For Quick Alerts
ALLOW NOTIFICATIONS  
For Daily Alerts

ಪುರುಷ ಸಾಮರ್ಥ್ಯ ಕಮ್ಮಿಮಾಡುವ ಅಭ್ಯಾಸಗಳಿವು

By ವಿವೇಕ್
|

ಪುರುಷ ಸಾಮರ್ಥ್ಯ ಕಮ್ಮಿಯಾಗಿ ಲೈಂಗಿಕ ನಿಶ್ಯಕ್ತಿ ಉಂಟಾದರೆ ಯಾವ ಪುರುಷನಿಗೆ ತಾನೆ ಸಹಿಸಲು ಸಾಧ್ಯ? ವಯಸ್ಸು 50 ದಾಟಿದರೂ ತಮ್ಮ ಪುರುಷ ಸಾಮರ್ಥ್ಯ ಹಾಗೇ ಇರಬೇಕೆಂದು ಬಯಸುತ್ತಾನೆ. ಆದರೆ ಕೆಲವೊಂದು ಅಭ್ಯಾಸಗಳು ಮತ್ತು ಜೀವನ ಶೈಲಿ ಚಿಕ್ಕಪ್ರಾಯದಲ್ಲಿಯೇ ನಿಮ್ಮ ಪುರುಷ ಸಾಮರ್ಥ್ಯವನ್ನು ಕಮ್ಮಿ ಮಾಡುತ್ತಿವೆ!

ಸಾಕಷ್ಟು ಪುರುಷರು ಚಿಕ್ಕಪ್ರಾಯದಲ್ಲಿಯೇ ಲೈಂಗಿಕ ನಿಶ್ಯಕ್ತಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದರೆ ಇದರ ಬಗ್ಗೆ ವೈದ್ಯರಲ್ಲಿ ಹೇಳಿಕೊಳ್ಳಲು ಮತ್ತು ಚಿಕಿತ್ಸೆ ತೆಗೆದುಕೊಳ್ಳಲು ಹಿಂಜರಿಯುತ್ತಾರೆ. ಲೈಂಗಿಕ ನಿಶ್ಯಕ್ತಿ ಸಮಸ್ಯೆಯಿದ್ದರೆ ಆ ಪುರುಷ ಮಾನಸಿಕವಾಗಿಯೂ ಬಳಲುತ್ತಾನೆ. ಆದ್ದರಿಂದ ಆರೋಗ್ಯದತ್ತ ಗಮನ ಕೊಡುವುದು ಒಳ್ಳೆಯದು.

ಲೈಂಗಿಕ ನಿಶ್ಯಕ್ತಿಗೆ ಕೇವಲ ದುರಾಭ್ಯಾಸ ಮಾತ್ರವಲ್ಲ, ಸೈಕಲ್ ತುಳಿಯುವಂತಹ ಒಳ್ಳೆಯ ಅಭ್ಯಾಸಗಳು ಪುರುಷನ ಸಾಮರ್ಥ್ಯವನ್ನು ಕಮ್ಮಿ ಮಾಡುತ್ತದೆ ಎಂದು ಸಂಶೋಧನೆಯಿಂದ ತಿಳಿದು ಬಂದಿದೆ!

ಇಲ್ಲಿ ನಾವು ಪುರುಷ ಸಾಮರ್ಥ್ಯ ಕಡಿಮೆ ಮಾಡುವ ಕೆಲವೊಂದು ಅಭ್ಯಾಸಗಳ ಬಗ್ಗೆ ಮಾಹಿತಿ ನೀಡಿದ್ದೇವೆ ನೋಡಿ:

ಸೈಕಲ್ ತುಳಿಯುವುದು

ಸೈಕಲ್ ತುಳಿಯುವುದು

ದಿನದಲ್ಲಿ 3 ಗಂಟೆಗಳಿಗಿಂತ ಹೆಚ್ಚು ಸೈಕಲ್ ತುಳಿಯುವ ಅಭ್ಯಾಸ ಒಳ್ಳೆಯದಲ್ಲ. ಸೈಕಲ್ ನಿಮ್ಮನ್ನು ದೈಹಿಕವಾಗಿ ಸದೃಢ ವ್ಯಕ್ತಿಯನ್ನಾಗಿ ಮಾಡುತ್ತದೆ. ಆದರೆ ಅತೀ ಹೆಚ್ಚು ಸೈಕಲ್ ತುಳಿದರೆ ಲೈಂಗಿಕ ನಿಶ್ಯಕ್ತಿ ಉಂಟಾಗುವುದು ಎಂದು ಅಧ್ಯಯನದಿಂದ ತಿಳಿದು ಬಂದಿದೆ.

