For Quick Alerts
ALLOW NOTIFICATIONS  
For Daily Alerts

ಅಬ್ಬಾ! ಚಿಟಿಕೆಯಷ್ಟು ಇಂಗಿನಲ್ಲಿ ಇಷ್ಟೆಲ್ಲಾ ಪ್ರಯೋಜನಗಳಿವೆಯೇ?

By Super
|

ಇಂಗು ಭಾರತೀಯ ಪಾಕಪದ್ಧತಿಯಲ್ಲಿ ವಿಶಿಷ್ಟ ಸ್ಥಾನವನ್ನು ಹೊಂದಿದೆ. ಇತರ ಯಾವುದೇ ಪದಾರ್ಥಗಳನ್ನು ಬಳಸಿ ಅಡುಗೆ ಮಾಡುವಾಗ ಅದರಲ್ಲಿ ಒಂದು ಚಿಟಿಕೆ ಇಂಗನ್ನು ಬೆರೆಸಿದರೆ ಅದು ಅದ್ಭುತವಾದ ಸುವಾಸನೆಯನ್ನು ನೀಡುತ್ತದೆ. ಇಂಗನ್ನು ಹೆಚ್ಚಾಗಿ ದಾಲ್,ಸಾಂಬಾರು ಹಾಗೂ ಇತರ ಸಸ್ಯಹಾರಿ ಅಡುಗೆಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಅಲ್ಲದೇ ಇದನ್ನು ಮಸಾಲೆ ಹಾಗೂ ಉಪ್ಪಿನಕಾಯಿ ತಯಾರಿಕೆಯಲ್ಲೂ ಬಳಸಲಾಗುವುದು ಇವೆಲ್ಲದಕ್ಕಿಂತ ಹೆಚ್ಚಾಗಿ ಇಂಗು ಔಷಧೀಯ ಗುಣಗಳನ್ನು ಹೊಂದಿದೆ.

ಇಂಗನ್ನು ಉರಿಯೂತ ನಿರೋಧಕ, ಸೂಕ್ಷ್ಮಜೀವಿ ಪ್ರತಿರೋಧಕ, ವಿರೇಚಕ (ಮಲವಿಸರ್ಜನೆಗೆ ಸಹಾಯಕಾರಿ), ನರ ಉತ್ತೇಜಕ, ಮತ್ತು ನಿದ್ರಾಜನಕ ಎಂದು ಕರೆಯಲಾಗುತ್ತದೆ. ಇಲ್ಲಿ ಇಂಗಿನ ಕೆಲವು ಅದ್ಭುತ ಆರೋಗ್ಯಕರ ಗುಣಗಳ ಪರಿಚಯ ನೀಡಲಾಗಿದೆ ಮುಂದೆ ಓದಿ:

ಮುಟ್ಟಿನ ಸಮಸ್ಯೆ

ಮುಟ್ಟಿನ ಸಮಸ್ಯೆ

ಮಹಿಳೆಯರಲ್ಲಿ ಉಂಟಾಗುವ ಮುಟ್ಟಿನ ಸಮಸ್ಯೆಗಳಾದ ನೋವು, ಸೆಳೆತ ಅನಿರ್ಧಿಷ್ಟಾವಧಿಯ ಮುಟ್ಟು, ಮೊದಲಾದ ತೊಂದರೆಗಳಿಗೆ ಸೂಕ್ತವಾದ ಪರಿಹಾರ ಇಂಗು. ಕ್ಯಾಂಡಿಡಾ ಸೋಂಕು ಹಾಗೂ ಬಿಳಿ ಸೆರಗು ತೊಂದರೆಗಳಿಗೂ ಇಂಗಿನ ಸೇವನೆ ಪ್ರಯೋಜನಕಾರಿ ಚಿಕಿತ್ಸೆಯಾಗಬಲ್ಲದು.

