೇನನ್ನು ಹೇಗೆ ಸೇವಿಸಿದರೆ ಆರೋಗ್ಯಕರ?

|

ಜೇನನ್ನು ಬರೀ ಆಹಾರವಾಗಿಲ್ಲ, ಮನೆ ಮದ್ದಾಗಿ ಕೂಡ ಬಳಸುತ್ತೇವೆ ಅನ್ನುವುದು ಪ್ರತಿಯೊಬ್ಬರಿಗೂ ಗೊತ್ತಿರುತ್ತದೆ. ಆದರೆ ಇದನ್ನು ಹೇಗೆ ತಿಂದರೆ ಹೆಚ್ಚು ಆರೋಗ್ಯಕರ ಅನ್ನುವುದು ಗೊತ್ತಿದೆಯೇ?

ಜೇನನ್ನು ಕುಡಿದರೆ ತೆಳ್ಳಗಾಗುತ್ತಾರೆ ಎಂದು ಜೇನನ್ನು ಹೆಚ್ಚಿನವರು ಕುಡಿಯುತ್ತಾರೆ. ಆದರೆ ಯಾವ ರೀತಿ ಕುಡಿದರೆ ತೆಳ್ಳಗಾಗುತ್ತದೆ ಎಂದು ಗೊತ್ತಿಲ್ಲದಿದ್ದರೆ, ನೀವು ಜೇನು ಸೇವಿಸುತ್ತಿರುವ ತಪ್ಪಾದ ವಿಧಾನದಿಂದ ಇನ್ನು ದಪ್ಪವಾಗಬಹುದು! ಜೇನನ್ನು ಬಿಸಿ ನೀರಿನಲ್ಲಿ ಹಾಕಿ ಕುಡಿದರೆ ತೆಳ್ಳಗಾಗುತ್ತೀರಿ, ಅದೇ ಹಾಲಿನಲ್ಲಿ ಹಾಕಿ ಕುಡಿದರೆ ದಪ್ಪಗಾಗುವಿರಿ.

ಇಲ್ಲಿ ಜೇನನ್ನು ಯಾವ ರೀತಿಯಲ್ಲಿ ತಿಂದರೆ ಹೆಚ್ಚು ಆರೋಗ್ಯಕರ ಅನ್ನುವುದರ ಚಿತ್ರ ಮಾಹಿತಿ ನೀಡಿದ್ದೇವೆ ನೋಡಿ:

ಬಿಸಿ ನೀರಿನಲ್ಲಿ ಬೆಳಗ್ಗೆ ತೆಗೆದುಕೊಳ್ಳಬೇಕು

ಬಿಸಿ ನೀರಿನಲ್ಲಿ ಬೆಳಗ್ಗೆ ತೆಗೆದುಕೊಳ್ಳಬೇಕು

ಜೇನನ್ನು ಬಿಸಿ ನೀರಿಗೆ ಹಾಕಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ ತೆಳ್ಳಗಾಗುವಿರಿ, ಮಲಬದ್ಧತೆ ಸಮಸ್ಯೆ ಕಾಡುವುದಿಲ್ಲ, ದಿನಾವಿಡೀ ಚೈತನ್ಯದಿಂದ ಇರುವಿರಿ.

ನಿಂಬೆ ರಸದ ಜೊತೆ

ನಿಂಬೆ ರಸದ ಜೊತೆ

ನಿಂಬೆ ಪಾನೀಯಾಗಳಿಗೆ ಸಕ್ಕರೆ ಹಾಕಿ ಕುಡಿಯುವ ಬದಲು ಜೇನು ಹಾಕಿ ಕುಡಿಯವುದು ಒಳ್ಳೆಯದು.

ಟೀ ಜೊತೆ

ಟೀ ಜೊತೆ

ಟೀ ಜೊತೆ ಸಕ್ಕರೆ ಹಾಕಿಮಕುಡಿಯುವ ಬದಲು ಜೇನು ಹಾಕಿ ಕುಡಿದರೆ ಬೆಸ್ಟ್ ಕಾಂಬಿನೇಷನ್. ಲೆಮನ್ ಟೀಗೆ ಸಕ್ಕರೆ ಬದಲು ಜೇನು ಹಾಕಿ ಕುಡಿದರೆ ತೆಳ್ಳಗಾಗಬಹುದು.

