For Quick Alerts
ALLOW NOTIFICATIONS  
For Daily Alerts

ಆಲೂಗಡ್ಡೆ ದ್ವೇಷಿಸುವವರು ಓದಲೇಬೇಕಾದ ಲೇಖನ!

By Super
|

ಆಲೂಗಡ್ಡೆ ಹಾಕಿದರೆ ಅಡುಗೆಯ ರುಚಿ ಹೆಚ್ಚುವುದು, ಆದರೆ ಆಲೂಗಡ್ಡೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಕಟುವಾದ ಅಪವಾದವನ್ನು ಆಲೂಗಡ್ಡೆ ಮೇಲೆ ಹೊರೆಸಲಾಗಿದೆ..ಯಾವುದೇ ನಿರ್ದಿಷ್ಟವಾದ ಆಕಾರವಿಲ್ಲದ ಈ ತರಕಾರಿಗೆ ಸೊಲಾನಮ್ ಟ್ಯೂಬರೋಸಂ ಎಂಬ ವೈಜ್ಞಾನಿಕ ಹೆಸರಿದೆ.

ಆಲೂಗಡ್ಡೆ ಪ್ರಿಯರು ಮಾತ್ರವಲ್ಲ, ಆಲೂಗಡ್ಡೆ ಬರೀ ಅನಾರೋಗ್ಯ ಮಾತ್ರ ಉಂಟು ಮಾಡುತ್ತದೆ, ಇದರಲ್ಲಿ ಕಾರ್ಬೋಹೈಡ್ರೇಡ್ ಹಾಗೂ ಕ್ಯಾಲೋರಿ ಬಿಟ್ಟರೆ ಬೇರೇನು ಇಲ್ಲ ಎಂದು ಆಲೂಗಡ್ಡೆಯನ್ನು ದ್ವೇಷಿಸುವವರು ಕೂಡ ಇದರಲ್ಲಿರುವ ಅನೇಕ ವಿಶೇಷ ಗುಣಗಳ ಬಗ್ಗೆ ತಿಳಿದುಕೊಳ್ಳುವುದು ಒಳ್ಳೆಯದು. ಅದೇನು ಎಂದು ತಿಳಿಯಲು ಈಮಲೇಖನದತ್ತ ಒಮ್ಮೆ ಕಣ್ಣಾಡಿಸಿ.

1.ತೂಕ ಹೆಚ್ಚಿಸಿಕೊಳ್ಳಬಹುದು

1.ತೂಕ ಹೆಚ್ಚಿಸಿಕೊಳ್ಳಬಹುದು

ಆಲೂಗಡ್ಡೆಯಲ್ಲಿ ಹೆಚ್ಚಾಗಿ ಕಾರ್ಬೋಹೈಡ್ರೇಡ್ ಹಾಗೂ ಪ್ರೋಟೀನ್ ಅಂಶ ಹೆಚ್ಚಾಗಿ ಇರುತ್ತದೆ. ಸಣ್ಣಗಿರುವವರು ದಪ್ಪ ಆಗಬೇಕೆಂದು ಯೋಚಿಸುತ್ತಿದ್ದರೆ ಆಲೂಗಡ್ಡೆಯನ್ನು ಹೆಚ್ಚಾಗಿ ಸೇವಿಸಿ ದೇಹದ ತೂಕ ಹೆಚ್ಚಿಸಿಕೊಳ್ಳಿ.

