For Quick Alerts
ALLOW NOTIFICATIONS  
For Daily Alerts

ಈ 9 ಹಸಿರು ಜ್ಯೂಸ್ ಗಳಲ್ಲಿ ಯಾವುದನ್ನು ರುಚಿ ನೋಡಿಲ್ಲ?

|

ಹಸಿರು ತರಕಾರಿಗಳಲ್ಲಿ , ಹಣ್ಣುಗಳಲ್ಲಿ ಪೋಷಕಾಂಶಗಳು ಅಧಿಕವಿರುತ್ತದೆ. ಆದ್ದರಿಂದಲೇ ಹಸಿರು ಸೊಪ್ಪು, ತರಕಾರಿಗಳನ್ನು ತಿನ್ನಲು ವೈದ್ಯರು ಸಲಹೆ ನೀಡುತ್ತಾರೆ. ಹಸಿರು ತರಕಾರಿಗಳನ್ನು ತಿಂದರೆ ಕಬ್ಬಿಣದಂಶ, ವಿಟಮಿನ್ಎ, ವಿಟಮಿನ್ ಡಿ, ಸಿ, antioxidants ಇವೆಲ್ಲಾ ಅಧಿಕವಿರುವುದರಿಂದ ಪೋಷಕಾಂಶದ ಕೊರತೆ ಉಂಟಾಗದಂತೆ ಶರೀರವನ್ನು ಕಾಪಾಡಬಹುದು.

ವಿಟಮಿನ್ ಸಿ ಜೀರ್ಣಕ್ರಿಯೆಗೆ ಒಳ್ಳೆಯದು, ಡಿ ತ್ವಚೆ ಆರೋಗ್ಯವನ್ನು ಕಾಪಾಡುತ್ತದೆ, ದೇಹದಲ್ಲಿ ಹಾರ್ಮೋನ್ ಗಳ ಸಮತೋಲವನ್ನು ಕಾಪಾಡುತ್ತದೆ, ವಿಟಮಿನ್ ಎ ಕಣ್ಣಿಗೆ ಒಳ್ಳೆಯದು. ಕಬ್ಬಿಣದಂಶ ದೇಹದಲ್ಲಿ ರಕ್ತ ಕಣಗಳನ್ನು ಉತ್ಪಾದಿಸುತ್ತವೆ, antioxidants ಕಾಯಿಲೆಗಳ ವಿರುದ್ಧ ಹೋರಾಡುತ್ತದೆ.

ಹಸಿರು ತರಕಾರಿಗಳಿಂದ ರುಚಿಕರವಾದ ಜ್ಯೂಸ್ ತಯಾರಿಸಿ ಕುಡಿಯಬಹುದು. ಇಲ್ಲಿ ನಾವು ಹಸಿರು ತರಕಾರಿ ಮತ್ತು ಹಣ್ಣುಗಳಿಂದ ಮಾಡಿದ 10 ಹಸಿರು ಬಣ್ಣದ ಜ್ಯೂಸ್ ಬಗ್ಗೆ ಹೇಳಿದ್ದೇವೆ ನೋಡಿ:

ಹಾಗಲಕಾಯಿ

ಹಾಗಲಕಾಯಿ

ಹಾಗಾಲಕಾಯಿಮ ಜ್ಯೂಸ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮಧುಮೇಹಿಗಳು ಇದನ್ನು ಕುಡಿದರೆ ಇನ್ಸುಲಿನ್ ಮಾತ್ರೆಯ ಅಗತ್ಯ ಕಂಡು ಬರುವುದಿಲ್ಲ. ಅಷ್ಟರ ಮಟ್ಟಿಗೆ ಪ್ರಯೋಜನಕಾರಿ. ಇದನ್ನು ಕುಡಿಯಲು ತುಂಬಾ ಕಹಿ ಅನಿಸಿದರೆ ಸ್ವಲ್ಪ ನಿಂಬೆ ರಸ ಹಿಂಡಿ ಕುಡಿಯಿರಿ. ಮಧುಮೇಹ ಇಲ್ಲದವರು ಇದಕ್ಕೆ ಸಕ್ಕರೆ ಮತ್ತು ನಿಂಬೆ ರಸ ಹಾಕಿ ಕುಡಿಯಬಹುದು.

ಪಾಲಾಕ್ ಜ್ಯೂಸ್

ಪಾಲಾಕ್ ಜ್ಯೂಸ್

ಪಾಲಾಕ್ ಅನ್ನು ಜ್ಯೂಸ್ ಮಾಡಿ ಬೇಯಿಸಿ ಕುಡಿದರೆ ತ್ವಚೆ, ಕೂದಲು ಮತ್ತು ಕಣ್ಣಿಗೆ ತುಂಬಾ ಒಳ್ಳೆಯದು.

ಕಿವಿ ಹಣ್ಣಿನ ಜ್ಯೂಸ್

ಕಿವಿ ಹಣ್ಣಿನ ಜ್ಯೂಸ್

ಕಿವಿ ಹಣ್ಣನ್ನು ಹಾಲಿನಲ್ಲಿ ಹಾಕಿ ಜ್ಯೂಸ್ ಮಾಡಿ ಕುಡಿದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು, ಕುಡಿಯಲೂ ತುಂಬಾ ರುಚಿಕರವಾಗಿರುತ್ತದೆ.

