For Quick Alerts
ALLOW NOTIFICATIONS  
For Daily Alerts

ಕಣ್ಣಲ್ಲಿ ನೀರು ತರಿಸಿದರೂ ಆರೋಗ್ಯ ಕಾಪಾಡುವ ಈರುಳ್ಳಿ

By Super
|

ಒಂದು ಉತ್ತಮ ಅಡುಗೆ ಸಿದ್ಧ ಪಡಿಸಬೇಕು ಎಂದರೆ ಈರುಳ್ಳಿ ಅತ್ಯಗತ್ಯ.ಈರುಳ್ಳಿ ಇಲ್ಲದ ಖಾದ್ಯದಲ್ಲಿ ರುಚಿ ಕಾಣುವುದಿಲ್ಲ.ಹಬ್ಬ ಹರಿದಿನಗಳನ್ನು ಬಿಟ್ಟರೆ ಉಳಿದೆಲ್ಲ ದಿನಗಳು ಈರುಳ್ಳಿ ಪ್ರತಿಯೊಬ್ಬರಿಗೂ ಬೇಕೇಬೇಕು. ಈರುಳ್ಳಿ ಬೆಲೆ ಗಗನಕ್ಕೆ ಏರಿರಬಹುದು, ಉಳ್ಳಾಗಡ್ಡಿ ಹೆಚ್ಚುವವರ ಜೊತೆ ಕೊಳ್ಳುವವರಿಗೂ ಕಣ್ಣೀರು ತರಿಸುತ್ತಿರಬಹುದು.ಆದರೆ ಈರುಳ್ಳಿಯಲ್ಲಿ ಎಷ್ಟೊಂದು ಔಷಧೀಯ ಗುಣಗಳಿವೆ ಎಂಬುದರ ಬಗ್ಗೆ ಗಮನ ಹರಿಸಲೇ ಬೇಕು. ಈರುಳ್ಳಿ ಒಂದು ಉತ್ತಮ ಮನೆಮದ್ದು. ಇದರಿಂದ ಸಾಕಷ್ಟು ರೋಗಗಳನ್ನು ತಡೆಗಟ್ಟಬಹುದು. ಆರೋಗ್ಯವನ್ನು ಕಾಪಾಡುವಲ್ಲಿ ಈರುಳ್ಳಿಯ ಪಾತ್ರ ಮಹತ್ವಪಡೆದಿದೆ.

ಈರುಳ್ಳಿ ದೇಹಕ್ಕೆ ಆರೋಗ್ಯವನ್ನು ನೀಡುತ್ತದೆ.ಇದರಿಂದ ಸಾಮಾನ್ಯ ಕಾಯಿಲೆಗಳಾದ ತಂಡಿ,ಕೆಮ್ಮು,ಸೋಂಕುಗಳು ಮತ್ತು ಗಂಟಲು ಊತ,ಉಸಿರಾಟದ ತೊಂದರೆ,ಅಸ್ತಮ ಇವುಗಳನ್ನು ಗುಣಪಡಿಸಿಕೊಳ್ಳಬಹುದು. ಈರುಳ್ಳಿ ರಕ್ತಹೀರುವ ಕೀಟಗಳನ್ನು ಕೊಲ್ಲುವ ಗುಣವನ್ನು ಹೊಂದಿದೆ. ಕಣ್ಣಲ್ಲಿ ನೀರು ತರಿಸಿದರೂ ಆರೋಗ್ಯ ಕಾಪಾಡಿಕೊಳ್ಳಲು ನೈಸರ್ಗಿಕವಾಗಿ ದೊರೆತ ಕೊಡುಗೆ ಎನ್ನಬಹುದು. ಇದರ ಬಗ್ಗೆ ಹೆಚ್ಚಿನ ಮಾಹಿತಿಗೆ ಮುಂದೆ ಓದಿ:

ಮನೆಮದ್ದು

ಮನೆಮದ್ದು

ಪ್ರಾಚೀನ ಕಾಲದಿಂದಲೂ ಈರುಳ್ಳಿ ಔಷಧೀಯ ಗುಣ ಹೊಂದಿದೆ ಎಂದು ಸಾಬೀತಾಗಿದೆ.ವಿಶ್ವ ಅರೋಗ್ಯ ಸಂಸ್ಥೆ ಕೂಡ ಈರುಳ್ಳಿ ಹಸಿವು ಕಡಿಮೆ ಮಾಡಿ ಅಪಧಮನಿ ಕಾಠಿಣ್ಯ ಹೊಂದದಂತೆ ನೋಡಿಕೊಳ್ಳುತ್ತದೆ ಎಂದು ತಿಳಿಸಿದೆ.ಅರೋಗ್ಯ ತಜ್ಞರು ಈರುಳ್ಳಿಯಿಂದ ಅಸ್ತಮ, ಅಲರ್ಜಿ, ನೆಗಡಿ ಸಂಬಂಧಿತ ಕೆಮ್ಮು, ಶೀತ ಇವುಗಳಿಂದ ಬಿಡುಗಡೆ ದೊರೆಯುತ್ತದೆ ಎಂಬುವುದನ್ನು ಒಪ್ಪಿಕೊಳ್ಳುತ್ತಾರೆ.

