For Quick Alerts
ALLOW NOTIFICATIONS  
For Daily Alerts

ಈ ಹಣ್ಣನ್ನು ತಿನ್ನಲು ಮಿಸ್ ಮಾಡದಿರಿ

By Super
|

ಅಂಜೂರದ್ಲಲಿರುವ ಆರೋಗ್ಯಕರ ಗುಣಗಳನ್ನು ನೋಡುವಾಗ ಪ್ರತಿಯೊಬ್ಬರು ಇದನ್ನು ತಿನ್ನಲೇಬೇಕೆಂದು ಸಲಹೆ ನೀಡುವುದು ತಪ್ಪಲ್ಲ ಎಂದೆನಿಸುತ್ತದೆ. ಇದರಲ್ಲಿ ಖನಿಜಾಂಶಗಳು ಹಾಗೂ ವಿಟಮಿನ್ ಗಳು ಹೇರಳವಾಗಿವೆ.

ಇದರಲ್ಲಿರುವ ವಿಟಮಿನ್ ಎ, ವಿಟಮಿನ್ ಬಿ1, ವಿಟಮಿನ್ ಬಿ2, ಕ್ಯಾಲ್ಸಿಯಂ, ಕಬ್ಬಿಣದಂಶ, ರಂಜಕದ ಅಂಶ, ಸೋಡಿಯಂ,ಕ್ಲೋರೀನ್ ಈ ಅಂಶಗಳು ಈ ಕೆಳಗಿನ ಕಾಯಿಲೆಗಳನ್ನು ತಡೆಗಟ್ಟುವಲ್ಲಿ ಸಹಕಾರಿಯಾಗಿದೆ. ಅಂಜೂರದ ಆರೋಗ್ಯಕರ ಗುಣಗಳು

ಮಲಬದ್ಧತೆ

ಮಲಬದ್ಧತೆ

ಒಣಗಿಸಿದ ಅಥವಾ ತಾಜಾ ಅಂಜೂರಗಳು ಪ್ರಾಕೃತಿಕ ವಿರೇಚಕಗಳಾಗಿವೆ (laxatives). ಇವು ಸೇವಿಸಲು ಯೋಗ್ಯವಾದ ನಾರಿನಂಶದಿಂದ ಸಮೃದ್ಧವಾಗಿದ್ದು, ಆರೋಗ್ಯಕರವಾದ ಮಲವಿಸರ್ಜನೆಯಲ್ಲಿ ನೆರವಾಗುತ್ತವೆ. ಈ ಹಣ್ಣಿನ ಪ್ರತೀ 3 ಗ್ರಾಂ, 5 ಗ್ರಾಂ ನಷ್ಟು ನಾರಿನಿಂದ ಕೂಡಿದೆ. ಈ ಹಣ್ಣುಗಳ ಸೇವನೆಯು ಮಲಬದ್ಧತೆಯನ್ನು ತಡೆಗಟ್ಟುವಲ್ಲಿ ಬಹಳ ಉಪಯುಕ್ತವಾಗಿದೆ.

ದೇಹದ ತೂಕ ಕಡಿಮೆಯಾಗುವುದು

ದೇಹದ ತೂಕ ಕಡಿಮೆಯಾಗುವುದು

ಅಂಜೂರಗಳು ಸೇವಿಸಲು ಯೋಗ್ಯವಾದ ನಾರಿನಂಶದಿಂದ ಸಮೃದ್ಧವಾಗಿವೆ. ನಾರು ಮತ್ತು ನಾರಿನಂಶವುಳ್ಳ ಆಹಾರ ಪದಾರ್ಥಗಳ ಒಂದು ಸಕಾರಾತ್ಮಕ ಅಂಶವೇನೆoದರೆ, ದೇಹ ತೂಕದ ನಿರ್ವಹಣೆ. ನಾರಿನಂಶವುಳ್ಳ ಆಹಾರವನ್ನು ಹೆಚ್ಚು ಉಪಯೋಗಿಸಿ, ಅದೇ ಕಾಲಕ್ಕೆ ಕ್ಯಾಲರಿಗಳ ಪ್ರಮಾಣವನ್ನು ಗಣನೀಯವಾಗಿ ಕಡಿಮೆ ಹೊಂದಿರುವ ಇತರೆ ಪೂರಕ ಆಹಾರಗಳನ್ನು ಸೇವಿಸಿದ ಮಹಿಳೆಯರ ಹಸಿವು ಮತ್ತು ಪಾಚನ ಸಾಮರ್ಥ್ಯದಲ್ಲಿ ಯಾವುದೇ ಬದಲಾವಣೆಯು ಕಂಡುಬಂದಿಲ್ಲ. ಅಂಜೂರವು ಸೇವಿಸಲು ಯೋಗ್ಯವಾದ ನಾರಿನಂಶದ ಅತ್ಯುತ್ತಮ ಮೂಲವಾಗಿದೆ. ದೇಹದ ಅತಿಯಾದ ತೂಕವನ್ನು ಕಳೆದುಕೊಳ್ಳಲು ಅಂಜೂರವು ಪರಿಣಾಮಕಾರೀ ಆಹಾರವಾಗಿದೆ.

ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ

ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ

ಅಂಜೂರವು ನಾರಿನಂಶದ ಅತ್ಯುತ್ತಮ ಮೂಲವಾಗಿವೆ. ಇದು pectin ಎಂದು ಕರೆಯಲ್ಪಡುವ, ಕರಗುವ ನಾರಿನಂಶವನ್ನು ಹೊಂದಿದೆ. ಈ pectin ಜೀರ್ಣಾಂಗವ್ಯೂಹದ ಮೂಲಕ ದೇಹದಲ್ಲಿ ಸಾಗಿ ನಿರುಪಯುಕ್ತ cholesterol ಅನ್ನು ದೇಹದಿಂದ ಹೊರದಬ್ಬುತ್ತದೆ. ಅದ್ದರಿಂದ, ಅಂಜೂರದ ನಿಯಮಿತ ಸೇವನೆಯು ನಿಮ್ಮ ಶರೀರದ ಕೊಲೆಸ್ಟರಾಲ್ ಅನ್ನು ಎಲ್ಲಾ ನಿಯತ ಮಾರ್ಗಗಳಿoದಲೂ ಕೂಡ ಕಡಿತಗೊಳಿಸಲು ಸಹಾಯಕವಾಗಿದೆ.

ಹೃದಯದ ಸ್ವಾಸ್ಥ್ಯಕ್ಕೆ

ಹೃದಯದ ಸ್ವಾಸ್ಥ್ಯಕ್ಕೆ

ಅಂಜೂರವು phenol ಮತ್ತು omega-6 ಕೊಬ್ಬಿನ ಆಮ್ಲಗಳನ್ನು ದಂಡಿಯಾಗಿ ಒಳಗೊಂಡಿದೆ. ಇವುಗಳು ಪ್ರಾಕೃತಿಕ ಹೃದಯ ಆರೋಗ್ಯವರ್ಧಕಗಳಾಗಿವೆ. ಅದ್ದರಿಂದ, ಇವು coronary heart disease ಅನ್ನು ತಡೆಗಟ್ಟುವ ಸಾಮರ್ಥ್ಯ ಹೊಂದಿವೆ.

ಕರುಳಿನ ಕ್ಯಾನ್ಸರ್

ಕರುಳಿನ ಕ್ಯಾನ್ಸರ್

ಅಂಜೂರದಲ್ಲಿರುವ ನಾರಿನಂಶವು, ಶರೀರದಲ್ಲಿರುವ ಕ್ಯಾನ್ಸರ್ ಕಾರಕ ರಾಸಾಯನಿಕಗಳನ್ನು ಸ್ವಚ್ಚಗೊಳಿಸುತ್ತವೆ ಎಂಬ ನಂಬಿಕೆಯಿದ್ದು, ಅದ್ದರಿಂದ, ಅಂಜೂರವು ವಿವಿಧ ಕ್ಯಾನ್ಸರ್ ಗಳ ಅಪಾಯವನ್ನು ಕಡಿಮೆ ಮಾಡುವುದರಲ್ಲಿ ಪೂರಕವಾಗಿದೆ. ವಿಶೇಷವಾಗಿ, ಅಂಜೂರವು ಕರುಳಿನ ಕ್ಯಾನ್ಸರ್ ಅನ್ನು ತಡೆಯುವಲ್ಲಿ ಒಳ್ಳೆಯದು.

