For Quick Alerts
ALLOW NOTIFICATIONS  
For Daily Alerts

ರಾಗಿಯ ತಾಕತ್ತಿಗೆ ಯಾವ ಹೈ ಫೈ ಫುಡ್ಸ್ ಸಾಟಿಯಿಲ್ಲ!

By Super
|

ಪುರಂದರ ದಾಸರಿಂದ ಹಾಡಿ ಹೊಗಳಿಸಿಕೊಂಡಿರು ರಾಗಿ, ದಕ್ಷಿಣ ಭಾರತೀಯರ ಅಡುಗೆಮನೆ ಸಂಗಾತಿ. ಮಿಲ್ಲೆಟ್ ಅಥವಾ ರಾಗಿ ಎಂದು ಕರೆಯಿಸಿಕೊಳ್ಳುವ ಏಕದಳ ಧಾನ್ಯವಿದು. ನಮ್ಮ ಬಹುತೇಕ ಹಳ್ಳಿಗರ ಆರೋಗ್ಯದ ಗುಟ್ಟು ಇದೇ ರಾಗಿ. ಅಕ್ಕಿ,ಜೋಳಗಳಿಗೆ ಹೋಲಿಸಿದರೆ ಇದರ ಬೆಲೆಯೂ ಕಡಿಮೆ. ಹಾಗೆಂದೇ ಬಡ ಹಳ್ಳಿಗರ ಬಾಯಿಗೆ ಸುಲಭವಾಗಿ ದೊರೆಯುವಂತಿದೆ. ಆದರೆ ಕಬ್ಬಿಣದಂಶ, ನಾರಿನಂಶ, ಕ್ಯಾಲ್ಶಿಯಂ, ಪ್ರೊಟೀನ್ ಹಾಗು ಲವಣಾಂಶಗಳು ಹೇರಳವಾಗಿವೆ. ಅತೀ ಕಡಿಮೆ ಕೊಬ್ಬಿನಂಶವನ್ನು ಹೊಂದಿರುವ ಈ ಧಾನ್ಯದಲ್ಲಿ ಅನ್-ಸ್ಯಾಚುರೇಟೆಡ್ ಕೊಬ್ಬಿನಂಶವಿದ್ದು, ಸುಲಭವಾಗಿ ಜೀರ್ಣವಾಗುತ್ತದೆ. ಇದರಲ್ಲಿ ಗ್ಲುಟಿನ ಅಂಶ ಇಲ್ಲದೇ ಇರುವುದರಿಂದ ಯಾರಿಗೆ ಗ್ಲುಟಿನ್ ನಿಂದ ಅಲರ್ಜಿಯಿದೆಯೋ ಅವರು ಕೂಡ ನಿರ್ಭಯವಾಗಿ ರಾಗಿ ಖಾದ್ಯಗಳನ್ನು ಸೇವಿಸಬಹುದು.

ಸಲಹೆ: ಅತ್ಯಂತ ಪೌಷ್ಟಿಕಾಂಶೌಳ್ಳ ಏಕದಳದಾನ್ಯಗಳಲ್ಲಿ ರಾಗಿಯೂ ಒಂದು. ಅಲ್ಲದೆ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ತುಂಬಾ ಸಹಾಯಕಾರಿ.ಆದರೆ, ರಾಗಿಯ ಅತಿಯಾದ ಸೇವನೆಯಿಂದ ದೇಹದಲ್ಲಿ oxalic ಆಮ್ಲದ ಪ್ರಮಾಣ ಹೆಚ್ಚುತ್ತದೆ. ಆದ್ದರಿಂದ ಮೂತ್ರಪಿಂಡದಲ್ಲಿ ಕಲ್ಲುಗಳಿರುವ (ಯುರಿನರಿ ಕ್ಯಾಲ್ಕುಲಿ) ರೋಗಿಗಳಿಗೆ ರಾಗಿ-ಖಾದ್ಯಗಳು ಸೂಕ್ತವಲ್ಲ.

ಇಲ್ಲಿ ನಾವು ರಾಗಿಯ ಉಪಯುಕ್ತ ಗುಣಗಳ ಬಗ್ಗೆ ಹೇಳಿದ್ದೇವೆ ನೋಡಿ:

ತೂಕ ಇಳಿಕೆಗೆ ರಾಗಿ

ತೂಕ ಇಳಿಕೆಗೆ ರಾಗಿ

* ರಾಗಿಯಲ್ಲಿ ಟ್ರೈಪ್ಟೊಪಾನ್ ಎಂಬ ಅಮೈನೋ ಆಮ್ಲವಿದ್ದು, ಇದು ಹಸಿವೆಯನ್ನು ತಗ್ಗಿಸುವುದಲ್ಲದೇ ದೇಹದ ತೂಕವನ್ನು ನಿಯಂತ್ರಿಸುತ್ತದೆ. ರಾಗಿಯು ತುಂಬ ನಿಧಾನವಾಗಿ ಜೀರ್ಣವಾಗುವುದರಿಂದ ಹಾಗು ಇದರಲ್ಲಿನ ನಾರಿನಂಶವು ಹೆಚ್ಚು ಕಾಲದವರೆಗೆ ಹೊಟ್ಟೆ ತುಂಬಿರುವ ಅನುಭವವನ್ನು ನೀಡುವುದರಿಂದ, ಒಮ್ಮೆ ರಾಗಿ ಖಾದ್ಯವನ್ನು ಸೇವಿಸುವುದರಿಂದ ಪದೇ ಪದೇ ಹೆಚ್ಚು ಕ್ಯಾಲೋರಿಯುಕ್ತ ಆಹಾರ ನಮ್ಮ ಹೊಟ್ಟೆ ಸೇರುವುದನ್ನು ತಪ್ಪಿಸಬಹುದು.

ಎಲುಬುಗಳ ಆರೋಗ್ಯಕ್ಕಾಗಿ ರಾಗಿ

ಎಲುಬುಗಳ ಆರೋಗ್ಯಕ್ಕಾಗಿ ರಾಗಿ

* ರಾಗಿಯಲ್ಲಿ ಅತ್ಯಧಿಕ ಕ್ಯಾಲ್ಶಿಯಂ ಇದ್ದು ಎಲುಬುಗಳನ್ನು ಸದೃಢವಾಗಿಸುವಲ್ಲಿ ಸಹಕಾರಿ. ರಾಗಿಯಲ್ಲಿ ನೈಸರ್ಗಿಕ ಕ್ಯಾಲ್ಸಿಯಂ ಇರುವದರಿಂದ ಬೆಳೆಯುವ ಮಕ್ಕಳ ಮತ್ತು ವಯಸ್ಸಾದವರ ಮೂಳೆಗಳನ್ನು ಗಟ್ಟಿಗೊಳಿಸಲು ಇದು ತುಂಬಾ ಉಪಕಾರಿ.

ಮಧುಮೇಹಿಗಳಿಗಾಗಿ ರಾಗಿ

ಮಧುಮೇಹಿಗಳಿಗಾಗಿ ರಾಗಿ

* ರಾಗಿಯಲ್ಲಿರುವ ಫಿಟೊರಾಸಾಯನಗಳು ಜೀರ್ಣಕ್ರಿಯೆಯನ್ನು ನಿಧಾನವಾಗಿಸುವಲ್ಲಿ ಸಹಾಯ ಮಾಡುತ್ತವೆ. ಇದರಿಂದ ಮಧುಮೇಹಿಗಳ ರಕ್ತದಲ್ಲಿನ ಶರ್ಕರ ಅಂಶ ಕಡಿಮೆಯಾಗಲು ಸಹಾಯವಾಗುವದು.

ರಕ್ತದಲ್ಲಿನ ಕೊಬ್ಬು ಕರಗಿಸುವಲ್ಲಿ ರಾಗಿಯ ಪಾತ್ರ

ರಕ್ತದಲ್ಲಿನ ಕೊಬ್ಬು ಕರಗಿಸುವಲ್ಲಿ ರಾಗಿಯ ಪಾತ್ರ

* ರಾಗಿಯಲ್ಲಿ ಲೆಸಿಥಿನ್ ಮತ್ತು ಮೆಥಿಯೋನಿನ್ ಗಳೆಂಬ ಅಮೈನೋ ಆಮ್ಲಗಳಿದ್ದು, ಇವು ಯಕೃತ್ತಿನಲ್ಲಿರುವ ಹೆಚ್ಚಿನ ಕೊಬ್ಬನ್ನು ತೆಗೆಯುವ ಮೂಲಕ ರಕ್ತದಲ್ಲಿನ ಕೊಬ್ಬು ಕರಗಿಸುವಲ್ಲಿ ಸಹಾಯ ಮಾಡುವುದು.

 ರಕ್ತ ಹೀನತೆಯನ್ನು ಹೋಗಲಾಡಿಸುವುದರಲ್ಲಿ ರಾಗಿ

ರಕ್ತ ಹೀನತೆಯನ್ನು ಹೋಗಲಾಡಿಸುವುದರಲ್ಲಿ ರಾಗಿ

* ರಾಗಿಯು ನೈಸರ್ಗಿಕ ಕಬ್ಬಿಣ ಅಂಶದ ಅತ್ಯುತ್ತಮ ಮೂಲ. ಹೆಚ್ಚಿನ ಪ್ರಮಾಣದಲ್ಲಿ ರಾಗಿ ಖಾದ್ಯಗಳನ್ನು ತಿನ್ನುವುದರಿಂದ ಅನೀಮಿಯ (ರಕ್ತ ಹೀನತೆ) ಯಿಂದ ಮುಕ್ತಿ ಪಡೆಯಬಹುದು.

