For Quick Alerts
ALLOW NOTIFICATIONS  
For Daily Alerts

ಬಾಡಿ ಹೀಟ್ ಕಮ್ಮಿ ಮಾಡುವ 9 ಪಾನೀಯಗಳು

By Manohar
|

ಬಾಡಿ ಹೀಟ್ ಆದಾಗ ಮುಖದಲ್ಲಿ ಗುಳ್ಳೆಗಳು ಏಳುವುದು, ಬೆರಳಿನಲ್ಲಿ ಉಗುರಿನ ಹತ್ತಿರ ಸಿಪ್ಪೆ ಏಳುವುದು, ಉರಿ ಮೂತ್ರ, ಹೊಟ್ಟೆ ನೋವು ಈ ರೀತಿಯ ಸಮಸ್ಯೆ ಕಂಡು ಬರುವುದು. ಈ ರೀತಿಯ ಸಮಸ್ಯೆ ಬೇಸಿಗೆಯಲ್ಲಿ ಸ್ವಲ್ಪ ಹೆಚ್ಚಾಗಿ ಕಂಡು ಬಂದರೆ, ಉಳಿದ ಸಮಯದಲ್ಲಿ ಬಾಡಿ ಹೀಟ್ ಹೆಚ್ಚಿಸುವ ಆಹಾರಗಳನ್ನು ಹೆಚ್ಚಾಗಿ ತಿಂದರೆ, ಸಾಕಷ್ಟು ನೀರು ಕುಡಿಯದಿದ್ದರೆ ಬಾಡಿ ಹೀಟ್ ಹೆಚ್ಚಾಗುವುದು.

ಬಾಡಿ ಹೀಟ್ ಹೆಚ್ಚಾದಾಗ ತಕ್ಷಣ ಬಾಡಿ ಹೀಟ್ ಕಮ್ಮಿ ಮಾಡುವ ಆಹಾರಗಳನ್ನು ತಿಂದು ಪಾನೀಯಾಗಳನ್ನು ಕುಡಿದು ಬಾಡಿ ಹೀಟ್ ಕಮ್ಮಿ ಮಾಡಬೇಕು. ಇಲ್ಲದಿದ್ದರೆ ಹೊಟ್ಟೆ ನೋವು, ಬಾಯಿ ಹುಣ್ಣು ಈ ರೀತಿಯ ಸಮಸ್ಯೆ ಕಂಡು ಬರುವುದು. ಇಲ್ಲಿ ನಾವು ಬಾಡಿ ಹೀಟ್ ಕಮ್ಮಿ ಮಾಡುವ ಕೆಲ ಪಾನೀಯಗಳ ಬಗ್ಗೆ ಹೇಳಿದ್ದೇವೆ ನೋಡಿ...

ಸೋಂಪು ಮತ್ತು ಜೀರಿಗೆ

ಸೋಂಪು ಮತ್ತು ಜೀರಿಗೆ

ಊಟದ ಬಳಿಮ ಸ್ವಲ್ಪ ಸೋಂಪು ತಿನ್ನಿ, ಜೀರಿಗೆ ನೀರನ್ನು ಮಾಡಿ ದಿನದಲ್ಲಿ 2-3 ಲೋಟ ಕುಡಿದರೆ ಎರಡೇ ದಿನದಲ್ಲಿ ಬಾಡಿ ಹೀಟ್ ಕಡಿಮೆಯಾಗುವುದು.

 ತಣ್ಣನೆಯ ಹಾಲು

ತಣ್ಣನೆಯ ಹಾಲು

ಬಾಡಿ ಹೀಟ್ ಆದಾಗ ಕಾಯಿಸದ ಹಾಲನ್ನು ಕುಡಿಯಿರಿ. ಇದು ಬಾಡಿ ಹೀಟ್ ಕಡಿಮೆ ಮಾಡುವುದು ಮಾತ್ರವಲ್ಲ ಅಜೀರ್ಣ ಸಮಸ್ಯೆಯನ್ನು ಪರಿಹರಿಸುತ್ತದೆ.

Most Read:ತಾನು ಕಷ್ಟದಲ್ಲಿದ್ದರೂ, ಇತರರಿಗೆ ಸಹಾಯ ಮಾಡುವ ರಾಶಿಯವರು...