ರಜೋನಿವೃತ್ತಿ ಕಾಲದ ಸ್ತನ ಕ್ಯಾನ್ಸರ್

ರಜೋನಿವೃತ್ತಿ ಕಾಲದ ಸ್ತನ ಕ್ಯಾನ್ಸರ್

ಅಂಜೂರದಲ್ಲಿರುವ ನಾರಿನಂಶವು ಸ್ತನ ಕ್ಯಾನ್ಸರ್ ನ ವಿರುದ್ಧ ರಕ್ಷಣೆ ನೀಡುತ್ತದೆ. ಸುಮಾರು 51,823 ರಜೋನಿವೃತ್ತಿಯ (menopausal) ಅಂಚಿನಲ್ಲಿದ್ದ ಮಹಿಳೆಯರು ಸರಾಸರಿ 8.3 ವರ್ಷಗಳ ಕಾಲ, ಸ್ತನ ಕ್ಯಾನ್ಸರ್ ನ ಅಪಾಯದ ಶೇ. 34 ರಷ್ಟು ಕಡಿತವನ್ನು ಹೊಂದಿದ್ದರು. ಈ ಕಡಿತವು ತೌಲನಿಕವಾಗಿ ಹೆಚ್ಚು ನಾರಿನoಶವುಳ್ಳ ಹಣ್ಣನ್ನು ಸೇವಿಸುವ ಮಹಿಳೆಯರಲ್ಲಿ ಕಂಡು ಬಂದಿತ್ತು. ಜೊತೆಗೆ, ಹಾರ್ಮೋನ್ ಬದಲೀ ಚಿಕಿತ್ಸೆಗೆ ಒಳಗಾಗಿ ಹೆಚ್ಚು ಕಾಳುಯುಕ್ತ ನಾರಿನಂಶವನ್ನು ಸೇವಿಸಿದವರು, ಕಡಿಮೆ ನಾರಿನoಶವನ್ನು ಸೇವಿಸಿದವರಿಗಿಂತ ಶೇ. 50 ರಷ್ಟು ಸ್ತನ ಕ್ಯಾನ್ಸರ್ ನ ಅಪಾಯವನ್ನು ಕಡಿಮೆ ಹೊಂದಿದ್ದಾರೆ. ನಾರಿನಂಶದಿಂದ ಸಮೃದ್ಧವಾದ ಹಣ್ಣುಗಳೆಂದರೆ ಸೇಬು, ಖರ್ಜೂರ, ಅಂಜೂರ, pears, ಮತ್ತು prune ಗಳು.

ಮಧುಮೇಹ

ಮಧುಮೇಹ

ಮಧುಮೇಹದಿಂದ ಬಳಲುವ ಜನರು ಅತಿ ಹೆಚ್ಚು ನಾರಿನಂಶದಿಂದ ಕೂಡಿದ ಆಹಾರವನ್ನು ಸೇವಿಸಬೇಕು. ಅಂಜೂರ ಸಸ್ಯದ ಎಲೆಗಳು ಸೇವನೆಗೆ ಯೋಗ್ಯವಾಗಿದ್ದು, ಅವು ಸಮೃದ್ಧ ನಾರನ್ನು ಹೊಂದಿವೆ. ಅಂಜೂರದ ಎಲೆಗಳು ಮಧುಮೇಹ ಪ್ರತಿಬಂಧಕ ಗುಣಗಳನ್ನು ಹೊಂದಿದ್ದು, ಇವು ಚುಚ್ಚುಮದ್ದಿನ ಮೂಲಕ ಇನ್ಸುಲಿನ್ ಅನ್ನು ತೆಗೆದುಕೊಳ್ಳುವ ಮಧುಮೇಹಿಗಳ ಇನ್ಸುಲಿನ್ ನ ಅವಶ್ಯಕತೆಯನ್ನು ಕಡಿಮೆ ಮಾಡುತ್ತವೆ. ಮಧುಮೇಹವನ್ನು ಕಡಿಮೆಮಾಡುವುದಕ್ಕ್ಕಾಗಿ ಮತ್ತು ಇನ್ಸುಲಿನ್ ಚುಚ್ಚು ಮದ್ದುಗಳ ಸಂಖ್ಯೆಯನ್ನು ತಗ್ಗಿಸುವುದಕ್ಕಾಗಿ, ಅಂಜೂರದ ಎಲೆಗಳಿಂದ ಪಡೆದ ದ್ರವಾoಶವನ್ನು ಬೆಳಗಿನ ಉಪಹಾರಕ್ಕೆ ಸೇರಿಸಲಾಗುತ್ತದೆ.