ಆಂತರಿಕವಾಗಿ ದೇಹಕ್ಕೆ ವಿಶ್ರಾಂತಿ ನೀಡುವಲ್ಲಿ ರಾಗಿ

ಆಂತರಿಕವಾಗಿ ದೇಹಕ್ಕೆ ವಿಶ್ರಾಂತಿ ನೀಡುವಲ್ಲಿ ರಾಗಿ

* ರಾಗಿಯು ಮನಸ್ಸಿನ ವ್ಯಾಕುಲತೆ, ಖಿನ್ನತೆ ಮತ್ತು ನಿದ್ರಾಕೊರತೆಗಳಿಂದ ಮನಸ್ಸನ್ನು ಶಾಂತಗೊಳಿಸಿ ದೇಹಕ್ಕೆ ನೈಸರ್ಗಿಕವಾಗಿ ವಿಶ್ರಾಂತಿ ನೀಡುತ್ತದೆ. ಅಲ್ಲದೆ ರಾಗಿ ಸೇವನೆಯಿಂದ ಮೈಗ್ರೇನ್ ಪೀಡಿತರೂ ನೆಮ್ಮದಿಯ ವಿಶ್ರಾಂತಿ ಪಡೆಯಬಹುದು.

 ಪೌಷ್ಟಿಕಾಂಶ ಹಾಗು ಅಮೈನೋ ಆಮ್ಲಗಳಿಗಾಗಿ ರಾಗಿ

ಪೌಷ್ಟಿಕಾಂಶ ಹಾಗು ಅಮೈನೋ ಆಮ್ಲಗಳಿಗಾಗಿ ರಾಗಿ

*ದೇಹವು ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವಲ್ಲಿ ಹಾಗು ದೇಹದ ಅಂಗಗಳ ಪುನರ್ ಜೋಡಣೆಗಾಗಿ ಅಗತ್ಯವಿರುವ ಅಮೈನೋ ಆಮ್ಲಗಳು ರಾಗಿಯಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿರುವುದರಿಂದ, ರಾಗಿಯು ನಮ್ಮ ದೇಹಕ್ಕೆ ಬೇಕಾದ ಸಮಸ್ತ ಪೋಷಣೆಯನ್ನು ಒದಗಿಸುವ ಧಾನ್ಯವಾಗಿದೆ.

 ರಾಗಿಯ ಇನ್ನಿತರ ಉಪಯುಕ್ತತೆಗಳು

ರಾಗಿಯ ಇನ್ನಿತರ ಉಪಯುಕ್ತತೆಗಳು

* ನಮ್ಮ ದೈನಂದಿನ ಆಹಾರದಲ್ಲಿ ರಾಗಿಯನ್ನು ಬಳಸುವುದರಿಂದ ಅಪೌಷ್ಟಿಕತೆ, ಸಂತಾನ ಸಂಬಂಧಿರೋಗಗಳು, ಎಳೆವಯಸ್ಸಿನಲ್ಲೇ ಮುಪ್ಪುಬರುವಂತಹ ಸ್ಥಿತಿಗಳನ್ನು ತಪ್ಪಿಸಬಹುದು.

ಹೆಚ್ಚಿನ ರಕ್ತದೊತ್ತಡದಿಂದ ಮುಕ್ತಿ

ಹೆಚ್ಚಿನ ರಕ್ತದೊತ್ತಡದಿಂದ ಮುಕ್ತಿ

* ಹೆಚ್ಚಿನ ರಕ್ತದೊತ್ತಡ, ಯಕೃತ್ತಿನ ತೊಂದರೆ, ಹೃದಯ ಸಂಬಂಧಿ ಖಾಯಿಲೆ, ಅಸ್ತಮಾ ಹಾಗೂ ಬಾಣಂತಿಯರಲ್ಲಿ ಹಾಲಿನ ಉತ್ಪಾದನೆ ಕಡಿಮೆ ಇರುವುದು ಇಂತಹ ಸಮಸ್ಯೆಗಳು ಕಂಡು ಬಂದರೆ ರಾಗಿಯ ಹುರಿಹಿಟ್ಟಿನಿಂದ( ರಾಗಿ ಹುರಿದು) ಮಾಡಿದ ಖಾದ್ಯಗಳನ್ನು ಸೇವಿಸುವುದು ಹೆಚ್ಚು ಉಪಯುಕ್ತಕರ.

ಆದ್ದರಿಂದ ಊಟದಲ್ಲಿ ಬಳಸಿ ರಾಗಿ , ಆರೋಗ್ಯವಂತರಾಗಿ.

English summary

Health Benefits of Ragi

Ragi is considered one of the most nutritious cereals. Ragi is an extremely nutritious cereal and is very beneficial for maintaining a good health.
X
Desktop Bottom Promotion