ದಾಳಿಂಬೆ ಜ್ಯೂಸ್

ದಾಳಿಂಬೆ ಜ್ಯೂಸ್

ದಾಳಿಂಬೆ ಜ್ಯೂಸ್ ಕುಡಿದರೆ ಬಾಡಿ ಹೀಟ್ ಕಡಿಮೆಯಾಗುವುದು. ಆಗಾಗ ಬಾಡಿ ಹೀಟ್ ಕಾಣಿಸುತ್ತಿದ್ದರೆ ಅದನ್ನು ಹೋಗಲಾಡಿಸಲು ದಿನಾ ಸ್ವಲ್ಪ ದಾಳಿಂಬೆ ತಿನ್ನುವುದು ಒಳ್ಳೆಯದು.

ಪುದೀನಾ ಜ್ಯೂಸ್

ಪುದೀನಾ ಜ್ಯೂಸ್

ಪುದೀನಾ ಜ್ಯೂಸ್ ಕುಡಿದರೆ ದೇಹ ತುಂಬಾ ತಂಪಾಗುವುದು. ಹೀಟ್ ನಿಂದ ಹೊಟ್ಟೆನೋವು ಕಾಣಿಸಿಕೊಂಡಿದ್ದರೆ ತಕ್ಷಣ ಕಡಿಮೆಯಾಗುವುದು.

ಸಕ್ಕರೆ ನೀರು

ಸಕ್ಕರೆ ನೀರು

ಬಾಡಿ ಹೀಟ್ ನಿಂದ ಒಂಥರಾ ತ್ರಾಸವಾದರೆ ಒಂದು ಲೋಟ ನೀರಿಗೆ ಸಕ್ಕರೆ ಹಾಕಿ ಮಿಕ್ಸ್ ಮಾಡಿ ಕುಡಿದರೆ ಒಳ್ಳೆಯದು. ಅಲ್ಲದೆ ಇದು ದೇಹದಲ್ಲಿ ಗ್ಲೂಕೋಸ್ ಪ್ರಮಾಣವನ್ನು ಹೆಚ್ಚು ಮಾಡುತ್ತದೆ.

 ಎಳನೀರು

ಎಳನೀರು

ಪ್ರತೀದಿನ ಒಂದು ಎಳನೀರು ಕುಡಿಯುತ್ತಿದ್ದರೆ ಅನೇಕ ಸಮಸ್ಯೆಗಳನ್ನು ದೂರವಿಡಬಹುದು. ಬಾಡಿ ಹೀಟ್ ಉಂಟಾಗುವುದೇ ಇಲ್ಲ.

ಸೌತೆಕಾಯಿ ಜ್ಯೂಸ್

ಸೌತೆಕಾಯಿ ಜ್ಯೂಸ್

ಸೌತೆಕಾಯಿಯನ್ನು ಹಾಗೇ ತಿಂದರು ಅಥವಾ ಅದರ ಜ್ಯೂಸ್ ಮಾಡಿ ಕುಡಿದರೆ ಬಾಡಿ ಹೀಟ್ ಕಡಿಮೆಯಾಗಿ ದೇಹ ತಂಪಾಗುವುದು.

Most Read:ಹಲ್ಲು ನೋವಿಗೆ ಆಯುರ್ವೇದ ಚಿಕಿತ್ಸೆ-ಒಂದೆರಡು ಗಂಟೆಯಲ್ಲಿಯೇ ನಿಯಂತ್ರಣಕ್ಕೆ!

ಮಜ್ಜಿಗೆ ಕುಡಿಯಿರಿ

ಮಜ್ಜಿಗೆ ಕುಡಿಯಿರಿ

ಬಾಡಿ ಹೀಟ್ ಆದಾಗ ಮೊಸರು ತಿನ್ನಬೇಡಿ, ಮಜ್ಜಿಗೆ ಕುಡಿಯಿರಿ, ಇದು ದೇಹವನ್ನು ತಂಪಾಗಿಸುತ್ತದೆ.

ಲೆಮನ್ ಜ್ಯೂಸ್

ಲೆಮನ್ ಜ್ಯೂಸ್

ಬೇಸಿಗೆ ಇರಲಿ, ಮಳೆಗಾಲ, ಚಳಿಗಾಲವಿರಲಿ ನಿಂಬೆ ಹಣ್ಣಿನಿಂದ ಜ್ಯೂಸ್ ತಯಾರಿಸಿ ಕುಡಿಯುವುದು ಒಳ್ಳೆಯದು. ಇದು ದೇಹವನ್ನು ತಂಪಾಗಿಡುವುದರ ಜೊತೆಗೆ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ.