 ಬ್ರೊಕೋಲಿ ಜ್ಯೂಸ್

ಬ್ರೊಕೋಲಿ ಜ್ಯೂಸ್

ಬ್ರೊಕೋಲಿಯನ್ನು ಬೇಯಿಸಿ ಜ್ಯೂಸ್ ಮಾಡಿದರೆ ಅದರ ಫೋಷಕಾಂಶಗಳು ನಾಶವಾಗುವುದು. ಇದನ್ನು ಹಸಿಯಾಗಿ ಕ್ಯಾರೆಟ್ ಅಥವಾ ಸೇಬಿನ ಜೊತೆ ಹಾಕಿ ಮಿಕ್ಸಿಯಲ್ಲಿ ಹಾಕಿ ಜ್ಯೂಸ್ ಮಾಡಿ ಕುಡಿದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಸೆಲರಿ ಜ್ಯೂಸ್

ಸೆಲರಿ ಜ್ಯೂಸ್

ಈ ಜ್ಯೂಸ್ ಅರ್ಜೀರ್ಣ ಸಮಸ್ಯೆಯನ್ನು ಹೋಗಲಾಡಿಸುತ್ತದೆ, ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ, ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.

ಪಾರ್ಸ್ಲೆ ಜ್ಯೂಸ್

ಪಾರ್ಸ್ಲೆ ಜ್ಯೂಸ್

ಇದು ವಿದೇಶಿ ಸೊಪ್ಪು ಆದರೂ ನಮ್ಮಲ್ಲಿ ಕೆಲ ಕಡೆ ಇದನ್ನು ಬೆಳೆಯುತ್ತಾರೆ. ಇದು ಬಾಯಿ ದುರ್ವಾಸನೆಯನ್ನು ಹೋಗಲಾಡಿಸುತ್ತದೆ, ರಕ್ತ ಹೀನತೆ ಸಮಸ್ಯೆಯನ್ನು ಹೋಗಲಾಡಿಸಲು ಬೆಸ್ಟ್ ಮನೆ ಮದ್ದು.

ಸೌತೆಕಾಯಿ ಜ್ಯೂಸ್

ಸೌತೆಕಾಯಿ ಜ್ಯೂಸ್

ಸೌತೆ ಕಾಯಿ ಜ್ಯೂಸ್ ಮಾಡಿ ಕುಡಿದರೆ ಜೀರ್ಣಕ್ರಿಯೆಗೆ ಒಳ್ಳೆಯದು, ದೇಹಕ್ಕೆ ತಂಪು , ತ್ವಚೆಯಲ್ಲಿರುವ ಕಲೆಯನ್ನು ಹೋಗಲಾಡಿಸಿ ತ್ವಚೆ ಕಾಂತಿಯನ್ನು ಹೆಚ್ಚಿಸುತ್ತದೆ.

 ಬೆಣ್ಣೆ ಹಣ್ಣು

ಬೆಣ್ಣೆ ಹಣ್ಣು

ಬೆಣ್ಣೆ ಹಣ್ಣಿನಲ್ಲಿ ಒಮೆಗಾ 3 ಕೊಬ್ಬಿನಂಶವಿರುವುದರಿಂದ ಇದರಿಂದ ಜ್ಯೂಸ್ ಮಾಡಿ ಕುಡಿದರೆ ಆರೋಗ್ಯ ವೃದ್ಧಿಸುವುದು. ಪ್ರತಿದಿನ ಕುಡಿದರೆ ಎಣ್ಣೆಯಂತಹ ತ್ವಚೆ ನಿಮ್ಮದಾಗುವುದು.

ಮಾವಿನಕಾಯಿ ಜ್ಯೂಸ್

ಮಾವಿನಕಾಯಿ ಜ್ಯೂಸ್

ಮಾವಿನ ಕಾಯಿಯನ್ನು ಬೇಯಿಸಿ , ಅದ ತಿರುಳನ್ನು ತೆಗದು ಅದಕ್ಕೆ ಜೀರಿಗೆ ಹಾಕಿ ಜ್ಯೂಸ್ ಮಾಡಿ ಕುಡಿದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

English summary

Healthy Green Vegetable Juice To Try | Tips For Health | ಈ ಹಸಿರು ಜ್ಯೂಸ್ ಗಳಲ್ಲಿ ಯಾವುದನ್ನು ಇನ್ನೂ ಕುಡಿದಿಲ್ಲ | ಆರೋಗ್ಯಕ್ಕಾಗಿ ಕೆಲ ಸಲಹೆಗಳು

Not all green juices are bitter or tasteless like the bitter gourd juice. Green juice can be made with veggies like kale, spinach and other foods like lemon, carrots etc. Check out some healthy green juices that you can prepare at home and enjoy its nutritional benefits.
X
Desktop Bottom Promotion