2.ಉತ್ತಮ ಪಚನ ಕ್ರಿಯೆ

2.ಉತ್ತಮ ಪಚನ ಕ್ರಿಯೆ

ಆಲೂಗಡ್ಡೆಯಲ್ಲಿ ಕಾರ್ಬೋಹೈಡ್ರೇಡ್ ಹೆಚ್ಚಾಗಿರುವುದರಿಂದ ಇದನ್ನು ಸೇವಿಸಿದಾಗ ಜೀರ್ಣ ಶಕ್ತಿಯೂ ಹೆಚ್ಚಾಗುತ್ತದೆ ಹಾಗೂ ಜೀರ್ಣ ಕ್ರಿಯೆಯಲ್ಲಿ ಸಹಕಾರಿಯಾಗಿರುತ್ತದೆ.ಗಟ್ಟಿ ಪದಾರ್ಥಗಳನ್ನು ಸೇವಿಸಿ ಜೀರ್ಣ ಆಗದೇ ಹೊಟ್ಟೆ ಕಟ್ಟುವುದು ಮುಂತಾದ ಸಮಸ್ಯೆಗಳಿರು ವಯಸ್ಸಾದವರು ಹಾಗೂ ಮಕ್ಕಳಿಗೆ ಇದು ಒಳ್ಳೆ ಆಹಾರ.

3.ತ್ವಚ್ಛೆಗೆ ಉಪಯುಕ್ತ

3.ತ್ವಚ್ಛೆಗೆ ಉಪಯುಕ್ತ

ವಿಟಮಿನ್ ಬಿ ಮತ್ತು ಸಿ ಜೊತೆಗೆ ಪೋಟ್ಯಾಸಿಯಂ, ಮ್ಯಾಗ್ನೀಶಿಯಂ, ಪೋಸ್ಪರಸ್ ಹಾಗೂ ಝಿಂಕ್ ನಂತಹ ಮಿನಯಲ್ಸ್ ಗಳಿರುವುದರಿಂದ ತ್ವಚ್ಛೆಯ ರಕ್ಷಣೆಗೆ ಆಲೂಗಡ್ಡೆ ಹೆಚ್ಚು ಪರಿಣಾಮಕಾರಿಯಾಗಿದೆ.ಆಲೂಗಡ್ಡೆ ಪೇಸ್ಟ್ ಜೊತೆಗೆ ಜೇನು ಬೆರೆಸಿದ ಮಿಶ್ರಣ ಚರ್ಮಕ್ಕೆ ಹಾಗೂ ಫೇಸ್ ಪ್ಯಾಕ್ ಆಗಿ ಬಳಕೆ ಮಾಡಬಹುದಾಗಿದೆ.ತ್ವಚ್ಛೆಯ ಮೇಲಿರುವ ಪಿಂಪಲ್ ಹಾಗೂ ಕಪ್ಪು ಕಲೆಗಳನ್ನು ನಿವಾರಣೆ ಮಾಡಲು ಇದು ಸಹಾಯಕವಾಗಿದೆ.

4.ಸಂಧಿವಾತ

4.ಸಂಧಿವಾತ

ಇದರಲ್ಲಿ ಎರಡು ಪ್ರಮುಖವಾದ ಅಂಶಗಳಿವೆ.ವಿಟಮಿನ್ಸ್, ಕ್ಯಾಲ್ಸಿಯಂ ಹಾಗೂ ಮ್ಯಾನ್ನೀಸಿಯಂ ಸತ್ವಗಳನ್ನು ಆಲೂಗಡ್ಡೆ ಹೊಂದಿರುವುದರಿಂದ ಸಂಧವಾತದಂತ ರೋಗಕ್ಕೆ ಇದು ರಾಮಬಾಣವಾಗಿದೆ. ಆಲೂಗಡ್ಡೆ ಬೇಯಿಸಿದ ನೀರನಲ್ಲಿ ಸಂಧವಾತ ರೋಗಕ್ಕೆ ಜೌಷಧ ಅಂಶವಿದೆ. ಆದರೆ ಆಲೂಗಡ್ಡೆ ಸೇವನೆಯಿಂದ ಶರೀರದ ತೂಕ ಹೆಚ್ಚುವುದರಿಂದ ಸಂಧಿವಾತ ರೋಗ ಇರುವವರಿಗೆ ಇದರಿಂದ ಸೈಡ್ ಎಫೆಕ್ಟ್ ಕೂಡ ಆಗಬಹುದು.