ರಕ್ತದೊತ್ತಡ

ರಕ್ತದೊತ್ತಡ

ಉಪ್ಪಿನ ರೂಪದಲ್ಲಿ ಸೋಡಿಯಂ ಅನ್ನು ಹೆಚ್ಚು ಸೇವಿಸುವವರು ಮತ್ತು ಕಡಿಮೆ ಪೊಟ್ಯಾಸಿಯಂ ಯುಕ್ತ ಆಹಾರವನ್ನು ಸೇವಿಸುವವರು, ರಕ್ತದೊತ್ತಡಕ್ಕೆ ತುತ್ತಾಗುವರು. ಅಂಜೂರವು ಪೊಟ್ಯಾಸಿಯಂ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿದ್ದು, ಕಡಿಮೆ ಸೋಡಿಯಂ ಅನ್ನು ಹೊಂದಿದೆ. ಅದ್ದರಿಂದ, ಅಂಜೂರವು ರಕ್ತದೊತ್ತಡದಿಂದ ಬಿಡುಗಡೆ ಹೊಂದಲು ಸಹಕಾರಿಯಾಗಿದೆ.

ಲೈಂಗಿಕ ದೌರ್ಬಲ್ಯ

ಲೈಂಗಿಕ ದೌರ್ಬಲ್ಯ

ಲೈಂಗಿಕ ದೌರ್ಬಲ್ಯವನ್ನು ಕಡಿಮೆ ಮಾಡುವ ಕಾರಣಕ್ಕಾಗಿ ಅಂಜೂರವು ಪ್ರಸಿದ್ಧ. ತಡರಾತ್ರಿ 2 ರಿಂದ 3 ಅಂಜೂರಗಳನ್ನು ಹಾಲಿನಲ್ಲಿ ಸೋಸಿ, ಮರುದಿನ ಬೆಳಗ್ಗೆ ಅವನ್ನು ಸೇವಿಸುವುದರಿಂದ ಲೈಂಗಿಕ ಶಕ್ತಿಯ ವರ್ಧನೆಯಾಗುತ್ತದೆ. ಇದು ತೂಕದ ಗಳಿಕೆಯಲ್ಲಿಯೂ ಸಹಕಾರಿಯಾಗಿರುವುದರಿಂದ, ಇದರ ಸೇವನೆಯು ಲೈಂಗಿಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ.

ಮೂಲವ್ಯಾಧಿ

ಮೂಲವ್ಯಾಧಿ

ಅಂಜೂರವು ಜೀರ್ಣಾಂಗವ್ಯೂಹಕ್ಕೆ ಪರಿಣಾಮಕಾರಿಯಾಗಿದೆ. ಇದು ಉತ್ತಮ ಪಚನವನ್ನು ಉಂಟು ಮಾಡುವುದರ ಮೂಲಕ ದೇಹದ ಚಯಾಪಚಯವನ್ನು ಉತ್ತಮಗೊಳಿಸುತ್ತದೆ. ಅಂಜೂರದ ದಿನನಿತ್ಯದ ಸೇವನೆಯು ಮೂಲವ್ಯಾಧಿಯಿಂದ ಬಳಲುವರಿಗೆ ರಾಮಬಾಣದಂತೆ ಕೆಲಸ ಮಾಡುತ್ತದೆ.

ಮೂತ್ರಪಿಂಡದ (kidney) ಸಮಸ್ಯೆ

ಮೂತ್ರಪಿಂಡದ (kidney) ಸಮಸ್ಯೆ

ಅಂಜೂರವು ಸಾಕಷ್ಟು ಪ್ರಮಾಣದಲ್ಲಿ oxalate ಗಳನ್ನು ಹೊಂದಿದೆ. ಅದ್ದರಿಂದ, ಮೂತ್ರಪಿಂಡಕ್ಕೆ ಸಂಬಂಧಿಸಿದ ಅಥವಾ ಫ್ಲೀಹದ (gall bladder) ಸಮಸ್ಯೆಯಿಂದ ನೀವು ಬಳಲುತ್ತಿರುವಿರಾದರೆ, ನೀವು ಅಂಜೂರವನ್ನು ಸೇವಿಸಕೂಡದು. ಏಕೆಂದರೆ ಇದು beverages ಅನ್ನು ಉಂಟು ಮಾಡುತ್ತದೆ. ಅದ್ದರಿಂದ, ಮೂತ್ರಪಿಂಡ ಸಮಸ್ಯೆಯಿರುವವರು ಅಂಜೂರದ ಸೇವನೆಯನ್ನು ವರ್ಜಿಸಿರಿ.

English summary

Health Benefits Of Figs

Fig is naturally rich in health benefiting phyto-nutrients, anti-oxidants vitamins and minerals. Dried figs contains concentrated source of minerals and vitamins.
Story first published: Saturday, September 7, 2013, 16:54 [IST]
X
Desktop Bottom Promotion