For Quick Alerts
ALLOW NOTIFICATIONS  
For Daily Alerts

ಹದಿಹರೆಯದ ಆರೋಗ್ಯದ ಆರೈಕೆಗೆ ಕೆಲ ಟಿಪ್ಸ್

|

ಹದಿಹರೆಯಕ್ಕೆ ಕಾಲಿಟ್ಟ ಸಂದರ್ಭದಲ್ಲಿ ವ್ಯಕ್ತಿಯ ಲೈಗಿಂಕ ಮತ್ತು ಜನನಾಂಗಳು ಪ್ರಬುದ್ಧತೆಯನ್ನು ತಲುಪುತ್ತವೆ. ಈ ಸಮಯದಲ್ಲಿ ಹಲವು ರೀತಿಯ ಭಾವನಾತ್ಮಕ ಬದಲಾವಣೆಗಳಾಗುತ್ತವೆ. ಹೆಣ್ಣುಮಕ್ಕಳು 10ನೇ ವಯಸ್ಸಿಗೆ ಪ್ರೌಢಾವಸ್ಥೆಯನ್ನು ತಲುಪಿದರೆ ಗಂಡುಮಕ್ಕಳು 12ಕ್ಕೆ ಈ ಅವಸ್ಥೆಗೆ ಕಾಲಿಡುತ್ತಾರೆ. ಈ ಸಮಯದಲ್ಲಿ ಆಗುವ ಬದಲಾವಣೆಗಳಿಗೆ ಹೊಂದಿಕೊಳ್ಳಲು ಪೋಷಕರು ಮತ್ತು ಮಕ್ಕಳು ಇಬ್ಬರಿಗೂ ಸ್ವಲ್ಪ ಕಷ್ಟವೇ. ಈ ಸಮಯದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಕೆಲವು ವಿಷಯಗಳ ಕಡೆ ಗಮನ ಹರಿಸಬೇಕಾದದ್ದು ಅತ್ಯಗತ್ಯ.

ಹರೆಯಕ್ಕೆ ಕಾಲಿಟ್ಟ ಹೆಣ್ಣು ಮಕ್ಕಳು ಅನುಸರಿಸಬೇಕಾದ ಕೆಲವು ಆರೋಗ್ಯಕ್ಕೆ ಸಂಬಂಧಿಸಿದ ಟಿಪ್ಸ್ ಗಳನ್ನು ನಾವಿಲ್ಲಿ ನೀಡಿದ್ದೇವೆ. ಇವುಗಳು ನೀವು ಅವಸ್ಥೆಯನ್ನು ದಾಟುವುದಕ್ಕೆ ನೆರವು ನೀಡುತ್ತವೆ. ಈ ಸಮಯದ ಸಮಸ್ಯೆಗಳನ್ನು ಎದುರಿಸಲು ಮತ್ತು ಆರೋಗ್ಯವಾಗಿರಲು ಇವು ನಿಮಗೆ ನೆರವು ನೀಡುತ್ತವೆ.
ಪೋಷಕರು ತಮ್ಮ ಮಗಳ ಆರೋಗ್ಯವನ್ನು ಸರಿಯಾದ ರೀತಿಯಲ್ಲಿ ಗಮನಿಸಿಕೊಳ್ಳಬೇಕು. ಈ ಟಿಪ್ಸ್ ಗಳನ್ನು ಓದಿ ನೋಡಿ.

ಒಳ್ಳೆಯ ಆಹಾರ ಸೇವನೆ

ಒಳ್ಳೆಯ ಆಹಾರ ಸೇವನೆ

ನೀವು ಪ್ರೌಢಾವಸ್ಥೆಯಕ್ಕೆ ಕಾಲಿಟ್ಟಾಗ ಹೆಚ್ಚು ಪೋಷಕಾಂಶಗಳುಳ್ಳ ಆಹಾರವನ್ನು ಸೇವಿಸಬೇಕು. ಈ ಸಮಯದಲ್ಲಿ ಹುಡುಗಿಯರು ಡಯಟ್ ಆಹಾರ ಕ್ರಮವನ್ನು ಅಳವಡಿಸಿಕೊಳ್ಳುವುದು ಒಳ್ಳೆಯದು. ಜಂಕ್ ಫುಡ್ ಗಳಿಂದ ದೂರವುಳಿಯುವುದು ಒಳಿತು.