ಉಸಿರಾಟದ ಅಸ್ವಸ್ಥತೆ

ಉಸಿರಾಟದ ಅಸ್ವಸ್ಥತೆ

ಇಂಗು, ಶ್ವಾಸನಾಳದ ಸೋಂಕು ಚಿಕಿತ್ಸೆಗಾಗಿ ಬಳಸಲ್ಪಡುವ ಹಳೆಯ ಪರಿಹಾರಗಳಲ್ಲಿ ಒಂದು. ಜೇನು ಮತ್ತು ಶುಂಠಿ ಬೆರೆಸಿ ಇಂಗನ್ನು ಸೇವಿಸಿದರೆ ತೀವ್ರವಾದ ಒಣ ಕೆಮ್ಮು, ಉಸಿರಾಟದ ಕಾಯಿಲೆಗಳು, ಆಸ್ತಮಾ, ಇತ್ಯಾದಿ ಕಾಯಿಲೆಗಳು ಉಪಶಮನವಾಗುತ್ತವೆ.

ಅಜೀರ್ಣ

ಅಜೀರ್ಣ

ಇಂಗನ್ನು ಪ್ರಾಚೀನ ಕಾಲದಿಂದ ಅಜೀರ್ಣ ನಿವಾರಕ ಮನೆ ಮದ್ದಾಗಿ ಬಳಸಲಾಗುತ್ತಿದೆ. ಆದ್ದರಿಂದಲೇ ಇದನ್ನು ಭಾರತೀಯ ಅಡುಗೆಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಉರಿಯೂತ , ಜಂತು ಹುಳಗಳು, ವಾಯು, ಇತ್ಯಾದಿ ಜೀರ್ಣಕ್ರಿಯೆ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ. ಅರ್ಧ ಲೋಟ ನೀರಿಗೆ ಚಿಟಿಕಿಯಷ್ಟು ಇಂಗನ್ನು ಹಾಕಿ ಕರಗಿಸಿ ಕುಡಿಯುವುದರಿಂದ ಅಜೀರ್ಣ ಸಮಸ್ಯೆ ಅತ್ಯಂತ ವೇಗವಾಗಿ ಪರಿಹಾರವಾಗುತ್ತದೆ.

ಮಧುಮೇಹ

ಮಧುಮೇಹ

ಇಂಗು ಮಧುಮೇಹ ನಿವಾರಕವೂ ಆಗಿದೆ. ಇದು ಮೇದೋಜೀರಕ ಜೀವಕೋಶಗಳ ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡುವುದರಿಂದ ಹೆಚ್ಚು ಇನ್ಸುಲಿನ್ ಸ್ರವಿಸುವಂತೆ ಮಾಡುತ್ತದೆ. ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡಲು, ಬೇಯಿಸಲಾದ ಹಾಗಲಕಾಯಿಯ ಜೊತೆಗೆ ಇಂಗನ್ನು ಬೆರೆಸಿ ಸೇವಿಸಬಹುದು.

ಅಧಿಕ ರಕ್ತದೊತ್ತಡ

ಅಧಿಕ ರಕ್ತದೊತ್ತಡ

ಇದು ರಕ್ತವನ್ನು ಹೆಪ್ಪುಗಟ್ಟದಂತೆ ತಡೆಯುತ್ತದೆ, ಅಲ್ಲದೇ ಕೊಲೆಸ್ಟ್ರಾಲ್ ಬರದಂತೆ ತಡೆಯುತ್ತದೆ.

