For Quick Alerts
ALLOW NOTIFICATIONS  
For Daily Alerts

ವೀಳ್ಯದ ಎಲೆ ತಿಂದರೆ ಆರೋಗ್ಯಕ್ಕಾಗುವ ಲಾಭ

By Super
|

ವೀಳ್ಯದ ಬಳ್ಳಿ ಬೇರು ರಹಿತ ಅನೇಕ ಸಣ್ಣ ಸಣ್ಣ ಬಳ್ಳಿ ಒಳಗೊಂಡ ಒಂದು ದೀರ್ಘಕಾಲಿಕ ಸಸ್ಯ. ವೀಳ್ಯದ ಎಲೆಯ ಬಳಕೆ 2000 ವರ್ಷಗಳ ಹಿಂದಿನ ಇತಿಹಾಸವನ್ನು ಹೊಂದಿದ್ದು ಅತ್ಯಂತ ಪುರಾತನ ಐತಿಹಾಸಿಕ ಪುಸ್ತಕವಾದ ಶ್ರೀಲಂಕಾದ ಮಹಾವಸ್ಮ (ಈ ಪುಸ್ತಕವು ವಿಶ್ವದ ಅತ್ಯಂತ ಹಳೆಯ ಭಾಷೆ ಪಾಳಿ ಭಾಷೆಯಲ್ಲಿದೆ )ಎಂಬ ಪುಸ್ತಕದಲ್ಲಿ ಇದರ ಉಲ್ಲೇಖವನ್ನು ಕಾಣಬಹುದು.ಭಾರತೀಯರು ಅಡಿಕೆ ಮತ್ತು ವೀಳ್ಯದ ಎಲೆಯನ್ನು 'ಪಾನ್ ಸುಪಾರಿ' ಎಂದು ಅತಿಥಿಗಳಿಗೆ ನೀಡುವ ಸೌಜನ್ಯ ಬೆಳೆಸಿಕೊಂಡು ಬಂದಿದೆ.

ವೀಳ್ಯದ ಎಲೆಗೆ ಭಾರತೀಯ ಸಂಸ್ಕೃತಿಯಲ್ಲಿ ಹೆಚ್ಚಿನ ಸ್ಥಾನಮಾನ ನೀಡಲಾಗಿದೆ.ಪ್ರತಿಯೊಂದು ಶುಭಕಾರ್ಯಕ್ಕೂ ವೀಳ್ಯದ ಎಲೆ ಇರಲೇಬೇಕು.ಹಬ್ಬ ಹರಿದಿನಗಳಲ್ಲಿ ಅಥವಾ ಮನೆಗೆ ಬಂದವರಿಗೆ ಉಡುಗೊರೆ ಕೊಡುವಾಗ ಜೊತೆಗೆ ವೀಳ್ಯದ ಎಲೆ ಶುಭ ಹಾರೈಸುವ ಸಲುವಾಗಿ ಕೊಡಲಾಗುತ್ತದೆ.ಭರ್ಜರಿ ಊಟದ ನಂತರ ವೀಳ್ಯದ ಎಲೆಯೊಂದಿಗೆ ಅಡಿಕೆ ಬೆರೆಸಿ ತಿನ್ನುವುದು ರೂಢಿಗಳಲ್ಲಿ ಬಂದಿದೆ.ಇದನ್ನು ತಿಂದಿರುವುದನ್ನು ಸುಲಭವಾಗಿ ಜೀರ್ಣವಾಗುತ್ತದೆ ಎಂಬುದರ ಜೊತೆಗೆ ಏನೇಕ ಔಷಧೀಯ ಗುಣಗಳು ಈ ಎಲೆಯಲ್ಲಿವೆ ಎಂಬುದನ್ನು ತಿಳಿದುಕೊಳ್ಳಲೇಬೇಕು.

ಪ್ರಾಚೀನ ಕಾಲದಿಂದಲೂ ವೀಳ್ಯದ ಎಲೆಯನ್ನು ಸುವಾಸನಾ ಉತ್ತೇಜಕ ಮತ್ತು ಜಠರವಾಯು ವಿರೋಧಿಯಾಗಿ ಬಳಸಲಾಗುತ್ತಿದೆ.ಇದು ರಕ್ತ ಸ್ರಾವ ಅಥವಾ ಇತರ ಸ್ರವಿಸುವಿಕೆ ತಡೆಯುತ್ತದೆ ಜೊತೆಗೆ ಕಾಮೋದ್ದೀಪಕವಾಗಿ ಕೂಡ ಇದನ್ನು ಬಳಸಲಾಗುತ್ತದೆ. ಜೊತೆಗೆ ಇದನ್ನು ಸಾಮಾನ್ಯ ಮನೆ ಮದ್ದಾಗಿ ಕೂಡ ಬಳಸಬಹುದು.

