For Quick Alerts
ALLOW NOTIFICATIONS  
For Daily Alerts

ತೆಂಗಿನ ಹಾಲಿನಿಂದ ಆರೋಗ್ಯಕ್ಕಾಗುವ ಅನುಕೂಲಗಳು

By Super
|

ತೆಂಗಿನ ಎಣ್ಣೆ ಒಂದು ಸುಂದರ ಪರಿಮಳವನ್ನು ನೀಡುವ ಜೊತೆಗೆ,ಇದು ನಿಮ್ಮ ಕೂದಲನ್ನು ಮೃದುವಾಗಿಸುತ್ತದೆ.ತೆಂಗಿನ ಎಣ್ಣೆಯಿಂದ ಆಗುವ ಮುಖ್ಯ ಅನುಕೂಲವೆಂದರೆ ತೇವಾಂಶ ನೀಡಿ ಸುಂದರವಾಗಿ ಕಾಣುವಂತೆ ಮಾಡುವುದು.ರಾಸಾಯನಿಕ ಬಳಸಿದ ಮತ್ತು ನೈಸರ್ಗಿಕ ಬಳಸದ ಕೂದಲುಗಳಿಗೆ ಬಲಯುತವಾಗಿರಲು ಮತ್ತು ಸರಿಯಾಗಿ ಬೆಳೆಯಲು ಮಾಯಿಶ್ಚರೈಸರ್ ಅಗತ್ಯವಿದೆ.

ತೆಂಗಿನ ಎಣ್ಣೆ ಕೂದಲನ್ನು ಸುಂದರವಾಗಿ ಮಾಡುವುದರಲ್ಲಿ ಇರುವ ಕೆಲವೇ ಎಣ್ಣೆಗಳಲ್ಲಿ ಒಂದು.ಏಕೆಂದರೆ ಇದು ಕೂದಲ ರಚನೆಯನ್ನು ಸುಲಭಗೊಳಿಸುತ್ತದೆ.ಕೂದಲಿಗೆ ಶ್ಯಾಂಪೂ ಬಳಸುವ ಮೊದಲು ಈ ಎಣ್ಣೆಯನ್ನು ಬಳಸಿ.ಒಂದು ಕೈತುಂಬಾ ಎಣ್ಣೆ ಹಾಕಿ ಅದನ್ನು ನೆತ್ತಿಯ ಮೇಲೆ ಹಾಕಿ ನಿಧಾನವಾಗಿ ಮಸಾಜ್ ಮಾಡಿ ಮತ್ತು ಒಂದು ಗಂಟೆಯ ನಂತರ ತೊಳೆಯಿರಿ.

ಹಾಗೆ ಮಾಡಿದಲ್ಲಿ ಹಿಂದೆಂದೂ ಕಾಣದ ಹೊಳೆಯುವ ಮೃದುವಾದ ಕೂದಲು ನಿಮ್ಮದಾಗುವುದರಲ್ಲಿ ಅನುಮಾನ ಬೇಡ.

ನಿಮಗೆ ತಲೆಯಲ್ಲಿ ಹೊಟ್ಟು ಹೆಚ್ಚಾಗಿ ತುರಿಕೆ ಆಗುತ್ತಿದ್ದರೆ ತೆಂಗಿನ ಎಣ್ಣೆಯಲ್ಲಿ ಅದನ್ನು ತಡೆಯುವ ಶಕ್ತಿ ಇದೆ.

ಕೈಯಲ್ಲಿ ಎಣ್ಣೆ ಹಾಕಿಕೊಂಡು ನೆತ್ತಿಗೆ ಹಾಕಿ ಪ್ರತಿದಿನ ಸ್ವಲ್ಪ ಹೊತ್ತು ಮಸಾಜ್ ಮಾಡಿ.ಹೀಗೆ ಮಾಡಿದಲ್ಲಿ ಖಂಡಿತವಾಗಿ ಬದಲಾವಣೆಯನ್ನು ಕಾಣುತ್ತೀರಿ.

