For Quick Alerts
ALLOW NOTIFICATIONS  
For Daily Alerts

ಕೂದಲನ್ನು ದಪ್ಪ ಮತ್ತು ಉದ್ದವಾಗಿಸುವ ಆಹಾರಗಳು

|

ಸೊಂಪಾದ ಕೂದಲು ನಮ್ಮ ಅಂದವನ್ನು ಹೆಚ್ಚಿಸುವುದು ಮಾತ್ರವಲ್ಲ ನಾವು ಆರೋಗ್ಯವಂತರಾಗಿದ್ದೇವೆ ಎಂದು ಸೂಚಿಸುತ್ತದೆ. ಆರೋಗ್ಯಕರ ಕೂದಲು ಬೇಕೆಂದು ಪ್ರತಿಯೊಬ್ಬರೂ ಬಯಸುತ್ತೇವೆ.

ಕೂದಲು ಆರೋಗ್ಯಕರವಾಗಿ ಉದ್ದ ಬೆಳೆಯಲು ಬಾಹ್ಯ ಆರೈಕೆ ಮಾಡಿದರೆ ಮಾತ್ರ ಸಾಲದು ನಮ್ಮ ದೇಹಕ್ಕೂ ಕೂದಲು ಬೆಳೆಯಲು ಅಗ್ಯತವಾದ ವಿಟಮಿನ್ ಗಳನ್ನು ನೀಡಬೇಕು. ಈ ವಿಟಮಿನ್ ಆಹಾರದಲ್ಲಿರುತ್ತವೆ.

ಈ ಕೆಳಗಿನ ಆಹಾರಗಳು ಕೂದಲಿನ ಆರೋಗ್ಯವನ್ನು ಹೆಚ್ಚಿಸುತ್ತವೆ:

 ಮೀನು

ಮೀನು

ಮೀನಿನಲ್ಲಿ ಪ್ರೊಟೀನ್ ಮತ್ತು ವಿಟಮಿನ್ ಡಿ ಇದ್ದು ಕೂದಲಿನ ಆರೋಗ್ಯವನ್ನು ಹೆಚ್ಚಿಸುತ್ತದೆ. ಇದರಲ್ಲಿ ಒಮೆಗಾ 3 ಕೊಬ್ಬಿನಂಶವಿರುವುದರಿಂದ ತಲೆ ಬುಡದಲ್ಲಿ ತೇವಾಂಶವನ್ನು ಕಾಪಾಡುತ್ತದೆ. ಇದರಿಂದ ತಲೆಹೊಟ್ಟಿನ ಸಮಸ್ಯೆ ಕಂಡು ಬರುವುದಿಲ್ಲ.

 ನಟ್ಸ್ ಮತ್ತು ಬೀಜ

ನಟ್ಸ್ ಮತ್ತು ಬೀಜ

ನಟ್ಸ್ ಹಾಗೂ ಬೀಜಗಳಲ್ಲಿ ವಿಟಮಿನ್ ಇ ಮತ್ತು ತಾಮ್ರದಂಶವಿರುತ್ತದೆ. ಇವು ಕೂದಲಿನ ಕಣಗಳಿಗೆ ಹಾನಿಯುಂಟಾಗದಂತೆ ತಡೆಯುತ್ತದೆ.

ಮೃದ್ವಂಗಿಗಳು

ಮೃದ್ವಂಗಿಗಳು

ಮೃದ್ವಂಂಗಿಗಳಲ್ಲಿ ಅಧಿಕ ಸತುವಿಂಶವಿದೆ. ಸತುವಿನ ಕೊರತೆ ಉಂಟಾದರೂ ಕೂದಲು ಉದುರಲಾರಂಭಿಸುತ್ತದೆ. ತುಂಬಾ ಕೂದಲು ಉದುರುತ್ತಿದ್ದರೆ ಮೃದ್ವಂಗಿ ತಿಂದರೆ ಕೂದಲು ಉದುರುವುದು ಕಡಿಮೆಯಾಗುವುದು.

ವಿಟಮಿನ್ ಎ ಇರುವ ಆಹಾರಗಳು

ವಿಟಮಿನ್ ಎ ಇರುವ ಆಹಾರಗಳು

ಆಲೂಗಡ್ಡೆ, ಕ್ಯಾರೆಟ್, ಮಾವಿನ ಹಣ್ಣು, ಕುಂಬಳಕಾಯಿ ಈ ಆಹಾರಗಳು ಕೂದಲಿನ ಪೋಷಣೆ ಮಾಡುತ್ತವೆ.