ಈರುಳ್ಳಿಯಲ್ಲಿರುವ ಗುಣಗಳು

ಈರುಳ್ಳಿಯಲ್ಲಿರುವ ಗುಣಗಳು

ಈರುಳ್ಳಿಯಲ್ಲಿರುವ ಗಂಧಕದ ಸಂಯುಕ್ತಗಳು ಮತ್ತು ಸಾರಭೂತ ತೈಲಗಳು ಆರೋಗ್ಯಕ್ಕೆ ಹೆಚ್ಚು ಉಪಯುಕ್ತ ಎಂದು ಹೇಳಲಾಗಿದೆ.ಈರುಳ್ಳಿಯನ್ನು ಔಷಧೀಯ ಗುಣಗಳಿಗಾಗಿ ಅನೇಕ ಜನರು ಉಪಯೋಗಿಸುತ್ತಿದ್ದಾರೆ

ಈರುಳ್ಳಿ ಬೆಳೆ

ಈರುಳ್ಳಿ ಬೆಳೆ

ಈರುಳ್ಳಿಯಲ್ಲಿ ಕ್ಯಾಲ್ಸಿಯಂ,ಮೆಗ್ನಿಷ್ಯಿಯಂ,ಸೋಡಿಯಂ,ಪೊಟಾಷ್ಯಿಯಂ,ಸೇಲೆನಿಯಂ ಮತ್ತು ರಂಜಕ ಇವೆ.ಈರುಳ್ಳಿಯಲ್ಲಿರುವ ಜೀವವಿರೋಧಿ ಗುಣ ಮನೆಯಲ್ಲಿ ಫಂಗಸ್ ಬರದಂತೆ ತಡೆಯಲು ಸಹಕಾರಿಯಾಗಿದೆ.ಈರುಳ್ಳಿಯನ್ನು ತೇವಭರಿತ ನೀರಿರುವ ಜಾಗದಲ್ಲಿ ಬೆಳೆಯಬಹುದು.ನೀವು ನಿಮ್ಮ ಮನೆಯ ಹಿಂಭಾಗದಲ್ಲೂ ಕೂಡ ಇದನ್ನು ಬೆಳೆಯಬಹುದು.ವಿಶ್ವದಾದ್ಯಂತ ಅನೇಕ ಖಾದ್ಯ ತಯಾರಿಸಲು ಈರುಳ್ಳಿಯನ್ನು ಬಳಸುತ್ತಾರೆ.ಇದನ್ನು ಒಡನಾಡಿ ಸಸ್ಯ ಎಂದು ಕರೆಯುತ್ತಾರೆ ಏಕೆಂದರೆ ಇದರ ಸುತ್ತ ಇತರ ತರಕಾರಿಗಳು ಮತ್ತು ಸಸ್ಯಗಳನ್ನು ಬೆಳೆದರೆ ಇದು ಚೆನ್ನಾಗಿ ಬೆಳೆಯುತ್ತದೆ.

1. ದಂತ ಮತ್ತು ಮೌಖಿಕ ಸೊಂಕುಗಳಿಗೆ ಈರುಳ್ಳಿ ಒಳ್ಳೆಯದು

1. ದಂತ ಮತ್ತು ಮೌಖಿಕ ಸೊಂಕುಗಳಿಗೆ ಈರುಳ್ಳಿ ಒಳ್ಳೆಯದು

ಈರುಳ್ಳಿಯನ್ನು ಹೆಚ್ಚಾಗಿ ದಂತಕ್ಷಯ ಮತ್ತು ಸೋಂಕುಗಳಿಗೆ ಪರಿಹಾರವಾಗಿ ಬಳಸಲಾಗುತ್ತದೆ. ಹಸಿ ಈರುಳ್ಳಿಯನ್ನು 2 -3 ನಿಮಿಷ ಜಗಿಯುವುದರಿಂದ ಹಲ್ಲಿನಲ್ಲಿರುವ ಕೀಟಾಣುಗಳು ಕಡಿಮೆಯಾಗುತ್ತವೆ.