ಕೆಫೀನ್

ಕೆಫೀನ್

ದಿನದಲ್ಲಿ 5-6 ಲೋಟ ಕಾಫಿ ಕುಡಿಯುವ ಅಭ್ಯಾಸವಿದ್ದರೆ ಇಂದೇ ನಿಲ್ಲಿಸಿ ಬಿಡಿ, ದಿನದಲ್ಲಿ ಎರಡು ಲೋಟ ಕಾಫಿ ಓಕೆ, ಅತೀ ಹೆಚ್ಚು ಕಾಫಿ ಕುಡಿದರೆ ದೇಹದಲ್ಲಿ ಕೆಫೀನ್ ಹೆಚ್ಚಾಗಿ ಲೈಂಗಿಕ ನಿಶ್ಯಕ್ತಿ ಉಂಟಾಗುವುದು.

 ಬೇಕಾಬಿಟ್ಟಿ ತಿನ್ನುವುದು

ಬೇಕಾಬಿಟ್ಟಿ ತಿನ್ನುವುದು

ಹೆಚ್ಚಿನವರಿಗೆ ಈ ಅಭ್ಯಾಸವಿರುತ್ತದೆ, ಆಹಾರ ಕ್ರಮದ ಬಗ್ಗೆ ಗಮನ ಕೊಡುವುದೇ ಇಲ್ಲ, ಸರಿಯಾದ ಹೊತ್ತಿಗೆ ಆಹಾರ ತೆಗೆದುಕೊಳ್ಳುವುದಿಲ್ಲ, ಹಾಗೂ ಫಾಸ್ಟ್ ಫುಡ್ಸ್ ಪ್ರಿಯರಾಗಿರುವುದು.

ಇನ್ನು ಪುರುಷರಿಗೆ ಅತೀ ಮುಖ್ಯವಾಗಿ ಬೇಕಾದ ಖನಿಜಾಂಶವೆಂದರೆ ಸತು. ಸತು ಮಹಿಳೆಯರಿಗೆ ಅವಶ್ಯಕವಾದರೂ, ಮಹಿಳೆಯರಿಗಿಂತ ಪುರುಷರಿಗೆ ಹೆಚ್ಚು ಅವಶ್ಯಕ.

 ಗೊರಕೆ ಹೊಡೆಯುವುದು

ಗೊರಕೆ ಹೊಡೆಯುವುದು

ಗೊರಕೆ ಹೊಡೆಯುವ ಅಭ್ಯಾಸದಿಂದ ಕೂಡ ಲೈಂಗಿಕ ಸಾಮರ್ಥ್ಯ ಕಮ್ಮಿಯಾಗುವುದು ಎಂಬ ಅಂಶ ಇತ್ತೀಚಿಕೆ ಬೆಳಕಿಗೆ ಬಂದಿದೆ. ನಿಮ್ಮ ಗೊರಕೆ ಹೊಡೆಯುವ ಅಭ್ಯಾಸವನ್ನು ಇಂದೇ ನಿಲ್ಲಿಸಿಬಿಡಿ.

 ಮೈ ತೂಕ

ಮೈ ತೂಕ

ಮೈ ತೂಕದ ಕಡೆಗೆ ಹೆಚ್ಚು ಗಮನ ಕೊಡಿ, ಮೈ ತೂಕ ಹೆಚ್ಚಾಗುವುದರಿಂದ ಲೈಂಗಿಕ ನಿಶ್ಯಕ್ತಿ ಕಮ್ಮಿಯಾಗುವುದು ಮಾತ್ರವಲ್ಲ, ಇನ್ನು ಅನೇಕ ಕಾಯಿಲೆಗಳು ಬರುತ್ತದೆ.

