For Quick Alerts
ALLOW NOTIFICATIONS  
For Daily Alerts

ಮೀನು ತಿಂದರೆ ದೊರೆಯುವ ಪ್ರಮುಖ ಗುಣಗಳು

|

ಮೀನು ಜಗತ್ತಿನ ನಾಲ್ಕನೇ ಮೂರು ಭಾಗ ಜನರ ಪ್ರಮುಖ ಆಹಾರವಾಗಿದೆ. ಸಮುದ್ರಾಹಾರಗಳಲ್ಲಿ ಮೀನನ್ನು ಅತ್ಯಧಿಕವಾಗಿ ಸೇವಿಸಲಾಗುವುದು. ಮೀನು ತಿಂದರೆ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಅದಕ್ಕೆ ಕಾರಣ ಇದರಲ್ಲಿರುವ ಒಮೆಗಾ 3 ಕೊಬ್ಬಿನಂಶ. ಈ ಒಮೆಗಾ 3 ಕೊಬ್ಬಿನಂಶ ಇರುವ ಆಹಾರಗಳು ತುಂಬಾ ವಿರಳ. ಮೀನಿನಲ್ಲಿ ಮಾತ್ರ ಯಥೇಚ್ಛವಾಗಿ ಕಂಡು ಬರುತ್ತದೆ.

ನಮ್ಮ ದೇಹಕ್ಕೆ ಈ ಕೊಬ್ಬಿನಂಶ ಅತ್ಯವಶ್ಯಕ. ಸಸ್ಯಾಹಾರಿಗಳಾದರೆ ದೇಹದಲ್ಲಿ ಒಮೆಗಾ 3 ಕೊಬ್ಬಿನಂಶ ಕಡಿಮೆಯಾಗದಿರಲು ಅಗಸೆದ ಬೀಜಗಳನ್ನು ತಿನ್ನುವುದು ಒಳ್ಳೆಯದು. ಇಲ್ಲಿ ನಾವು ಮೀನಿನಲ್ಲಿರುವ ಒಮೆಗಾ 3 ಕೊಬ್ಬಿನಂಶ ನಮ್ಮ ಆರೋಗ್ಯ ಸಂರಕ್ಷಣೆಯಲ್ಲಿ ಹೇಗೆ ಸಹಾಯ ಮಾಡುತ್ತದೆ ಎಂದು ನೋಡೋಣ ಬನ್ನಿ:

1. ಹೃದಯದ ಸ್ವಾಸ್ಥ್ಯ

1. ಹೃದಯದ ಸ್ವಾಸ್ಥ್ಯ

ಮೀನಿನಲ್ಲಿ ಇರುವ ಒಮೆಗಾ 3 ಅಂಶ ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ. ಇದು ದೇಹದಲ್ಲಿ ಒಳ್ಳೆಯ ಕೊಬ್ಬಿನಂಶವನ್ನು ಹೆಚ್ಚು ಮಾಡುತ್ತದೆ.

2. ರಕ್ತದೊತ್ತಡ

2. ರಕ್ತದೊತ್ತಡ

ಮೀನಿನ ಎಣ್ಣೆ ಅಧಿಕ ರಕ್ತದೊತ್ತಡವನ್ನು ತಡೆಗಟ್ಟುತ್ತದೆ. ದೇಹದಲ್ಲಿ ರಕ್ತ ಸಂಚಲನಕ್ಕೆ ಸಹಾಯಮಾಡುವುದು.

 3. ಬೊಜ್ಜು ಕರಗಿಸುತ್ತದೆ

3. ಬೊಜ್ಜು ಕರಗಿಸುತ್ತದೆ

ಸಾಲಾಮೋನ್ ಮೀನು ಮತ್ತು ನಿಯಮಿತವಾದ ವ್ಯಾಯಾಮ ಮಾಡಿದರೆ ಬೇಗನೆ ತೂಕ ಕಡಿಮೆಯಾಗುವುದು.