2.ಹೃದಯ ರೋಗಗಳಿಗೆ ಚಿಕಿತ್ಸಕ

2.ಹೃದಯ ರೋಗಗಳಿಗೆ ಚಿಕಿತ್ಸಕ

ಈರುಳ್ಳಿ ರಕ್ತವನ್ನು ತೆಳುವಾಗಿಸುತ್ತದೆ,ಇದರಿಂದ ರಕ್ತ ಹೆಪ್ಪುಗಟ್ಟಿ ಹೃದಯ ರೋಗ ಮತ್ತು ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಯಬಹುದು.

3.ಹೊಳೆಯುವ ಚರ್ಮ

3.ಹೊಳೆಯುವ ಚರ್ಮ

ಈರುಳ್ಳಿಯನ್ನು ಜೇನು ಅಥವಾ ಆಲಿವ್ ಎಣ್ಣೆಯೊಂದಿಗೆ ಮಿಶ್ರ ಮಾಡಿ ಹಚ್ಚುವುದರಿಂದ ಮೊಡವೆಗಳು ಮಾಯವಾಗುತ್ತವೆ.

4.ಕೆಮ್ಮಿಗೆ ಔಷಧಿ

4.ಕೆಮ್ಮಿಗೆ ಔಷಧಿ

ಈರುಳ್ಳಿ ರಸ ಮತ್ತು ಜೇನಿನ ರಸವನ್ನು ಸಮಪ್ರಮಾಣದಲ್ಲಿ ಮಿಶ್ರ ಮಾಡಿ ಸೇವಿಸುವುದರಿಂದ ಕೆಮ್ಮಿಗೆ ಮುಕ್ತಿ ದೊರಕುತ್ತದೆ.

5.ಕೀಟ ನಿವಾರಕವಾಗಿ ಬಳಸಲಾಗುತ್ತದೆ

5.ಕೀಟ ನಿವಾರಕವಾಗಿ ಬಳಸಲಾಗುತ್ತದೆ

ಈರುಳ್ಳಿ ರಸವನ್ನು ಜೇನು ಕಡಿದ ತಕ್ಷಣ ಆ ಜಾಗಕ್ಕೆ ಹಚ್ಚಬಹುದು.ಈರುಳ್ಳಿ ರಸ ಅಥವಾ ಪೇಸ್ಟ್ ಚೇಳು ಅಥವಾ ಯಾವುದೇ ರೀತಿಯ ಕೀಟ ಕಡಿದಾಗ ಹಚ್ಚಿದರೆ ತಕ್ಷಣ ಪರಿಣಾಮ ಬೀರುತ್ತದೆ.

6.ಕ್ಯಾನ್ಸರ್ ಗೆ ಮದ್ದು

6.ಕ್ಯಾನ್ಸರ್ ಗೆ ಮದ್ದು

ಈರುಳ್ಳಿಯಲ್ಲಿ ಕ್ಯಾನ್ಸರ್ ಸೆಲ್ಸ್ ಅನ್ನು ವೃದ್ಧಿಸದಂತೆ ತಡೆಗಟ್ಟುವ ಶಕ್ತಿ ಇದೆ.

7.ಕಿವಿ ನೋವನ್ನು ನಿವಾರಿಸುತ್ತದೆ

7.ಕಿವಿ ನೋವನ್ನು ನಿವಾರಿಸುತ್ತದೆ

ನೀವು ಕಿವಿ ನೋವಿನಿಂದ ಬಳಲುತ್ತಿದ್ದರೆ ಒಂದೆರಡು ಹನಿ ಈರುಳ್ಳಿ ರಸ ಕಿವಿ ನೋವನ್ನು ನಿವಾರಿಸುವ ಗುಣವನ್ನು ಹೊಂದಿದೆ.ಕಿವಿಯಲ್ಲಿ ಗೊಯ್ ಎಂಬ ಶಬ್ದ ಬರುತ್ತಿದ್ದರೆ ಕಿವಿಗೆ ಹತ್ತಿ ಬಟ್ಟೆಯಲ್ಲಿ ಈರುಳ್ಳಿ ರಸ ಹಾಕಿ ಎರಡು ಹನಿ ಬಿಟ್ಟರೆ ತಕ್ಷಣಕ್ಕೆ ಕಡಿಮೆ ಆಗುತ್ತದೆ.

