For Quick Alerts
ALLOW NOTIFICATIONS  
For Daily Alerts

ಈ ಗುಣಗಳಿರುವುದು ಭಾರತದ ಸಂಬಾರಗಳಲ್ಲಿ ಮಾತ್ರ!

|

ಭಾರತದ ಸಂಬಾರ ಪದಾರ್ಥಗಳಿಗೆ ಅನೇಕ ಔಷಧೀಯ ಗುಣಗಳಿವೆ. ಆದ್ದರಿಂದಲೇ ಇದಕ್ಕೆ ವಿದೇಶಿ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯಿದೆ. ಈ ಸಂಬಾರ ಪದಾರ್ಥಗಳನ್ನು ಮಿತಿಯಲ್ಲಿ ಪ್ರತಿದಿನ ಅಡುಗೆಯಲ್ಲಿ ಬಳಸಿದರೆ ಅನೇಕ ಕಾಯಿಲೆಗಳನ್ನು ಬರುವುದನ್ನು ತಡೆಯುತ್ತದೆ.

ಆದ್ದರಿಂದಲೇ ಅಡುಗೆಯ ಸ್ವಾದವನ್ನು ಹೆಚ್ಚಿಸುವ ಈ ಸಂಬಾರ ಪದಾರ್ಥಗಳೂ ಆರೋಗ್ಯವನ್ನು ಹೆಚ್ಚಿಸುತ್ತದೆ. ಪ್ರತಿಯೊಂದು ಸಂಬಾರ ಪದಾರ್ಥವೂ ತನ್ನದೇ ಆದ ಗುಣವನ್ನು ಹೊಂದಿದ್ದು, ಅವುಗಳಲ್ಲಿರುವ ಔಷಧೀಯ ಗುಣಗಳಾವುವು ಎಂದು ನೋಡೋಣ ಬನ್ನಿ:

ಚಕ್ಕೆ

ಚಕ್ಕೆ

ಚಕ್ಕೆ ಇನ್ಸುಲಿನ್ ಉತ್ಪತ್ತಿಗೆ ಸಹಾಯ ಮಾಡುತ್ತದೆ, ದೇಹದಲ್ಲಿ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಇದಲ್ಲದೆ ಅಜೀರ್ಣ, ಶೀತ, ಬೇಧಿ, ಮುಟ್ಟಿನ ಸಮಯದಲ್ಲಿ ಕಂಡು ಬರುವ ಮಾನಸಿಕ ಒತ್ತಡ, ಕಡಿಮೆ ರಕ್ತ ಸಂಚಾರ ಈ ರೀತಿಯ ಸಮಸ್ಯೆಗಳನ್ನು ಗುಣಪಡಿಸುತ್ತದೆ.

ಲವಂಗ

ಲವಂಗ

ಲವಂಗ ಹಲ್ಲಿನ ಸಮಸ್ಯೆ ಬರದಂತೆ ನೋಡಿಕೊಳ್ಳುತ್ತದೆ, ಹಲ್ಲು ನೋವು ಕಾಣಿಸಿದಾಗ ಆ ಭಾಗದಲ್ಲಿ ಇಟ್ಟರೆ ನೋವು ಕಡಿಮೆಯಾಗುವುದು. ವಾಂತಿಯನ್ನು ನಿಲ್ಲಿಸಲು ಇದನ್ನು ತಿಂದರೆ ಸಾಕು. ಬೇಧಿಯನ್ನು ತಡೆಗಟ್ಟುತ್ತದೆ, ಅಜೀರ್ಣ ಸಮಸ್ಯೆಯನ್ನು ಪರಿಹರಿಸುತ್ತದೆ.

ಜೀರಿಗೆ

ಜೀರಿಗೆ

ಜೀರಿಗೆ ರಕ್ತ ಜೀನತೆ ಸಮಸ್ಯೆಯನ್ನು ಪರಿಹರಿಸುತ್ತದೆ. ಪ್ರತೀದಿನ ಜೀರಿಗೆ ನೀರನ್ನು ಕುಡಿದರೆ ಅನಿಯಮಿತ ಮುಟ್ಟನ್ನು ಸರಿ ಪಡಿಸಬಹುದು. ದೇಹಕ್ಕೆ ಕಬ್ಬಿಣದಂಶವನ್ನು ನೀಡುತ್ತದೆ, ಇದರಲ್ಲಿರುವ ಮ್ಯಾಗ್ನಿಸೆ ದೇಹವು ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಇದು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುವಂತೆ ಮಾಡುತ್ತದೆ.