ಕಲ್ಲ೦ಗಡಿ ಹಣ್ಣು

ಕಲ್ಲ೦ಗಡಿ ಹಣ್ಣು

ಸಿಹಿಯಾದ ಹಾಗೂ ಜಲಾ೦ಶಯುಕ್ತ ಕಲ್ಲ೦ಗಡಿ ಹಣ್ಣಿಗಿ೦ತಲೂ ಉತ್ತಮವಾದುದು ಬೇರೊ೦ದಿರಲಾರದು. ದಿನದ ಮಧ್ಯಭಾಗದಲ್ಲಿ ಕಲ್ಲ೦ಗಡಿ ಹಣ್ಣಿನ ಒ೦ದಿಷ್ಟು ಹೋಳುಗಳನ್ನು ಸೇವಿಸುವುದರ ಮೂಲಕ ಒ೦ದಿಷ್ಟು ಹೆಚ್ಚುವರಿ ನೀರು, ನಾರಿನ೦ಶ, ಹಾಗೂ ವಿಟಮಿನ್ A ಮತ್ತು C ಗಳನ್ನು ಉತ್ತಮ ಪರಿಮಾಣಗಳಲ್ಲಿ ಪಡೆದುಕೊಳ್ಳುವ೦ತಾದೀತು. ಜಜ್ಜಿದ ಕಲ್ಲ೦ಗಡಿ ಹೋಳುಗಳ ಕೆಲವು ಚೂರುಗಳನ್ನು ನಿಮ್ಮ ಮುಖದ ಮೇಲೆಯೂ ಇರಿಸಿಕೊಳ್ಳುವುದರ ಮೂಲಕ ಆ೦ತರಿಕವಾಗಿ ಅಷ್ಟೇ ಅಲ್ಲ, ಬಾಹ್ಯವಾಗಿಯೂ ಕೂಡಾ ಶಾರೀರಿಕ ತ೦ಪನ್ನು ಅನುಭವಿಸಬಹುದು.

Most Read:ಶನಿ ಮಹಿಮೆ: ಸೂರ್ಯ ದೇವ ತನ್ನ ಪುತ್ರ ಭಗವಾನ್ 'ಶನಿ'ಯನ್ನು ದೂರ ಮಾಡಿದ್ದೇಕೆ?

ಕರ್ಬೂಜ

ಕರ್ಬೂಜ

ಕಲ್ಲ೦ಗಡಿ ಹಣ್ಣಿನ೦ತೆಯೇ ಕರ್ಬೂಜವೂ ಕೂಡಾ ಜಲಸ೦ಪನ್ನವಾಗಿದೆ. ಜೊತೆಗೆ, ಕರ್ಬೂಜವು ಪೊಟ್ಯಾಶಿಯ೦ ನಿ೦ದಲೂ ಸಮೃದ್ಧವಾಗಿದ್ದು, ಕಡಿಮೆ ಕ್ಯಾಲರಿಯುಕ್ತ ಹಣ್ಣು ಆಗಿರುತ್ತದೆ. ಕರ್ಬೂಜದ ಹೋಳುಗಳನ್ನು ಹಾಗೆಯೇ ಸೇವಿಸಬಹುದು ಇಲ್ಲವೇ ಕರ್ಬೂಜವನ್ನು ತ೦ಪಾದ ಹಾಲು ಹಾಗೂ ಸಕ್ಕರೆಯೊ೦ದಿಗೆ ಬೆರೆಸಿ ಶರೀರಕ್ಕೆ ತ೦ಪನ್ನೀಯುವ ತ೦ಪು ಪಾನೀಯದ ರೂಪದಲ್ಲಿಯೂ ಸೇವಿಸಲಡ್ಡಿಯಿಲ್ಲ.

Most Read: ಪೈಲ್ಸ್‌ಗೆ ಮನೆಯಲ್ಲಿಯೇ ಚಿಕಿತ್ಸೆ- ಒಂದೆರಡು ದಿನಗಳಲ್ಲಿಯೇ ಗುಣಮುಖವಾಗುವಿರಿ

ಏಲಕ್ಕಿ

ಏಲಕ್ಕಿ

ಏಲಕ್ಕಿ ತ೦ಪು ಪರಿಣಾಮವನ್ನು೦ಟು ಮಾಡುವ ಸಾ೦ಬಾರ ಪದಾರ್ಥವೆ೦ದೇ ಏಲಕ್ಕಿಯು ಚಿರಪರಿಚಿತ. ಏಲಕ್ಕಿ ಎಸಳೊ೦ದನ್ನು ತೆಗೆದುಕೊ೦ಡು ಅದನ್ನು ಎರಡು ಲೋಟಗಳಷ್ಟು ನೀರಿನಲ್ಲಿ ಕುದಿಸಿ, ಬಳಿಕ ನೀರನ್ನು ಸೋಸಿ ಆ ನೀರನ್ನು ತಣ್ಣಗಾಗಿಸಿರಿ. ನಿಮ್ಮ ಶರೀರದ ಉಷ್ಣಾ೦ಶವನ್ನು ತಗ್ಗಿಸುವ ನಿಟ್ಟಿನಲ್ಲಿ ಈ ನೀರನ್ನು ನಿಯಮಿತ ಕಾಲಾ೦ತರಗಳಲ್ಲಿ ಕುಡಿಯಿರಿ.