ಈ ತೆಂಗಿನ ಎಣ್ಣೆ ಕೇವಲ ತೊಂದರೆಗಳಿಗೆ ಮಾತ್ರವಲ್ಲ ಸೂಕ್ಷ ಕ್ರಿಮಿಗಳು ಮತ್ತು ಫಂಗಸ್ ವಿರುದ್ಧ ಹೋರಾಡುತ್ತದೆ.ಇದು ಲಾರಿಕ್,ಕ್ಯಾಪ್ರಿಕ್ ಮತ್ತು ಕ್ಯಾಪ್ರಿಕ್ ಆಸಿಡ್ ಗಳನ್ನು ಒಳಗೊಂಡಿರುವ,ಶಿಲೀಂದ್ರ ಸಂಬಂಧಿಸಿದ ಯಾವುದೇ ಕಾಯಿಲೆ ಹೋಗಲಾಡಿಸುವ ಏಕೈಕ ಎಣ್ಣೆ ಆಗಿದೆ.

ಇಲ್ಲಿ ತೆಂಗಿನೆಣ್ಣೆ ಮತ್ತು ತೆಂಗಿನ ಹಾಲಿನ ಗುಣಗಳ ಬಗ್ಗೆ ಹೇಳಿದ್ದೇವೆ ನೋಡಿ:

1.ರಕ್ತದಲ್ಲಿ ಸಕ್ಕರೆ ಅಂಶದ ಸಮತೋಲನಕ್ಕೆ

1.ರಕ್ತದಲ್ಲಿ ಸಕ್ಕರೆ ಅಂಶದ ಸಮತೋಲನಕ್ಕೆ

ದೇಹದಲ್ಲಿ ಗ್ಲೂಕೋಸ್ ಅಂಶದ ಕೊರತೆಯಿದ್ದರೆ ಅದರಿಂದ ಮ್ಯಾಂಗನೀಸ್ ಕೊರೆತೆ ಬರುತ್ತದೆ.ತೆಂಗಿನ ಹಾಲಿನಲ್ಲಿ ಮ್ಯಾಂಗನೀಸ್ ಅಂಶ ಹೆಚ್ಚಾಗಿ ದೊರಕುತ್ತದೆ.ಇದಲ್ಲದೆ ಧಾನ್ಯಗಳು,ಬೀಜ,ಕಾಳುಗಳಲ್ಲಿ ಕೂಡ ಮ್ಯಾಂಗನೀಸ್ ಅಂಶ ಹೆಚ್ಚಾಗಿರುತ್ತದೆ.

ಖನಿಜಾಂಶವಿದೆ

ಖನಿಜಾಂಶವಿದೆ

ತಾಮ್ರದ ಅಂಶ,ದೈಹಿಕ ಕಾರ್ಯಗಳನ್ನು ಸುಗಮವಾಗಿಸಲು ಬೇಕಾಗುವ ಅತ್ಯಂತ ಬಹಳ ಮುಖ್ಯ ಖನಿಜಾಂಶ ಇದಾಗಿದೆ.ಇದರಲ್ಲಿರುವ ವಿಟಮಿನ್ ಸಿ ಮತ್ತು ಕಾಪರ್ ಅಂಶ ದೇಹವನ್ನು ಸರಿಯಾಗಿಡಲು ಸಹಾಯಕ.

3.ಮೂಳೆಗಳನ್ನು ಬಲಯುತವಾಗಿಸಲು

3.ಮೂಳೆಗಳನ್ನು ಬಲಯುತವಾಗಿಸಲು

ತೆಂಗಿನ ಹಾಲಿನಲ್ಲಿ ಕ್ಯಾಲ್ಸಿಯಂ ಹೆಚ್ಚಿಲ್ಲದಿದ್ದರೂ ಪೊಟ್ಯಶಿಯಂ ಅಂಶ ಅಧಿಕವಾಗಿರುತ್ತದೆ.ಪೊಟ್ಯಶಿಯಂ ದೇಹದ ಮೂಳೆಗಳನ್ನು ಬಲಯುತ ಆಗಿಸಲು ಸಹಾಯಕವಾಗುತ್ತದೆ.ಇದು ದೇಹಕ್ಕೆ ಫಾಸ್ಫೇಟ್ ಸರಬರಾಜು ಮಾಡಿ ವಿಶೇಷವಾಗಿ,ಕ್ಯಾಲ್ಸಿಯಂ ಜೊತೆ ರಂಜಕ ಸೇರಿ ಮೂಳೆ ಸವೆತವನ್ನು ತಡೆಯುತ್ತದೆ.

