For Quick Alerts
ALLOW NOTIFICATIONS  
For Daily Alerts

ಸಂತಾನ ನಿಯಂತ್ರಣ ಸಾಮರ್ಥ್ಯ ಪಪ್ಪಾಯಿಯಲ್ಲಿದೆ!

By Super
|

ಉಳಿದ ಹಣ್ಣುಗಳಿಗೆ ಹೋಲಿಸಿದರೆ ಪರಂಗಿ ಹಣ್ಣು ಆರೋಗ್ಯಕ್ಕೆ ಹೆಚ್ಚು ಒಳ್ಳೆಯದು. ಇದು ಹೃದಯ ಖಾಯಿಲೆಗಳಿಂದ ಹಿಡಿದು ಕರುಳಿನ ಆರೋಗ್ಯದವರೆಗೆ ಹಲವು ರೀತಿಯಲ್ಲಿ ಇದು ಆರೋಗ್ಯವನ್ನು ಕಾಪಾಡುತ್ತದೆ. ಇದರ ಇನ್ನೊಂದು ಲಾಭವೆಂದರೆ ಇದು ಸೀಸನ್ನಲ್ಲಿ ಮಾತ್ರ ಸಿಗುವ ಹಣ್ಣಲ್ಲ. ಇದು ವರ್ಷಪೂರ್ತಿ ಮಾರುಕಟ್ಟೆಯಲ್ಲಿ ಸಿಗುತ್ತದೆ. ಅಷ್ಟೇ ಅಲ್ಲ ಎಷ್ಟೋ ಮಂದಿ ಈ ಹಣ್ಣಿನ ಮರವನ್ನು ತಮ್ಮ ಮನೆಯ ಹಿತ್ತಲಲ್ಲಿ ಬೆಳೆಸಿರುತ್ತಾರೆ. ಈ ಪರಂಗಿ ಹಣ್ಣು ಯಾಕಿಷ್ಟು ಮುಖ್ಯವಾದದ್ದು? ಪರಂಗಿ ಹಣ್ಣಿನ ಆರೋಗ್ಯದ ಉಪಯೋಗಗಳೇನು ನೋಡೋಣ ಬನ್ನಿ:

ಪರಂಗಿ ಹಣ್ಣು ಮಾತ್ರವಲ್ಲ ಪರಂಗಿ ಹಣ್ಣಿನ ಬೀಜಗಳು ಕೂಡ ಉಪಯೋಗಕಾರಿ. ಹೆಚ್ಚಿನ ಮಾಹಿತಿಗೆ ಸ್ಲೈಡ್ ನೋಡಿ:

ವಿಟಮಿನ್ ಎ

ವಿಟಮಿನ್ ಎ

ನಿಮಗೆ ವಿಟಮಿನ್ ಎ ಕೊರತೆಯಿದ್ದರೆ ನೀವು ಈ ಹಣ್ಣನ್ನು ಬಳಸಬೇಕು. ಇದರಲ್ಲಿ ವಿಟಮಿನ್ ಎ, ಕ್ಯಾಲ್ಸಿಯಂ ಮತ್ತು ಪೋಟ್ಯಾಶಿಯಂ ಅಧಿಕವಾಗಿರುತ್ತದೆ.

ವಿಟಮಿನ್ ಬಿ

ವಿಟಮಿನ್ ಬಿ

ನಿಮ್ಮ ಮೆಟಬಾಲಿಸಂ ಹೆಚ್ಚು ಮಾಡಿಕೊಳ್ಳಬೇಕೆ ಹಾಗಿದ್ದರೆ ಪರಂಗಿ ಹಣ್ಣನ್ನು ತಿನ್ನಿ. ಇದರಲ್ಲಿ ವಿಟಮಿನ್ ಬಿ ಫೋಲಿಕ್ ಆಸಿಡ್, ವಿಟಮಿನ್ ಬಿ-6, ವಿಟಮಿನ್ ಬಿ-1 ಮತ್ತು ರಿಬೊಫ್ಲಾವಿನ್ ರೂಪದಲ್ಲಿರುತ್ತದೆ.

ಅಜೀರ್ಣ ಆದಾಗ ತಿನ್ನಿ

ಅಜೀರ್ಣ ಆದಾಗ ತಿನ್ನಿ

ನಿಮಗೆ ಅಜೀರ್ಣದಿಂದ ತೊಂದರೆಯುಂಟಾದರೆ ಈ ಹಣ್ಣನ್ನು ಬಳಸಿ. ಪರಂಗಿ ಹಣ್ಣು ಜೀರ್ಣಕ್ರಿಯೆಗೆ ಸಹಕಾರಿ.

ಸೋಂಕನ್ನು ನಿವಾರಿಸಲು

ಸೋಂಕನ್ನು ನಿವಾರಿಸಲು

ನೀವು ಫೈಬರ್ ಹೆಚ್ಚಿರುವ ಆಹಾರವನ್ನು ಸೇವಿಸಿದಾಗ ಅವು ಜೀರ್ಣಾಂಗಗಳಲ್ಲಿ ಸಿಲುಕಿಕೊಳ್ಳಬಹುದು. ಇಂತಹ ಕಣಗಳಿಂದ ಸೋಂಕುಂಟಾಗಬಹುದು. ಪರಂಗಿ ಹಣ್ಣು ಈ ಸೋಂಕನ್ನು ನಿವಾರಿಸುತ್ತದೆ. ಉದಾಹರಣೆಗೆ ಕರುಳಿನಲ್ಲಿ ಮ್ಯೂಕಸ್ ಮತ್ತು ಪಸ್ ಕೂಡಿಕೊಂಡರೆ ಪರಂಗಿ ಹಣ್ಣಿನ ರಸ ಇದನ್ನು ನಿವಾರಿಸುತ್ತದೆ.