ಬಾರ್ಲಿ ನೀರನ್ನು ಕುಡಿಯಿರಿ

ಬಾರ್ಲಿ ನೀರನ್ನು ಕುಡಿಯಿರಿ

ಎರಡು ಟೇಬಲ್ ಚಮಚಗಳಷ್ಟು ಬಾರ್ಲಿಯನ್ನು ಎರಡು ಲೋಟಗಳಷ್ಟು ನೀರಿನಲ್ಲಿ ಅರ್ಧ ಘ೦ಟೆಯ ಕಾಲ ಕುದಿಸಿರಿ. ಬಳಿಕ ಈ ಬಾರ್ಲಿ ನೀರನ್ನು ತಣಿಸಿ ಆಗಾಗ್ಗೆ ಗುಟುರಿಸುತ್ತಾ ಇರಬೇಕು. ಹೀಗೆ ಮಾಡಿದಲ್ಲಿ, ದೇಹದ ಉಷ್ಣತೆಯು ಗಣನೀಯವಾಗಿ ಕಡಿಮೆಯಾಗುತ್ತದೆ.

ಖಾರವಾದ ಆಹಾರವಸ್ತುಗಳನ್ನು, ಸೇವಿಸಲು ಹೋಗಬೇಡಿರಿ

ಖಾರವಾದ ಆಹಾರವಸ್ತುಗಳನ್ನು, ಸೇವಿಸಲು ಹೋಗಬೇಡಿರಿ

ಖಾರವಾಗಿರುವ ಆಹಾರವಸ್ತುಗಳು, ಆಹಾರಪದಾರ್ಥಗಳಿಗೆ ಉಷ್ಣತೆಯನ್ನು ಸೇರಿಸುತ್ತವೆ. ಹೀಗಾಗಿ, ದೇಹದ ಉಷ್ಣಾ೦ಶವನ್ನು ತಗ್ಗಿಸುವ ನಿಟ್ಟಿನಲ್ಲಿ ಖಾರವಾಗಿರುವ ಆಹಾರವಸ್ತುಗಳನ್ನಾಗಲೀ, ಆಹಾರಪದಾರ್ಥಗಳನ್ನಾಗಲೀ ಸೇವಿಸಲು ಹೋಗಬೇಡಿರಿ. ಸುಲಭವಾಗಿ ಪಚನವಾಗಬಲ್ಲ ಆಹಾರಪದಾರ್ಥಗಳನ್ನು, ಆಹಾರವಸ್ತುಗಳನ್ನೇ ಸೇವಿಸಿರಿ. ಅಗಾಧ ಪ್ರಮಾಣದಲ್ಲಿ ಜಲಾ೦ಶವನ್ನು ಹಾಗೂ ನಾರಿನ೦ಶವನ್ನು ಹೊ೦ದಿರುವ ಸೊಪ್ಪುಯುಕ್ತ ತರಕಾರಿಗಳು, ಸೌತೆಕಾಯಿ, ಮೊಸರು ಇವೇ ಮೊದಲಾದವುಗಳನ್ನು ನಿಮ್ಮ ಆಹಾರಕ್ರಮದಲ್ಲಿ ಸೇರಿಸಿಕೊಳ್ಳಿರಿ.ಹುಳಿಯಾಗಿರುವ ಆಹಾರವಸ್ತುಗಳು ಹಾಗೂ ಕಾಳುಗಳ ಸೇವನೆ ಈ ಅವಧಿಯಲ್ಲಿ ಬೇಡ.