8.ಈರುಳ್ಳಿ ಲೈಂಗಿಕಾಸಕ್ತಿ ವೃದ್ಧಿಸುತ್ತದೆ

8.ಈರುಳ್ಳಿ ಲೈಂಗಿಕಾಸಕ್ತಿ ವೃದ್ಧಿಸುತ್ತದೆ

ಈರುಳ್ಳಿ ಆರೋಗ್ಯಕರ ಸೆಕ್ಸ್ ಆಸಕ್ತಿ ವೃದ್ಧಿಸುತ್ತದೆ.ಒಂದು ಚಮಚ ಈರುಳ್ಳಿ ರಸವನ್ನು ಒಂದು ಚಮಚ ಶುಂಠಿ ರಸದೊಂದಿಗೆ ಸೇವಿಸಿದರೆ ಲೈಂಗಿಕ ಆಸಕ್ತಿ ಆರೋಗ್ಯಕರವಾಗಿ ಹೆಚ್ಚುತ್ತದೆ.

9.ರಕ್ತ ಕ್ಷೀಣತೆ ತಡೆಯಬಹುದು

9.ರಕ್ತ ಕ್ಷೀಣತೆ ತಡೆಯಬಹುದು

ಬೆಲ್ಲ ಮತ್ತು ನೀರಿನೊಂದಿಗೆ ಈರುಳ್ಳಿ ತಿನ್ನುವುದರಿಂದ ರಕ್ತ ಕ್ಷೀಣತೆ ತಡೆಯಬಹುದು.

10.ಹೊಟ್ಟೆ ನೋವನ್ನು ತಡೆಯುತ್ತದೆ

10.ಹೊಟ್ಟೆ ನೋವನ್ನು ತಡೆಯುತ್ತದೆ

ಈರುಳ್ಳಿಯಲ್ಲಿ ಬ್ಯಾಕ್ಟೀರಿಯ ವಿರೋಧಿ ಗುಣ ಇರುವುದರಿಂದ ಅದು ಹೊಟ್ಟೆ ಮತ್ತು ಜಠರ ಸಂಬಂಧಿ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತದೆ.

11.ಮೂತ್ರದ ಅಸ್ವಸ್ಥತೆಗೆ ಚಿಕಿತ್ಸೆ ಒದಗಿಸುತ್ತದೆ

11.ಮೂತ್ರದ ಅಸ್ವಸ್ಥತೆಗೆ ಚಿಕಿತ್ಸೆ ಒದಗಿಸುತ್ತದೆ

ಮೂತ್ರ ವಿಸರ್ಜಿಸುವಾಗ ಉರಿ ಅನುಭವಿಸುತ್ತಿದ್ದರೆ ಈರುಳ್ಳಿ ಮುಕ್ತಿ ನೀಡುತ್ತದೆ.6 ರಿಂದ 7 ಗ್ರಾಂ ಈರುಳ್ಳಿಯನ್ನು ನೀರಿನಲ್ಲಿ ಕುದಿಸಿ ಕುಡಿದರೆ ಈ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಬಹುದು.

ಈರುಳ್ಳಿಯಲ್ಲಿ ಸಲ್ಫರ್ ಅಂಶ ಹೆಚ್ಚಿರುತ್ತದೆ-

ಈರುಳ್ಳಿಯಲ್ಲಿ ಸಲ್ಫರ್ ಅಂಶ ಹೆಚ್ಚಿರುತ್ತದೆ-

ವೈದ್ಯಕೀಯ ಅಧ್ಯಯನಗಳ ಪ್ರಕಾರ ಸಲ್ಫರ್ ಸಂಯುಕ್ತಗಳು ಅಸ್ತಮಕ್ಕೆ ಕಾರಣವಾದ ಜೀವರಾಶಿ ಸರಣಿಗಳನ್ನು ನಿಲ್ಲಿಸುತ್ತವೆ .ಈರುಳ್ಳಿ ತೀವ್ರ ಕೆಮ್ಮು ಬಳಲುತ್ತಿರುವ ರೋಗಿಗೆ ಉತ್ತಮ ಔಷಧಿ. ತಾಜಾ ಈರುಳ್ಳಿ ರಸವನ್ನು ರೋಗಿಗೆ ಸತ್ವ ಮತ್ತು ಶಕ್ತಿ ಮರಳಿ ಬರಲು ಬಳಸಲಾಗುತ್ತದೆ.

English summary

Health Benefits of Onions

The health benefits of onions are available due to the presence of sulfuric compounds and quercetin in traces of the essential oils. These are very effective antioxidants that aid in neutralizing the free radicals present in the human body. Onions have been used for millennia by human beings for medicinal purposes.
X
Desktop Bottom Promotion