5. ದೇಹ ಉರಿ ತೊಂದರೆ

5. ದೇಹ ಉರಿ ತೊಂದರೆ

ದೇಹದ ಬಾಹ್ಯ ಹಾಗೂ ಆಂತರಿಕ ಉರಿಯುವಿಕೆ ತೊಂದರೆ ಇರುವವರಿಗೆ ಆಲೂಗಡ್ಡೆ ಉತ್ತಮ ಪರಿಣಾಮಕಾರಿ.ಸೇವಿಸಲು ಮೃದು, ಸುಲಭವಾಗಿ ಜೀರ್ಣವಾಗವ ಹಾಗೂ ಹೆಚ್ಚಾಗಿ ವಿಟಮಿನ್ ಸಿ, ಪೊಟ್ಯಾಸಿಯಂ ಮತ್ತು ವಿಟಮಿನ್ ಬಿ6 ಅಂಶ ಹೊಂದಿರುವುರಿಂದ ಎದೆ ಉರಿಯುವುದು ಮುಂತಾದವುಗಳಿಗೆ ಉತ್ತಮ ಮದ್ದಾಗಿದೆ.

6.ಬಾಯಿ ಹುಣ್ಣಿಗೆ ಮದ್ದು

6.ಬಾಯಿ ಹುಣ್ಣಿಗೆ ಮದ್ದು

ಬಾಯಿ ಹುಣ್ಣಾದವರು ಆಲೂಗಡ್ಡೆ ಸೇವಿಸುದರಿಂದ ಬೇಗ ವಾಸಿಯಾಗುತ್ತದೆ. ಹಸಿ ಆಲೂಗಡ್ಡೆ ಪೇಸ್ಟ್ ಅನ್ನು ಬಾಯಿಯೊಳಗೆ ಅಥವಾ ಮೇಲ್ಭಾಗದ ಗಾಯಕ್ಕೂ ಹಚ್ಚಿಕೊಳ್ಳಬಹುದು.

7.ಮೆದುಳಿನ ಕ್ರಿಯೆಯಲ್ಲಿ

7.ಮೆದುಳಿನ ಕ್ರಿಯೆಯಲ್ಲಿ

ಮೆದುಳು ಸರಿಯಾಗಿ ಕೆಲಸ ಮಾಡಲು ಅದು ಹೆಚ್ಚಾಗಿ ಗ್ಲೂಕೋಸ್ ಪ್ರಮಾಣ, ಆಮ್ಲಜನಕದ ಸರಬರಾಜು, ವಿಟಮಿನ್ ಬಿ ಕಾಂಪ್ಲೆಕ್ಸ್ ಹಾಗೂ ಹಾರ್ಮೋನ್ಸ್, ಅಮಿನೋ ಆಸಿಡ್, ಒಮೇಗಾ 3 ಪ್ಯಾಟಿ ಆಸಿಡ್ ಮುಂತಾದುವನ್ನು ಅವಲಂಬಿಸಿರುತ್ತದೆ. ಈ ಎಲ್ಲಾ ಅಂಶಗಳನ್ನು ಆಲೂಗಡ್ಡೆ ಹೊಂದಿದ್ದು ಅದನ್ನು ಮೆದುಳಿಗೆ ಅಗತ್ಯವಿದ್ದರೆ ಸರಬರಾಜು ಮಾಡುತ್ತದೆ.