ವೀಳ್ಯದ ಎಲೆಯಿಂದ ಆರೋಗ್ಯಕ್ಕೆ ಆಗುವ ಅನುಕೂಲಗಳ ಬಗ್ಗೆ ಈ ಕೆಳಗೆ ಮಾಹಿತಿ ನೀಡಲಾಗಿದೆ. ಓದಿ ನೋಡಿ.ವೀಳ್ಯದ ಎಲೆಯಿಂದ ಮಾಡಬಹುದಾದ ಮನೆ ಮದ್ದಿನ ಬಗ್ಗೆ ತಿಳಿದುಕೊಳ್ಳಿ.

*ಮೂತ್ರ ವಿಸರ್ಜನೆಗೆ ತೊಂದರೆಯಾದಾಗ

*ಮೂತ್ರ ವಿಸರ್ಜನೆಗೆ ತೊಂದರೆಯಾದಾಗ

ವೀಳ್ಯದ ಎಲೆಯ ರಸವನ್ನು ಹಾಲಿನೊಂದಿಗೆ ಬೆರೆಸಿ ಸೇವಿಸಿದಾಗ ಮೂತ್ರಕ್ಕೆ ಸಂಬಂಧ ಪಟ್ಟ ಸಮಸ್ಯೆಗಳಿಗೆ ಪರಿಹಾರ ದೊರಕುತ್ತದೆ.

*ಉತ್ಕರ್ಷಣ ನಿರೋಧಕ

*ಉತ್ಕರ್ಷಣ ನಿರೋಧಕ

ವೀಳ್ಯದ ಎಲೆಯ ಮೇಲೆ ಮಾಡಿದ ಸಂಶೋಧನೆ ಮೇಲೆ ಇದರಲ್ಲಿರುವ BHT (butylated hydroxyl toluene)ಮುಕ್ತ ಮೂಲಭೂತ ಅಂಶಗಳನ್ನು ಶೇಖರಿಸುವ ಗುಣಲಕ್ಷಣಗಳನ್ನು ಹೊಂದಿರುವುದು ಕಂಡು ಬಂತು.

*ಉರಿಯೂತ

*ಉರಿಯೂತ

ಸಂಧಿವಾತ ಮತ್ತು ವೃಷಣಗಳ ಉರಿಯೂತ ತಡೆಯಲು ವೀಳ್ಯದ ಎಲೆಯ ಮೂಲಕ ಚಿಕಿತ್ಸೆ ನೀಡಲಾಗುತ್ತದೆ.ವೀಳ್ಯದ ಎಲೆಯನ್ನು ಬಿಸಿ ಮಾಡಿ ಅದಕ್ಕೆ ಒಂದು ಪದರ ಹರಳೆಣ್ಣೆಯಲ್ಲಿ ಅದ್ದಿ ಊತ ಅಥವಾ ಕೀವು ಆದ ಜಾಗದಲ್ಲಿ ಹಚ್ಚಬೇಕು,ಪ್ರತಿ ಗಂಟೆಗೊಮ್ಮೆ ಇದನ್ನು ಬದಲಿಸುತ್ತಿರಬೇಕು.

*ಬೆನ್ನು ನೋವನ್ನು ಕಡಿಮೆ ಮಾಡುತ್ತದೆ

*ಬೆನ್ನು ನೋವನ್ನು ಕಡಿಮೆ ಮಾಡುತ್ತದೆ

ಎಲೆ ಅಥವಾ ಅದರ ಬಿಸಿ ರಸವನ್ನು ಯಾವುದೇ ಎಣ್ಣೆಯ ಜೊತೆ (ಕೊಬ್ಬರಿ ಎಣ್ಣೆ) ಮಿಶ್ರ ಮಾಡಿ ಹಚ್ಚುವುದರಿಂದ ಬೆನ್ನಿನ ಕೆಳಭಾಗದ ನೋವನ್ನು ಕಡಿಮೆ ಮಾಡುತ್ತದೆ.

*ಸ್ತನದ ಹಾಲು ಸ್ರವಿಸುವಿಕೆ

*ಸ್ತನದ ಹಾಲು ಸ್ರವಿಸುವಿಕೆ

ವೀಳ್ಯದ ಎಲೆಯನ್ನು ಎಣ್ಣೆಯೊಂದಿಗೆ ಬೆರೆಸಿ ಸ್ತನಕ್ಕೆ ಹಚ್ಚುವುದರಿಂದ ಹಾಲು ಉತ್ಪತ್ತಿ ಹೆಚ್ಚಲು ಸಹಾಯಕವಾಗುತ್ತದೆ.

