For Quick Alerts
ALLOW NOTIFICATIONS  
For Daily Alerts

ಗ್ಯಾಸ್ಟ್ರಿಕ್ ಕಾರಣ ಹೇಳಿ ರಾಜ್ಮಾವನ್ನು ದೂರ ಮಾಡಬೇಡಿ

|

ಕಿಡ್ನಿ ಬೀನ್ಸ್ ಅಥವಾ ರಾಜ್ಮಾ ಹಾಕಿ ತಯಾರಿಸಿದ ಅಡುಗೆ ಬಾಯಿಗೆ ರುಚಿಕರ ಮಾತ್ರವಲ್ಲ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಇದು ಗ್ಯಾಸ್ ಉತ್ಪತ್ತಿ ಮಾಡುತ್ತದೆ ಎಂದು ಹೆಚ್ಚಿನವರು ತಿನ್ನುವುದಿಲ್ಲ. ಗ್ಯಾಸ್ಟ್ರಿಕ್ ಸಮಸ್ಯೆ ಇರುವವರು ಇದನ್ನು ತಿನ್ನಬಾರದು ನಿಜ, ಆದರೆ ಇದು ತಿಂದರೆ ಗ್ಯಾಸ್ಟ್ರಿಕ್ ಸಮಸ್ಯೆ ಬರುತ್ತದೆ ಅನ್ನುವುದು ಸುಳ್ಳು. ಆದ್ದರಿಂದ ಗ್ಯಾಸ್ಟ್ರಿಕ್ ಉತ್ಪತ್ತಿ ಮಾಡುತ್ತದೆ ಎಂಬ ಕಾರಣ ಹೇಳಿ ದೂರ ಮಾಡಿದರೆ ಇದರಿಂದ ದೊರೆಯುವ ಸಾಕಷ್ಟು ಪ್ರಯೋಜನಗಳಿಂದ ವಂಚಿತರಾಗುತ್ತೀರಿ.

ಕಿಡ್ನಿ ಬೀನ್ಸ್ ನಲ್ಲಿ ಅನೇಕ ಆರೋಗ್ಯವರ್ಧಕ ಗುಣಗಳಿದ್ದು , ಇದನ್ನು ತಿಂದರೆ ಈ ಕೆಳಗಿನ ಪ್ರಮುಖ ಪ್ರಯೋಜನಗಳನ್ನು ಪಡೆಯಬಹುದು:

ಪೈಲ್ಸ್ ಗುಣಪಡಿಸುತ್ತದೆ

ಪೈಲ್ಸ್ ಗುಣಪಡಿಸುತ್ತದೆ

ಕಿಡ್ನಿ ಬೀನ್ಸ್, ಬ್ಲ್ಯಾಕ್ ಬೀನ್ಸ್ ಈ ರೀತಿಯ ಬೀನ್ಸ್ ಆಹಾರಗಳನ್ನು ತಿನ್ನಬೇಕು. ಈ ರೀತಿ ಮಾಡಿದರೆ ಪೈಲ್ಸ್ ನೈಸರ್ಗಿಕವಾಗಿ ಗುಣಮುಖವಾಗುವುದು.

ಪೊಟಾಷ್ಯಿಯಂ ಕೊರತೆ ಉಂಟಾಗುವುದಿಲ್ಲ

ಪೊಟಾಷ್ಯಿಯಂ ಕೊರತೆ ಉಂಟಾಗುವುದಿಲ್ಲ

ದೇಹದಲ್ಲಿ ಜೀವಕೋಶಗಳು ಉತ್ಪತ್ತಿಯಾಗಲು ಪೊಟ್ಯಾಷಿಯಂ ಬೇಕೇಬೇಕು. ಕಿಡ್ನಿ ಬೀನ್ಸ್ ಗಳಲ್ಲಿ ಪೊಟಾಷ್ಯಿಯಂ ಹೆಚ್ಚಾಗಿರುತ್ತದೆ. ಮಹಿಳೆಯರ ಮೂಳೆ ಗಟ್ಟಿಯಾಗುವಲ್ಲಿ, ಸ್ನಾಯುಗಳು ಹುರಿಗೊಳ್ಳುವಲ್ಲಿ ಮತ್ತು ನರಮಂಡಲ ಸರಿಯಾಗಿ ಕೆಲಸ ಮಾಡುವಲ್ಲಿ ಕಿಡ್ನಿ ಬೀನ್ಸ್ ಸಹಕರಿಸುತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ ಮೂತ್ರಪಿಂಡದಲ್ಲಿ ಕಲ್ಲುಗಳಾಗುವುದನ್ನು ಕಿಡ್ನಿ ಬೀನ್ಸ್ ಶೇ.65ರಷ್ಟು ತಡೆಯುತ್ತದೆ.

ಮುಟ್ಟಿನ ನೋವು ಕಡಿಮೆ ಮಾಡುತ್ತದೆ

ಮುಟ್ಟಿನ ನೋವು ಕಡಿಮೆ ಮಾಡುತ್ತದೆ

ಕೆಲವರಿಗೆ ಮುಟ್ಟಿನ ಸಮಸಯದಲ್ಲಿ ತುಂಬಾ ನೋವು ಕಾಣಿಸಿಕೊಳ್ಳುತ್ತದೆ. ಕಿಡ್ನಿ ಬೀನ್ಸ್ ಆ ನೋವನ್ನು ಕಡಿಮೆ ಮಾಡಿ ಆರೋಗ್ಯವನ್ನು ಕಾಪಾಡುತ್ತದೆ.