 4. ಕ್ಯಾನ್ಸರ್ ಕಡಿಮೆ ಮಾಡುತ್ತೆ

4. ಕ್ಯಾನ್ಸರ್ ಕಡಿಮೆ ಮಾಡುತ್ತೆ

ಮೀನಿನಲ್ಲಿರುವ ಒಮೆಗಾ 3 ಸ್ತನ, ಕರುಳಿನ ಕ್ಯಾನ್ಸರ್ ಬರುವುದನ್ನು ತಡೆಯುವಲ್ಲಿ ಪರಿಣಾಮಕಾರಿಯಾಗಿದೆ.

5. ನೋವು ಮತ್ತು ಉರಿ ಕಡಿಮೆ ಮಾಡುತ್ತೆ

5. ನೋವು ಮತ್ತು ಉರಿ ಕಡಿಮೆ ಮಾಡುತ್ತೆ

ಕೈಕಾಲುಗಳಲ್ಲಿ ನೋವು ಮತ್ತು ಉರಿಯಿದ್ದರೆ ಮೀನಿನ ಎಣ್ಣೆ ಹಚ್ಚಿದರೆ ನೋವು ಉಂಟಾಗುವುದಿಲ್ಲ.

6. ಕಣ್ಣಿನ ದೃಷ್ಟಿ ಹೆಚ್ಚುವುದು

6. ಕಣ್ಣಿನ ದೃಷ್ಟಿ ಹೆಚ್ಚುವುದು

ಮೀನು ಸೇವಿಸುವುದರಿಂದ ದೃಷ್ಟಿ ಸಾಮರ್ಥ್ಯ ಹೆಚ್ಚುವುದು. ಒಮೆಗಾ 3 ರಕ್ತಕಣಗಳ ಉತ್ಪತ್ತಿಯನ್ನು ಹೆಚ್ಚಿಸುತ್ತದೆ.

7. ತ್ವಚೆ ಆರೈಕೆ

7. ತ್ವಚೆ ಆರೈಕೆ

ಮೀನಿನ ಆಹಾರ ತಿನ್ನುವವರಿಗೆ ಬೇಗನೆ ನೆರಿಗೆ ಬರುವುದಿಲ್ಲ. ತ್ವಚೆಯಲ್ಲಿ ಕೊಲೆಜಿನ್ ಅಂಶ ಕಡಿಮೆಯಾಗುತ್ತದೆ.

8. ಖಿನ್ನತೆ ಹೋಗಲಾಡಿಸುವುದು

8. ಖಿನ್ನತೆ ಹೋಗಲಾಡಿಸುವುದು

ಇದರಲ್ಲಿರುವ ಕೊಬ್ಬಿನಂಶ ಖಿನ್ನತೆ ಮತ್ತು ಮಾನಸಿಕ ಒತ್ತಡವನ್ನು ಹೋಗಲಾಡಿಸುತ್ತದೆ.

9. ಮಧುಮೇಹಿಗಳಿಗೆ ಬೆಸ್ಟ್ ಫುಡ್

9. ಮಧುಮೇಹಿಗಳಿಗೆ ಬೆಸ್ಟ್ ಫುಡ್

ಸಾರು ಮಾಡಿದ ಮೀನು ತಿಂದರೆ ಮಧುಮೇಹಿಗಳು ದೇಹದಲ್ಲಿ ಕೊಲೆಸ್ಟ್ರಾಲ್ ಮತ್ತು ಸಕ್ಕರೆಯಂಶವನ್ನು ನಿಯಂತ್ರಣದಲ್ಲಿಡಬಹುದು.

English summary

Health Benefits Of Fish

One of the main foods which should be included in your daily diet is fish. It is this healthy food which has a lot of proteins, nutrients and different sources of Vitamins which is good for ones health. It is said that a daily or weekly consumption of fish can help to make you feel active and ward off all sorts of diseases.
X
Desktop Bottom Promotion