ಸ್ಲಿಮ್ ಆಗಲು

ಸ್ಲಿಮ್ ಆಗಲು

ನೀವು ತೂಕ ಇಳಿಸಿಕೊಳ್ಳಲು ಡಯಟ್ ಮಾಡುತ್ತಿದ್ದರೆ ಪರಂಗಿ ಹಣ್ಣನ್ನು ತಿನ್ನಿ ಇದರಲ್ಲಿ ಕ್ಯಾಲೋರಿಗಳು ಕಡಿಮೆ ಮತ್ತು ಪೋಷಕಾಂಶಗಳು ಹೆಚ್ಚಿರುತ್ತದೆ. ಇದರೊಂದಿಗೆ ಇದು ಜೀರ್ಣಕ್ರಿಯೆಗೆ ಸಹಕಾರಿಯಾದ್ದರಿಂದ ತೂಕ ಇಳಿಸಿಕೊಳ್ಳಲು ಇದು ಒಳ್ಳೆಯ ಆಹಾರ.

ಸಂಧಿ ನೋವನ್ನು ಹೋಗಲಾಡಿಸಲು

ಸಂಧಿ ನೋವನ್ನು ಹೋಗಲಾಡಿಸಲು

ನೀವು ಆರ್ಥೈಟಿಸ್, ಒಸ್ಟೆಒಪೊರೊಸಿಸ್ ಅಥವ ಇನ್ನಾವುದೆ ಬಗೆಯ ನೋವಿನಿಂದ ಬಳಲುತ್ತಿದ್ದರೆ ಪರಂಗಿ ಹಣ್ಣಿನ ಈ ನೋವಿನ ಆತಂಕವನ್ನು ಕಡಿಮೆ ಮಾಡಲು ಸಹಕಾರಿ. ಪರಂಗಿ ಹಣ್ಣಿನಲ್ಲಿ ನೋವನ್ನು ಉಪಶಮನ ಮಾಡುವ ಗುಣಗಳಿದ್ದು ಶೀಘ್ರವಾಗಿ ಗುಣವಾಗಲು ಸಹಾಯ ಮಾಡುತ್ತದೆ.

ನೆಗಡಿ ತಡೆಗಟ್ಟಲು

ನೆಗಡಿ ತಡೆಗಟ್ಟಲು

ನಿಮಗೆ ಬೇಗ ನೆಗಡಿಯಾಗುತ್ತದೆ ಅಂದರೆ ಅದರರ್ಥ ನಿಮ್ಮ ರೋಗನಿರೋಧಕ ಶಕ್ತಿ ಕಡಿಮೆಯೆಂದು. ನೀವು ಪರಂಗಿ ಹಣ್ಣನ್ನು ಹೆಚ್ಚು ಸೇವಿಸುವುದರಿಂದ ನೆಗಡಿ ಮತ್ತು ಕೆಮ್ಮಿನಿಂದ ದೂರ ಉಳಿಯಬಹುದು. ಇದರಲ್ಲಿ ವಿಟಮಿನ್ ಸಿ ಹೆಚ್ಚಿರುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ.

ಆ್ಯಂಟಿ ಬ್ಯಾಕ್ಟಿರಿಯಲ್ ಗುಣ

ಆ್ಯಂಟಿ ಬ್ಯಾಕ್ಟಿರಿಯಲ್ ಗುಣ

ಪರಂಗಿ ಹಣ್ಣಿನ ಬೀಜದ ಉಪಯೋಗಗಳ ಬಗ್ಗೆಯೂ ಸ್ವಲ್ಪ ತಿಳಿದುಕೊಂಡಿರಿ. ಈ ಸಣ್ಣ ಜೆಲ್ಲಿ ಮಾದರಿಯ ಬೀಜಗಳಲ್ಲಿ ಆ್ಯಂಟಿ ಬ್ಯಾಕ್ಟಿರಿಯಲ್ ಗುಣಗಳಿವೆ. ಇವು ಮೂತ್ರಪಿಂಡ ವೈಫಲ್ಯ, ಜಠರದ ಸಮಸ್ಯೆಯನ್ನು ನಿವಾರಿಸುತ್ತದೆ ಮತ್ತು ವಿಷವನ್ನು ಹೊರಹಾಕಲು ನೆರವಾಗುತ್ತದೆ.

ಸಂತಾನ ನಿಯಂತ್ರಣ

ಸಂತಾನ ನಿಯಂತ್ರಣ

ಇದನ್ನು ಮಾತ್ರ ನಿಮ್ಮ ಧೈರ್ಯದ ಮೇಲೆ ಪ್ರಯತ್ನಿಸಬಹುದು. ಅದೇನೆಂದರೆ ಹಲವರ ನಂಬಿಕೆಯ ಪ್ರಕಾರ ಪರಂಗಿ ಹಣ್ಣಿನ ಬೀಜಗಳನ್ನು ಬಿಸಿ ನೀರಿನೊಂದಿಗೆ ಸೇವಿಸದರೆ ಸಂತಾನ ನಿಯಂತ್ರಣ ಮಾತ್ರೆಗಳಂತೆ ವರ್ತಿಸುವುದಂತೆ.

English summary

Health benefits of papaya

It is available all year round and every Indian market stocks it; not to mention most households that have a courtyard, will have a papaya tree. So what makes papaya such an important fruit? Let's take a look at the health benefits of papaya.
Story first published: Tuesday, October 1, 2013, 17:39 [IST]
X
Desktop Bottom Promotion