ಗರ್ಭಕೋಶದ ಕ್ಯಾನ್ಸರ್ ತಡೆಯಬಹುದು

ಗರ್ಭಕೋಶದ ಕ್ಯಾನ್ಸರ್ ತಡೆಯಬಹುದು

ಇದನ್ನು ನಿಯಮಿತವಾಗಿ ತಿಂದರೆ ಗರ್ಭಕೋಶದ ಕ್ಯಾನ್ಸರ್ ಹತ್ತಿರವೂ ಸುಳಿಯುವುದಿಲ್ಲ. ಮತ್ತೆ, ಹಸಿವನ್ನು ಇಂಗಿಸುತ್ತದೆ,

ಉಲ್ಲಾಸದಿಂದ ಇರುವಂತೆ ಮಾಡುತ್ತದೆ

ಉಲ್ಲಾಸದಿಂದ ಇರುವಂತೆ ಮಾಡುತ್ತದೆ

ನಿದ್ರಾಹೀನತೆಯನ್ನು ತೊಲಗಿಸುತ್ತದೆ, ಮನಸು ಉಲ್ಲಾಸವಾಗಿರುವಂತೆ ನೋಡಿಕೊಳ್ಳುತ್ತದೆ. ಇನ್ನೇನು ಬೇಕು?

ಮೆದುಳಿನ ಸಾಮರ್ಥ್ಯ ಹೆಚ್ಚಿಸುತ್ತದೆ

ಮೆದುಳಿನ ಸಾಮರ್ಥ್ಯ ಹೆಚ್ಚಿಸುತ್ತದೆ

ವಿಟಮಿನ್ ಬಿ ಮತ್ತು ಖನಿಜಾಂಶ ಅಧಿಕವಿರುವ ಆಹಾರಗಳನ್ನು ಹೆಚ್ಚಾಗಿ ಸೇವಿಸಬೇಕು. ಇದರಿಂದ ಓದಲು ಬೇಕಾದ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ನೀಡುತ್ತದೆ. ಕಿಡ್ನಿ ಬೀನ್ಸ್ ನಲ್ಲಿ ವಿಟಮಿನ್ ಬಿ ಅಂಶ ಸಾಕಷ್ಟು ಇದೆ.

ಕೂದಲಿನ ಆರೋಗ್ಯಕ್ಕೆ

ಕೂದಲಿನ ಆರೋಗ್ಯಕ್ಕೆ

ಕಿಡಿ ಬೀನ್ಸ್ ನಲ್ಲಿ ಕಬ್ಬಿಣದಂಶ, ಸತು ಮತ್ತು ವಿಟಮಿನ್ ಬಿ ಇರುವುದರಿಂದ ಕೂದಲು ಮತ್ತು ದೇಹದ ಆರೋಗ್ಯಕ್ಕೆ ಒಳ್ಳೆಯದು.

ಪುರುಷರಿಗೆ ಬೆಸ್ಟ್ ಫುಡ್

ಪುರುಷರಿಗೆ ಬೆಸ್ಟ್ ಫುಡ್

ಕಿಡ್ನಿ ಬೀನ್ಸ್ ಇದರಲ್ಲಿ ಪ್ರೊಟೀನ್ ಮತ್ತ ಸತುವಿನಂಶವಿದೆ. ಆದ್ದರಿಂದ ಇದು ಪುರುಷರಿಗೆ ಬೆಸ್ಟ್ ಆಹಾರವಾಗಿದೆ. ಪುರುಷ ಹಾರ್ಮೋನ್ ಕೊರತೆ ಇರುವವರು ಇದನ್ನು ತಿನ್ನುವುದು ಒಳ್ಳೆಯದು.

ಹೃದಯದ ಸ್ವಾಸ್ಥ್ಯಕ್ಕೆ

ಹೃದಯದ ಸ್ವಾಸ್ಥ್ಯಕ್ಕೆ

ಇದರಲ್ಲಿ ಅಧಿಕ ಮ್ಯಾಗ್ನಿಷಿಯಂ ಇರುವುದರಿಮದ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಿ ಹೃದಯದ ಸ್ವಾಸ್ಥ್ಯವನ್ನು ಹೆಚ್ಚಿಸುತ್ತದೆ.

English summary

Health Benefits Of Kidney Beans | Tips For Health | ಕಿಡ್ನಿ ಬೀನ್ಸ್ ನಲ್ಲಿರುವ ಆರೋಗ್ಯಕರ ಗುಣಗಳು | ಆರೋಗ್ಯಕ್ಕಾಗಿ ಕೆಲ ಸಲಹೆ

The health benefits of kidney beans are not just for a part of the body but improves the overall health of our body. The benefits of kidney beans definitely makes us include this pulse in our daily diet.
X
Desktop Bottom Promotion