ಸೂಕ್ತ ದಿರುಸನ್ನು ಧರಿಸಿ

ಸೂಕ್ತ ದಿರುಸನ್ನು ಧರಿಸಿ

ಸೂಕ್ತವಾದ ಬಟ್ಟೆಯನ್ನು ಧರಿಸುವುದು ಅತ್ಯಗತ್ಯ. ಈ ಸಮಯದಲ್ಲಿ ಟೈಟ್ ಫಿಟ್ಟಿಂಗ್ ಬಟ್ಟೆಗಳಿಂದ ದೂರವಿರಿ. ಮೃದುವಾದ ಫ್ಯಾಬ್ರಿಕ್ ಒಳಉಡುಪನ್ನು ಧರಿಸಿ. ಕಾಟನ್ ಒಳಉಡುಪು ಹೆಚ್ಚು ಉತ್ತಮ.

ದೈಹಿಕ ಬದಲಾವಣೆಗಳನ್ನು ಅರ್ಥಮಾಡಿಕೊಳ್ಳಿ

ದೈಹಿಕ ಬದಲಾವಣೆಗಳನ್ನು ಅರ್ಥಮಾಡಿಕೊಳ್ಳಿ

ಹರೆಯಕ್ಕೆ ಕಾಲಿಟ್ಟ ಸಮಯದಲ್ಲಿ ಆಗುವ ದೈಹಿಕ ಬದಲಾವಣೆಗಳನ್ನು ಅರ್ಥಮಾಡಿಕೊಳ್ಳಿ. ಈ ಸಮಯದಲ್ಲಿ ಪ್ರತಿ ಹುಡುಗಿಯು ಸ್ವಲ್ಪ ಕಿರಿಕಿರಿ ಅನುಭವಿಸುವುದು ಸಹಜ. ಪೋಷಕರು ಈ ಕಡೆ ಗಮನ ಹರಿಸಬೇಕು.

ಸ್ವಚ್ಛತೆಯ ಕಡೆ ಗಮನ ಅತ್ಯಗತ್ಯ

ಸ್ವಚ್ಛತೆಯ ಕಡೆ ಗಮನ ಅತ್ಯಗತ್ಯ

ವೈಯುಕ್ತಿಕವಾಗಿ ನಿಮ್ಮ ದೇಹದ ಸ್ವಚ್ಛತೆಯ ಕಡೆ ನೀವು ಗಮನ ಹರಿಸುವುದು ಅತ್ಯಗತ್ಯ. ನಿಮ್ಮ ಗುಪ್ತಾಂಗಗಳ ಸ್ವಚ್ಛತೆಯ ಕಡೆ ಸೂಕ್ತ ಗಮನ ಹರಿಸಿ.

ದೇಹದ ವಾಸನೆ

ದೇಹದ ವಾಸನೆ

ಪ್ರೌಢವಸ್ಥೆಯಲ್ಲಿ ನಿಮ್ಮ ದೇಹದ ವಾಸನೆ ಬದಲಾಗುವುದನ್ನು ಗಮನಿಸಬಹುದು. ಅದನ್ನು ನಿಯಂತ್ರಿಸಲು ಇರುವ ಒಂದೇ ಮಾರ್ಗವೆಂದರೆ ನಿಮ್ಮ ದೇಹದ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು.