ಮೊಟ್ಟೆ

ಮೊಟ್ಟೆ

ಮೊಟ್ಟೆಯಲ್ಲಿ ಪ್ರೊಟೀನ್, ಸತು ಮತ್ತು ಕಬ್ಬಿಣದಂಶವಿರುವುದರಿಂದ ಪ್ರತಿದಿನ ಮೊಟ್ಟೆ ತಿಂದರೆ ಕೂದಲಿನ ಆರೋಗ್ಯಕ್ಕೆ ಒಳ್ಳೆಯದು.

ಹಸಿರು ತರಕಾರಿ

ಹಸಿರು ತರಕಾರಿ

ಹಸಿರು ಸೊಪ್ಪಿನಲ್ಲಿ ವಿಟಮಿನ್ ಎ, ಚಿ, ಕಬ್ಬಿಣದಂಶ, ಫೋಲೆಟ್, ಬೀಟಾ ಕೆರೊಟಿನ್ ಇರುತ್ತವೆ. ಕೂದಲಿನ ಪೋಷಣೆ ಈ ಎಲ್ಲಾ ಪೋಷಕಾಂಶಗಳು ಅತ್ಯಾವಶ್ಯಕ.

ಸೋಯಾ ಬೀನ್ಸ್ ಮತ್ತು ಕಿಡ್ನಿ ಬೀನ್ಸ್

ಸೋಯಾ ಬೀನ್ಸ್ ಮತ್ತು ಕಿಡ್ನಿ ಬೀನ್ಸ್

ಇವುಗಳಲ್ಲಿ ಪ್ರೊಟೀನ್ , ಕಬ್ಬಿಣದಂಶ, ಬಯೋಟಿನ್, ಸತುವಿದ್ದು ಕೂದಲನ್ನು ಬಲವಾಗಿಸುತ್ತದೆ.

ಹಾಲು ಮತ್ತು ಹಾಲಿನ ಉತ್ಪನ್ನಗಳು

ಹಾಲು ಮತ್ತು ಹಾಲಿನ ಉತ್ಪನ್ನಗಳು

ಪ್ರತಿದಿನ ಹಾಲು ಕುಡಿದರೆ ಕ್ಯಾಲ್ಸಿಯಂ, ವಿಟಮಿನ್ ಬಿ5, ವಿಟಮಿನ್ ಡಿ ಇವುಗಳ ಕೊರತೆ ಉಂಟಾಗುವುದಿಲ್ಲ. ಇದರಿಂದ ಕೂದಲು ಬೇಗನೆ ಉದ್ದ ಬೆಳೆಯುತ್ತದೆ.

ಬೆರ್ರಿ ಹಣ್ಣುಗಳು

ಬೆರ್ರಿ ಹಣ್ಣುಗಳು

ಸ್ಟ್ರಾಬರಿ, ನೆಲ್ಲಿಕಾಯಿ ಈ ರೀತಿಯ ಬೆರ್ರಿ ಹಣ್ಣುಗಳು ಕೂದಲಿನ ಆರೋಗ್ಯವನ್ನು ವೈದ್ಧಿಸುತ್ತದೆ.

ನೆಲ್ಲಿಕಾಯಿ

ನೆಲ್ಲಿಕಾಯಿ

ಪ್ರತಿದಿನ ಒಂದು ನೆಲ್ಲಿಕಾಯಿ ತಿನ್ನುವವರಿಗೆ ಕೂದಲು ಉದುರುವ ಸಮಸ್ಯೆ ಕಂಡು ಬರುವುದಿಲ್ಲ. ನೆಲ್ಲಿಕಾಯಿಯನ್ನು ಎಣ್ಣೆಗೆ ಹಾಕಿ ತಲೆಗೆ ಹಚ್ಚಬಹುದು.

ಚಿಕನ್

ಚಿಕನ್

ಚಿಕನ್ ದೇಹದಲ್ಲಿ ಜೀವ ಕಣಗಳಿಗೆ ಹಾನಿಯಾಗದಂತೆ ಕಾಪಾಡುತ್ತದೆ, ಕೂದಲನ್ನು ಬಲಪಡಿಸುತ್ತದೆ.

English summary

Healthy Foods For Faster Hair Growth | Tips For Hair Care | ಕೂದಲಿನ ಆರೋಗ್ಯ ಹೆಚ್ಚಿಸುವ ಆಹಾರಗಳು | ಕೂದಲಿನ ಆರೈಕೆಗೆ ಕೆಲ ಸಲಹೆಗಳು

Every one dreams of have a long and lustrous hair. Hair as we know defines the beauty of a person. However, every day stress and unhealthy lifestyle has not only taken toll on our health, but has also caused a major drawback on our skin and hair.
X
Desktop Bottom Promotion