4.ರಕ್ತಹೀನತೆ ತಡೆಯುತ್ತದೆ

4.ರಕ್ತಹೀನತೆ ತಡೆಯುತ್ತದೆ

ಪ್ರಪಂಚದ ಎಲ್ಲ ಜನರಲ್ಲೂ ಇರುವ ತೊಂದರೆ ಎಂದರೆ ಕಬ್ಬಿಣದ ಅಂಶದ ಕೊರತೆ.ಕಬ್ಬಿಣದ ಕೊರತೆಯಿಂದ ದೇಹದ ರಕ್ತಕಣಗಳಲ್ಲಿ ಸರಿಯಾದ ಸಂಚಲನೆಯಿಲ್ಲದೆ ಹಿಮೊಗ್ಲೋಬಿನ್ ಅಂಶ ಕಡಿಮೆ ಮಾಡುತ್ತದೆ.ಪರಿಣಾಮವಾಗಿ ಅನೀಮಿಯ ಪ್ರಾರಂಭವಾಗುತ್ತದೆ.

ಪ್ರತಿ ಒಂದು ಕಪ್ ತೆಂಗಿನ ಹಾಲಿನಲ್ಲಿ ದಿನಕ್ಕೆ ಬೇಕಾದ ಕಾಲು ಭಾಗದ ಕಬ್ಬಿಣದ ಅಂಶ ಸಿಗುತ್ತದೆ.

5.ಸ್ನಾಯುಗಳು ಮತ್ತು ನರಗಳು ಸಡಿಲಗೊಳ್ಳುತ್ತದೆ

5.ಸ್ನಾಯುಗಳು ಮತ್ತು ನರಗಳು ಸಡಿಲಗೊಳ್ಳುತ್ತದೆ

ನಿಮಗೆ ಸ್ನಾಯು ಸೆಳೆತ ಅಥವಾ ಸಹಿಸಲಾಗದ ನೋವು ಬಂದಲ್ಲಿ ತೆಂಗಿನ ಹಾಲನ್ನು ಉಪಯೋಗಿಸಿ.ಇದರಲ್ಲಿರುವ ಮ್ಯಗ್ನೀಶಿಯಂ ಅಂಶವು ನೋವನ್ನು ಹೋಗಲಾಡಿಸುತ್ತದೆ.ಮ್ಯಗ್ನೀಶಿಯಂ ನರ ಜೀವಕೋಶಗಳಲ್ಲಿ ಒಂದು ಗೇಟ್ ಲಾಕ್ ನಂತೆ ವರ್ತಿಸುತ್ತದೆ.

ಸ್ನಾಯುಗಳ ಹೆಚ್ಚುವರಿ ಸಂಕೊಚನದಿಂದ ನರಕೋಶಗಳು ಅತಿಕ್ರಿಯಾಶೀಲ ಆಗುವುದುಂಟು.ಮ್ಯಗ್ನೀಶಿಯಂ ದೇಹದಲ್ಲಿ ಇಲ್ಲದಿದ್ದರೆ ದೇಹದಲ್ಲಿರುವ ಕ್ಯಾಲ್ಸಿಯಂ ನರ ಜೀವಕೋಶಗಳು ತುಂಬಾ ಸಕ್ರಿಯವಾಗುತ್ತವೆ.

6.ಸಮತೂಕ ಕಾಪಾಡಿಕೊಳ್ಳುವಲ್ಲಿ ಸಹಾಯಕ

6.ಸಮತೂಕ ಕಾಪಾಡಿಕೊಳ್ಳುವಲ್ಲಿ ಸಹಾಯಕ

ತೂಕ ಕಡಿಮೆ ಮಾಡಲು ಪ್ರಯತ್ನಿಸುವವರಿಗೆ ಇದು ಒಳ್ಳೆಯ ವಿಷಯ. ತೆಂಗಿನ ಹಾಲು ನಿಮಗೆ ಬೇಗ ಹೊಟ್ಟೆ ತುಂಬಿದಂತೆ ಅನ್ನಿಸುತ್ತದೆ.ಇದರಿಂದ ಹೆಚ್ಚು ತಿನ್ನಲಾಗುವುದಿಲ್ಲ.ಆದ್ದರಿಂದ ಸಮತೂಕ ಕಾಪಾಡಿಕೊಳ್ಳಬಹುದು.