ನರ ಅಸ್ವಸ್ಥತೆಗಳು

ನರ ಅಸ್ವಸ್ಥತೆಗಳು

ಈ ಪದಾರ್ಥ ನರವನ್ನು ಪ್ರಚೋದಿಸುತ್ತದೆ. ಆದ್ದರಿಂದ ಇದು ಹಿಸ್ಟೇರಿಯಾ, ಸೆಳೆವು, ಸಿಂಕೋಪ್ ಮತ್ತು ಇತರ ನರ ಸಂಬಂಧಿ ಅಸ್ವಸ್ಥತೆಗಳನು ನಿವಾರಿಸುತ್ತದೆ

ನೋವು

ನೋವು

ನೀರಿನಲ್ಲಿ ಕರಗಿದ ಇಂಗು ತಲೆನೋವು ಅಥವಾ ಮೈಗ್ರೇನ್ ನಿವಾರಣೆಗೆ ಸಹಾಯ ಮಾಡುತ್ತದೆ. ನಿಂಬೆರಸದಲ್ಲಿ ಇಂಗನ್ನು ಬೆರೆಸಿ ಸೇವಿಸುವುದರಿಂದ ಹಲ್ಲಿನ ಆರೋಗ್ಯಕ್ಕೆ ಅತ್ಯಂತ ಒಳ್ಳೆಯದು.

ಆಫೀಮು ವಿಷಕ್ಕೆ ಪ್ರತಿವಿಷ:

ಆಫೀಮು ವಿಷಕ್ಕೆ ಪ್ರತಿವಿಷ:

ಇಂಗು ಅಫೀಮು ಪರಿಣಾಮವನ್ನು ತಗ್ಗಿಸುವ ಅದರ ವಿಷಕ್ಕೆ ಪ್ರತಿವಿಷವಾಗಿ ವರ್ತಿಸುವ ಔಷಧೀಯ ಗುಣವನ್ನು ಹೊಂದಿದೆ.

ಕ್ಯಾನ್ಸರ್

ಕ್ಯಾನ್ಸರ್

ಇಂಗು, ಪ್ರಬಲ ಆಕ್ಸಿಡೆಂಟ್ ವಿರೋಧಿ ಔಷಧವಾಗಿದೆ. ಇದು ದೇಹದ ಜೀವಕೋಶಗಳನ್ನು ರ್ಯಾಡಿಕಲ್ಸ್ (ರಾಡಿಕಲ್ಸ್) ನಿಂದ ರಕ್ಷಿಸುತ್ತದೆ. ಅಧ್ಯಯನಗಳ ಪ್ರಕಾರ, ಇಂಗು ಕ್ಯಾನ್ಸರ್ ವಿರೋಧಿ ವಸ್ತುವಾಗಿದ್ದು, ಪ್ರಾಣಾಂತಕ ಜೀವಕೋಶಗಳ ಬೆಳವಣಿಗೆಯನ್ನು ತಡೆಯುತ್ತದೆ.

ಚರ್ಮ ವ್ಯಾಧಿಗಳು

ಚರ್ಮ ವ್ಯಾಧಿಗಳು

ಚರ್ಮ ರಕ್ಷಣೆಗಾಗಿ ಬಳಸುವ ಹಲವಾರು ಉತ್ಪನ್ನಗಳಲ್ಲಿ ಔಷಧೀಯ ಗುಣವನ್ನು ಹೊಂದಿರುವ ಇಂಗನ್ನು ಪರಿಣಾಮಕಾರಿ ಚಿಕಿತ್ಸೆಗಾಗಿ ಬಳಸಲಾಗುತ್ತದೆ. ಇಂಗನ್ನು ನೇರವಾಗಿ ಕೂಡ ಚರ್ಮದ ಪೋಷಣೆಗೆ ಬಳಸಬಹುದು.

English summary

Health Benefits Of Hing/Asafoetida | Tips For Health | ಊಟಕ್ಕೂ ರುಚಿ ಆರೋಗ್ಯಕ್ಕೂ ಅಗತ್ಯ : ಇಂಗು | ಆರೋಗ್ಯಕ್ಕಾಗಿ ಕೆಲ ಸಲಹೆಗಳು

Asafoetida has medicinal properties. It is known to be anti flatulent, anti-inflammatory, antimicrobial, laxative, nerve stimulant, expectorant and sedative. Here are the few health benefits of hing.
X
Desktop Bottom Promotion