*ಉಸಿರಾಟದ ತೊಂದರೆ

*ಉಸಿರಾಟದ ತೊಂದರೆ

ಕೆಮ್ಮು ಅಥವಾ ಉಸಿರಾಟದ ತೊಂದರೆಯಾದಾಗ ವೀಳ್ಯದ ಎಲೆಯನ್ನು ಸಾಸಿವೆ ಎಣ್ಣೆಯಲ್ಲಿ ಬಿಸಿ ಮಾಡಿ ಅದ್ದಿ ಎದೆಯ ಮೇಲೆ ಇಡುವುದರಿಂದ ಉಸಿರಾಟದ ತೊಂದರೆ ನಿವಾರಣೆಯಾಗುತ್ತದೆ.ಎಲೆ ಅಡಿಕೆ ಜಜ್ಜಿ ಜೇನುತುಪ್ಪದೊಂದಿಗೆ ಮಿಶ್ರ ಮಾಡಿ ತಿನ್ನುವುದರಿಂದ ಒಣ ಕೆಮ್ಮು ಕಡಿಮೆ ಆಗುತ್ತದೆ.

ಮಧುಮೇಹ

ಮಧುಮೇಹ

ವೀಳ್ಯದ ಎಲೆಯ ಮೇಲೆ ಮಾಡಿದ ಸಂಶೋಧನೆಯಿಂದ ಇದರಲ್ಲಿ ಮಧುಮೇಹ ವಿರೋಧಿ ಗುಣ ಇರುವುದು ಕಂಡು ಬಂದಿದ್ದು ಇದು ಚಿಕಿತ್ಸೆಗೆ ನೆರವಾಗುತ್ತದೆ ಎನ್ನಲಾಗಿದೆ.

*ನರಗಳ ದೌರ್ಬಲ್ಯ

*ನರಗಳ ದೌರ್ಬಲ್ಯ

ವೀಳ್ಯದ ಎಲೆಯ ರಸ ಮತ್ತು ಜೇನುತುಪ್ಪ ಬೆರೆಸಿ ಸೇವಿಸುವುದರಿಂದ ನರದ ಸಮಸ್ಯೆ,ನರಗಳ ಬಳಲಿಕೆ,ನಿಶ್ಯಕ್ತಿ ಇವುಗಳಿಗೆ ಪರಿಹಾರ ದೊರಕುತ್ತದೆ.

*ತಲೆನೋವು

*ತಲೆನೋವು

ವೀಳ್ಯದ ಎಲೆಯಲ್ಲಿರುವ ನೋವುನಿವಾರಕ ಮತ್ತು ತಂಪಾಗಿಸುವ ಗುಣ ತಲೆನೋವಿನ ಪರಿಹಾರಕ್ಕೆ ಸಹಕರಿಸುತ್ತದೆ.

*ಮಲಬದ್ಧತೆಗೆ ಮದ್ದು

*ಮಲಬದ್ಧತೆಗೆ ಮದ್ದು

ವೀಳ್ಯದ ಎಳೆಯ ಕಾಂಡವನ್ನು ಹರಳೆಣ್ಣೆಯೊಂದಿಗೆ ಬೆರೆಸಿ ಗುದನಾಳಕ್ಕೆ ಹಾಕುವುದರಿಂದ ಮಲಬದ್ಧತೆ ತಕ್ಷಣ ನಿವಾರಣೆಯಾಗುತ್ತದೆ.

*ಗಾಯಕ್ಕೆ ಪರಿಹಾರ

*ಗಾಯಕ್ಕೆ ಪರಿಹಾರ

ಗಾಯವಾದ ಜಾಗಕ್ಕೆ ವೀಳ್ಯದ ಎಳೆಯ ರಸದ ಹಚ್ಚಿ ಎಲೆಯಿಂದ ಒತ್ತಿ ಹಿಡಿಯುವುದರಿಂದ 2-3 ದಿನದಲ್ಲಿ ಗಾಯ ಮಾಯವಾಗುತ್ತದೆ.

English summary

Health Benefits Betel Leaf

From ancient times, the betel leaf has been used as an aromatic stimulant and anti-flatulent. It arrests secretion or bleeding and also serves as an aphrodisiac. It is used in several common household remedies:
X
Desktop Bottom Promotion