7.ಸಂಧಿ ಉರಿಯೂತ ಕಡಿಮೆ ಮಾಡುತ್ತದೆ

7.ಸಂಧಿ ಉರಿಯೂತ ಕಡಿಮೆ ಮಾಡುತ್ತದೆ

ಸೆಲೆನಿಯಮ್ ಪ್ರಮುಖ ಉತ್ಕರ್ಷಣ ನಿರೋಧಕ.ಇದು ರಾಡಿಕಲ್ ಅನ್ನು ಹಿಡಿತದಲ್ಲಿಟ್ಟು ಸಂಧಿವಾತ ಆಗುವುದನ್ನು ತಡೆಯುತ್ತದೆ.ಸೆಲೆನಿಯಮ್ ಅಂಶ ಕಡಿಮೆ ಇರುವ ಜನರಲ್ಲಿ ಸಂಧಿವಾತ ತೊಂದರೆ ಕಾಣಿಸಿಕೊಳ್ಳುತ್ತದೆ.

8.ಅಧಿಕ ರಕ್ತದೊತ್ತಡ ಕಡಿಮೆ ಮಾಡುವುದು

8.ಅಧಿಕ ರಕ್ತದೊತ್ತಡ ಕಡಿಮೆ ಮಾಡುವುದು

ರಕ್ತದೊತ್ತಡದ ಬಗ್ಗೆ ಕಾಳಜಿ ಇರುವವರಿಗೆ ಪೊಟ್ಯಶಿಯಂ ಅಂಶವಿರುವ ಆಹಾರ ಬಳಸುವುದರಿಂದ ಯಾವುದೇ ತೊಂದರೆ ಉಂಟಾಗುವುದಿಲ್ಲ.ಪೊಟ್ಯಶಿಯಂ ರಕ್ತದೊತ್ತಡ ಕಡಿಮೆ ಮಾಡುವಲ್ಲಿ ಸಹಾಯಕವಾಗುತ್ತದೆ.

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಮೂಲಕ ತೆಂಗಿನ ಹಾಲು ನೆಗಡಿ ಮತ್ತು ಕೆಮ್ಮು ಇವುಗಳು ಹತ್ತಿರ ಸುಳಿಯದಂತೆ ಮಾಡುತ್ತದೆ.ಇದರಲ್ಲಿ ದೊರಕುವ ವಿಟಮಿನ್ ಸಿ ಅಂಶ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.

10.ಪುರುಷ ಜನನೇಂದ್ರಿಯ ಗ್ರಂಥಿಯ ಆರೋಗ್ಯ ಹೆಚ್ಚಿಸುತ್ತದೆ

10.ಪುರುಷ ಜನನೇಂದ್ರಿಯ ಗ್ರಂಥಿಯ ಆರೋಗ್ಯ ಹೆಚ್ಚಿಸುತ್ತದೆ

ಸತುವಿನ ಅಂಶವು ಪುರುಷ ಜನನೇಂದ್ರಿಯ ಗ್ರಂಥಿಯ ಆರೋಗ್ಯ ಹೆಚ್ಚಿಸುವಲ್ಲಿ ಅಧಿಕ ಪಾತ್ರ ವಹಿಸುತ್ತದೆ.ಅಧ್ಯಯನದ ಪ್ರಕಾರ ಇದು ಕ್ಯಾನ್ಸರ್ ಕಣ ಬರದಂತೆ ತಡೆಯುತ್ತದೆ ಎನ್ನಲಾಗಿದೆ.

English summary

Health Benefits of Coconut Milk

Besides providing a heavenly tropical scent, it will also make your hair feel as soft as a cloud. One of the main benefits is definitely the moisturising properties. Both chemically-straightened and natural hair need moisture to continue growing and to remain strong.
X
Desktop Bottom Promotion