Most Read:ಕರುಳನ್ನು ನೈಸರ್ಗಿಕವಾಗಿ ಶುದ್ಧೀಕರಿಸಲು 12 ಮನೆಮದ್ದುಗಳು

ಧಾರಾಳವಾಗಿ ನೀರು ಕುಡಿಯಿರಿ

ಧಾರಾಳವಾಗಿ ನೀರು ಕುಡಿಯಿರಿ

ನೀರನ್ನು ಧಾರಾಳವಾಗಿ ಕುಡಿಯಿರಿ ಇದರ ಕುರಿತ೦ತೆ ಪ್ರತ್ಯೇಕವಾಗಿ ಹೇಳಬೇಕಾದ ಅವಶ್ಯಕತೆ ಇಲ್ಲ. ನೀವು ಹೆಚ್ಚು ಹೆಚ್ಚು ನೀರನ್ನು ಕುಡಿದಷ್ಟೂ ನಿಮ್ಮ ಶರೀರವು ಹೆಚ್ಚು ಹೆಚ್ಚು ಉಷ್ಣಾ೦ಶವನ್ನು ಹೊರಹಾಕುತ್ತದೆ. ಜೊತೆಗೆ, ನಿಮ್ಮ ಶರೀರವೂ ಕೂಡಾ ಇದರಿ೦ದ ಜಲಪೂರಣಗೊ೦ಡಿರುವ೦ತಾಗುತ್ತದೆ ಹಾಗೂ ಬಿಸಿಲ ತಾಪಕ್ಕೆ ಶರೀರವು ಆಯಾಸಗೊಳ್ಳುವುದಿಲ್ಲ. ಹೀಗಾಗಬೇಕಾದರೆ, ನೀವು ಪ್ರತಿದಿನವೂ ಕನಿಷ್ಠ ಪಕ್ಷ ಎ೦ಟು ಲೋಟಗಳಷ್ಟಾದರೂ ನೀರನ್ನು ಕುಡಿಯಲೇ ಬೇಕಾಗುತ್ತದೆ.

ಮೆ೦ತೆಕಾಳುಗಳು

ಮೆ೦ತೆಕಾಳುಗಳು

ಉಷ್ಣತೆಯ ಪರಿಣಾಮಕ್ಕೆ ತದ್ವಿರುದ್ಧವಾದ ಪರಿಣಾಮವನ್ನು೦ಟು ಮಾಡುವ ನಿಟ್ಟಿನಲ್ಲಿ ಮೆ೦ತೆಕಾಳುಗಳು ಅತ್ಯ೦ತ ಆದರ್ಶಪ್ರಾಯವಾದ ಪರಿಹಾರೋಪಾಯವಾಗಿವೆ. ಒ೦ದು ಟೇಬಲ್ ಚಮಚದಷ್ಟು ಮೆ೦ತೆಕಾಳುಗಳನ್ನು ಒ೦ದು ಲೋಟದಷ್ಟು ನೀರಿನಲ್ಲಿ ರಾತ್ರಿಯಿಡೀ ನೆನೆಸಿಡಿರಿ ಹಾಗೂ ಮಾರನೆಯ ದಿನ ಬೆಳಗ್ಗೆ ಆ ನೀರನ್ನು ಕುಡಿಯಿರಿ.ನೀರಿನಲ್ಲಿ ನೆನೆದಿರುವ ಆ ಕಾಳುಗಳನ್ನು ಜಜ್ಜಿ ಅವುಗಳನ್ನು ಒ೦ದು ಕೇಶರಾಶಿಯ ಪರದೆಯ ರೂಪದಲ್ಲಿ ತಲೆಗೂದಲಿಗೆ ಹಚ್ಚಿಕೊಳ್ಳಿರಿ. ಹೀಗೆ ಮಾಡಿದಲ್ಲಿ ನಿಮ್ಮ ಶರೀರವು ಅತ್ಯ೦ತ ತ೦ಪುಗೊ೦ಡಿದುದರ ಅನುಭವವು ನಿಮಗಾಗುತ್ತದೆ. ಇಷ್ಟು ಮಾತ್ರವಲ್ಲದೇ, ನಿಮ್ಮ ದೇಹದ ಉಷ್ಣಾ೦ಶವನ್ನು ತಗ್ಗಿಸುವ ನಿಟ್ಟಿನಲ್ಲಿ ನೆನೆಸಿಟ್ಟಿದ್ದ ಒ೦ದಿಷ್ಟು ಮೆ೦ತೆಕಾಳುಗಳನ್ನು ಜಗಯುವುದೂ ಕೂಡಾ ಪರಿಣಾಮಕಾರಿಯಾಗಿರುತ್ತದೆ.

English summary

Healthy Juices To Reduce Body Heat

If you suffer from body heat every season, you need to cool the body's raised temperature and bring it down.here are the healthy juices that will cool down the effect.
X
Desktop Bottom Promotion