8.ಹೃದಯದ ಸಮಸ್ಯೆ

8.ಹೃದಯದ ಸಮಸ್ಯೆ

ವಿಟಮಿನ್ಸ್, ಮಿನರಲ್ಸ್, ಕ್ಯಾಲ್ಸಿಯಂ ಅಲ್ಲದೆ ಆಲೂಗಡ್ಡೆಯಲ್ಲಿ ಕ್ಯಾರೋಟಿನಾಯಿಡ್ ಎಂಬ ಗುಣವನ್ನೂ ಹೊಂದಿದೆ. ಶರೀರದ ಒಳಭಾಗದಲ್ಲಿರುವ ಹೃದಯ ಹಾಗೂ ಇತರ ಅಂಗಗಳಿಗೆ ಇದು ಉಪಯೋಗಿಯಾಗಿದೆ.ಆದರೆ ಮತ್ತೆ ಆಲೂಗಡ್ಡೆ ಸೇವನೆಯಿಂದ ರಕ್ಯದಲ್ಲಿ ಗ್ಲೂಕೋಸ್ ಅಂಶ ಹೆಚ್ಚಳವಾಗುವುದರಿಂದ ಶರೀರದ ತೂಕ ಹೆಚ್ಚಾಗ ಬಹುದು ಹಾಗೂ ಸಕ್ಕರೆ ಕಾಯಿಲೆ ಹಾಗೂ ದಡೂತಿ ಶರೀರ ಇರುವವರಿಗೆ ಆಲೂಗಡ್ಡೆ ಸೇವನೆ ಒಳ್ಳೆಯದಲ್ಲ.

9.ಅತಿಸಾರ

9.ಅತಿಸಾರ

ಅತಿಸಾರ ಸಮಸ್ಯೆಯಿಂದ ಬಳಲುವವರಿಗೆ ಆಲೂಗಡ್ಡೆ ಅತ್ಯಂತ ಉತ್ತಮ ಆಹಾರ.ಇದು ತೆಳುವಾದ ಆಹಾರವಾಗಿದ್ದು ಜೀರ್ಣ ಮಾಡಿಕೊಳ್ಳಲು ಸುಲಭವಾದ್ದರಿಂದ ಅತಿಸಾರಕ್ಕೆ ಇದು ರಾಮಬಾಣ.ಆದರೆ ತಿಳಿಯದೆ ಇದನ್ನೇ ಹೆಚ್ಚಾಗಿ ಸೇವಿಸಿದರೆ ತೊಂದರೆಯೂ ಆಗಬಹುದು.

10.ಗಾಯ ಹಾಗೂ ಸುಟ್ಟ ಗಾಯಗಳಿಗೆ ಉತ್ತಮ ಜೌಷಧ

10.ಗಾಯ ಹಾಗೂ ಸುಟ್ಟ ಗಾಯಗಳಿಗೆ ಉತ್ತಮ ಜೌಷಧ

ಸುಟ್ಟ ಗಾಯಗಳಿಗೆ ಆಲೂಗಡ್ಡೆಯ ರಸ ಒಳ್ಳೆ ಜೌಷಧಿ. ಚರ್ಮದ ಸಮಸ್ಯೆ, ತುರಿಕೆ, ಕಜ್ಜಿ ಮುಂತಾದ ಚರ್ಮ ರೋಗಕ್ಕೆ ಹೆಚ್ಚು ಸಹಾಯವಾಗಿದೆ. ಅಲ್ಸರ್,ಪ್ರೋಸ್ಟ್ರೇಟ್ ಕ್ಯಾನರ್, ಗರ್ಭಕೋಶ ಹಾಗೂ ಹೊಟ್ಟೆಯಲ್ಲಿನ ಗಡ್ಡೆಗಳಿಗೆ ಇದು ಉತ್ತಮ ಜೌಷಧಿಯಾಗಿದೆ.

English summary

Health Benefits of Potato | Tips Fort Health | ಆಲೂಗಡ್ಡೆಯಲ್ಲಿದೆ ಟಾಪ್ 10 ಆರೋಗ್ಯಕರ ಗುಣಗಳು | ಆರೋಗ್ಯಕ್ಕಾಗಿ ಕೆಲ ಸಲಹೆಗಳು

Potato lovers and those who do not like them, will be equally delighted to know that potatoes have more in store for them than just carbohydrates and calories. Let us uncover them. 
X
Desktop Bottom Promotion