 ನಿದ್ದೆ ಸರಿಯಾಗಿ ಮಾಡದಿದ್ದರೆ

ನಿದ್ದೆ ಸರಿಯಾಗಿ ಮಾಡದಿದ್ದರೆ

ಪ್ರತಿಯೊಬ್ಬ ಮನುಷ್ಯ ಆರೋಗ್ಯದಿಂದ ಇರಬೇಕೆಂದರೆ 7-8 ಗಂಟೆಗಳ ಕಾಲ ನಿದ್ದೆ ಮಾಡಬೇಕು, ಕಡಿಮೆ ಅವಧಿಯ ನಿದ್ದೆಯಿಂದ ಅನೇಕ ಸಮಸ್ಯೆಗಳು ಕಂಡು ಬರುವುದು, ಹಾಗಂತ ಅತೀ ಹೆಚ್ಚು ನಿದ್ದೆ ಮಾಡುವುದು ಕೂಡ ಒಳ್ಳೆಯದಲ್ಲ.

ವಿಟಮಿನ್ ಮಾತ್ರೆಗಳನ್ನು ತೆಗೆದುಕೊಳ್ಳುವುದು

ವಿಟಮಿನ್ ಮಾತ್ರೆಗಳನ್ನು ತೆಗೆದುಕೊಳ್ಳುವುದು

ಲೈಂಗಿಕ ನಿಶ್ಯಕ್ತಿ ಕಮ್ಮಿಯಾದರೆ ಮಾತ್ರೆಗಳನ್ನು ತೆಗೆದುಕೊಂಡು ಪ್ರಯೋಜನವಿಲ್ಲ, ಸರಿಯಾದ ಆಹಾರಕ್ರಮ ಪಾಲಿಸಬೇಕು. ಅಂದರೆ ನಿಮ್ಮ ದೈಹಿಕ ಸಾಮರ್ಥ್ಯ ಹೆಚ್ಚಿಸಲು ಸಾಧ್ಯ.

ಮಾನಸಿಕ ಒತ್ತಡ

ಮಾನಸಿಕ ಒತ್ತಡ

ಹಲವಾರು ಕಾರಣಗಳಿಂದ ಮಾನಸಿಕ ಒತ್ತಡ ಕಂಡು ಬರುವುದು ಸಹಜ, ಆದರೆ ಅದನ್ನು ಹೊರದಬ್ಬಲು ಪರಿಹಾರ ಕಂಡುಕೊಳ್ಳಬೇಕು, ಇಲ್ಲದಿದ್ದರೆ ಅನೇಕ ಸಮಸ್ಯೆಗಳು ಕಂಡು ಬರುವುದು.

ಧೂಮಪಾನ

ಧೂಮಪಾನ

ಧೂಮಪಾನ ಅಭ್ಯಾಸ ಆರೋಗ್ಯಕರವಲ್ಲವೆಂದೂ ಇದನ್ನು ಎಳೆಯುವ ಪ್ರತಿಯೊಬ್ಬರಿಗೂ ಗೊತ್ತಿರುತ್ತದೆ ಆದರೂ ಧೂಮಪಾನ ಮಾಡುತ್ತದೆ, ಇದರಿಂದ ಶ್ವಾಸಕೋಶದ ಕ್ಯಾನ್ಸರ್ ಮಾತ್ರವಲ್ಲ, ಲೈಂಗಿಕ ನಿಶ್ಯಕ್ತಿಯೂ ಉಂಟಾಗುವುದು.

ಮದ್ಯಪಾನ

ಮದ್ಯಪಾನ

ಮದ್ಯ ವ್ಯಸನಿಗಳ ದೇಹದ ಅಂಗಾಂಗಗಳು ಹಾಳಾಗುತ್ತಾ ಬಂದು ದೇಹದ ಶಕ್ತಿ ಸಂಪೂರ್ಣವಾಗಿ ಕಮ್ಮಿಯಾಗುವುದು. ಕರಳು, ಲಿವರ್ ಡ್ಯಾಮೇಜ್ ಆಗಿ ನರಳಿ ಸಾಯಬಾರದೆಂದು ಬಯಸುವುದಾದರೆ ಈ ಅಭ್ಯಾಸದಿಂದ ದೂರವಿರಿ.

English summary

Habits That Make You Impotent

Most men refuse to acknowledge impotency, as they feel that accepting the issue will only make their condition more real. Impotency is a common problem shared by a large number of men. It is also an issue that will not cease to exist just because you ignore it.
X
Desktop Bottom Promotion