ಚರ್ಮದ ಆರೈಕೆ ಬದಲಾಗುತ್ತದೆ

ಚರ್ಮದ ಆರೈಕೆ ಬದಲಾಗುತ್ತದೆ

ಗುಳ್ಳೆಗಳಿಂದ ಹಿಡಿದು ಹಲವು ರೀತಿಯ ಚರ್ಮದ ಸಮಸ್ಯೆಗಳನ್ನು ಈ ಸಮಯದಲ್ಲಿ ಎದುರಿಸಬೇಕಾಗುತ್ತದೆ. ಹೆಚ್ಚು ನೀರು ಕುಡಿಯುವುದರಿಂದ ಮತ್ತು ಸೊಪ್ಪನ್ನು ಹೆಚ್ಚಾಗಿ ಬಳಸುವುದರಿಂದ ಈ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು.

ಹಾರ್ಮೋನು ಅಸಮತೋಲನ

ಹಾರ್ಮೋನು ಅಸಮತೋಲನ

ಹಾರ್ಮೋನುಗಳಲ್ಲಿ ಈ ಸಮಯದಲ್ಲಿ ಅಸಮತೋಲನವುಂಟಾಗುವುದು ಸಹಜ. ಹೆಚ್ಚಾಗಿ ಕರಿದ ತಿಂಡಿಗಳನ್ನು ತಿನ್ನಬೇಡಿ ಮತ್ತು ಮಿತವಾಗಿ ಆಹಾರ ಸೇವಿಸಿ. ಇದರಿಂದ ಈ ಸಮಸ್ಯೆಯನ್ನು ನಿಯಂತ್ರಿಸಬಹುದು.

ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು

ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು

ಹೊಟ್ಟೆಗೆ ಸಂಬಂಧಿಸಿದಂತೆ ನೋವು ಮತ್ತು ಭೇದಿ ಈ ಸಮಯದಲ್ಲಿ ಕಾಣಿಸಿಕೊಳ್ಳುತ್ತದೆ. ಪರಂಗಿ ಹಣ್ಣು ಮತ್ತು ಮೊಸರಿನ ಬಳಕೆಯನ್ನು ಹೆಚ್ಚು ಮಾಡಿ. ಇವು ಹೊಟ್ಟೆನೋವಿನ ಸಮಸ್ಯೆಗಳನ್ನು ಪರಿಹರಿಸುತ್ತದೆ.

ಪ್ರೊಟೀನ್ ಯುಕ್ತ ಹೆಚ್ಚಾಗಿ ಸೇವಿಸಿ

ಪ್ರೊಟೀನ್ ಯುಕ್ತ ಹೆಚ್ಚಾಗಿ ಸೇವಿಸಿ

ವಯಸ್ಸಿನ ಈ ಹಂತದಲ್ಲಿ ಪ್ರೊಟೀನ್ ಹೆಚ್ಚಾಗಿ ಸೇವಿಸಿ. ಚಿಕನ್ ಮೊದಲಾದ ಮಾಂಸಹಾರಗಳಲ್ಲಿ ಇದು ಹೆಚ್ಚಾಗಿರುತ್ತದೆ.

ವಿಟಮಿನ್ ಕೆ ಹೆಚ್ಚಾಗಿ ಸೇವಿಸಿ

ವಿಟಮಿನ್ ಕೆ ಹೆಚ್ಚಾಗಿ ಸೇವಿಸಿ

ಸೊಪ್ಪನ್ನು ದಿನವೂ ಸೇವಿಸುವುದು ಒಳ್ಳೆಯದು. ಇದರಲ್ಲಿ ವಿಟಮಿನ್ ಕೆ ಹೆಚ್ಚಿರುತ್ತದೆ. ಇದು ಈ ಹಂತದಲ್ಲಿ ಹುಡುಗಿಯರಿಗೆ ಅತ್ಯಗತ್ಯವಾದ ವಿಟಮಿನ್.

English summary

Health Care Tips On Reaching Puberty

Puberty is the time when a young person's sexual and reproductive organs mature. A lot of emotional changes also happen during this time. Puberty starts at around 10 years for girls and 12 years for boys. Adjusting to the many changes that happen around puberty can be difficult for both parents and young people.
Story first published: Thursday, November 28, 2013, 15:29 [IST]
X
Desktop Bottom Promotion