ಏಲಕ್ಕಿ

ಏಲಕ್ಕಿ

ಏಲಕ್ಕಿ ಗಂಟಲಿನ ಸಮಸ್ಯೆಯನ್ನು ಗುಣ ಪಡಿಸುತ್ತದೆ, ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು. ಉಸಿರಾಟದ ತೊಂದರೆ ಇರುವವರು ಇದನ್ನು ತಿಂದರೆ ಅಧಿಕ ಪ್ರಯೋಜನವನ್ನು ಪಡೆಯಬಹುದು.

ಕೇಸರಿ

ಕೇಸರಿ

ಕೇಸರಿ ಖಿನ್ನತೆಯಿಂದ ಹೊರಬರುವಂತೆ ಮಾಡುತ್ತದೆ. ಇದರಲ್ಲಿ antioxidants ಅಧಿಕವಿದೆ, ಕಣ್ಣಿಗೆ ತುಂಬಾ ಒಳ್ಳೆಯದು, ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಜಾಯಿಕಾಯಿ

ಜಾಯಿಕಾಯಿ

ಜಾಯಿಕಾಯಿ ಕೂಡ ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತದೆ, ಹೊಟ್ಟೆ ಹಸಿವು ಸರಿಯಾದ ರೀತಿಯಲ್ಲಿ ಆಗುವಂತೆ ಮಾಡುತ್ತದೆ. ನಿಮ್ಮ ಸ್ನಾಯುಗಳಲ್ಲಿರುವ ಒತ್ತಡವನ್ನು ಕಡಿಮೆ ಮಾಡುತ್ತದೆ. ಇದರ ಬೀಜವನ್ನು ಔಷಧೀಗಳಲ್ಲಿ ಉಪಯೋಗಿಸುತ್ತಾರೆ.

 ಕರಿ ಮೆಣಸಿನ ಪುಡಿ

ಕರಿ ಮೆಣಸಿನ ಪುಡಿ

ಕರಿಮೆಣಸು ದೇಹದಲ್ಲಿ ಜೀರ್ಣಕ್ರಿಯೆಗೆ ಅವಶ್ಯಕವಾದ ಹೈಡ್ರೋಕ್ಲೋರಿಕ್ ಆಸಿಡ್ ಉತ್ಪತ್ತಿಯನ್ನು ಹೆಚ್ಚಿಸುತ್ತದೆ, ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ, ದೇಹಕ್ಕೆ ಅಗತ್ಯವಾದ ಕಬ್ಬಿಣದಂಶವನ್ನು ಕೊಡುತ್ತದೆ.

ಇಂಗು

ಇಂಗು

ಹೊಟ್ಟೆ ನೋವನ್ನು ಕಡಿಮೆ ಮಾಡುತ್ತದೆ, ಉಸಿರಾಟದ ತೊಂದರೆಯನ್ನು ಕಡಿಮೆ ಮಾಡುತ್ತದೆ, ಹೆರಿಗೆ ನೋವು, ಮುಟ್ಟಿನ ಸಮಯದಲ್ಲಿ ಕಂಡ ಬರುವ ನೋವನ್ನು ಕಮ್ಮಿ ಮಾಡುತ್ತದೆ. ನಪುಂಸಕತ್ವ ನಿವಾರಿಸುವ ಚಿಕಿತ್ಸೆಯಲ್ಲಿ ಇದನ್ನು ಬಳಸುತ್ತಾರೆ.

English summary

Health benefits of Indian spices | Tips For Health | ಭಾರತದ ಸಂಬಾರ ಪದಾರ್ಥಗಳಲ್ಲಿರುವ ವಿಶೇಷತೆ | ಆರೋಗ್ಯಕ್ಕಾಗಿ ಕೆಲ ಸಲಹೆಗಳು

If spices are consumed in moderation you can derive health benefits, but an overdose of any spice can lead to indigestion or even ulcers.Today we list out other Indian spices that are healthy and are kept under wraps.
X
Desktop Bottom Promotion