ಸಲಾಡ್

ಸಲಾಡ್

ಸಲಾಡ್ ನಲ್ಲಿ ಕೂಡ ಜೇನನ್ನು ಹಾಕಿ ತಿಂದರೆ ಕೂಡ ತುಂಬಾ ಒಳ್ಳೆಯದು. ಆದರೆ ಡಯಾಬಿಟಿಸ್ ಇರುವವರು ಜೇನು ತಿನ್ನಬೇಡಿ.

ಸಿಹಿ ತಿಂಡಿಗಳನ್ನು

ಸಿಹಿ ತಿಂಡಿಗಳನ್ನು

ಸಿಹಿ ತಿಂಡಿಗಳಿಗೆ ಸಕ್ಕರೆ ಬದಲು ಜೇನು ಹಾಕಿ ಮಾಡಿ ತಿಂದರೆ ದೇಹದಲ್ಲಿ ಕೊಬ್ಬಿನಂಶ ಅಷ್ಟೇನು ಹೆಚ್ಚಾಗುವುದಿಲ್ಲ.

 ಹಾಲಿನ ಜೊತೆ

ಹಾಲಿನ ಜೊತೆ

ಹಾಲಿನ ಜೊತೆ ಜೇನು ಹಾಕಿ ಕುಡಿದರೆ ತುಂಬಾ ರುಚಿಕರವಾಗಿರುತ್ತದೆ. ತುಂಬಾ ತೆಳ್ಳಗಿರುವವರು ಈ ರೀತಿ ಮಾಡಿ ಕುಡಿದರೆ ದಪ್ಪಗಾಗಬಹುದು.

ಬಾದಾಮಿ

ಬಾದಾಮಿ

ಬಾದಾಮಿಯನ್ನು ಜೇನಿನ ಜೊತೆ ತಿಂದರೆ ತೆಳ್ಳಗಾಗಬಹುದು ಹಾಗೂ ಬಾದಾಮಿ ಮತ್ತಷ್ಟು ರುಚಿಕರವಾಗಿರುತ್ತದೆ.

ಶುಂಠಿ

ಶುಂಠಿ

ಕೆಮ್ಮು, ಶೀತ ಇದ್ದರೆ ಸ್ವಲ್ಪ ಶುಂಠಿ ಪುಡಿಗೆ ಸ್ವಲ್ಪ ಜೇನು ಹಾಕಿ ಕುಡಿದರೆ ಸಾಕು, ಈ ಸಮಸ್ಯೆಯಿಂದ ಪಾರಾಗಬಹುದು.

ಮೊಸರು

ಮೊಸರು

ಮೊಸರಿಗೆ ಸಾಮಾನ್ಯವಾಗಿ ಉಪ್ಪು ಅಥವಾ ಸಕ್ಕರೆ ಹಾಕಿ ತಿನ್ನುತ್ತೇವೆ, ಆದರೆ ಉಪ್ಪು, ಸಕ್ಕರೆ ಹೆಚ್ಚು ತಿನ್ನುವುದು ಒಳ್ಳೆಯದಲ್ಲ, ಇವುಗಳ ಬದಲು ಜೇನು ಹಾಕಿ ತಿಂದರೆ ರುಚಿಯೂ ಇರುತ್ತದೆ, ಆರೋಗ್ಯಕ್ಕೂ ಒಳ್ಳೆಯದು.

English summary

Healthy Ways To Eat Honey | Tips For Health | ಜೇನನ್ನು ಹೇಗೆ ತಿಂದರೆ ಹೆಚ್ಚು ಆರೋಗ್ಯಕರ | ಆರೋಗ್ಯಕ್ಕಾಗಿ ಕೆಲ ಸಲಹೆಗಳು

The best way to have honey is to use it as a sugar alternative. Some foods go well with honey and others don't. Here are some of the most healthy ways to eat honey.
X
Desktop Bottom Promotion